ಮದುವೆ ಆಗದೇ ತಾಯಿ; ಕನ್ನಡತಿಯರ ಆ ಎರಡು ಸಿನಿಮಾ ನೆನಪಿಸಿದ ಗರ್ಭಿಣಿ ಭಾವನಾ

ಕನ್ನಡ ನಟಿ ಭಾವನಾ ರಾಮಣ್ಣ ಐವಿಐಫ್ ಚಿಕಿತ್ಸೆ ಮೂಲಕ ತಾಯಿಯಾಗುತ್ತಿರುವ ವಿಚಾರ ಕಳೆದೊಂದು ವಾರದಿಂದ ಭಾರೀ ಸದ್ದು ಮಾಡ್ತಿದೆ. ದಿಢೀರನೆ ಈ ಅಚ್ಚರಿಯ ವಿಚಾರವನ್ನು ಹಂಚಿಕೊಂಡು ನಟಿ ಭಾವನಾ ಗಮನ ಸೆಳೆದಿದ್ದಾರೆ. ಇದರ ಬೆನ್ನಲ್ಲೇ ಐವಿಎಫ್ ಬಗ್ಗೆ ಸಾಕಷ್ಟು ಚರ್ಚೆ ನಡೀತಿದೆ. ಮಹಿಳೆಯರು ಈ ಚಿಕಿತ್ಸೆ ಮೂಲಕ ಮಕ್ಕಳನ್ನು ಪಡೆಯಬಹುದು ಎನ್ನುವ ವಿಚಾರ ಕೆಲವರಿಗೆ ಈಗ ಗೊತ್ತಾಗ್ತಿದೆ.

ನಾನಾ ಕಾರಣಗಳಿಂದ ಮಕ್ಕಳನ್ನು ಪಡೆಯಲು ಸಾಧ್ಯವಾಗದ ದಂಪತಿಗಳು ಸಾಮಾನ್ಯವಾಗಿ ಐವಿಎಫ್ ಮೊರೆ ಹೋಗುತ್ತಾರೆ. ಮಹಿಳೆಯರು ಐವಿಎಫ್ ಚಿಕಿತ್ಸೆ ಮೂಲಕ ದಾನಿಯ ವೀರ್ಯದಿಂದ ಗರ್ಭಧರಿಸಿ ಮಗುವಿಗೆ ಜನ್ಮ ನೀಡುವುದು ಬಹಳ ವಿರಳ. ಭಾರತದಲ್ಲಿ ಈ ವಿಧಾನ ಇನ್ನು ಅಷ್ಟಾಗಿ ಜನಪ್ರಿಯವಾಗಿಲ್ಲ. ತಾರೆಯರು ಇಂತಹ ಪ್ರಯತ್ನಕ್ಕೆ ಮುಂದಾಗಿ ಆ ಬಗ್ಗೆ ಮುಕ್ತವಾಗಿ ಮಾತನಾಡಿದಾಗ ಹೆಚ್ಚು ಸುದ್ದಿ ಆಗುತ್ತದೆ.

Bhavana Ramanna s IVF Story Sparks Comparisons with IVF-Themed these 2 Films

ಕೆಲ ಸಿನಿಮಾಗಳಲ್ಲಿ ಕೂಡ ಐವಿಎಫ್ ಚಿಕಿತ್ಸೆಯ ಬಗ್ಗೆ ಚರ್ಚಿಸಲಾಗಿದೆ. ಹೀಗೆ ಮಹಿಳೆ ಮದುವೆ ಆಗದೇ ಐವಿಎಫ್‌ನಿಂದ ಮಗು ಪಡೆಯುವಂತಹ ಕಥೆಗಳು ಸಿನಿಮಾ ಆಗಿ ಬಂದು ಹೋಗಿದೆ. ಹಾಲಿವುಡ್‌ ಸಿನಿಮಾಗಳಲ್ಲಿ ಇಂತಹ ಕಥೆಗಳು ಬಂದಿದೆ. ತೆಲುಗು ಹಾಗೂ ತಮಿಳಿನಲ್ಲಿ ಇತ್ತೀಚೆಗೆ ಬಂದ ಎರಡೂ ಸಿನಿಮಾಗಳಲ್ಲಿ ನಾಯಕಿ ಹೀಗೆ ಐವಿಎಫ್ ಮೂಲಕ ಮಗು ಪಡೆಯುವ ಕಥೆ ಇದೆ.

ಭಾವನಾ ರಾಮಣ್ಣ ತಮ್ಮ ಐವಿಎಫ್ ಜರ್ನಿ ಬಗ್ಗೆ ಮಾತನಾಡುತ್ತಿದ್ದಂತೆ ಈ ಎರಡೂ ಸಿನಿಮಾಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ನೆಟ್ಟಿಗರು ಈ ಸಿನಿಮಾಗಳನ್ನು ಉದಾಹರಣೆಯಾಗಿ ಕೊಟ್ಟು ಕಾಮೆಂಟ್ ಮಾಡುತ್ತಿದ್ದಾರೆ. 2 ವರ್ಷಗಳ ಹಿಂದೆ ಅನುಷ್ಕಾ ಶೆಟ್ಟಿ ನಟನೆಯ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಸಿನಿಮಾ ತೆರೆಗೆ ಬಂದಿತ್ತು. ಇನ್ನು ಇದೇ ವರ್ಷ ನಿತ್ಯಾ ಮೆನನ್ ನಟನೆಯ ತಮಿಳಿನ 'ಕಾದಲಿಕ್ಕ ನೇರಮಿಲೈ' ಸಿನಿಮಾ ಕೂಡ ಬಂದು ಸದ್ದು ಮಾಡಿತ್ತು.

ಮಿಸ್ ಶೆಟ್ಟಿ ಕಥೆ

ಮಹೇಶ್ ಬಾಬು ಪಚ್ಚಿಗೊಲ ಎಂಬುವವರು ನಿರ್ದೇಶನದ 'ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ' ಸಿನಿಮಾ 2023ರಲ್ಲಿ ತೆರೆಗೆ ಬಂದಿತ್ತು. ಚಿತ್ರದಲ್ಲಿ ಶೆಫ್ ಅನ್ವಿತಾ ರವಳಿ ಶೆಟ್ಟಿ ಆಗಿ ಅನುಷ್ಕಾ ಶೆಟ್ಟಿ ಮಿಂಚಿದ್ದರು. ವಯಸ್ಸು 30 ದಾಟಿದ್ರು, ಮದುವೆ ಆಗದೇ ತನ್ನ ಕೆಲಸದಲ್ಲೇ ಆಗಿ ಬ್ಯುಸಿಯಾಗಿರುತ್ತಾರೆ. ತಾಯಿ ಎಷ್ಟೇ ಹೇಳಿದರೂ ಮದುವೆಗೆ ಮನಸ್ಸು ಮಾಡುವುದಿಲ್ಲ. ಪ್ರೀತಿ, ಮದುವೆ ಬಗ್ಗೆ ನಂವಿಕೆ ಇರುವುದಿಲ್ಲ. ತಾಯಿಯ ಅಗಲಿಕೆ ಬಳಿಕ ಆಕೆಗೆ ಒಂಟಿತನ ಕಾಡುತ್ತದೆ. ತಾಯ್ತನದ ಬಯಕೆ ಮೂಡುತ್ತದೆ. ಆಗ ಐವಿಎಫ್ ಚಿಕಿತ್ಸೆ ಮೂಲಕ ಮಗು ಪಡೆಯಲು ಮುಂದಾಗುತ್ತಾಳೆ.

Bhavana Ramanna s IVF Story Sparks Comparisons with IVF-Themed these 2 Films

ತಾನೇ ವೀರ್ಯ ದಾನಿಯನ್ನು ಹುಡುಕಿಕೊಳ್ಳುವ ಸಾಹಸ ಮಾಡುತ್ತಾಳೆ. ಈ ಹಾದಿಯಲ್ಲಿ ಸಿದ್ದು ಪೊಲಿಶೆಟ್ಟಿ(ನವೀನ್ ಪೊಲಿಶೆಟ್ಟಿ) ಪ್ರೀತಿಲಿ ಬೀಳುತ್ತಾಳೆ. ಆತ ಕೂಡ ಆಕೆಯನ್ನು ಇಷ್ಟಪಡುತ್ತಾನೆ. ಕೊನೆಗೆ ಸಿದ್ದು ಸಹಾಯದಿಂದ ಐವಿಎಫ್ ಚಿಕಿತ್ಸೆ ಮೂಲಕ ಗರ್ಭಿಣಿ ಆಗುತ್ತಾಳೆ. ಕೊನೆಗೆ ಅವನನ್ನೇ ಬಾಳ ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳುವ ಕಥೆ ಈ ಚಿತ್ರದಲ್ಲಿದೆ.

'ಕಾದಲಿಕ್ಕ ನೇರಮಿಲೈ' ಕಹಾನಿ

ಜಯಂ ರವಿ ಹಾಗೂ ನಿತ್ಯಾ ಮೆನನ್ ನಟನೆಯ 'ಕಾದಲಿಕ್ಕ ನೇರಮಿಲೈ' ಸಿನಿಮಾ 6 ತಿಂಗಳ ಹಿಂದೆ ಸದ್ದು ಮಾಡಿತ್ತು. ಕರಣ್(ಜಾನ್ ಕೊಕೇನ್) ಎಂಬಾತನನ್ನು ಪ್ರೀತಿಸಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದ ಶ್ರೇಯಾ(ನಿತ್ಯಾ ಮೆನನ್) ಬಳಿಕ ಆತನ ನಿಜಬಣ್ಣ ಗೊತ್ತಾಗಿ ದೂರಾಗುತ್ತಾಳೆ. ಬಳಿಕ ಐವಿಎಫ್ ಚಿಕಿತ್ಸೆ ಮೂಲಕ ತಾಯಿಯಾಗುವ ಕನಸು ಕಾಣುತ್ತಾಳೆ.

ಮತ್ತೊಂದು ಕಡೆ ಮದುವೆ, ಮಕ್ಕಳು ಎನ್ನುವ ಕಲ್ಪನೆಯನ್ನೇ ಒಪ್ಪದ ಆರ್ಕಿಟೆಕ್ ಸಿದ್ದಾರ್ಥ್ ತಾನು ಪ್ರೀತಿಸಿದ ಹುಡುಗಿಯಿಂದ ದೂರಾಗಿರುತ್ತಾನೆ. ಶ್ರೇಯಾ ಐವಿಎಫ್ ಚಿಕಿತ್ಸೆ ಜರ್ನಿಯ ಭಾಗವಾಗುತ್ತಾನೆ ಸಿದ್ದಾರ್ಥ್. ಮುಂದೆ ಇಬ್ಬರ ಜೀವನ ಹೇಗೆ ಸಾಗುತ್ತದೆ? ಎನ್ನುವುದು ಇನ್ನುಳಿದ ಕಥೆ.

More from Filmibeat

English summary
Bhavana Ramanna’s IVF Experience Resonates with the Stories of Two IVF-Based Films
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X