"ನಿಮ್ಮಮ್ಮನ ಹೊಕ್ಕಳ ಫೋಟೊ ಕೇಳು, ಅಥ್ವಾ ಮನೆಯಲ್ಲೇ ಇರ್ತಾರೆ ಹೋಗಿ ನೋಡು": ತನಿಷಾ ಕುಪ್ಪಂಡ ಗರಂ

ಸ್ಯಾಂಡಲ್‌ವುಡ್ ನಟಿ ತನಿಷಾ ಕುಪ್ಪಂಡ ಬಿಗ್‌ಬಾಸ್ ಶೋಗೆ ಹೋಗಿ ಬಂದಮೇಲೆ ಮತ್ತಷ್ಟು ಕ್ರೇಜ್ ಸೃಷ್ಟಿಸಿಕೊಂಡಿದ್ದಾರೆ. ಕೆಲ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಜೊತೆ ಜೊತೆಗೆ ತಮ್ಮದೇ ವ್ಯಾಪಾರ, ವ್ಯವಹಾರಗಳಲ್ಲಿ ಬ್ಯುಸಿಯಾಗಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ತನಿಷಾ ಸೋಶಿಯಲ್ ಮೀಡಿಯಾದಲ್ಲಿ ಕೇಳುವ ಕೆಟ್ಟ ಕೆಟ್ಟ ಕಾಮೆಂಟ್ಸ್ ಬಗ್ಗೆ ಕೆಂಡಾಮಂಡಲವಾಗಿದ್ದಾರೆ.

ಸೋಶಿಯಲ್ ಮೀಡಿಯಾ ಜಮಾನದಲ್ಲಿ ಸಿನಿಮಾ ತಾರೆಯರು ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ತಮ್ಮ ನೆಚ್ಚಿನ ನಟ-ನಟಿಯರ ಬಗ್ಗೆ ನೇರವಾಗಿ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುವ ಅವಕಾಶ ಸಿಗುತ್ತಿದೆ. ಕೆಲವೊಮ್ಮೆ ತಾರೆಯರು ಇಷ್ಟಪಟ್ಟು ಅಭಿಮಾನಿಗಳ ಜೊತೆ ಸಂಭಾಷಣೆ ನಡೆಸಲು ಇನ್‌ಸ್ಟಾಗ್ರಾಮ್‌ ಅನ್ನು ಬಳಸಿಕೊಳ್ಳುತ್ತಿದ್ದಾರೆ. ಆಸ್ಕ್ ಮಿ ಎನಿಥಿಂಗ್ ಸೆಷನ್ ನಡೆಸುತ್ತಾರೆ. ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ.

Bigg Boss Fame Tanisha Kuppanda slams netizes for asking her to send navel pics

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಫೇಕ್ ಅಕೌಂಟ್‌ಗಳ ಭರಾಟೆ ಜೋರಾಗಿದೆ. ಕಿಡಿಗೇಡಿಗಳು ತಾರೆಯರ ಬಗ್ಗೆ ಕೆಟ್ಟ ಕೆಟ್ಟ ಪೋಸ್ಟ್‌ಗಳನ್ನು ಮಾಡುವುದು, ಡೀಪ್‌ಫೇಕ್ ಫೋಟೊ, ವೀಡಿಯೋ ವೈರಲ್ ಮಾಡುವ ಕೆಟ್ಟ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಇನ್ನು ತಾರೆಯರನ್ನು ನೇರವಾಗಿ ಪ್ರಶ್ನೆ ಕೇಳುವ ಅವಕಾಶ ಇರುವುದರಿಂದ ಕೆಟ್ಟ ಕಾಮೆಂಟ್ ಮಾಡುವುದು, ಪ್ರಶ್ನೆಗಳನ್ನು ಕೇಳುವುದು ಮಾಡುತ್ತಿರುತ್ತಾರೆ.

ನಟಿ ತನಿಷಾ ಕುಪ್ಪಂಡ ಸೋಶಿಯಲ್ ಮೀಡಿಯಾದಲ್ಲಿ ತಮಗೆ ರೀತಿ ಎದುರಾಗುವ ಅಸಭ್ಯ ಪ್ರಶ್ನೆಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಗರಂ ಆಗಿ ಖಡಕ್ ತಿರುಗೇಟು ನೀಡಿದ್ದಾರೆ. ರಾಜೇಶ್ ಗೌಡ ಯೂಟ್ಯೂಬ್ ಚಾನಲ್ ಪಾಡ್‌ಕಾಸ್ಟ್‌ನಲ್ಲಿ ತನಿಷಾ ಮಾತನಾಡಿದ್ದಾರೆ. "ಬಹಳ ಜನ ನಾನು 'ಪೆಂಟಗನ್' ಸಿನ್ಮಾ ಮೂಲಕ ಚಿತ್ರರಂಗಕ್ಕೆ ಬಂದೆ ಎಂದುಕೊಂಡಿದ್ದಾರೆ. ಮೊನ್ನೆ ಮೊನ್ನೆ ಬಂದ್ಲು ರೆಸ್ಟೋರೆಂಟ್ ಓಪನ್ ಮಾಡಿದ್ಲು, ಕಾರ್ ತಗೊಂಡ್ಲು, ಜ್ಯುವೆಲ್ಲರಿ ಶಾಪ್ ಓಪನ್ ಮಾಡಿದ್ಲು ಅಂತ ಏಕವಚನದಲ್ಲಿ ಮಾತನಾಡುತ್ತಾರೆ ಅದು ಕೋಪ ತರಿಸುತ್ತೆ" ಎಂದಿದ್ದಾರೆ.

Bigg Boss Fame Tanisha Kuppanda slams netizes for asking her to send navel pics

"ನೀವು ನಮ್ಮನ್ನ ಸಾಕಿಲ್ಲ, ಸಾಕಲ್ಲ, ಯಾಕೆ ಗುರು ಹೀಗೆಲ್ಲಾ ಮಾತನಾಡುತ್ತೀರಾ? ಏನೇನೋ ಕಾಮೆಂಟ್ ಮಾಡ್ಬೇಡಿ. ಹೇಳಬೇಕು ಎನ್ನುವುದನ್ನು ಸರಿಯಾಗಿ ಹೇಳಿ. ಅದು ಬಿಟ್ಟು ಹೋಗೆ ಬಾರೆ ಎಂದರೆ ನಿಮ್ಮ ಮೇಲಿನ ಮರ್ಯಾದೆ ಹೋಗುತ್ತೆ. ಎಷ್ಟೋ ಜನಕ್ಕೆ ನಾನು ರಿಪ್ಲೇ ಮಾಡಿರ್ತೀನಿ, ನಿಮ್ ಅಮ್ಮನನ್ನು ಹೋಗಿ ಕೇಳು ಅಂತ. ಯಾಕಂದ್ರೆ ಕೆಲವ್ರು ನಿಮ್ಮ ಹೊಕ್ಕಳ ಫೋಟೊ ಕಳ್ಸಿ ಅಂತ ಕೇಳ್ತಾರೆ. ಅದಕ್ಕೆ ಹೋಗ್‌ ಗುರು ನಿಮ್ಮ ಅಮ್ಮನನ್ನು ಕೇಳು, ಅವ್ರು ಮನೆಯಲ್ಲೇ ಇರ್ತಾರಲ್ಲ. ನಿನ್ನ ಜೊತೆ ಇರ್ತಾರೆ. ಕೇಳು ಫೋಟೊ ಕಳಿಸ್ತಾರೆ, ಇಲ್ಲ ನೇರವಾಗಿ ನೋಡು. ಯಾಕೆ ಬೇರೆ ಹೆಣ್ಣು ಮಕ್ಕಳ ಮೇಲೆ ಕಣ್ಣು" ಎಂದು ತನಿಷಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ನಾನು ಈ ರೀತಿ ಖಡಕ್ ಆಗಿಯೇ ರಿಪ್ಲೇ ಮಾಡ್ತೀನಿ. ಯಾಕಂದ್ರೆ ನೀವು ಮತ್ತೊಬ್ಬರ ಮಗಳನ್ನು ಈ ರೀತಿ ಕೇಳ್ತಿದ್ದೀಯಾ. ನಿಮ್ಮ ಮಗಳನ್ನು ನಾಳೆ ಇದೇ ರೀತಿ ಕೇಳ್ತಾರೆ. ಅಷ್ಟೆಲ್ಲಾ ಯಾಕೆ ಇವತ್ತು ನೀನು ನನ್ನನ್ನು ಕೇಳಿದ್ರೆ, ನಾಳೆ ನನ್ನ ಮಗ ನಿನ್ನ ಮಗಳನ್ನು ಕೇಳ್ತಾನೆ ಅಲ್ವಾ? ನಾನು ಒಂದು ಕಾರ್ ತೆಗೆದುಕೊಳ್ಳಲು 11 ವರ್ಷ ಕಟ್ಟಪಟ್ಟು ಕೆಲಸ ಮಾಡಿದ್ದೀನಿ. ಆದರೆ ಜನ ಏನೇನೊ ಮಾತಾಡ್ತಾರೆ. ಯಾವನಿಗೆ ಏನು ಆನ್ಸರ್ ಮಾಡ್ಬೇಕು?" ಎಂದು ತನಿಷಾ ಪ್ರಶ್ನಿಸಿದ್ದಾರೆ.

"ನಾನು ಯಾರಿಗೂ ತಲೆಕೆಡಿಸಿಕೊಳ್ಳಲ್ಲ. ಯಾರಾದರೂ ಕೇಳಿದರೆ ನನ್ನ ರೀತಿ ಬೋಲ್ಡ್ ಆಗಿ ರಿಪ್ಲೇ ಮಾಡಿ. ನೀವು ದುಡಿದಿರುವ ದುಡ್ಡು ಆಗಿದ್ದರೆ ಯಾವ ಅಪ್ಪನ ಮಗನಿಗೂ ಕೇರ್ ಮಾಡಬೇಕಾಗಿಲ್ಲ. ಇಷ್ಟಪಟ್ಟು ಮೊದಲ ಕಾರ್ ತಗೊಂಡೆ, ಆದರೆ ಸ್ನೇಹಿತರಿಂದಲೇ ಸಮಸ್ಯೆ ಆಯಿತು. ಅದು ದೊಡ್ಡ ಕಥೆ ಬಿಡಿ" ಎಂದು ತನಿಷಾ ಹೇಳಿದ್ದಾರೆ. ಸದ್ಯ ಆಕೆಯ ಮಾತುಗಳು ವೈರಲ್ ಆಗುತ್ತಿದೆ.

More from Filmibeat

English summary
Tanisha Kuppanda expresses anger over netizes who ask her hot pics;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X