ಬಿಗ್ ಬಾಸ್ ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದದ್ದು ಈ ನಟಿ: 3 ದಿನಕ್ಕೆ 2 ಕೋಟಿ ರೂಪಾಯಿ!
ಬಿಗ್ ಬಾಸ್ ಶೋ ಎಲ್ಲಾ ಭಾಷೆಗಳಲ್ಲೂ ಬರುತ್ತಿದೆ. ಎರಡು ತಿಂಗಳಲ್ಲಿ ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ಮತ್ತೆ ಸೀಸನ್‌ಗಳು ಆರಂಭವಾಗಿದೆ. ಹಿಂದಿಯಲ್ಲಿ ಈಗಾಗಲೇ ಹದಿನಾರು ಸೀಸನ್ ಮುಗಿದು ಹದಿನೇಳನೆ ಶೋಗೆ ಕಾಲಿಟ್ಟಿದೆ. ಕನ್ನಡದಲ್ಲಿ ಹತ್ತನೇ ಸೀಸನ್ ಆರಂಭವಾಗಿದೆ.
ಬಿಗ್ ಬಾಸ್ ಮನೆಗಳಲ್ಲಿ ಆಗ್ಗಾಗೆ ಅತಿಥಿಗಳು ಬರುವುದು ಸಾಮಾನ್ಯ. ಅದರಲ್ಲೂ ಎಲ್ಲಾ ಭಾಷೆಯ ರಿಯಾಲಿಟಿ ಶೋಗಳಲ್ಲಿ ಗೆಸ್ಟ್ ಬರುತ್ತಾರೆ. ತಮ್ಮದೆ ಆದ ರೀತಿಯ ಗೇಮ್‌ಗಳನ್ನು ಆಡಿಸುತ್ತಾ ಒಂದೆರಡು ದಿನಗಳ ಮಟ್ಟಿಗೆ ಹೋಗುತ್ತಾರೆ. ಈ ಬಾರಿಯೂ ಕನ್ನಡದಲ್ಲಿ ಪ್ರಥಮ್, ಶಾಸಕ ಪ್ರದೀಪ್ ಈಶ್ವರ್, ನಟಿ ತಾರಾ ಸೇರಿದಂತೆ ಸೀರಿಯಲ್ ಕಲಾವಿದರು ಕಾಣಿಸಿಕೊಂಡಿದ್ದರು.

ಹೌದು...ಬಿಗ್ ಬಾಸ್ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿದೆ. ಬಹಳ ಸಮಯದಿಂದ ಪ್ರೇಕ್ಷಕರನ್ನು ರಂಜಿಸುತ್ತಿದೆ. ಹಿಂದಿಯಲ್ಲಿ ಸಲ್ಮಾನ್ ಖಾನ್ ನಡೆಸಿಕೊಡುವ ಈ ಕಾರ್ಯಕ್ರಮವು ಹೊಸ ಸೀಸನ್‌ನೊಂದಿಗೆ ಮತ್ತೊಮ್ಮೆ ಪ್ರೇಕ್ಷಕರನ್ನು ರಂಜಿಸುತ್ತಿದೆ. ಈ ಬಾರಿ ಮದುವೆಯಾದ ದಂಪತಿ ಕೂಡ ಬಿಗ್ ಬಾಸ್ ಮನೆಯಲ್ಲಿದ್ದು, ಸಕತ್ ಮನರಂಜನೆ ನೀಡುತ್ತಿದೆ.
ಆದರೆ, ಬಿಗ್ ಬಾಸ್ ಮನೆಗೆ ಗೆಸ್ಟ್ ಆಗಿ ಬರುವವರು ತಾವು ಇರುವಷ್ಟು ದಿನಕ್ಕೆ ಇಷ್ಟು ಹಣ ಎಂದು ಚಾರ್ಜ್ ಮಾಡುತ್ತಾರೆ. ಹಾಗಾದರೆ, ಇಲ್ಲಿಯವರೆಗೆ ಬಿಗ್ ಬಾಸ್ ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದವರು ಯಾರು ಎಂದು ಗೊತ್ತೆ..? ಅವರ ಬಗ್ಗೆ ತಿಳಿಸುವ ಒಂದು ಪ್ರಯತ್ನ ಇಲ್ಲಿದೆ.
ಬಿಗ್ ಬಾಸ್ ಇತಿಹಾಸದಲ್ಲಿ ಅತಿಹೆಚ್ಚು ಸಂಭಾವನೆ ಪಡೆದವರು!
ಇಷ್ಟು ಬಿಗ್ ಬಾಸ್ ಸೀಸನ್‌ಗಳಲ್ಲಿ ಒಂದು ಸೀಸನ್‌ನಲ್ಲಿ ಬಂದಿದ್ದ ನಟಿಯೋಬ್ಬರು ಅತ್ಯಧಿಕ ಸಂಭಾವನೆ ಪಡೆದಿದ್ದಾರೆ. ಅದು ಬರೋಬ್ಬರಿ ಮೂರು ಕೋಟಿ ರೂಪಾಯಿಗಳು ಎಂದರೇ ನೀವು ನಂಬಲೇ ಬೇಕು. ಹೌದು ಬಿಗ್ ಬಾಸ್ ಹಿಂದಿಯಲ್ಲಿ ಕೆಲವೇ ಕೆಲವು ದಿನ ಕಾಣಿಸಿಕೊಂಡಿದ್ದ ವಿದೇಶಿ ನಟಿಯೊಬ್ಬರು ಇಲ್ಲಿಯವರೆಗೆ ಅತ್ಯಧಿಕ ಸಂಭಾವನೆ ಪಡೆದವರು ಎಂದು ಹೆಸರು ಗಳಿಸಿದ್ದಾರೆ.

ಈ ಶೋನಲ್ಲಿ ಭಾಗವಹಿಸುವ ಸ್ಪರ್ಧಿಗಳು ಭಾರಿ ಮೊತ್ತವನ್ನು ಪಡೆಯುತ್ತಾರೆ. ಆದರೆ, ಅತಿ ಹೆಚ್ಚು ಸಂಭಾವನೆ ಪಡೆದಿರುವ ಸ್ಪರ್ಧಿ ಹಿನಾ ಖಾನ್, ಸಿದ್ಧಾರ್ಥ್ ಶುಕ್ಲಾ ಅಥವಾ ತೇಜಸ್ವಿ ಪ್ರಕಾಶ್ ಅಲ್ಲ...ಅದು ಒಬ್ಬ ವಿದೇಶಿ ನಟಿ. ದೊಡ್ಮನೆಯಲ್ಲಿ ಕೇವಲ 3 ದಿನ ಇರುವುದಕ್ಕೆ 2 ಕೋಟಿ ರೂಪಾಯಿಗಳನ್ನು ತೆಗೆದುಕೊಂಡಿದ್ದಾರೆ.
3 ದಿನ ಇರುವುದಕ್ಕೆ 2 ಕೋಟಿ ರೂಪಾಯಿ!
ಬಿಗ್ ಬಾಸ್ ಸೀಸನ್ 4 ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಕೆನಡಾ- ಅಮೇರಿಕನ್ ನಟಿ ಮತ್ತು ರೂಪದರ್ಶಿ ಪಮೇಲಾ ಆಂಡರ್ಸನ್ ಕೇವಲ 3 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿಯೇ ಇದ್ದರು. ಇದಕ್ಕೆ ಅವರು ತೆಗೆದುಕೊಂಡಿದ್ದು ಬರೋಬ್ಬರಿ ಎರಡು ಕೋಟಿ ರೂಪಾಯಿಗಳು!.
ಪಮೇಲಾ ಆಂಡರ್ಸನ್ ಪ್ಲೇಬಾಯ್ ಮ್ಯಾಗಜೀನ್‌ನಲ್ಲಿ ಮಾಡೆಲಿಂಗ್ ಕೆಲಸಕ್ಕಾಗಿ ಮತ್ತು ಕಿರುತೆರೆ ಕಾರ್ಯಕ್ರಮ 'ಬೇವಾಚ್'ನಲ್ಲಿ ಸಿಜೆ ಪಾರ್ಕರ್ ಪಾತ್ರದಿಂದ ಹೆಸರು ಗಳಿಸಿದ್ದರು. ಮಾಡೆಲ್ ಆಗಿ ಹೆಚ್ಚು ಹೆಸರು ಮಾಡಿರುವ ಅವರು ಸಲ್ಮಾನ್ ಖಾನ್ ಅವರ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮೂಎಉ ದಿನ ಸ್ಪರ್ಧಿಯಾಗಿದ್ದರು.
ಲೈಂಗಿಕ ಕಿರುಕುಳ, ಅತ್ಯಾಚಾರಕ್ಕೆ ಬಲಿಯಾಗಿದ್ದ ನಟಿ
ಪಮೇಲಾ ಆಂಡರ್ಸನ್ ತಮ್ಮ ಬಾಲ್ಯದಲ್ಲಿ ಲೈಂಗಿಕ ಕಿರುಕುಳವನ್ನು ಅನುಭವಿಸಿದ್ದವರು. 6 ರಿಂದ 10 ವರ್ಷ ವಯಸ್ಸಿನ ಅವರು ಕಿರುಕುಳಕ್ಕೆ ಒಳಗಾಗಿದ್ದರು. 12 ವರ್ಷದವಳಿದ್ದಾಗ 25 ವರ್ಷದ ವ್ಯಕ್ತಿಯಿಂದ ಅತ್ಯಾಚಾರಕ್ಕೆ ಒಳಗಾಗಿದ್ದರು ಎಂದು 2014 ರಲ್ಲಿ ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದರು. ಅಷ್ಟೇ ಅಲ್ಲದೇ, ತನಗೆ 14 ವರ್ಷದವಳಿದ್ದಾಗ ತನ್ನ ಗೆಳೆಯ ಮತ್ತು ಆತನ ಆರು ಜನ ಗೆಳೆಯರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದೇ ಎಂದು ನೋವನ್ನು ಹಂಚಿಕೊಂಡಿದ್ದರು.
ಬಿಗ್ ಬಾಸ್ ಸೀಸನ್ 12 ರಲ್ಲಿ ಎಸ್ ಶ್ರೀಶಾಂತ್ ಅವರಿಗೆ ವಾರಕ್ಕೆ 50 ಲಕ್ಷ ರೂ.ಗಳ ಸಂಭಾವನೆ ನೀಡಲಾಗುತ್ತಿತ್ತು. ಬಿಗ್ ಬಾಸ್ ಸೀಸನ್ 4 ರಲ್ಲಿ ಖಲಿ ವಾರಕ್ಕೆ 50 ಲಕ್ಷ ರೂ, ಬಿಗ್ ಬಾಸ್ 12 ರಲ್ಲಿ ಕರಣ್‌ವೀರ್ ಬೋಹ್ರಾ ವಾರಕ್ಕೆ 20 ಲಕ್ಷ ರೂ. ಬಿಗ್ ಬಾಸ್ 15 ರ ವಿನ್ನರ್ ತೇಜಸ್ವಿ ಪ್ರಕಾಶ್ ಅವರು ಮನೆಯೊಳಗೆ 17 ವಾರಗಳ ಅವಧಿಗೆ 1.7 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಬಿಗ್ ಬಾಸ್ 13 ರ ವಿಜೇತ ಸಿದ್ಧಾರ್ಥ್ ಶುಕ್ಲಾ ವಾರಕ್ಕೆ 9 ಲಕ್ಷ ರೂ. ಬಿಗ್ ಬಾಸ್ ಸೀಸನ್ 12 ರ ವಿನ್ನರ್ ದೀಪಿಕಾ ಕಕ್ಕರ್ ವಾರಕ್ಕೆ 15 ಲಕ್ಷ ರೂಪಾಯಿ ಪಡೆದಿದ್ದಾರೆ.


Click it and Unblock the Notifications










