BBK9: 'ಸಂಬರ್ಗಿ ಅಪ್ಪಿಕೊಳ್ಳುವಾಗ ಅವರ ಭಾವ ಬೇರೆ ಇರುತ್ತಿತ್ತು' ನೇಹಾ ಗೌಡ!

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಒಬ್ಬೊಬ್ಬರೇ ಸದಸ್ಯರು ಖಾಲಿಯಾಗುತ್ತಿದ್ದಾರೆ. ಶನಿವಾರ ಬಂತು ಅಂದ್ರೆ ಸಾಕು ನಾಮಿನೇಟ್ ಆದವರ ಮನಸ್ಸಲ್ಲಿ ಡವ ಡವ ಎನ್ನುತ್ತಾ ಇರುತ್ತದೆ. ಹಾಗೇ ನಿರೀಕ್ಷೆಯನ್ನೇ ಮಾಡದೆ ಹೊರ ಬಂದಿರುವವರು ಬಂದ ಮೇಲೆ ಇದ್ದಿದ್ದರೆ ಇನ್ನಷ್ಟು ಆಟ ಆಡಬಹುದಾಗಿತ್ತು. ನಾನು ಏನು ಎಂಬುದನ್ನು ಪ್ರೂವ್ ಮಾಡಿಕೊಳ್ಳಬಹುದಾಗಿತ್ತು ಎಂದುಕೊಂಡಿದ್ದಾರೆ. ಆದರೆ ಈ ವಾರ ನೇಹಾ ಮನೆಯಿಂದ ಹೊರ ಬಂದಿದ್ದು, ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಈ ಬಾರಿಯ ಬಿಗ್ ಬಾಸ್ ಪ್ರವೀಣರು ಮತ್ತು ನವೀನರ ನಡುವೆ ನಡೆದ ಆಟವಾಗಿದೆ. ಹೀಗಾಗಿ ಆಟವನ್ನು ಬಲ್ಲವರು ಎಲ್ಲಿಯೂ ಕಾಂಪ್ರಮೈಸ್ ಆಗದೆ ಆಡುತ್ತಿದ್ದಾರೆ. ಮುಂದಿನ ವಾರದಿಂದ ಯಾರನ್ನು ನಾಮಿನೇಟ್ ಮಾಡುವುದು ಎಂಬ ಗೊಂದಲ ಬಿಗ್ ಬಾಸ್‌ಗೆ ಶುರುವಾಗುವ ಸಮಯವೂ ಬರಬಹುದು. ಈಗಿನಿಂದಲೇ ನೋಡುಗರ ಲೆಕ್ಕಾಚಾರವೂ ಹೊರಗೆ ಯಾರು ಬರಲಿದ್ದಾರೆ ಎಂಬುದು ಶುರುವಾಗಿದೆ. ಅದಕ್ಕೂ ಮುನ್ನ ಮನೆಯೊಳಗಿನ ವಿಚಾರವನ್ನು ನೇಹಾ ಹಂಚಿಕೊಂಡಿದ್ದಾರೆ.

ಅನ್ನಿಸಿದ್ದನ್ನು ಹೇಳುತ್ತಾರಂತೆ ರಾಜಣ್ಣ

ಅನ್ನಿಸಿದ್ದನ್ನು ಹೇಳುತ್ತಾರಂತೆ ರಾಜಣ್ಣ

ಬಿಗ್ ಬಾಸ್ ಮನೆಯಲ್ಲಿ 35 ದಿನಗಳನ್ನು ಕಳೆದಿರುವ ನೇಹಾ ಗೌಡ, ಕಳೆದ ಶನಿವಾರ ಹೊರಗೆ ಬಂದಿದ್ದಾರೆ. ಈ ಬಗ್ಗೆ ಯೂಟ್ಯೂಬ್ ಒಂದರಲ್ಲಿ ಮಾತನಾಡಿರುವ ನೇಹಾ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ರೂಪೇಶ್ ರಾಜಣ್ಣ ಬಗ್ಗೆ ಹೇಳಿದ್ದು ಹೀಗೆ, "ರೂಪೇಶ್ ರಾಜಣ್ಣ ಸೋ ಸ್ವೀಟ್ ಪರ್ಸನ್. ಯಾವುದೇ ಸ್ಟಾಟರ್ಜಿ ಇಟ್ಟುಕೊಂಡು ಆಡಲ್ಲ. ಇವರ ಜೊತೆ ಜಗಳ ಆಡಬೇಕು ಅಂತ ಆಗಲಿ, ಇವ್ರನ್ನ ಹೆಚ್ಚು ಮಾತನಾಡಿಸಬೇಕು ಎಂದಾಗಲಿ ಅವರ ಮನಸ್ಸಲ್ಲಿ ಇರುವುದಿಲ್ಲ. ಆ ಕ್ಷಣಕ್ಕೆ ಕೋಪ ಬಂದ್ರೆ ಕೋಪ ತೋರಿಸುತ್ತಾರೆ. ನಗು ಬಂದರೆ ನಗು ತೋರಿಸುತ್ತಾರೆʼ ಎಂದಿದ್ದಾರೆ.

ಕಾವ್ಯಾ ಬಗ್ಗೆ ನೇಹಾ ಹೇಳಿದ್ದೇನು..?

ಕಾವ್ಯಾ ಬಗ್ಗೆ ನೇಹಾ ಹೇಳಿದ್ದೇನು..?

ಟಾಸ್ಕ್ ಅಂದ್ರೆ ಅಯ್ಯೋ ನಂಗೆ ಆಗಲ್ಲಪ್ಪ ಎನ್ನುತ್ತಾರೆ ಕಾವ್ಯಾ. ಆದರೆ ಪ್ರತಿವಾರ ಆರಾಮವಾಗಿ ಸೇಫ್ ಆಗುತ್ತಾರೆ. ಈ ಬಗ್ಗೆ ಮನೆ ಮಂದಿಗೂ ಶಾಕ್ ಆಗಿತ್ತು. ನೇಹಾ, ಅನುಪಮಾ, ದಿವ್ಯಾ ಎಲ್ಲರೂ ಕೂತು ಈ ಬಗ್ಗೆ ಚರ್ಚೆ ಮಾಡಿದ್ದರು. ಈ ಬಗ್ಗೆ ಮಾತನಾಡಿದ ನೇಹಾ, ʻಕಾವ್ಯಾ ಮುಗ್ಧೆ ಥರ ಆಕ್ಟ್ ಮಾಡುತ್ತಾಳೆ. ಆದರೆ, ಮುಗ್ಧೆ ಅಲ್ಲ. ಅವಳಿಗೆ ಎಲ್ಲಾ ಗೊತ್ತು. ನಾನೇ ಒಂದು ದಿನ ಕೇಳಿದೆ. ಏನು ಕಾವ್ಯಾ ಎಲ್ಲರ ಜೊತೆ ಮಾತನಾಡಬೇಕು ಅಲ್ವಾ ಅಂದ್ರೆ, ಅಯ್ಯೋ ಸುಮ್ನೆ ಇರಿ. ಒಬ್ಬರೇ ಬಂದಿದ್ದೀವಿ. ಒಬ್ಬರೆ ಆಡಬೇಕು. ಒಬ್ಬರೆ ಹೋಗಬೇಕು ಎಂದಿದ್ದಳು. ಅಂದ್ರೆ ಯಾರ ಜೊತೆಗೆ ಹೇಗೆ ನಡೆದುಕೊಳ್ಳಬೇಕು ಎಂಬುದು ಕಾವ್ಯಾಗೆ ಗೊತ್ತು. ಇನ್ನು ಆರ್ಯವರ್ಧನ್ ಗುರೂಜಿ ಕೂಡ ಮುಗ್ಧ ಅಲ್ಲ" ಎಂದಿದ್ದಾರೆ.

ಈ ವಾರ ನೇರ ನಾಮಿನೇಟ್ ಸಂಬರ್ಗಿ

ಈ ವಾರ ನೇರ ನಾಮಿನೇಟ್ ಸಂಬರ್ಗಿ

ನೇಹಾ ಗೌಡ ಹೊರಗೆ ಬರುವಾಗ ಬಿಗ್ ಬಾಸ್ ಒಂದು ಅಧಿಕಾರವನ್ನು ನೀಡಿತ್ತು. ಮನೆಯಿಂದ ಹೊರ ಹೋಗಲು ಬಯಸುವ ಒಬ್ಬರನ್ನು ನೇರವಾಗಿ ನಾಮಿನೇಟ್ ಮಾಡಬಹುದು ಎಂಬುದು. ಅದಕ್ಕೆ ನೇಹಾ ತೆಗೆದುಕೊಂಡ ಹೆಸರು ಸಂಬರ್ಗಿ. ಇತ್ತೀಚೆಗೆ ಅವರಿಬ್ಬರ ನಡುವೆ ಹೇಳಿಕೊಳ್ಳುವಂತಹ ಬಾಂಧವ್ಯ ಇರಲಿಲ್ಲ. ಜೊತೆಗೆ ಅವರಿಂದ ನೇಹಾ ಅಂತರವನ್ನು ಕಾಯ್ದುಕೊಂಡಿದ್ದರು.

ಪ್ರಶಾಂತ್ ಸಂಬರ್ಗಿಯ ನಡವಳಿಕೆ ಇಷ್ಟವಾಗಲಿಲ್ಲವಾ..?

ಪ್ರಶಾಂತ್ ಸಂಬರ್ಗಿಯ ನಡವಳಿಕೆ ಇಷ್ಟವಾಗಲಿಲ್ಲವಾ..?

ಯಾರಿಗೆ ಆಗಲಿ, ನಡವಳಿಕೆಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬಂದರೂ ಅವರ ಜೊತೆಗೆ ಆತ್ಮೀಯವಾಗಿ ಸಲುಗೆಯಿಂದ ಇರುವುದಕ್ಕೆ ಸಾಧ್ಯವೇ ಆಗುವುದಿಲ್ಲ. ಪರಿಚಯ ಇಲ್ಲದವರು ಪರಿಚಯವಾದ ಮೇಲೆ ಹಗ್ ಮಾಡುತ್ತಾರೆ ಎಂದರೆ ಅಲ್ಲೊಂದು ನಿಶ್ಕಲ್ಮಶ ಬಾಂಧವ್ಯ ಇರಬೇಕು. ಮಾಡುವ ಆಲಂಗನೆಯಲ್ಲೂ ಆ ನಿಶ್ಕಲ್ಮಶತೆ ಕಂಡೇ ಕಾಣುತ್ತೆ. ಆದರೆ, ಪ್ರಶಾಂತ್ ಸಂಬರ್ಗಿ ಈ ವಿಚಾರಕ್ಕೆ ನೇಹಾ ಮನಸ್ಸಿಗೆ ತುಂಬಾ ಬೇಸರ ಆಗಿದೆ. ಈ ಬಗ್ಗೆ ನೇಹಾ ಹೇಳಿಕೊಂಡಿದ್ದು ಹೀಗೆ, ʻಆ ವ್ಯಕ್ತಿ ಹಗ್ ಮಾಡುವಾಗ ಬೇರೆಯ ರೀತಿಯ ಭಾವ ಇಟ್ಟುಕೊಂಡಿದ್ದರು. ಕೈ ಟಚ್ ಮಾಡುವಾಗಲೂ ಅಷ್ಟೆ. ಅದು ನಂಗೆ ಅಸಹ್ಯ ಎನಿಸಿತ್ತು. ಅದಕ್ಕೆ ಅವರಿಂದ ನಾನು ದೂರವೇ ಇದ್ದೆʼ ಎಂದಿದ್ದಾರೆ.

More from Filmibeat

English summary
Bigg Boss Kannada 9 Contestant Neha Gowda Reaction. Here is the details about Biggboss contestant Neha reaction.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X