twitter
    For Quick Alerts
    ALLOW NOTIFICATIONS  
    For Daily Alerts

    ಸರ್ವಜನಾಂಗದ 'ಶಾಂತಿ'ಯ ತೋಟ ಬಿಗ್‌ಬಾಸ್‌: ಉಘೆ ಎನ್ನಲೇಬೇಕಲ್ಲವೆ?

    |

    ಭಾರತದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ನ ಮೂಲ ರೂಪ ಬಿಗ್‌ ಬ್ರದರ್. ಈ ಶೋನಲ್ಲಿ ಹಿಂದೊಮ್ಮೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಭಾಗವಹಿಸಿ ವಿಜೇತರೂ ಆಗಿದ್ದರು. ಆ ಶೋನಲ್ಲಿ ಮನೆಯ ಒಳಗೆ ತಮ್ಮ ಮೇಲೆ ಜನಾಂಗೀಯ ನಿಂದನೆ ಮಾಡಲಾಗಿದೆ ಎಂದು ಶಿಲ್ಪಾ ಶೆಟ್ಟಿ ಆರೋಪಿಸಿದ್ದರು. ಶಿಲ್ಪಾರ ಆ ಆರೋಪ ಅವರ ಜಯಕ್ಕೂ ಸಹಕಾರಿಯಾಗಿತ್ತು.

    ಒಂದು ಸೀಮಿತ ವ್ಯಾಪ್ತಿಯ ಸ್ಥಳದಲ್ಲಿ ಭಿನ್ನ ಸಂಸ್ಕೃತಿಕ, ಭಿನ್ನ ವ್ಯಕ್ತಿತ್ವದ, ಭಿನ್ನ ಪ್ರಾದೇಶಿಕತೆಯ, ಭಿನ್ನ ಜಾತಿ, ಧರ್ಮದ ಜನರನ್ನು ತಂದು ಕೂಡಿ ಹಾಕಿದಾಗ ಮಾನವ ಸಹಜವಾದ ಶ್ರೇಷ್ಟತೆಯ ವ್ಯಸನ ಅವರನ್ನು ಕಾಡದೇ ಇರದು. ಇಲ್ಲಿರುವ ವ್ಯಕ್ತಿಗಳಲ್ಲಿ ನಾನು ಶ್ರೇಷ್ಟ ಎಂದು ಪ್ರದರ್ಶಿಸಿಕೊಳ್ಳುವ ಅಥವಾ ತಮಗೆ ತಾವೇ ಅಂದುಕೊಳ್ಳುವ ಹುಕಿ ಮೂಡಿಯೇ ತೀರುತ್ತದೆ. ಈ ಶ್ರೇಷ್ಟತೆಯ ವ್ಯಸನ ಮೊದಲಿಗೆ ತಲೆ ಎತ್ತುವುದು ಜಾತಿ, ಧರ್ಮದ ವಿಚಾರದಲ್ಲಿ. ನಮ್ಮ ದೇಶದಲ್ಲಿ ನಾವಿದನ್ನು ಈಗಾಗಲೇ ನೋಡುತ್ತಿದ್ದೇವೆ ಸಹ.

    ಪಬ್ಲಿಕ್‌ನಲ್ಲಿ ಲಿಪ್‌ಲಾಕ್: 2007ರ ಪ್ರಕರಣದಲ್ಲಿ ಮತ್ತೆ ನ್ಯಾಯಾಲಯಕ್ಕೆ ಶಿಲ್ಪಾ ಶೆಟ್ಟಿಪಬ್ಲಿಕ್‌ನಲ್ಲಿ ಲಿಪ್‌ಲಾಕ್: 2007ರ ಪ್ರಕರಣದಲ್ಲಿ ಮತ್ತೆ ನ್ಯಾಯಾಲಯಕ್ಕೆ ಶಿಲ್ಪಾ ಶೆಟ್ಟಿ

    ಆದರೆ ಆಶ್ಚರ್ಯಕರ ರೀತಿಯಲ್ಲಿ ಬಿಗ್‌ಬಾಸ್ ಮನೆಯಲ್ಲಿ, ವಿಶೇಷವಾಗಿ ಕನ್ನಡ ಬಿಗ್‌ಬಾಸ್ ಮನೆಯಲ್ಲಿ ಈ ವರೆಗೆ ಜಾತೀಯ ಅಥವಾ ಧರ್ಮೀಯ, ಜನಾಂಗೀಯ ಸಂಘರ್ಷ ನಿಂದನೆ ಕಂಡು ಬಂದಿಲ್ಲ. ಆಯೋಜಕರು ಪ್ರಜ್ಞಾಪೂರ್ವಕವಾಗಿಯೇ ವಿವಿಧ ಸಂಸ್ಕೃತಿಯ, ಧರ್ಮದ ಜನರನ್ನು ಆರಿಸಿ ಬಿಗ್‌ಬಾಸ್ ಮನೆಯೊಳಗೆ ಕಳಿಸುತ್ತಿದ್ದಾರೆ ಎಂದು ಪ್ರತಿಬಾರಿ ಆಯ್ಕೆಯಾಗುವ ಸ್ಪರ್ಧಿಗಳನ್ನು ನೋಡಿದರೆ ಗೊತ್ತಾಗುತ್ತದೆ. ಅದಾಗ್ಯೂ ಮನೆಯ ಒಳಗೆ ಆ ಕೆಟ್ಟ ಸಂಘರ್ಷ ಆಗದ ರೀತಿಯಲ್ಲಿ ಎಚ್ಚರ ವಹಿಸಿರುವುದಕ್ಕೆ ಆಯೋಜಕರಿಗೆ ಶಹಭಾಷ್ ಹೇಳಲೇ ಬೇಕು.

    ಸಹ್ಯತೆ ಸೃಷ್ಟಿಸುತ್ತಿರುವ ಶೋ

    ಸಹ್ಯತೆ ಸೃಷ್ಟಿಸುತ್ತಿರುವ ಶೋ

    ವಿವಿಧ ಜಾತಿ ಧರ್ಮದ ಮಾತ್ರವೇ ಅಲ್ಲ ಆಡಮ್‌ ಅಂಥಹಾ ತೃತೀಯ ಲಿಂಗಿಯನ್ನು ಸಹ ಬಿಗ್‌ಬಾಸ್ ಮನೆಯೊಳಕ್ಕೆ ಕಳಿಸಿ ತಾವು ವಿಶಾಲ ಮನೋಧರ್ಮದವರೆಂಬುದನ್ನು ಸಾರಿದೆ ಬಿಗ್‌ಬಾಸ್. ತೃತೀಯ ಲಿಂಗಿಗಳು ಮಾತ್ರವೇ ಅಲ್ಲದೆ, ಕಾಡಿನಂಚಿನ ಸಮುದಾಯದ ವ್ಯಕ್ತಿಗಳನ್ನು ಸಹ ಬಿಗ್‌ಬಾಸ್ ಮನೆಯ ಒಳಗೆ ಕಳಿಸಲಾಗಿತ್ತು. ತೃತೀಯ ಲಿಂಗಿಗಳು, ಅರಣ್ಯ ನಂಬಿದ ಸಮುದಾಯ ಇನ್ನಿತರೆ ಸಮುದಾಯಗಳ ಬಗ್ಗೆ ಹೊರಗಿನ ಸಮಾಜದಲ್ಲಿ ಸಹ್ಯತೆಯೊಂದು ಸೃಷ್ಟಿಸುವ ಕಾರ್ಯವನ್ನು ಬಿಗ್‌ಬಾಸ್ ಪರೋಕ್ಷವಾಗಿ ಮಾಡಿದೆ.

    ಮನೆಯೊಳಗೆ ಎಲ್ಲರೂ ಸಮಾನರೇ

    ಮನೆಯೊಳಗೆ ಎಲ್ಲರೂ ಸಮಾನರೇ

    ಬಿಗ್‌ಬಾಸ್‌ ನಲ್ಲಿ ಜ್ಯೋತಿಷಿ ಅಥವಾ ಸ್ವಾಮೀಜಿಗಳೊಬ್ಬರನ್ನು ಬಹುತೇಕ ಪ್ರತಿಬಾರಿ ಸಹ ಒಳಗೆ ಕಳಿಸಲಾಗುತ್ತದೆ. ಸಮಾಜದಲ್ಲಿ ಮಡಿ-ಮೈಲಿಗೆ ಇನ್ನಿತರೆ ಆಚಾರಗಳನ್ನು ಆಚರಿಸುವ ಆ ಸ್ಪರ್ಧಿಗಳು ಬಿಗ್‌ಬಾಸ್ ಮನೆಯಲ್ಲಿ ಎಲ್ಲರೊಳಗೊಂದಾಗಿ ಸಾಮಾನ್ಯರಲ್ಲಿ ಸಾಮಾನ್ಯರಂತೆ ಆಡುತ್ತಾ ಹಾಡುತ್ತಾ ಕಾಲ ಕಳೆಯುತ್ತಾರೆ. ಆ ಮೂಲಕ ವ್ಯತಿರಿಕ್ತ ಸನ್ನಿವೇಶಗಳಲ್ಲಿ ಎಲ್ಲ ಮನುಷ್ಯರೂ ಒಂದೇ ಎಂಬುದನ್ನು ಈ ಮೂಲಕ ಬಿಗ್‌ಬಾಸ್ ಸಾಬೀತು ಮಾಡಿದೆ. ಈ ಹಿಂದಿನ ಸೀಸನ್ ಒಂದರಲ್ಲಿ ಅರ್ಚಕರೊಬ್ಬರು ಬಿಗ್‌ಬಾಸ್‌ ಮನೆಯಲ್ಲಿ ತಮ್ಮ ಅಡುಗೆ ತಾವೇ ಮಾಡಿಕೊಳ್ಳುತ್ತಿದ್ದರು ಆದರೆ ಆ ಮನೆಯ ವಾತಾವರಣ, ಅಲ್ಲಿ ಸೃಷ್ಟಿಯಾದ ಸನ್ನಿವೇಶಗಳೇ ತಮ್ಮ ಆ ನಿಯಮವನ್ನು ಅವರೇ ತ್ಯಜಿಸಿ ಎಲ್ಲರೊಟ್ಟಿಗೆ ಒಂದಾಗಿ ಬದುಕಲು ಪ್ರೇರೇಪಿಸಿತು.

    ಈ ವಿಷಯಕ್ಕೆ ಎಂದೂ ಜಗಳವಾಗಿಲ್ಲ ಬಿಗ್‌ಬಾಸ್ ಒಳಗೆ

    ಈ ವಿಷಯಕ್ಕೆ ಎಂದೂ ಜಗಳವಾಗಿಲ್ಲ ಬಿಗ್‌ಬಾಸ್ ಒಳಗೆ

    ಬಿಗ್‌ಬಾಸ್ ಒಳಗೆ ಎಂದೂ ಜಾತಿ ವಿಷಯವಾಗಿ ಧರ್ಮದ ವಿಚಾರವಾಗಿ ಜಗಳ ಆಗದೇ ಇರುವುದು ಆಶ್ಚರ್ಯ. ಇದು ಸಂಘಟಕರ ಚತುರತೆಗೆ ಸಾಕ್ಷಿ. ಆಯೋಜಕರೇ ಆ ರೀತಿಯ ಜಾತೀಯ ಪಕ್ಷಪಾತ ಅಥವಾ ಪೂರ್ವಾಗ್ರಹ ರಹಿತವಾಗಿ ಕಾರ್ಯಕ್ರಮ ಸಂಘಟಿಸಿದಾಗ, ಒಳಗಿನ ಸ್ಪರ್ಧಿಗಳ ಮೇಲೂ ಅದರ ಪರಿಣಾಮ ಬೀರಿ ಸುಪ್ತವಾದ ಎಚ್ಚರವೊಂದು ಜಾಗೃತವಾಗಿರುತ್ತದೆ ಎನಿಸುತ್ತದೆ. ಅದೇ ಕಾರಣಕ್ಕೆ ಬಿಗ್‌ಬಾಸ್ ಮನೆಯ ಒಳಗೆ ಎಷ್ಟೇ ಬಿಸಿ-ಬಿಸಿ ಜಗಳಗಳಾದರೂ ಜಾತೀಯ ನಿಂದನೆ ಈ ವರೆಗೆ ಆಗದೇ ಇರುವುದು. ಒಳಗೆ ಜಾತಿ ನಿಂದನೆ ಆಗಿ ಅದು 'ರೆಕಾರ್ಡ್' ಆಗದೇ ಹೋಗಿರಬಹುದು ಎಂದು ಕೆಲವರು ವಾದಿಸಬಹುದು. ಆದರೆ ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದ ಯಾವೊಬ್ಬ ವ್ಯಕ್ತಿಯೂ ಈವರೆಗೆ ಜಾತೀಯ ನಿಂದನೆಯ ಆರೋಪ ಮಾಡಿಲ್ಲ ಎಂಬುದನ್ನು ಗಮನಿಸಬೇಕು.

    ಬಿಗ್‌ಬಾಸ್‌ ಯಾವುದನ್ನೂ ಬೊಟ್ಟು ಮಾಡಿ ತೋರುವುದಿಲ್ಲ

    ಬಿಗ್‌ಬಾಸ್‌ ಯಾವುದನ್ನೂ ಬೊಟ್ಟು ಮಾಡಿ ತೋರುವುದಿಲ್ಲ

    ಬಿಗ್‌ಬಾಸ್‌ ಯಾವುದನ್ನೂ ಬೊಟ್ಟು ಮಾಡಿ ತೋರುವುದಿಲ್ಲ. ಅದು ತೋರುವುದು ಜಗಳ, ಅಳು-ನಗು, ಪರಿಸ್ಥಿತಿಗೆ ತಕ್ಕಂತೆ ಬದಲಾಗುವ ವ್ಯಕ್ತಿತ್ವ ಇತರೆ ಇತರೆ. ಆದರೆ ಹಿನ್ನೆಲೆಯಲ್ಲಿ ಭಿನ್ನ ಸಂಸ್ಕೃತಿಯ ಭಿನ್ನ ವ್ಯಕ್ತಿತ್ವದ, ಭಿನ್ನ ಬಣ್ಣದ, ಆರ್ಥಿಕ, ಸಾಮಾಜಿಕ ಸ್ಥರದ ವ್ಯಕ್ತಿಗಳು, ಭಿನ್ನ ಜಾತಿಯ, ಧರ್ಮದ ಒಟ್ಟಿಗೆ ಒಂದೇ ರೀತಿಯಲ್ಲಿ ಬದುಕುಬಲ್ಲರು. ವ್ಯತಿರಿಕ್ತ ಪರಿಸ್ಥಿತಿಗಳಲ್ಲಿ ವ್ಯಕ್ತಿಗಳು ತಮ್ಮ ಹೆಸರಿಗಂಟಿದ ಜಾತಿ-ಧರ್ಮಗಳ, ಸಾಮಾಜಿಕ ಸ್ಥರಗಳ ಪೂರ್ವಾಗ್ರಹಗಳಿಗೆ ಭಿನ್ನವಾಗಿ ವರ್ತಿಸುತ್ತಾರೆ. ವ್ಯಕ್ತಿಯ ನಿಜವಾದ ವ್ಯಕ್ತಿತ್ವಕ್ಕೂ ಅವನ ಜಾತಿ, ಧರ್ಮ, ಸ್ಥರ, ಬಣ್ಣಗಳಿಗೆ ಸಂಬಂಧವಿಲ್ಲ ಎಂಬುದನ್ನು ಬಿಗ್‌ಬಾಸ್ ತೋರಿಸುತ್ತಲೇ ಬಂದಿದೆ, ತೋರಿಸುತ್ತಿದೆ.

    English summary
    Bigg Boss Kannada OTT : No caste or religious conflicts happened in Bigg Boss Kannada History. Organizers careful while choosing contestants for the show. Know more.
    Tuesday, August 9, 2022, 19:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X