For Quick Alerts
  ALLOW NOTIFICATIONS  
  For Daily Alerts

  Nawaz: ಇಂಡಿಯಾ ನಮ್ ಕಂಟ್ರಿ, ನವಾಜ್ ಬಿಗ್‌ಬಾಸ್‌ಗೆ ಎಂಟ್ರಿ: ಈ ವೈರಲ್ ಹುಡುಗನ ಹಿನ್ನೆಲೆ ಏನು?

  |

  ಶುಕ್ರವಾರ ಹೊಸ ಕನ್ನಡ ಸಿನಿಮಾ ಬಿಡುಗಡೆ ಆಯಿತೆಂದರೆ ಯೂಟ್ಯೂಬ್‌ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಗುಂಡಗೆ ಲಡ್ಡು ಮಾದರಿಯ ಹುಡುಗನೊಬ್ಬ ಪ್ರತ್ಯಕ್ಷನಾಗಿ ಆವೇಶಭರಿತನಾಗಿ ಸಿನಿಮಾ ಬಗ್ಗೆ ತಮ್ಮ ಪಕ್ಕಾ ಲೋಕಲ್ ಭಾಷೆಯಲ್ಲಿ ವಿಮರ್ಶೆ ಹೇಳುತ್ತಾನೆ. ಬಹುತೇಕ ಪ್ರತಿ ಶುಕ್ರವಾರವೂ ಇವನ ಹಾಜರಿ ಪಕ್ಕಾ. ಹೀಗೆ ವಿಚಿತ್ರ ಮ್ಯಾನರಿಸಂನ ವಿಮರ್ಶೆಗಳಿಂದಲೇ ವೈರಲ್ ಆಗಿರುವ ಈ ಹುಡುಗನ ಹೆಸರು ನವಾಜ್. ಈತ ಈಗ ಬಿಗ್‌ಬಾಸ್ ಸೀಸನ್‌ 9ರ ಸ್ಪರ್ಧಿ!

  ಸಾಮಾಜಿಕ ಜಾಲತಾಣ ಯುಗದಲ್ಲಿ ವ್ಯಕ್ತಿಯ ಭವಿಷ್ಯ ಬದಲಾಗಲು ನಿಮಿಷಗಳು ಸಾಕು ಎಂಬ ಮಾತಿಗೆ ನವಾಜ್ ಅತ್ಯುತ್ತಮ ಉದಾಹರಣೆ. ಕೆಲ ತಿಂಗಳ ಹಿಂದೆ ಬೆಂಗಳೂರಿನ ಲಗ್ಗೆರೆಯ ಸಾಮಾನ್ಯ ಹುಡುಗನಾಗಿದ್ದ ನವಾಜ್‌ ಇಂದು ಕರ್ನಾಟಕದ ಪ್ರತಿಷ್ಠಿತ ರಿಯಾಲಿಟಿ ಶೋ ಸ್ಪರ್ಧಿ. ಕರ್ನಾಟಕದ ಸ್ಟಾರ್ ನಟ ಸುದೀಪ್ ಜೊತೆ ಕೆಲ ನಿಮಿಷಗಳಿಗಾದರೂ ಸರಿ ವೇದಿಕೆ ಹಂಚಿಕೊಳ್ಳುವ ಅದೃಷ್ಟ!

  ಈ ಅದೃಷ್ಟದ ಬಾಲಕನ ಹಿನ್ನೆಲೆ ಕೆದಕಿದರೆ, ಇವನಿಗೆ ಜೀವದಲ್ಲಿ ತುಸು ಅದೃಷ್ಟ ಎಂದು ಬಂದಿರುವುದು ಈಗಷ್ಟೆ. ಭಾರತದ ಬಹುತೇಕ ಬಡ, ಬಡ ಮಧ್ಯಮ ಕುಟುಂಬಗಳು ಕಳೆದಿರುವ ಕಷ್ಟದ ದಿನಗಳನ್ನು ಈತಲೂ ಈತನ ಕುಟುಂಬದವರೂ ಕಂಡಿದ್ದಾರೆ.

  ಲಗ್ಗೇರೆಯಲ್ಲಿಯೇ ಜನಿಸಿ ಬಾಲ್ಯ ಕಳೆದಿರುವ ನವಾಜ್ ಬಡ ಕುಟುಂಬದವನು. ನವಾಜ್ ತಂದೆ ಯಾರದ್ದೋ ಗರಾಜ್‌ನಲ್ಲಿ ಬೈಕ್ ಮೆಕಾನಿಕ್ ಆಗಿ ದಿನಗೂಲಿ ಮಾಡುತ್ತಾರೆ. ಈಗಲೂ ಅವರದ್ದು ಅದೇ ಉದ್ಯೋಗ. ಬಾಲ್ಯದಿಂದಲೂ ಕಷ್ಟದ ದಿನಗಳು ಕಂಡಿರುವ ನವಾಜ್, ತಾನೇ ಒಂದು ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿಕೊಂಡಿರುವಂತೆ, ಮನೆಯಲ್ಲಿ ತಿನ್ನಲು ಆಹಾರಕ್ಕೂ ಕಷ್ಟವಿತ್ತಂತೆ. ಮನೆಯಲ್ಲಿ ತಿನ್ನಲು ಆಹಾರ ಬಹಳ ಕಡಿಮೆ ಇರುತ್ತಿತ್ತಂತೆ ಅದಕ್ಕೆ ರಾತ್ರಿ ಹೊತ್ತು ಹೆಚ್ಚು ಊಟ ಮಾಡಬಾರದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಾಯಿ ಹೇಳುತ್ತಿದ್ದರಂತೆ.

  ಪ್ರತಿ ಶುಕ್ರವಾರ ಒಂದು ಸಿನಿಮಾ ಪಕ್ಕಾ

  ಪ್ರತಿ ಶುಕ್ರವಾರ ಒಂದು ಸಿನಿಮಾ ಪಕ್ಕಾ

  ಮನೆಯಲ್ಲಿ ಸಾಕಷ್ಟು ಕಷ್ಟಗಳಿದ್ದರೂ ಸಿನಿಮಾ ಪ್ರೀತಿಗೆ ಕೊರತೆ ಇರಲಿಲ್ಲ. ನವಾಜ್‌ರ ತಂದೆ ಪ್ರತಿ ಶುಕ್ರವಾರ ಮಗನನ್ನು ಒಂದು ಕನ್ನಡ ಸಿನಿಮಾಕ್ಕೆ ಕರೆದುಕೊಂಡು ಹೋಗುತ್ತಿದ್ದರಂತೆ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸಿನಿಮಾಗಳನ್ನು ತೋರಿಸುತ್ತಿದ್ದರಂತೆ. ಆ ಬಳಿಕ ಪುನೀತ್ ರಾಜ್‌ಕುಮಾರ್, ಉಪೇಂದ್ರ, ದರ್ಶನ್, ಸುದೀಪ್ ಸಿನಿಮಾಗಳನ್ನು ತೋರಿಸುತ್ತಿದ್ದರಂತೆ. ಇದೇ ರೀತಿ ನವಾಜ್‌ಗೂ ಸಹ ಸಿನಿಮಾಗಳ ಮೇಲೆ ಆಸಕ್ತಿ ಹೆಚ್ಚಾಗಿ. ಕಾಲೇಜಿಗೆ ಬಂದಾಗ ಪ್ರತಿ ಶುಕ್ರವಾರ ಒಂದು ಸಿನಿಮಾ ನೋಡುವುದು ಅಭ್ಯಾಸ ಮಾಡಿಕೊಂಡಿದ್ದಾರೆ.

  ನವಾಜ್ ಜೀವನ ಬದಲಿಸಿದ 'ಬಡವ ರಾಸ್ಕಲ್'

  ನವಾಜ್ ಜೀವನ ಬದಲಿಸಿದ 'ಬಡವ ರಾಸ್ಕಲ್'

  ಎಲ್ಲರಂತೆ ಶುಕ್ರವಾರ ಸಿನಿಮಾಕ್ಕೆ ಹೋಗಿ ಚಾನೆಲ್ ಕ್ಯಾಮೆರಾ ಕಂಡೊಡನೆ ಮುಖ ಮುಚ್ಚಿಕೊಂಡು ಹೊರಗೆ ಹೋಗುತ್ತಿದವರ ಪೈಕಿಯೇ ನವಾಜ್ ಕೂಡ. ಆದರೆ ಅವರ ಜೀವನ ಬದಲಿಸಿದ್ದು 'ಬಡವ ರಾಸ್ಕಲ್' ಸಿನಿಮಾ. ಧನಂಜಯ್ ಅಭಿನಯದ 'ಬಡವ ರಾಸ್ಕಲ್' ಸಿನಿಮಾಕ್ಕೆ ನವಾಜ್ ಹೋಗಿ ಹೊರಬರುವಾಗ ಯೂಟ್ಯೂಬ್ ಚಾನೆಲ್‌ ನವರು, ಸಿನಿಮಾ ಹೇಗಿದೆ ಎಂದು ಪ್ರತಿಕ್ರಿಯೆ ಕೇಳಿದ್ದಾರೆ. ಆ ಸಿನಿಮಾ ಸಹ ತಮ್ಮದೇ ರೀತಿಯ ಮಧ್ಯಮ ವರ್ಗದ ಕುಟುಂಬದ ಕತೆ. ಕುಟುಂಬದ ಮೇಲೆ ಪ್ರೀತಿ ಇದ್ದರೂ ಕುಟುಂಬಕ್ಕಾಗಿ ಏನೂ ಮಾಡಲಾಗದ ಹತಾಶ ತಂದೆಯ ಕತೆ. ಆ ಸಿನಿಮಾದ ಅಸಾಹಯಕ ತಂದೆ ಪಾತ್ರಧಾರಿ ರಂಗಾಯಣ ರಘು ಪಾತ್ರ ನೋಡಿ ತಮ್ಮ ತಂದೆಯನ್ನೇ ಅವರಲ್ಲಿ ಕಲ್ಪಿಸಿಕೊಂಡಿದ್ದ ನವಾಜ್, ಹೊರಗೆ ಯೂಟ್ಯೂಬ್ ಚಾನೆಲ್‌ನವರು ಮೈಕ್ ಇಟ್ಟೊಡನೆ ತಮ್ಮದೇ ಶೈಲಿನಲ್ಲಿ, ನಮ್ಮ ತಂದೆ-ತಾಯಿಗೆ ಪೂಜೆ ಮಾಡಲು ಹೋಗ್ತಾ ಇದ್ದೀನಿ'' ಎಂದರು. ನವಾಜ್‌ರ ಈ ವಿಡಿಯೋ ಸಖತ್ ವೈರಲ್ ಆಗಿತ್ತು.

  ಒಳ್ಳೆ ಹಣ ಸಂಪಾದನೆ ಮಾಡುತ್ತಿರುವ ನವಾಜ್

  ಒಳ್ಳೆ ಹಣ ಸಂಪಾದನೆ ಮಾಡುತ್ತಿರುವ ನವಾಜ್

  'ಬಡವ ರಾಸ್ಕಲ್' ಸಿನಿಮಾಕ್ಕೆ ನವಾಜ್ ನೀಡಿದ್ದ ವಿಮರ್ಶೆ ವೈರಲ್ ಆಗಿದ್ದೇ ತಡ ಪ್ರತಿ ಶುಕ್ರವಾರವೂ ಯೂಟ್ಯೂಬ್‌ ಚಾನೆಲ್‌ಗಳವರು ನವಾಜ್‌ರ 'ಸೈಕೋ ರಿವ್ಯೂ'ಗಾಗಿ ಅವರ ಮುಖಕ್ಕೆ ಕ್ಯಾಮೆರಾ ಹಿಡಿಯಲು ಆರಂಭಿಸಿದರು. ಅವರು ಉದ್ರೇಕಿತರಾಗಿ, ತಲೆ ಕೆರೆದುಕೊಂಡು ಆವೇಶಭರಿತರಾಗಿ ಸಿನಿಮಾವನ್ನು ಹೊಗಳುವ ಶೈಲಿ ಬಹಳ ವೈರಲ್ ಆಯಿತು. ಸಾಮಾಜಿಕ ಜಾಲತಾಣಗಳಲ್ಲಿ ನವಾಜ್ ಶೈಲಿ ಸಖತ್ ಜನಪ್ರಿಯತೆ ಗಳಿಸಿಕೊಂಡಿತು. ಈಗಂತೂ ಯಾವ ಮಟ್ಟಿಗೆ ಆಗಿದೆಯಂದರೆ ಸಿನಿಮಾ ತಂಡದವರೇ ತಮ್ಮ ಸಿನಿಮಾ ಬಿಡುಗಡೆಯಂದು ನವಾಜ್‌ಗೆ ಇಂತಿಷ್ಟೆಂದು ಹಣ ನೀಡಿ, ಉಚಿತ ಟಿಕೆಟ್ ನೀಡಿ ಸಿನಿಮಾಕ್ಕೆ ಕಳಿಸಿ, ಚಾನೆಲ್‌ಗಳಿಗೆ ವಿಮರ್ಶೆ ಹೇಳಲು ಕಳಿಸುತ್ತಾರೆ. ಇದರಿಂದಲೇ ಸಾಕಷ್ಟು ಹಣ ಸಂಪಾದನೆ ಮಾಡುತ್ತಿದ್ದಾನೆ ನವಾಜ್.

  ಬಿಗ್‌ಬಾಸ್ ವೇದಿಕೆಯನ್ನು ಬಳಸಿಕೊಳ್ಳುತ್ತಾನಾ ನವಾಜ್?

  ಬಿಗ್‌ಬಾಸ್ ವೇದಿಕೆಯನ್ನು ಬಳಸಿಕೊಳ್ಳುತ್ತಾನಾ ನವಾಜ್?

  ಈಗಂತೂ ನವಾಜ್ ಬಿಗ್‌ಬಾಸ್ ಮನೆಗೆ ಹೋಗಿದ್ದಾನೆ. ಅಲ್ಲಿ ಚೆನ್ನಾಗಿ ಆಡಿದನೆಂದರೆ ಇನ್ನಷ್ಟು ಜನಪ್ರಿಯತೆ ಗಳಿಸುವುದು ಪಕ್ಕಾ. ತನ್ನ ತಂದೆಯ ಮೇಲಿರುವ ಎಂಟು ಲಕ್ಷ ಸಾಲ ತೀರಿಸಬೇಕು, ಕುಟುಂಬದ ಜೀವನ ಶೈಲಿ ಸುಧಾರಿಸಬೇಕು ಎಂಬ ಆಸೆ ಇಟ್ಟುಕೊಂಡಿರುವ ನವಾಜ್‌ ತಮಗೆ ಸಿಕ್ಕಿರುವ ಬಿಗ್‌ಬಾಸ್ ವೇದಿಕೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಇನ್ನಷ್ಟೆ ಮೇಲೆರುತ್ತಾರೆಯೇ ಅಥವಾ ಸುಮ್ಮನೆ ಹುಚ್ಚಾಟ ಆಡಿ ಹೋದಷ್ಟೆ ಬೇಗ ಬಿಗ್‌ಬಾಸ್ ಮನೆಯಿಂದ ಹೊರಗೆ ಬರುತ್ತಾರೆಯೇ ಕಾದು ನೋಡಬೇಕಿದೆ.

  English summary
  Bigg Boss Kannada Season 9: social media sensation Nawaz entered Bigg Boss house. Here is the biography of Nawaz.
  Saturday, September 24, 2022, 19:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X