For Quick Alerts
  ALLOW NOTIFICATIONS  
  For Daily Alerts

  Darsh Chandrappa: ನಟ ಜೊತೆಗೆ ನವೋದ್ಯಮಿ ದರ್ಶ್ ಚಂದ್ರಪ್ಪ ಬಗ್ಗೆ ನಿಮಗೆಷ್ಟು ಗೊತ್ತು?

  |

  ಸದಾ ಹೊಸತನಕ್ಕಾಗಿ ತುಡಿಯುತ್ತಿರುವ ವ್ಯಕ್ತಿಗಳೇ ಏನನ್ನಾದರೂ ಸಾಧಿಸಲು ಅಥವಾ ಕನಿಷ್ಟ ತಮ್ಮ ಮನಸ್ಸನ್ನು ಸಂತೋಶವಾಗಿ, ತಮ್ಮ ದಿನಗಳನ್ನು ನಿತ್ಯ ನೂತನವಾಗಿರುವಂತೆ ಮಾಡಿಕೊಳ್ಳಲು ಸಾಧ್ಯ. ಅಂಥಹವರಲ್ಲಿ ಒಬ್ಬರು ನಟ ದರ್ಶ್ ಚಂದ್ರಪ್ಪ.

  ನಟ ದರ್ಶ್ ಚಂದ್ರಪ್ಪ ಇದೀಗ ಬಿಗ್‌ಬಾಸ್ ಸೀಸನ್ 09 ರ ಪ್ರವೇಶಿಸಿದ್ದಾರೆ. ಸುಂದರ ಮೈಕಟ್ಟು, ಎತ್ತರ ಹೊಂದಿರುವ ದರ್ಶ್‌ ನಟನೆಗೆ ಕಾಲಿಟ್ಟಿದ್ದು ಮಾಡೆಲಿಂಗ್ ಮೂಲಕ. ಎಂಸಿಎ ಕಲಿಯುವಾಗಲೇ ಮಾಡೆಲಿಂಗ್ ಪ್ರಾರಂಭಿಸಿದ್ದರು ದರ್ಶ್.

  ದರ್ಶ್ ಮಾಡೆಲಿಂಗ್ ಮಾಡುವುದರ ಬಗ್ಗೆ ಪೋಷಕರ ತೀವ್ರ ವಿರೋಧವಿತ್ತು. ಇದು ಸರಿಯಾದ ವೃತ್ತಿಯಲ್ಲ ಎಂಬುದು ಅವರ ಭಾವನೆ. ಆದರೆ ಗೆಳೆಯರ ಬೆಂಬಲ, ಪ್ರೋತ್ಸಾಹದ ಕಾರಣದಿಂದ ಮಾಡೆಲಿಂಗ್ ಮುಂದುವರೆದ ದರ್ಶ್, ಆರಂಭದಲ್ಲಿಯೇ ದೊಡ್ಡ ಬ್ರ್ಯಾಂಡ್‌ಗಳಿಗೆ ಕೆಲಸ ಮಾಡಿದರು. ದೇಶದ ಹಲವೆಡೆ ಫ್ಯಾಷನ್‌ ಶೋಗಳಲ್ಲಿ ಸಹ ಭಾಗಿಯಾದರು.

  ಮಾಡೆಲಿಂಗ್ ಮಾಡುತ್ತಲೆ ತಾನು ಇನ್ನೂ ಮೇಲೇರಬೇಕು ಎಂಬ ಆಸೆಯಿಂದ ನಟನೆ ಆರಂಭಿಸಿದರು. ಕೆಲ ನಾಟಕಗಳನ್ನು ಮಾಡಿದರು. ಬಳಿಕ ಧಾರಾವಾಹಿಗಳಲ್ಲಿ ನಟಿಸಲು ಯತ್ನ ಆರಂಭಿಸಿದರು. ದರ್ಶ್ 'ದುರ್ಗಾ' ಸೇರಿದಂತೆ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

  ನಟನೆ ಮಾಡುತ್ತಿರುವಾಗಲೇ ಬ್ರ್ಯಾಂಡಿಂಗ್ ಕಾರ್ಯವನ್ನೂ ಮಾಡುತ್ತಿದ್ದ ದರ್ಶ್‌ ಕೊನೆಗೆ ತಾವೇ ಒಂದು ಫ್ಯಾಷನ್ ಬ್ರ್ಯಾಂಡ್ ಕಟ್ಟುವ ಯತ್ನವನ್ನೂ ಮಾಡಿ ಅದರಲ್ಲಿ ಯಶಸ್ಸನ್ನೂ ಕಂಡಿದ್ದಾರೆ. 'ಸಾರಿ' ಹೆಸರಿನ ಬಟ್ಟೆ ಫ್ಯಾಷನ್ ಬ್ರ್ಯಾಂಡ್ ಕಟ್ಟಿರುವ ದರ್ಶ್‌ ಹಲವು ಮಂದಿಗೆ ಉದ್ಯೋಗ ನೀಡಿದ್ದಾರೆ. ಉದ್ಯಮ ನಡೆಸುವುದು ಇಷ್ಟ ಎನ್ನುವ ದರ್ಶ್‌, ಅದಕ್ಕಿಂತಲೂ ನಟನೆಯೇ ನನಗೆ ಹೆಚ್ಚು ಇಷ್ಟ ಎಂದಿದ್ದಾರೆ.

  ಸಖತ್ ಹ್ಯಾಂಡ್ಸಮ್ ಆಗಿರುವ ದರ್ಶ್‌ಗೆ ಒಂದು ಲವ್‌ಸ್ಟೋರಿಯೂ ಇದೆ. ಆದರೆ ಲವ್ ಬ್ರೇಕ್‌ ಅಪ್ ಆದ ಬಳಿಕ ಅವರಿಗೆ ಲವ್‌ ಮೇಲೆ ಆಸಕ್ತಿಯೇ ಕಳೆದು ಹೋಗಿದೆಯಂತೆ. ನನಗೆ ಪ್ರೀತಿ ಬೇಕು, ರಿಲೇಶನ್‌ಶಿಪ್ ಬೇಕು ಎಂದೇ ಅನ್ನಿಸುತ್ತಿಲ್ಲ. ಲವ್ ಬಗ್ಗೆ ಆಸಕ್ತಿಯೇ ಬರುತ್ತಿಲ್ಲ ಎಂದಿದ್ದಾರೆ ದರ್ಶ್‌.

  ದರ್ಶ್ ಚಂದ್ರಪ್ಪ ಇದೀಗ ಬಿಗ್‌ಬಾಸ್ ಪ್ರವೇಶ ಮಾಡಿದ್ದು, 19 ಮಂದಿ ಕಠಿಣ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ದರ್ಶ್ ಉಳಿಯುತ್ತಾರಾ? ಅಥವಾ ಹೊರಗೆ ಬರುತ್ತಾರಾ ಕಾದು ನೋಡಬೇಕಿದೆ.

  English summary
  Bigg Boss Kannada Season 9 Contestant No 6: Darsh Chandrappa age, biography, photos, personal details. Here is more about Darsh Chandrappa.
  Sunday, September 25, 2022, 1:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X