Bigg Boss: ಹಲವು ವ್ಯಕ್ತಿತ್ವಗಳು ಒಂದು ಸೂರಿನಡಿ, ಮನೆ ಸೇರಿದ 18 ಸ್ಪರ್ಧಿಗಳ ಪೂರ್ಣ ಪಟ್ಟಿ

ಬಿಗ್‌ಬಾಸ್ ಸೀಸನ್ 9 ಇಂದು (ಸೆಪ್ಟೆಂಬರ್ 24) ರಂದು ಆರಂಭವಾಗಿದೆ. ಈ ಬಾರಿಯ ಬಿಗ್‌ಬಾಸ್ ಹಿಂದಿನ ಬಿಗ್‌ಬಾಸ್‌ಗಿಂತಲೂ ಭಿನ್ನವಾಗಿದೆ. ಹಳೆಯ ಸ್ಪರ್ಧಿಗಳು, ಒಟಿಟಿ ಸ್ಪರ್ಧಿಗಳ ಜೊತೆಗೆ ಕೆಲವು ಹೊಸ ಸ್ಪರ್ಧಿಗಳು ಸಹ ಸೇರಿಕೊಂಡಿದ್ದಾರೆ.

ಈ ಬಾರಿಯ ಬಿಗ್‌ಬಾಸ್ ಮನೆಗೂ 18 ಮಂದಿ ಸ್ಪರ್ಧಿಗಳು ತೆರಳಿದ್ದಾರೆ. ಕೆಲವು ಹಿರಿಯರು, ಕೆಲವು ಕಿರಿಯರು, ಹಾಸ್ಯ ಕಲಾವಿದರು, ನಟ-ನಟಿಯರು, ಹೋರಾಟಗಾರರು, ಅವಿವಾಹಿತರು, ವಿವಾಹಿತರು ಹೀಗೆ ಈ ಬಾರಿಯೂ ಭಿನ್ನ ವ್ಯಕ್ತಿತ್ವದ ವ್ಯಕ್ತಿಗಳು ಬಿಗ್‌ಬಾಸ್ ಮನೆಯ ಒಂದೇ ಸೂರಿನಡಿ ಸೇರಿಕೊಂಡಿದ್ದಾರೆ.

ಸುದೀಪ್ ತಮ್ಮ ಎಂದಿನ ಶೈಲಿನಲ್ಲಿ ಸ್ಪರ್ಧಿಗಳನ್ನು ವೇದಿಕೆ ಕರೆದು ಅವರ ಜೀವನದ ಪರಿಚಯ ಮಾಡಿಸಿಕೊಡುವ ವಿಟಿ ತೋರಿಸಿ, ಅವರೊಂದಿಗೆ ಹಾಸ್ಯ ಮಾಡಿ, ಕಾಲೆಳೆದು ಜೊತೆಗೆ ಕೆಲವು ಎಚ್ಚರಿಕೆಗಳನ್ನೂ ನೀಡಿ, ಮನೆಯಲ್ಲಿರಲು ಬೆಳೆಸಿಕೊಳ್ಳಬೇಕಾದ ಗುಣ-ಸ್ವಭಾವಗಳ ಬಗ್ಗೆ ಸಲಹೆಗಳನ್ನೂ ನೀಡಿ ಕಳಿಸಿದ್ದಾರೆ. ಬಿಗ್‌ಬಾಸ್ ಮನೆ ಸೇರಿರುವ ಒಟ್ಟು 16 ಜನರ ಪಟ್ಟಿ ಇಲ್ಲಿದೆ ನೋಡಿ.

ಮೊದಲ ಸ್ಪರ್ಧಿ ಅರುಣ್ ಸಾಗರ್

ಮೊದಲ ಸ್ಪರ್ಧಿ ಅರುಣ್ ಸಾಗರ್

ಬಿಗ್‌ಬಾಸ್ ಸೀಸನ್ 09 ರ ಮನೆ ಪ್ರವೇಶಿಸಿದ ಮೊದಲ ಸ್ಪರ್ಧಿ ಅರುಣ್ ಸಾಗರ್. ಅದ್ಭುತ ಕಲಾವಿದ, ನಟ, ಕಲಾ ನಿರ್ದೇಶಕ, ಹಾಡುಗಾರ, ಎಂಟರ್ಟೈನರ್ ಎಲ್ಲವೂ ಆಗಿರುವ ಅರುಣ್ ಸಾಗರ್‌ ಬಿಗ್‌ಬಾಸ್ ಮೊದಲ ಸೀಸನ್‌ನ ಸ್ಪರ್ಧಿಯಾಗಿದ್ದರು. ಈಗ ಒಂಬತ್ತನೇ ಸೀಸನ್‌ಗೆ ಮತ್ತೆ ಮರಳಿದ್ದಾರೆ. ಈ ಸೀಸನ್‌ನ ಅದ್ಭುತ ಎಂಟರ್ಟೈನರ್‌ ಅರುಣ್ ಆಗಲಿದ್ದಾರೆ ಎನ್ನುವ ನಿರೀಕ್ಷೆ ಇದೆ.

ಎರಡನೇ ಸ್ಪರ್ಧಿ ಮಯೂರಿ

ಎರಡನೇ ಸ್ಪರ್ಧಿ ಮಯೂರಿ

ಬಿಗ್‌ಬಾಸ್ ಸೀಸನ್ 9 ರ ಎರಡನೇ ಸ್ಪರ್ಧಿಯಾಗಿ ನಟಿ ಮಯೂರಿ ಆಗಮಿಸಿದ್ದಾರೆ. 'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ ಪ್ರೇಕ್ಷಕರಿಗೆ ಪರಿಚಯವಾದ ನಟಿ ಮಯೂರಿ, ಆ ಬಳಿಕ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದರು, ಇದೀಗ 'ಬಿಗ್‌ಬಾಸ್'ಗೆ ಬಂದಿದ್ದಾರೆ. ತಮ್ಮ ಒಂದುವರೆ ವರ್ಷದ ಮಗನನ್ನು ಬಿಟ್ಟು ಬರುತ್ತಿರುವುದು ಕಷ್ಟ ಎಂದು ಮಯೂರಿ ಸುದೀಪ್ ಬಳಿ ಹೇಳಿಕೊಂಡರು. ಆದರೆ ಗೆಲ್ಲುವ ಅಚಲ ವಿಶ್ವಾಸಿವಿದೆ ಎಂದೂ ಸಹ ಮಯೂರಿ ಹೇಳಿದ್ದಾರೆ.

ನಾಗಿಣಿ ಖ್ಯಾತಿಯ ದೀಪಿಕಾ ದಾಸ್

ನಾಗಿಣಿ ಖ್ಯಾತಿಯ ದೀಪಿಕಾ ದಾಸ್

ಬಿಗ್‌ಬಾಸ್ ಸೀಸನ್ 9 ರ ಮೂರನೇ ಸ್ಪರ್ಧಿಯಾಗಿ ನಟಿ ದೀಪಿಕಾ ದಾಸ್ ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಸಿದ್ದ ದೀಪಿಕಾ ದಾಸ್ 105 ದಿನಗಳು ಬಿಗ್‌ಬಾಸ್ ಮನೆಯಲ್ಲಿದ್ದರು. ಬಿಗ್‌ಬಾಸ್ 7 ನಲ್ಲಿ ದೀಪಿಕಾ ಭಾಗವಹಿಸಿದ್ದರು. ಇದೀಗ ಮತ್ತೆ ಬಿಗ್‌ಬಾಸ್‌ಗೆ ಬಂದಿದ್ದಾರೆ ದೀಪಿಕಾ ದಾಸ್. ನಾಗಿಣಿ ಧಾರಾವಾಹಿಯಿಂದ ಜನಪ್ರಿಯರಾಗಿರುವ ದೀಪಿಕಾ ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಪಕ್ಕಾ ಫೈಟರ್ ಎಂದೇ ಬಿಗ್‌ಬಾಸ್ ಮನೆಯಲ್ಲಿ ದೀಪಿಕಾ ಗರುತಿಸಿಕೊಂಡಿದ್ದರು.

ನಾಲ್ಕನೇ ಸ್ಪರ್ಧಿ ಸೈಕ್ ನವಾಜ್

ನಾಲ್ಕನೇ ಸ್ಪರ್ಧಿ ಸೈಕ್ ನವಾಜ್

ನಾಲ್ಕನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆ ಪ್ರವೇಶ ಮಾಡಿದ್ದು 19 ವರ್ಷ ವಯಸ್ಸಿನ ಯುವಕ ನವಾಜ್. ಭಿನ್ನ ಶೈಲಿಯಲ್ಲಿ ಸಿನಿಮಾ ವಿಮರ್ಶೆ ಮಾಡುವ ಮೂಲಕ 'ಸೈಕ್ ನವಾಜ್' ಎಂದೇ ಖ್ಯಾತರಾಗಿದ್ದಾರೆ ನವಾಜ್. ಸಖತ್ ತಮಾಷೆ ಮೂಡ್‌ನಲ್ಲಿ ವೇದಿಕೆ ಮೇಲೆ ಮಾತನಾಡಿದ ನವಾಜ್. ಗೆದ್ದೇ ಗೆಲ್ಲುತ್ತೇನೆ ಎನ್ನುವ ನಂಬಿಕೆಯೊಂದಿಗೆ ಮನೆಯ ಒಳಗೆ ಹೋಗಿದ್ದಾರೆ. ಸುದೀಪ್‌ಗಾಗಿ ತಮ್ಮ ಎಂದಿನ ಶೈಲಿಯಲ್ಲಿ ಕೆಲವು ಡೈಲಾಗ್‌ಗಳನ್ನೂ ಹೊಡೆದು ಹೋಗಿದ್ದಾರೆ.

ಮಾಜಿ ಸ್ಪರ್ಧಿ ದಿವ್ಯಾ ಉರುಡುಗ

ಮಾಜಿ ಸ್ಪರ್ಧಿ ದಿವ್ಯಾ ಉರುಡುಗ

ಬಿಗ್‌ಬಾಸ್ ಸೀಸನ್ ಒಂಬತ್ತರ ಐದನೇ ಸ್ಪರ್ಧಿಯಾಗಿ ಮನೆಯ ಒಳಗೆ ಹೋಗಿದ್ದು ದಿವ್ಯಾ ಉರುಡುಗ. ದಿವ್ಯಾ ಈ ಮುಂಚೆ ಬಿಗ್‌ಬಾಸ್‌ ಎಂಟರಲ್ಲಿ ಸ್ಪರ್ಧಿಸಿದ್ದರು. ಅದೇ ಶೋನಲ್ಲಿ ಭಾಗವಹಿಸಿದ್ದ ಬೈಕರ್ ಅರವಿಂದ ಜೊತೆ ದಿವ್ಯಾಗೆ ಪ್ರೀತಿ ಆಗಿತ್ತು. ಇಬ್ಬರು ಒಟ್ಟಿಗೆ ಇಂದು ಬಿಗ್‌ಬಾಸ್‌ ವೇದಿಕೆಗೆ ಬಂದರು. ಆದರೆ ಅರವಿಂದ್ ಹೊರಗೆ ಉಳಿದುಕೊಂಡರೆ ದಿವ್ಯಾ ಮಾತ್ರ ಮನೆಯ ಒಳಗೆ ಹೋಗಿದ್ದಾರೆ.

ನಟ, ಉದ್ಯಮಿ ದರ್ಶ್ ಚಂದ್ರಪ್ಪ

ನಟ, ಉದ್ಯಮಿ ದರ್ಶ್ ಚಂದ್ರಪ್ಪ

ಬಿಗ್‌ಬಾಸ್ ಸೀಸನ್ 9ರ ಆರನೇ ಸ್ಪರ್ಧಿಯಾಗಿ ನಟ, ನವೋದ್ಯಮಿ ದರ್ಶ್ ಚಂದ್ರಪ್ಪ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. ಕೆಲವು ಧಾರಾವಾಹಿಗಳಲ್ಲಿ ದರ್ಶ್ ನಟಿಸಿದ್ದಾರೆ. 'ಸಾರಿ' ಹೆಸರಿನ ಫ್ಯಾಷನ್ ಬ್ರ್ಯಾಂಡ್‌ ಕಟ್ಟಿಕೊಂಡಿದ್ದಾರೆ. ಬ್ಯುಸಿನೆಸ್ ಜೊತೆಗೆ ನಟನೆಯನ್ನೂ ದರ್ಶನ್ ಮಾಡುತ್ತಿದ್ದಾರೆ. ಈ ಹಿಂದೆ ಮಾಡೆಲ್ ಆಗಿಯೂ ದರ್ಶ್ ಗುರುತಿಸಿಕೊಂಡಿದ್ದರು.

ಮತ್ತೆ ಬಂದ ಪ್ರಶಾಂತ್ ಸಂಬರ್ಗಿ

ಮತ್ತೆ ಬಂದ ಪ್ರಶಾಂತ್ ಸಂಬರ್ಗಿ

ಬಿಗ್‌ಬಾಸ್ ಸೀಸನ್ 8 ರಲ್ಲಿ ಸ್ಪರ್ಧಿಯಾಗಿದ್ದ ಪ್ರಶಾಂತ್ ಸಂಬರ್ಗಿ ಏಳನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಸೀಸನ್ 9ರ ಮನೆ ಪ್ರವೇಶ ಮಾಡಿದ್ದಾರೆ. ಕಳೆದ ಬಾರಿ ಗೆದ್ದಿರಲಿಲ್ಲ. ಈ ಬಾರಿ ಗೆಲ್ಲಲೇ ಬೇಕು ಎಂದುಕೊಂಡು ಹೋಗುತ್ತಿದ್ದೀನಿ. ಈ ಬಾರಿ ಕೋಪ ಮಾಡಿಕೊಳ್ಳಬಾರದು ಎಂದುಕೊಂಡಿದ್ದೇನೆ. ಕೋಪ ಮಾಡಿಕೊಳ್ಳಲ್ಲ ಎಂದು ಪ್ರಮಾಣ ಮಾಡಿದ್ದೀನಿ ಎಂದು ಸಂಬರ್ಗಿ ಬಿಗ್‌ಬಾಸ್ ವೇದಿಕೆ ಮೇಲೆ ಹೇಳಿದ್ದಾರೆ. ಆದರೆ ತಮ್ಮ ಮಾತು ಉಳಿಸಿಕೊಳ್ತಾರಾ ಸಂಬರ್ಗಿ? ಕಾದು ನೋಡಬೇಕಿದೆ.

'ಕಮಲಿ' ಧಾರಾವಾಹಿಯ ಅಮೂಲ್ಯ

'ಕಮಲಿ' ಧಾರಾವಾಹಿಯ ಅಮೂಲ್ಯ

ಬಿಗ್‌ಬಾಸ್ 9 ರ ಎಂಟನೇ ಸ್ಪರ್ಧಿಯಾಗಿ ಕಮಲಿ ಧಾರಾವಾಹಿಯ ನಟಿ ಅಮೂಲ್ಯ ಮನೆ ಪ್ರವೇಶಿಸಿದ್ದಾರೆ. ಕೆಲ ವರ್ಷಗಳಿಂದಲೂ ಬಿಗ್‌ಬಾಸ್ ಮನೆಗೆ ಹೋಗಬೇಕು ಎಂದುಕೊಂಡಿದ್ದರಂತೆ ಅಮೂಲ್ಯಾ ಗೌಡ. ಮಾಡ್ರನ್ ಪಾತ್ರಕ್ಕೆ ಸೂಟ್ ಆಗ್ತಾರೆ ಎಂಬ ಅಭಿಪ್ರಾಯ ನನ್ನ ಬಗ್ಗೆ ಇದೆ. ಆದರೆ ನಾನು 'ಓಲ್ಡ್ ಸ್ಕೂಲ್' ಇಷ್ಟಪಡುವವಳು. ಧಾರಾವಾಹಿಯಲ್ಲಿ ಕಾಣುವ ಅಮೂಲ್ಯಾ ಬೇರೆ ಎಂದು ತೋರಿಸಲು ನಾನು ಇಲ್ಲಿಗೆ ಬಂದಿದ್ದೇನೆ. ಬಿಗ್‌ಬಾಸ್ ಮನೆಯಲ್ಲಿ ನನ್ನ ಕೋಪ ನನಗೆ ಹಿನ್ನೆಡೆ ಉಂಟು ಮಾಡಬಹುದು ಎಂದಿದ್ದಾರೆ ಈ ನಟಿ.

ಜೋಡಿಯಾಗಿ ಬಂದ ಸಾನ್ಯಾ-ರೂಪೇಶ್

ಜೋಡಿಯಾಗಿ ಬಂದ ಸಾನ್ಯಾ-ರೂಪೇಶ್

ಬಿಗ್‌ಬಾಸ್‌ ಮನೆಯ ಒಂಬತ್ತು ಹಾಗೂ ಹತ್ತನೆ ಸ್ಪರ್ಧಿಗಳಾಗಿ ನಟ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಐಯ್ಯರ್ ಅವರುಗಳು ಮನೆ ಪ್ರವೇಶ ಮಾಡಿದರು. ಈ ಇಬ್ಬರೂ ಬಿಗ್‌ಬಾಸ್ ಒಟಿಟಿಯಲ್ಲಿ ಒಟ್ಟಿಗೆ ಸ್ಪರ್ಧಿಸಿದ್ದರು ಮತ್ತು ಒಟ್ಟಿಗೆ ಆಯ್ಕೆ ಆದರು. ಒಟಿಟಿ ಬಿಗ್‌ಬಾಸ್‌ನಲ್ಲಿ ಆ ಇಬ್ಬರೂ ಪರಸ್ಪರ ಬಹಳ ಆತ್ಮೀಯರಾಗಿದ್ದರು. ಹಾಗಾಗಿ ಸುದೀಪ್ ವೇದಿಕೆ ಮೇಲೆ ಇಬ್ಬರ ಕಾಲೆಳೆದು ತಮಾಷೆ ಮಾಡಿದರು.

ಮಜಾಭಾರತದ 'ಗೊಬ್ರ'

ಮಜಾಭಾರತದ 'ಗೊಬ್ರ'

ಕಾಮಿಡಿ ರಿಯಾಲಿಟಿ ಶೋನ 'ಮಜಾಭರತ'ದ ವಿನೋದ್ ಗೊಬ್ಬರ ಬಿಗ್‌ಬಾಸ್ ಮನೆಯ ಹನ್ನೊಂದನೆ ಸ್ಪರ್ಧಿಯಾಗಿ ಮನೆ ಪ್ರವೇಶ ಮಾಡಿದ್ದಾರೆ. ಹಾಸ್ಯ ಕಲಾವಿದರಾಗಿರುವ ವಿನೋದ್, ಬಿಗ್‌ಬಾಸ್ ಮನೆಯಲ್ಲಿಯೂ ಹಾಸ್ಯ ಮಾಡಿಕೊಂಡು ಎಲ್ಲರನ್ನೂ ನಗಿಸುತ್ತಾ ಇರುತ್ತೇನೆ ಅದೇ ನನ್ನ ಮುಖ್ಯ ಉದ್ದೇಶ ಎಂದಿದ್ದಾರೆ. ವಿನೋದ್‌, ಮನೆಯ ಒಳಗೆ ಪ್ರವೇಶ ಮಾಡುವ ಮುನ್ನವೇ ಟಾಸ್ಕ್‌ ಒಂದನ್ನು ವಿನೋದ್‌ಗೆ ಸುದೀಪ್ ನೀಡಿದರು.

'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಖ್ಯಾತಿಯ ನೇಹಾ ಗೌಡ

'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಖ್ಯಾತಿಯ ನೇಹಾ ಗೌಡ

ಬಿಗ್‌ಬಾಸ್ ಸೀಸನ್ 9 ರ ಹನ್ನೆರಡನೇ ಸ್ಪರ್ಧಿಯಾಗಿ 'ಲಕ್ಷ್ಮಿ ಬಾರಮ್ಮ' ಧಾರಾವಾಹಿ ಖ್ಯಾತಿಯ ನೇಹಾ ಗೌಡ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. 'ಸಿಪಾಯಿ' ಸಿನಿಮಾದ ಹಾಡಿಗೆ ಡ್ಯಾನ್ಸ್ ಮಾಡಿ ಬಿಗ್‌ಬಾಸ್ ವೇದಿಕೆ ಏರಿದರು ಸ್ನೇಹಾ ಗೌಡ. ಈ ಹಿಂದೆ ಹಲವು ಬಾರಿ ಇವರ ಹೆಸರು ಬಿಗ್‌ಬಾಸ್ ಸಂಭಾವ್ಯ ಪಟ್ಟಿಯಲ್ಲಿ ಕೇಳಿ ಬಂದಿತ್ತು. ಆದರೆ ಮೊದಲ ಬಾರಿಗೆ ಇವರು ಬಿಗ್‌ಬಾಸ್ ಮನೆಗೆ ಹೋಗುತ್ತಿದ್ದಾರೆ.

ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ

ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ

ಬಿಗ್‌ಬಾಸ್ ಸೀಸನ್ 9 ರ ಹದಿಮೂರನೇ ಸ್ಪರ್ಧಿಯಾಗಿ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಬಿಗ್‌ಬಾಸ್ ಮನೆ ಪ್ರವೇಶ ಮಾಡಿದ್ದಾರೆ. ಈ ಹಿಂದೆ ರಿಯಾಲಿಟಿ ಶೋನಲ್ಲಿಯೂ ರೂಪೇಶ್ ಭಾಗವಹಿಸಿದ್ದರು. ಚಾನೆಲ್ ಒಂದರ ನಿರೂಪಕನಾಗಿಯೂ ಅವರು ಕೆಲಸ ಮಾಡಿದ್ದಾರೆ. ಕೆಲವು ಸಿನಿಮಾಗಳಲ್ಲಿಯೂ ರೂಪೇಶ್ ರಾಜಣ್ಣ ನಟಿಸಿದ್ದಾರೆ. ಕನ್ನಡಪರ ಹೋರಾಟಗಾರ ರೂಪೇಶ್‌ಗೆ ಮನೆಯ ಒಳಗೆ ಪ್ರಶಾಂತ್ ಸಂಬರ್ಗಿ ಒಳ್ಳೆಯ ಪಾರ್ಟನರ್‌ಶಿಪ್ ಆಗಲಿದೆ.

ಆರ್ಯವರ್ಧನ್ ಹಾಗೂ ರಾಕೇಶ್ ಅಡಿಗ

ಆರ್ಯವರ್ಧನ್ ಹಾಗೂ ರಾಕೇಶ್ ಅಡಿಗ

ಬಿಗ್‌ಬಾಸ್‌ ಸೀಸನ್‌ 09ನ ಹದಿನಾಲ್ಕು ಮತ್ತು ಹದಿನೈದನೇ ಸ್ಪರ್ಧಿಯಾಗಿ ಆರ್ಯವರ್ಧನ್, ರಾಕೇಶ್ ಅಡಿಗ ಒಟ್ಟಿಗೆ ಮನೆ ಪ್ರವೇಶಿಸಿದರು. ಇಂಟೆನ್ಸಿಟಿ, ಎಕ್ಸ್‌ಪ್ರೆಸಿವ್ ಆಗಿರಬೇಕು ಎನಿಸುತ್ತಿದೆ. ಓಪನ್ ಆಗಿರಬೇಕು ಎಂದು ರಾಕೇಶ್ ಅಡಿಗ, ಸುದೀಪ್ ಅವರ ಬಳಿ ಹೇಳಿದರು. ಹದಿನಾಲ್ಕನೇ ಸ್ಪರ್ಧಿಯಾಗಿ ರಾಕೇಶ್, ಹದಿನೈದನೇ ಸ್ಪರ್ಧಿಯಾಗಿ ಆರ್ಯವರ್ಧನ್ ಬಿಗ್‌ಬಾಸ್ ಮನೆ ಪ್ರವೇಶ ಮಾಡಿದರು.

ಬೈಕರ್ ಐಶ್ವರ್ಯಾ ಪಿಸೆ

ಬೈಕರ್ ಐಶ್ವರ್ಯಾ ಪಿಸೆ

ಮಹಿಳಾ ಬೈಕರ್ ಐಶ್ವರ್ಯಾ ಪಿಸೆ ಬಿಗ್‌ಬಾಸ್‌ ಸೀಸನ್‌ 9 ರ ಕೊನೆಯ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ. ಐಶ್ವರ್ಯಾ ಪಿಸೆ ಬೈಕರ್ ಆಗಿದ್ದು, ಹಲವು ರಾಷ್ಟ್ರೀಯ ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಬೆಂಗಳೂರಿನ ಮೂಲದವರೇ ಆದ ಐಶ್ವರ್ಯಾ ಬೈಕಿಂಗ್ ಜಗತ್ತಿನಲ್ಲಿ ಹೆಸರು ಮಾಡಿದ್ದಾರೆ. ಆಫ್ ರೋಡ್‌ನಲ್ಲಿ ನ್ಯಾಷನಲ್ ಕಪ್‌ ಗೆದ್ದಿದ್ದಾರೆ ಸಹ. ಐಶ್ವರ್ಯಾ ಅವರ ಸಾಧನೆ ಕೇಳಿ ಸುದೀಪ್ ಸಹ ಸಂತಸ ಪಟ್ಟರು, ನಿಮ್ಮ ಜೊತೆ ನಿಂತಿರುವುದು ಹೆಮ್ಮೆ ಎಂದರು.

ಮಂಗಳಗೌರಿ ಮನೆ ಪ್ರವೇಶ

ಮಂಗಳಗೌರಿ ಮನೆ ಪ್ರವೇಶ

ಮಂಗಳಗೌರಿ ಧಾರಾವಾಹಿಯಲ್ಲಿ ನಟಿಸಿರುವ ನಟಿ ಕಾವ್ಯಾಶ್ರೀ ಬಿಗ್‌ಬಾಸ್ ಬಾಸ್ ಮನೆಗೆ ಹದಿನೇಳನೇ ಸ್ಪರ್ಧಿಯಾಗಿ ಪ್ರವೇಶ ಮಾಡಿದ್ದಾರೆ. ಜರ್ನಲಿಸ್ಟ್‌ ಕಲಿತಿರುವ ಕಾವ್ಯಾ ಕೆಲವು ಚಾನೆಲ್‌ಗಳಲ್ಲಿ ಕೆಲಸ ಮಾಡಿದ್ದಾರೆ. ಆಡಿಷನ್‌ಗಳನ್ನು ಎದುರಿಸಿ ಧಾರಾವಾಹಿಯಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಧಾರಾವಾಹಿಯಲ್ಲಿ ಯಾವಾಗಲೂ ಅಳುತ್ತಿರುತ್ತೀನಿ, ಆದರೆ ನನ್ನ ನಿಜ ವ್ಯಕ್ತಿತ್ವ ಅದಲ್ಲ. ನನ್ನ ಅದೇ ವ್ಯಕ್ತಿತ್ವ ಬಿಗ್‌ಬಾಸ್‌ನಲ್ಲಿ ಹೊರಗೆ ಬರಲಿದೆ.

ಬಿಗ್‌ಬಾಸ್‌ ಸೀಸನ್‌ 9 ರ 18ನೇ ಸ್ಪರ್ಧಿ

ಬಿಗ್‌ಬಾಸ್‌ ಸೀಸನ್‌ 9 ರ 18ನೇ ಸ್ಪರ್ಧಿ

ಬಿಗ್‌ಬಾಸ್‌ ಸೀಸನ್‌ 9 ರ 18ನೇ ಸ್ಪರ್ಧಿಯಾಗಿ ನಟಿ ಅನುಪಮಾ ಆನಂದ್‌ಕುಮಾರ್ ಬಂದಿದ್ದಾರೆ. ಐದನೇ ಸೀಸನ್‌ ಬಿಗ್‌ಬಾಸ್‌ನಲ್ಲಿ ಭಾಗವಹಿಸಿದ್ದರು. ಅನುಪಮಾ ಆನಂದ್‌ಕುಮಾರ್ ಧಾರಾವಾಹಿಯಲ್ಲಿ ನಟಿಸಿದ್ದಾರೆ, ಸಿನಿಮಾದಲ್ಲಿ ನಟಿಸಿದ್ದಾರೆ, ನಿರೂಪಣೆ ಸಹ ಮಾಡಿದ್ದಾರೆ. ಕಳೆದ ಬಾರಿ ಬಿಗ್‌ಬಾಸ್‌ಗೆ ಬಂದಾಗ 99 ದಿನ ಮನೆಯಲ್ಲಿದ್ದರು.

More from Filmibeat

English summary
Bigg Boss Kannada Season 9 Contestants List: Here is the full list of contestants.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X