''180 ಪ್ಲಾಪ್ ಸಿನಿಮಾ''ಗಳನ್ನ ಕೊಟ್ಟರು ಕಡಿಮೆಯಾಗದ ಜನಪ್ರಿಯತೆ ; 'ಕನ್ನಡ'ದಲ್ಲಿಯೂ ನಟಿಸಿದ್ದಾರೆ ಈ 'ಸೂಪರ್ ಸ್ಟಾರ್ .'.!
ಇದು ಬಣ್ಣದ ಲೋಕ. ಇಲ್ಲಿ ಗೆದ್ದೋನು ಗೆದ್ದ.. ಸೋತೋನು ಸತ್ತ ಅನ್ನುವ ಮಾತು ಇದೆ. ಈ ಮಾತು ಅನೇಕರ ವಿಚಾರದಲ್ಲಿ ನಿಜಾ ಆಗಿದೆ ಕೂಡ. ಆದರೆ .. ಈ ಮಾತು ಸುಳ್ಳು ಅನ್ನುವುದನ್ನ ಸಾಬೀತು ಮಾಡಿದ ಹೆಗ್ಗಳಿಕೆ ಮಿಥುನ್ ಚಕ್ರವರ್ತಿ ಅವರದ್ದು.
ಹೌದು. ಮಿಥುನ್ ಚಕ್ರವರ್ತಿ, 80-90ರ ದಶಕದ ಸೂಪರ್ ಸ್ಟಾರ್. ಆ ಕಾಲದ ಅತ್ಯಂದ ದುಬಾರಿ ನಾಯಕ. ಕಂತೆ-ಕಂತೆಯ ಹಣ ಕೈಯಲ್ಲಿ ಹಿಡಿದು ಇವರ ಮನೆಯ ಮುಂದೆ ನಿಲ್ಲುತ್ತಿದ್ದ ನಿರ್ಮಾಪಕರು ಅದೆಷ್ಟೋ ಜನ. ಅನೇಕರ ಬಣ್ಣದ ಕನಸುಗಳಿಗೆ ಅಂದಕಾಲತ್ತಿಲ್ ತನ್ನ ಅಭಿನಯದಿಂದ ಚಿನ್ನದ ಸ್ಪರ್ಶವನ್ನ ನೀಡಿದವರು ಇವರು.

ಡಿಸ್ಕೋ ಡ್ಯಾನ್ಸರ್.. ಪ್ಯಾರ್ ಜುಕ್ತಾ ನಹೀ.. ಜಲ್ಲಾದ್.. ಕಸಮ್ ಪೈದಾ ಕರನೇ ವಾಲೇ ಕಿ.. ಪ್ಯಾರಿ ಬೆಹನಾ.. ಗುಲಾಮಿ..ಗಂಗಾ ಜಮುನಾ ಸರಸ್ವತಿ.. ಡ್ಯಾನ್ಸ್ ಡ್ಯಾನ್ಸ್.. ಅಗ್ನಿಪಥ್.. ಗುಲಾಮಿ.. ಅಬ್ಬಬ್ಬಾ, ಒಂದಾ ಎರಡಾ.. ಮಿಥುನ್ ಚಕ್ರವರ್ತಿ ಮುಟ್ಟಿದ್ದೆಲ್ಲ ಚಿನ್ನ ಆಗುವ ಕಾಲ ಅದು. ಇಂತಹ ಕಾಲದಲ್ಲಿ ಮಿಥುನ್ ದಾ ವರ್ಷಕ್ಕೆ ಹತ್ತು ಸಿನಿಮಾಗಳನ್ನ ಮಾಡ್ತಿದ್ದರು. ಕೈ ತುಂಬಾ ಅವಕಾಶ, ಅಂಗೈಯಲ್ಲಿಯೇ ಆಕಾಶ.
ಅಮಿತಾಬ್ ಬಚ್ಚನ್, ರಾಜೇಶ್ ಖನ್ನಾ, ದಿಲೀಪ್ ಕುಮಾರ್, ಅವರಂತಹ ದಿಗ್ಗಜರು ಇದ್ದ ಆ ಕಾಲದಲ್ಲಿ ತಮ್ಮದೇ ಸ್ಥಾನ-ಮಾನ ಹಾಗೂ ಅಭಿಮಾನಿ ಬಳಗವನ್ನ
ಸಂಪಾದಿಸಿದ್ದ ಮಿಥುನ್ ಚಕ್ರವರ್ತಿ ಒಂದಾದ ಮೇಲೊಂದು 50 ಹಿಟ್ ಸಿನಿಮಾಗಳನ್ನ ನೀಡಿದ್ದಾರೆ . ಆ ಪೈಕಿ 03 ಬ್ಲಾಕ್ ಬಸ್ಟರ್ ಸಿನಿಮಾಗಳಾದರೆ, 09 ಸೂಪರ್ ಹಿಟ್ ಸಿನಿಮಾಗಳು.
ಹೀಗೆ ಖ್ಯಾತಿಯ ತುತ್ತ ತುದಿಯನ್ನ ತಲುಪಿ ತಮ್ಮ ಇಲ್ಲಿವರೆಗಿನ ಸುಧೀರ್ಘವಾದ ಪ್ರಯಾಣದಲ್ಲಿ270 ಸಿನಿಮಾಗಳನ್ನ ಮಾಡಿರುವ ಮಿಥುನ್ ಚಕ್ರವರ್ತಿ, ಒಂದಲ್ಲ.. ಎರಡಲ್ಲ.. ಹತ್ತಲ್ಲ.. ಇಪ್ಪತ್ತಲ್ಲ.. ಬರೋಬ್ಬರಿ 180 ಪ್ಲಾಪ್ ಸಿನಿಮಾಗಳನ್ನೂ ಕಲಾ ಪ್ರೇಮಿಗಳಿಗೆ, ತಮ್ಮ ಅಭಿಮಾನಿಗಳಿಗೆ ಉಡುಗೊರೆಯನ್ನ ಆಗಿ ಕೂಡ ನೀಡಿದ್ದಾರೆ ಅಂದರೆ ನೀವು ನಂಬ್ಲೇಬೇಕು. ಯಾಕೆಂದರೆ ಇದೇ ಸತ್ಯ

ಹೌದು. 1990ರ ನಂತರ ಒಂದಾದ ಮೇಲೊಂದು ಸೋಲನ್ನ ನೋಡಿದವರು ಮಿಥುನ್ ಚಕ್ರವರ್ತಿ. 1997ರಿಂದ 2000ನೇ ಇಸ್ವಿವರೆಗೆ ಕೇವಲ ನಾಲ್ಕೇ ವರ್ಷದಲ್ಲಿ ಇವರು 50 ಚಿತ್ರಗಳಿಗೆ ಬಣ್ಣ ಹಚ್ಚಿದ್ದರು. ದುರಂತೆ ಅಂದರೆ ಆ 50ರಲ್ಲಿ ಗೆದ್ದಿದ್ದು ಕೇವಲ ಎರಡು ಸಿನಿಮಾ ಮಾತ್ರ. ಶಪಥ್ ಹಾಗೂ ಚಾಂಡಾಲ ಈ ಎರಡು ಚಿತ್ರಗಳನ್ನ ಹೊರತು ಪಡಿಸಿದರೆ ಮಿಕ್ಕೆಲ್ಲ ಸಿನಿಮಾ ಆ ಕಾಲಕ್ಕೆ ಮಕಾಡೆ ಮಲಗಿದ್ದವು.
ಆದರೆ.. ನಿರಂತರವಾಗಿ ಮಿಥುನ್ ಚಕ್ರವರ್ತಿ ಸೋಲುತ್ತಿದ್ದರು ಕೂಡ, ಈ ಅವಧಿಯಲ್ಲಿ ಇವರ ಬೇಡಿಕೆ ಕಡಿಮೆಯಾಗಿರಲಿಲ್ಲ. ನಿರ್ಮಾಪಕರಿಗೆ ಇವರ ಮೇಲಿದ್ದ ನಂಬಿಕೆಯೂ ಹೋಗಿರಲಿಲ್ಲ. ಯಾಕೆಂದರೆ 50 ಪ್ಲಾಪ್ ಚಿತ್ರಗಳನ್ನ ಕೊಟ್ಟರೂ ಕೂಡ ಯಾವೊಬ್ಬ ನಿರ್ಮಾಪಕರು ಕೂಡ ಬೀದಿಗೆ ಬೀಳಲಿಲ್ಲ. ಇದಕ್ಕೆ ಕಾರಣ ಮಿಥುನ್ ಚಕ್ರವರ್ತಿ ಸ್ಟಾರ್ ಡಂ ಹಾಗೂ ನಿಖರವಾದ ಲೆಕ್ಕಾಚಾರ.

ಹೌದು, ಮಿಥುನ್ ಚಕ್ರವರ್ತಿ ಯಾವತ್ತು ನಿರ್ಮಾಪಕರಿಂದ ಅನವಶ್ಯಕ ಖರ್ಚು ಮಾಡಿಸುತ್ತಿರಲಿಲ್ಲ. ಡಿಮ್ಯಾಂಡಿಂಗ್ ಆಕ್ಟರ್ ಕೂಡ ಆಗಿರಲಿಲ್ಲ. ಬದಲಿಗೆ ಇತಿ ಮಿತಿಯಲ್ಲಿಯೇ ಕೆಲಸ ಮಾಡುತ್ತಿದ್ದರು. ಕೆಲಸ ಮಾಡುವಂತೆ ಹೇಳುತ್ತಿದ್ದರು. ಇನ್ನೂ ಆ ಕಾಲಕ್ಕೆ ಮಿಥುನ್ ಚಕ್ರವರ್ತಿ ಹೆಸರಿಗೆ ಇದ್ದ ಬೆಲೆ, ಚಿತ್ರ ಸೋತರು ಕೂಡ ಸ್ಯಾಟಲೈಟ್ ಹಕ್ಕು ಅನಾಯಾಸವಾಗಿ ಮಾರಾಟವಾಗಿ ಬಿಡುತ್ತಿದ್ದವು. ಹೀಗಾಗಿಯೇ ಚಿತ್ರ ಸೋತರೂ ಮಿಥುನ್ ಚಕ್ರವರ್ತಿಯನ್ನ ನಂಬಿ ಬಂಡವಾಳವನ್ನ ಹೂಡಿದ್ದ ನಿರ್ಮಾಪಕರು ಬಹುತೇಕ ಸೇಫ್ ಜೋನ್ ನಲ್ಲಿಯೇ ಇರುತ್ತಿದ್ದರು.

ಒಟ್ನಲ್ಲಿ ಎರಡು ಸಿನಿಮಾ ಗೆಲ್ಲುತ್ತಿದ್ದಂತೆಯೇ ಆಕಾಶಕ್ಕೆ ಏಣಿ ಹಾಕುವವರು ಇರುವ ಈ ಕಾಲದಲ್ಲಿ, ಮಿಥುನ್ ಚಕ್ರವರ್ತಿ ಗೆದ್ದಾಗ ಹಿಗ್ಗಲಿಲ್ಲ. ಸೋತಾಗ ಕುಗ್ಗಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ 180 ಪ್ಲಾಪ್ ಸಿನಿಮಾಗಳನ್ನ ಕೊಟ್ಟರು ಮಿಥುನ್ ಚಕ್ರವರ್ತಿ ಅವರ ವರ್ಚಸ್ಸು ಕಡಿಮೆಯಾಗಲಿಲ್ಲ. ಇಂಥ ಮಿಥುನ್ ಚಕ್ರವರ್ತಿ ಕನ್ನಡದಲ್ಲಿ ದಿ ವಿಲನ್ ಚಿತ್ರದಲ್ಲಿಯೂ ನಟಿಸಿದ್ದಾರೆ. ಈ ವಿಚಾರ ನಿಮಗೆ ಗೊತ್ತೇ ಇರಬೇಕು.


Click it and Unblock the Notifications











