Kareena Kapoor: ತುಪ್ಪ ತಿಂದರೆ ದಪ್ಪ ಆಗ್ತಿನಿ ಅಂದ್ಕೊಂಡಿದ್ದಿರಾ? ಬೆಳಗ್ಗೆ ಎದ್ದ ಕೂಡಲೇ ಕರೀನಾ ಕಪೂರ್ ಸೇವಿಸುವುದೇ ತುಪ್ಪ!
ದಶಕಗಳಿಂದಲೂ ಬಾಲಿವುಡ್‌ನಲ್ಲಿ ಟಾಪ್ ನಟಿಯಾಗಿ ಗುರುತಿಸಿಕೊಂಡವರು ಕರೀನಾ ಕಪೂರ್ ಖಾನ್. ತನ್ನ ನಟನೆ ಮತ್ತು ಸೌಂದರ್ಯದಿಂದ ಕೋಟ್ಯಾಂತರ ಅಭಿಮಾನಿ ಬಳಗವನ್ನು ಹೊಂದಿರುವ ಇವರು ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡುತ್ತಾರೆ. ನಲವತ್ತು ವರ್ಷ ಕಳೆದರೂ ತಮ್ಮ ಅಂದ ಮಾಸಲು ಬಿಟ್ಟಿಲ್ಲ.
ಸಿನಿಮಾಗಳಲ್ಲಿ ನಾಯಕಿಯಾಗಿಯೇ ಕಾಣಿಸಿಕೊಳ್ಳುವ ಕರೀನಾ ಕಪೂರ್ ಖಾನ್ ಇಬ್ಬರು ಮಕ್ಕಳ ತಾಯಿ ಕೂಡ ಹೌದು. ಅದಕ್ಕೆ ಕಾರಣ ಅವರ ಆರೋಗ್ಯಕರ ಆಹಾರ ಪದ್ಧತಿ ಕೂಡ. ಉತ್ತಮ ಡಯಟ್ ಪ್ಲ್ಯಾನ್ ಮತ್ತು ಮನೆ ಊಟವನ್ನು ಹೆಚ್ಚು ಇಷ್ಟ ಪಡುವ ಕರೀನಾ ಕಪೂರ್ ಅವರಿಗೆ ದಿನ ಆರಂಭವಾಗುವುದೇ ತುಪ್ಪದಿಂದ!.

ತುಪ್ಪದ ಮೇಲೆ ಕರೀನಾ ಕಪೂರ್ ಪ್ರೀತಿ!
ಮನೆ ಊಟದ ಮೇಲೆ ತಮ್ಮ ಪ್ರೀತಿಯನ್ನು ಹಲವು ಬಾರಿ ಸಂದರ್ಶನಗಳಲ್ಲಿ ಹೇಳಿರುವ ಕರೀನಾ ಕಪೂರ್, ಬಿರಿಯಾನಿ ತಿನ್ನುವ ವಿಡಿಯೋ ವೈರಲ್ ಆಗಿತ್ತು. ಹೀಗಿರುವಾಗ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಫಿಟ್ ಆಗಿರಲು ಒಂದು ದಿನದಲ್ಲಿ ಏನು ತಿನ್ನುತ್ತಾರೆ ಎಂಬುದರ ಕುರಿತು ಇಲ್ಲಿ ಕೆಲವು ಮಾಹಿತಿಯಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಕರೀನಾ ಕಪೂರ್ ಅವರ ಡಯೆಟಿಷಿಯನ್ ರುಜುತಾ ದಿವೇಕರ್ ಹಲವು ಮಾಹಿತಿ ನೀಡಿದ್ದಾರೆ. ಕರೀನಾ ಅವರ ಡೈಲಿ ಡಯಟ್ ಪ್ಲ್ಯಾನ್ ತುಂಬಾ ಕಷ್ಟವಲ್ಲ. ಇರುವ ತರಕಾರಿ, ಹಣ್ಣುಗಳಲ್ಲಿಯೇ ಮುಗಿಸುತ್ತಾರೆ. ಬಾಲಿವುಡ್ ಬೆಬೋ ಬೆಳಗಿನ ತಿಂಡಿ ತಿನ್ನುವ ಮೊದಲು ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತುಪ್ಪವನ್ನು ಸೇವಿಸುವ ಮೂಲಕ ತಮ್ಮ ದಿನವನ್ನು ಪ್ರಾರಂಭಿಸುತ್ತಾರೆ.
ಕರೀನಾ ಕಪೂರ್ ಉಪಹಾರ
ನಟಿ ಕರೀನಾ ಕಪೂರ್ ಪ್ರತಿ ಮುಂಜಾನೆಯ ಬ್ರೇಕ್‌ಫಾಸ್ಟ್‌ನಲ್ಲಿ ಹೆಚ್ಚು ಪೋಷಕಾಂಶ ಇರಬೇಕು ಎಂದು ಬಯಸುತ್ತಾರೆ. ಹೀಗಾಗಿ ಮ್ಯೂಸ್ಲಿ, ರಾಗಿ ಆಧಾರಿತ ಬ್ರೆಡ್ ಮತ್ತು ರಾಗಿ ಜೊತೆಗೆ ಕೆಲವು ನೆನೆಸಿದ ಬಾದಾಮಿ ಮತ್ತು ಬಾಳೆಹಣ್ಣುಗಳು ಅವರ ಬೆಳಗಿನ ತಿಂಡಿಯಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಇನ್ನು, ಮಧ್ಯಾಹ್ನ ಊಟಕ್ಕೂ ಕೆಲ ಗಂಟೆಗಳಮೊದಲು ಕರೀನಾ ಕಪೂರ್, ಕಾಲಾ ನಮಕ್( ಕಪ್ಪು ಉಪ್ಪು), ಸಕ್ಕರೆ, ಕೇಸರಿ ಮತ್ತು ಸ್ವಲ್ಪ ಶುಂಠಿ ಹಾಕಿ ಮಾಡಿದ ಒಂದು ಲೋಟ ನಿಂಬೆ ಹಣ್ಣಿನ ಜ್ಯೂಸ್ ಕುಡಿಯುತ್ತಾರೆ.
ಪ್ರೋಟೀನ್ ಭರಿತ ಊಟಕ್ಕೆ ಕರೀನಾ ಮನ್ನಣೆ
ನಟಿ ಕರೀನಾ ಸಾಮಾನ್ಯವಾಗಿ ಮಧ್ಯಾಹ್ನದ ಊಟಕ್ಕೆ ಅನ್ನ, ಬೆಳೆ ಸಾಂಬಾರ್ ಇಷ್ಟಪಡುತ್ತಾರೆ. ಇದಕ್ಕೆ ಒಂದು ಟೀ ಚಮಚ ತುಪ್ಪ ಕಡ್ಡಾಯ. ಕೆಲವೊಮ್ಮೆ ಒಂದು ಪ್ಲೇಟ್ ರೊಟ್ಟಿ, ಪನೀರ್ ಪಲ್ಯ ಮತ್ತು ದಾಲ್ ತೆಗೆದುಕೊಳ್ಳುತ್ತಾರೆ. ಇದಾದ ಬಳಿಕ ಹುರಿದ ಮಖಾನಗಳು, ಕಡಲೆಕಾಯಿ ಬೀಜ ಅಥವಾ ಕತ್ತರಿಸಿದ ಪಪ್ಪಾಯ ಹಣ್ಣು ತಿನ್ನುತ್ತಾರೆ.

ಸಂಜೆ ತಿಂಡಿ ಮತ್ತು ರಾತ್ರಿಯ ಊಟ
ಕರೀನಾ ಕಪೂರ್ ಸಂಜೆ ವೇಳೆ ಒಂದು ಬಟ್ಟಲು ಹಣ್ಣುಗಳನ್ನು ಸೇವಿಸುತ್ತಾರೆ. ರಾತ್ರಿಯ ಊಟಕ್ಕೆ ತುಂಬಾ ಸಿಂಪಲ್ ತಿನಿಸುಗಳು ಕರೀನಾಗೆ ಬೇಕು. ತರಕಾರಿ ಸೂಪ್ ಅಥವಾ ದಾಲ್, ಸಲಾಡ್ ಮತ್ತು ತುಪ್ಪದೊಂದಿಗೆ ಚಪಾತಿಗಳನ್ನು ತಿನ್ನುತ್ತಾರೆ. ತುಪ್ಪು ತಿಂದರೇ ದಪ್ಪ ಆಗುತ್ತಾರೆ ಎಂಬ ಅನೇಕ ವದಂತಿಗಳು ನಮ್ಮ ನಡುವೆ ಹರಿದಾಡುತ್ತಲೇ ಇದೆ. ಕರೀನಾ ಕಪೂರ್ ಸಿನದ ಆರಂಭ ಮತ್ತು ಅಂತ್ಯ ಎರಡನ್ನೂ ತುಪ್ಪದೊಂದಿಗೆ ಮುಗಿಸುತ್ತಾರೆ. ಹೀಗಾಗಿ ಯಾವುದೇ ಮುಲಾಜಿಲ್ಲದೇ ತುಪ್ಪ ತಿನ್ನಿ.


Click it and Unblock the Notifications











