'ಶಂಕರ್‌ನಾಗ್ ಜೊತೆ ರೊಮ್ಯಾಂಟಿಕ್ ಸೀನ್ ಮಾಡಿದಾಗ': ನೀನಾ ಗುಪ್ತಾ ಹೇಳಿದ್ದೇನು?

ಬಾಲಿವುಡ್ ಹಿರಿಯ ನಟಿ ನೀನಾ ಗುಪ್ತಾ ತಮ್ಮ ಆತ್ಮಕಥೆ ಮೂಲಕ ಬಹಳ ಸುದ್ದಿಯಲ್ಲಿದ್ದಾರೆ. ಖಾಸಗಿ ಜೀವನ, ಹಿಂದಿ ಸಿನಿಮಾರಂಗ ಹಾಗೂ ತಾನು ಎದುರಿಸಿದ ಅವಮಾನಗಳ ಕುರಿತು ಈ ಪುಸ್ತಕದಲ್ಲಿ ಬಹಿರಂಗಪಡಿಸಿದ್ದು, ಗಮನ ಸೆಳೆದಿದ್ದಾರೆ. 'ಸಚ್ ಕಹೂಂ ತೋ' ಹೆಸರಿನಲ್ಲಿ ತಮ್ಮ ಆತ್ಮಕಥೆ ಹೊರತಂದಿದ್ದು, ಈ ಪುಸ್ತಕದಲ್ಲಿ ಹಲವು ವಿಚಾರಗಳನ್ನು ಉಲ್ಲೇಖಿಸಲಾಗಿದೆ.

Recommended Video

ನೀನಾ ಗುಪ್ತಾ - ಕಾಸ್ಟಿಂಗ್ ಕೌಚ್ - ಲೈಂಗಿಕ ಕಿರುಕುಳದ ವಿಚಾರವನ್ನ ಹಂಚಿಕೊಂಡ ನಟಿ! | Filmibeat Kannada

ಸಿನಿಮಾದ ಅವಕಾಶಕ್ಕಾಗಿ ಹುಡುಕಾಡುವ ಸಮಯದಲ್ಲಿ ನಿರ್ದೇಶಕ-ನಿರ್ಮಾಪಕರು ನಡೆದುಕೊಂಡ ರೀತಿ, ಕಾಸ್ಟಿಂಗ್ ಕೌಚ್, ಲೈಂಗಿಕ ಕಿರುಕುಳಕ್ಕೆ ಪ್ರಯತ್ನಿಸಿದ ವಿಚಾರಗಳನ್ನು ಹೇಳಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ಮಾಜಿ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಜೊತೆ ಲಿವ್-ಇನ್-ರಿಲೇಶನ್‌ಷಿಪ್ ಬಗ್ಗೆಯೂ ಬಿಚ್ಚಿಟ್ಟಿದ್ದಾರೆ. ವಿಶೇಷ ಅಂದ್ರೆ ಈ ಆತ್ಮಕಥೆಯಲ್ಲಿ ಕನ್ನಡ ನಟ ಶಂಕರ್ ನಾಗ್ ಜೊತೆ ನಟಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಉತ್ಸವ್ ಸಿನಿಮಾದಲ್ಲಿ ನಟನೆ

ಉತ್ಸವ್ ಸಿನಿಮಾದಲ್ಲಿ ನಟನೆ

ಗಿರೀಶ್ ಕಾರ್ನಡ್ ನಿರ್ದೇಶಿಸಿದ್ದ 'ಉತ್ಸವ್' (1984) ಸಿನಿಮಾದಲ್ಲಿ ಶಂಕರ್ ನಾಗ್ ಸಹ ನಟಿಸಿದ್ದರು. ರೇಖಾ, ಶಶಿ ಕಪೂರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಈ ಚಿತ್ರದಲ್ಲಿ ಶಂಕರ್‌ನಾಗ್ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದ್ದರು. ಶಂಕರ್ ನಾಗ್ ಜೊತೆ ಆಗಿನ ಕಾಲದ 'ಹಾಟ್ ಬಾಂಬ್' ಎನಿಸಿಕೊಂಡಿದ್ದ ನೀನಾ ಗುಪ್ತಾ ಸಹ ತೆರೆ ಹಂಚಿಕೊಂಡಿದ್ದರು.

ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಬೇಕಿತ್ತು

ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಬೇಕಿತ್ತು

ಈ ಸಿನಿಮಾದಲ್ಲಿ ನೀನಾ ಗುಪ್ತಾ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸಬೇಕಿತ್ತು. ಸಹ ನಟ ಶಂಕರ್ ನಾಗ್ ಜೊತೆ ಹೆಚ್ಚು ಆತ್ಮೀಯವಾಗಿ ಕಾಣಿಸಿಕೊಳ್ಳಬೇಕಿತ್ತು. ಉತ್ಸವ್ ಸಿನಿಮಾದಲ್ಲಿ ಶಂಕರ್ ನಾಗ್ ಜೊತೆ ಅಭಿನಯಿಸಿದ ಅನುಭವವನ್ನು ನೀನಾ ಗುಪ್ತಾ ತಮ್ಮ ಆತ್ಮಕಥೆ 'ಸಚ್ ಕಹೂಂ ತೋ'ನಲ್ಲಿ ಬರೆದುಕೊಂಡಿದ್ದಾರೆ.

ಗೆಳೆತನದಿಂದ ಅಷ್ಟು ಬೋಲ್ಡ್ ಆಗಿ ನಟಿಸಲು ಸಾಧ್ಯವಾಯಿತು

ಗೆಳೆತನದಿಂದ ಅಷ್ಟು ಬೋಲ್ಡ್ ಆಗಿ ನಟಿಸಲು ಸಾಧ್ಯವಾಯಿತು

''ಶಂಕರ್ ನಾಗ್ ಯಾರೆಂಬುದು ನನಗೆ ತಿಳಿದಿರಲಿಲ್ಲ. ಉತ್ಸವ್ ಸಿನಿಮಾದಲ್ಲಿ ಅವರ ಜೊತೆ ಬೋಲ್ಡ್ ಆಗಿ, ಬಹಳ ರೊಮ್ಯಾಂಟಿಕ್ ನಟಿಸುವ ದೃಶ್ಯಗಳಿತ್ತು. ಶೂಟಿಂಗ್‌ಗೆ ಮುನ್ನ ನಾನು ಬಹಳ ನರ್ವಸ್ ಆಗಿದ್ದೆ. ಆಮೇಲೆ ಶಂಕರ್ ನಾಗ್ ಅವರ ಗೆಳತನದಿಂದ ನಾನು ಕಂಫರ್ಟ್ ಆಗಿ ನಟಿಸಲು ಸಾಧ್ಯವಾಯಿತು'' ಎಂದು ಆತ್ಮಕಥೆಯಲ್ಲಿ ಉಲ್ಲೇಖಿಸಿದ್ದಾರೆ.

ಗಿರೀಶ್ ಕಾರ್ನಡ್ ಪರಿಚಯ ಮಾಡಿದರು

ಗಿರೀಶ್ ಕಾರ್ನಡ್ ಪರಿಚಯ ಮಾಡಿದರು

''ಇಂಟಿಮೇಟ್ ದೃಶ್ಯದಲ್ಲಿ ನಟಿಸಲು ನಾನು ನರ್ವಸ್ ಆಗಿದ್ದ ವಿಚಾರ ಗಿರೀಶ್ ಕಾರ್ನಡ್‌ಗೆ ತಿಳಿಯಿತು. ಬಳಿಕ, ಚಿತ್ರೀಕರಣಕ್ಕೂ ಎರಡು ದಿನ ಮುಂಚಿತವಾಗಿ ಶಂಕರ್‌ನಾಗ್ ಅವರನ್ನು ಕರೆಯಿಸಿ ನನಗೆ ಪರಿಚಯ ಮಾಡಿಕೊಟ್ಟರು. ನೀವಬ್ಬರು ಲವ್ ಸೀನ್ ಮಾಡಬೇಕು. ಪರಸ್ಪರ ತಿಳಿದುಕೊಳ್ಳಿ, ಶೂಟಿಂಗ್ ಚೆನ್ನಾಗಿ ಮಾಡಬಹುದು ಎಂದು ಹೇಳಿದರು. ಆಮೇಲೆ ಶಂಕರ್ ನಾಗ್ ಮತ್ತು ನಾನು ಫ್ರೆಂಡ್ಸ್ ಆದ್ವಿ. ಅವರು ನನ್ನ ಬಗ್ಗೆ ವಿಚಾರಿಸುವುದು, ನಾನು ಅವರ ಬಗ್ಗೆ ವಿಚಾರಿಸಿವುದು ಹೀಗೆ ಪರಿಚಯ ಮೂಡಿತು'' ಎಂದು ನೀನಾ ಇತ್ತೀಚಿಗಿನ ಸಂದರ್ಶನವೊಂದರಲ್ಲಿಯೂ ಈ ಬಗ್ಗೆ ಹೇಳಿಕೊಂಡಿದ್ದರು.

ಶಂಕರ್ ನಾಗ್ ಒಳ್ಳೆಯ ವ್ಯಕ್ತಿ

ಶಂಕರ್ ನಾಗ್ ಒಳ್ಳೆಯ ವ್ಯಕ್ತಿ

''ಶಂಕರ್ ನಾಗ್ ಬಹಳ ಒಳ್ಳೆಯ ವ್ಯಕ್ತಿ. ತುಂಬಾ ಬೋಲ್ಡ್ ಆಗಿ ನಟಿಸುವ ದೃಶ್ಯವಿದ್ದರೂ ನನ್ನ ಬಳಿ ಯಾವ ಕ್ಷಣದಲ್ಲಿ ಕೆಟ್ಟದಾಗಿ ನಡೆದುಕೊಂಡಿಲ್ಲ. ತುಂಬಾ ಕಂಫರ್ಟ್ ಆಗಿ ರೊಮ್ಯಾಂಟಿಕ್ ಸೀನ್ ಮಾಡಿದ್ವಿ. ಆಮೇಲೆ ಶಂಕರ್ ನಾಗ್ ಮತ್ತು ನಾನು ಬಹಳ ಒಳ್ಳೆಯ ಸ್ನೇಹಿತರಾದ್ವಿ. ನನಗೆ ಜೀವನದಲ್ಲಿ ಒಬ್ಬ ಉತ್ತಮ ಸ್ನೇಹಿತ ಸಿಕ್ಕರು'' ಎಂದು ನೀನಾ ಗುಪ್ತಾ ತಮ್ಮ ಆತ್ಮಕಥೆಯಲ್ಲಿ ಬರೆದುಕೊಂಡಿರುವ ಬಗ್ಗೆ ವರದಿಯಾಗಿದೆ.

More from Filmibeat

English summary
Bollywood Actress Neena Gupta talks about Bold Scenes with Late kannada Actor Shankar Nag in Utsva Film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X