ನೀರಿನ ಜತೆ ನೀರೆಯರ ಸಲ್ಲಾಪ: ಲಾಕ್ ಡೌನ್‌ನಲ್ಲಿ ತಾರೆಯರು ಮಿಸ್ ಮಾಡಿಕೊಂಡಿದ್ದು ಇದನ್ನು...
ಲಾಕ್ ಡೌನ್ ಅವಧಿಯಲ್ಲಿ ಸಿನಿಮಾ ಅಭಿಮಾನಿಗಳು ಏನೇನಲ್ಲ ಮಿಸ್ ಮಾಡಿಕೊಂಡಿರಬಹುದು? ಹೊಸ ಸಿನಿಮಾಗಳು, ತಮ್ಮ ನೆಚ್ಚಿನ ನಟ-ನಟಿಯರ ಹೊಸ ಅಪ್‌ಡೇಟ್‌ಗಳು, ಇಷ್ಟ ಹೀರೋಯಿನ್‌ಗಳ ಎದೆಯಲ್ಲಿ ಕಚಗುಳಿ ಇರಿಸುವ ಬಗೆ ಬಗೆಯ ಪೋಸ್‌ಗಳು... ಒಂದೆರಡಲ್ಲ.
ಹೊಸ ಸಿನಿಮಾಗಳಿಲ್ಲದೆ, ಹೊರ ಓಡಾಡಲು ಆಗದೆ ಅಭಿಮಾನಿಗಳು ಸಾಕಷ್ಟು ನಿರಾಶೆ ಅನುಭವಿಸಿದ್ದಾರೆ. ಅನೇಕರು ಆನ್‌ಲೈನ್‌ನಲ್ಲಿ ಸಿನಿಮಾ ನೋಡುವ ಮೂಲಕ ತಮ್ಮ ಮನರಂಜನೆಯ ದಾಹವನ್ನು ತಣಿಸಿಕೊಂಡಿದ್ದಾರೆ. ಈ ಬೇಸಿಗೆಯಲ್ಲಿ ಮತ್ತಷ್ಟು ಕಾವು ಹೆಚ್ಚಿಸುವುದರಲ್ಲಿ ಬಾಲಿವುಡ್‌ನ ಬೆಡಗಿಯರು ಹಿಂದೆ ಬಿದ್ದಿಲ್ಲ. ಸಾಮಾನ್ಯವಾಗಿ ವಿವಿಧ ಸಿನಿಮಾಗಳಿಗೆ, ಮ್ಯಾಗಜೀನ್ ಹಾಗೂ ಫ್ಯಾಷನ್ ಕಾರ್ಯಕ್ರಮಗಳಿಗೆ ರೂಪದರ್ಶಿಯರು, ನಟಿಯರು ವಿಭಿನ್ನ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಬಾರಿ ಅವುಗಳಿಗೆ ಅವಕಾಶವಿಲ್ಲದಿದ್ದರೂ ಅಭಿಮಾನಿಗಳಿಗೆ ಹಬ್ಬ ಉಂಟು ಮಾಡುವ ಫೋಟೊಗಳಿಗೇನೂ ಕೊರತೆಯಾಗಿಲ್ಲ. ಮುಂದೆ ಓದಿ...

ಶಮಾ ಸಿಕಂದರ್
ಸಿನಿಮಾ ಮತ್ತು ಕಿರುತೆರೆಯಲ್ಲಿ ನಟಿಸಿದ್ದ ಶಮಾ ಸಿಕಂದರ್, ವೆಬ್ ಸೀರೀಸ್‌ಗಳಲ್ಲಿಯೂ ಹಸಿಬಿಸಿಯಾಗಿ ಕಾಣಿಸಿಕೊಂಡು ಕಿಚ್ಚು ಹೊತ್ತಿಸಿದ್ದರು. ಈಜುಕೊಳದ ಪಕ್ಕದಲ್ಲಿ ಕಪ್ಪು ಬಿಕಿನಿಯಲ್ಲಿ ಮಲಗಿರುವ ಅವರ ಹಳೆಯ ಫೋಟೊ ಬೇಸಿಗೆಯ ಬಿಸಿ ಹೆಚ್ಚಿಸುವಂತಿದೆ.

ಹೀನಾ ಖಾನ್
'ಸ್ಮಾರ್ಟ್ ಫೋನ್', 'ಹ್ಯಾಕ್ಡ್' ಮುಂತಾದ ಚಿತ್ರಗಳಲ್ಲಿ ನಟಿಸಿರುವ ನಟಿ ಹೀನಾ ಖಾನ್, ಇತ್ತೀಚೆಗೆ ಬೀಚಿನ ಮರಳಲ್ಲಿ ಹೊರಳಾಡಿದ ಕುಳಿತ ಕೆಂಪು ಬಣ್ಣದ ಬಿಕಿನಿ ಫೋಟೊ ಶೇರ್ ಮಾಡಿದ್ದರು. ಇದು ಹಳೆಯ ಫೋಟೊ ಎಂದು ಹೇಳುವುದನ್ನು ಅವರು ಮರೆತಿಲ್ಲ. ಬೀಚ್‌ನಲ್ಲಿ ಹೀಗೆ ಪೋಸ್ ಕೊಡುವ 'ಮಜಾ ಮಾಡುವ ಲೈಸೆನ್ಸ್ ವಾಪಸ್ ಬೇಕು' ಎಂದು ಅವರು ಕೇಳಿದ್ದಾರೆ.

ರಿಚಾ ಚಡ್ಡಾ
ನಟಿ ರಿಚಾ ಚಡ್ಡಾ ಸ್ವಿಮ್ಮಿಂಗ್ ಪೂಲ್ ಬಳಿ ಈಜುಡುಗೆಯಲ್ಲಿ ಮೋಹಕವಾಗಿ ಪೋಸ್ ನೀಡಿದ್ದಾರೆ. ಸಿಟ್ಟು ಅಥವಾ ಉದ್ವೇಗಕ್ಕೆ ಒಳಗಾದಾಗ ಈಜುವುದನ್ನು ಪ್ರಯತ್ನಿಸಿ. ಆಗ ನಮ್ಮ ದೇಹದ ಶ್ರಮವು ಮನಸಿಗೆ ನೆಮ್ಮದಿ ನೀಡುತ್ತದೆ ಎನ್ನುವ ಮೂಲಕ ಅಭಿಮಾನಿಗಳಿಗೆ ಸಲಹೆಯನ್ನೂ ನೀಡಿದ್ದಾರೆ.

ಊರ್ವಶಿ ರೌಟೇಲಾ
ಕನ್ನಡದಲ್ಲಿ 'ಐರಾವತ' ಚಿತ್ರದಲ್ಲಿ ನಟಿಸಿದ್ದ ಊರ್ವಶಿ ರೌಟೇಲಾ, ಬೋಲ್ಡ್ ಉಡುಗೆಗಳಲ್ಲಿ ಕಾಣಿಸಿಕೊಳ್ಳುವುದರಲ್ಲಿ ಯಾರಿಗೂ ಕಮ್ಮಿಯಿಲ್ಲ. ಇತ್ತೀಚೆಗೆ ಅವರು ಸ್ವಿಮ್ಮಿಂಗ್ ಪೂಲ್‌ನಿಂದ ಎದ್ದು ಬರುವ ಪುಟ್ಟ ವಿಡಿಯೋ ಶೇರ್ ಮಾಡಿದ್ದರು. ಬಿಕಿನಿಯಲ್ಲಿ ಅವರ ದೇಹಸಿರಿ ಕಂಡು ಅಭಿಮಾನಿಗಳು ದಂಗಾಗಿದ್ದರು.

ಕವಿತಾ ಕೌಶಿಕ್
ಏಕ್ ಹಸೀನಾ ಥಿ, ಜಂಜೀರ್ ಮುಂತಾದ ಚಿತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಕವಿತಾ ಕೌಶಿಕ್ ಸಮುದ್ರದ ತೀರದ ಕಟ್ಟೆಯೊಂದರ ಮೇಲೆ ನೆಲಹಾಸು ಹಾಕಿ ಅದರ ಮೇಲೆ ಈಜುಡುಗೆಯಲ್ಲಿ ಕುಳಿತು ಕಡಲನ್ನು ದಿಟ್ಟಿಸುತ್ತಿರುವ ಫೋಟೊ ಹಾಕಿದ್ದರು. 'ನನಗೆ ಯಾವಾಗಲೂ ಈ ನಗರಕ್ಕಿಂತ ಹಳ್ಳಿಗಳೇ ಇಷ್ಟ' ಎಂದು ಹೇಳಿದ್ದರು.

ದಿಶಾ ಪಟಾನಿ
ನಟಿ ದಿಶಾ ಪಟಾನಿ ಮಲಂಗ್, ಬಾಘಿ 3, ಕುಂಗ್ ಫೂ ಯೋಗ, ಎಂಎಸ್ ಧೋನಿ ಮುಂತಾದ ಚಿತ್ರಗಳಲ್ಲಿ ನಟಿಸಿದವರು. ಬಗೆ ಬಗೆಯ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಲಾಕ್ ಡೌನ್ ಅವಧಿಯಲ್ಲಿ ಅವರು ಅಭಿಮಾನಿಗಳಿಗೆ ಖುಷಿ ನೀಡುತ್ತಿದ್ದಾರೆ. ಬೀಚ್ ಒಂದರಲ್ಲಿ ಸ್ವಿಮ್ ಸೂಟ್‌ನಲ್ಲಿ ಕುಳಿತ ಫೋಟವನ್ನು ಇತ್ತೀಚೆಗೆ ಶೇರ್ ಮಾಡಿದ್ದರು.

ಶ್ರದ್ಧಾ ದಾಸ್
ನಟಿ ಶ್ರದ್ಧಾ ದಾಸ್ ಲಾಕ್ ಡೌನ್ ಅವಧಿಯಲ್ಲಿ ಹೆಚ್ಚಿನ ಸಮಯ ಈಜುಕೊಳದಲ್ಲಿಯೇ ಕಳೆದಿದ್ದರು ಅನಿಸುತ್ತಿದೆ. ಸ್ವಿಮ್ಮಿಂಗ್ ಪೂಲ್‌ನಲ್ಲಿನ ಹಲವು ಫೋಟೊಗಳನ್ನು ಹಂಚಿಕೊಂಡಿರುವ ಅವರು ಬೀಚ್‌ನಲ್ಲಿ ನಿಂತ ಹಳೆ ಫೋಟೊ ಕೂಡ ಶೇರ್ ಮಾಡಿದ್ದರು.

ಇಲಿಯಾನಾ ಡಿ ಕ್ರೂಜ್
ಬೀಚ್ ಫೋಟೊಗಳನ್ನು ಹಂಚಿಕೊಳ್ಳುವುದರಲ್ಲಿ ಇಲಿಯಾನಾ ಡಿ ಕ್ರೂಜ್ ಯಾವಾಗಲೂ ಮುಂದೆ. ಲಾಕ್ ಡೌನ್ ಅವಧಿಯಲ್ಲಿಯೂ ಇಲಿಯಾನಾ ಮಾದಕ ಭಂಗಿಯ ಫೋಟೊಗಳನ್ನು ಹಾಕಿದ್ದಾರೆ. ಬೀಚ್‌ಅನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬಿಕಿನಿಯ ಫೋಟದೊಂದಿಗೆ ಹೇಳಿದ್ದ ಅವರು, ಈ ಫೀಲಿಂಗ್‌ಅನ್ನು ಮಿಸ್ ಮಾಡಿಕೊಳ್ಳುವುದು ಹೇಗೆ ಎಂದು ಈಜುತ್ತಿರುವ ಮತ್ತೊಂದು ಫೋಟೊ ಹಾಕಿದ್ದಾರೆ.


Click it and Unblock the Notifications











