twitter
    For Quick Alerts
    ALLOW NOTIFICATIONS  
    For Daily Alerts

    ದಶಕದ ಅತೀ ದೊಡ್ಡ ಫ್ಲಾಪ್ ಪಟ್ಟಿ ಸೇರಿದ '83': ಲಿಸ್ಟ್‌ನಲ್ಲಿ ಹೃತಿಕ್, ರಣ್‌ಬೀರ್, ಸೈಫ್, ಶಾಹಿದ್ ಚಿತ್ರಗಳು

    |

    ರಣ್‌ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ '83' ಸಿನಿಮಾ ಮೇಲೆ ಎಲ್ಲರ ನಿರೀಕ್ಷೆಯಿತ್ತು. ಕಬೀರ್ ಖಾನ್ ನಿರ್ದೇಶಿಸಿದ್ದ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿ ಮಾಡುತ್ತೆ ಎಂದು ಭವಿಷ್ಯ ನುಡಿದಿದ್ದರು. ಸಿನಿಮಾ ರಿಲೀಸ್‌ಗೂ ಮುನ್ನ ನಡೆದ ಪ್ರಿಮಿಯರ್ ಶೋ ನೋಡಿ ವಿಮರ್ಶಕರು ಹಾಡಿಹೊಗಿಳಿದ್ದರು. ಆದರೂ, ಭಾರತ ಕ್ರಿಕೆಟ್ ತಂಡ ಮೊದಲ ಬಾರಿ ವಿಶ್ವಗೆದ್ದ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಚಿತ್ರಮಂದಿರಕ್ಕೆ ಬರಲೇ ಇಲ್ಲ. ಇದು ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಅತೀ ಹೆಚ್ಚು ನಷ್ಟ ಕಂಡ ಸಿನಿಮಾಗಳ ಪಟ್ಟಿ ಸೇರಿದೆ.

    ಕಳೆದ 10 ವರ್ಷಗಳಲ್ಲಿ ಬಾಲಿವುಡ್‌ನಲ್ಲಿ ಸಾಕಷ್ಟು ಸಿನಿಮಾಗಳು ತೆರೆಕಂಡಿವೆ. ಕೆಲವು ಗಲ್ಲಾಪೆಟ್ಟಿಯಲ್ಲಿ ಜಾದು ಮಾಡಿದ್ದೂ ಇದೆ. ಮತ್ತೆ ಕೆಲ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಭಾರೀ ನಷ್ಟವನ್ನೇ ಅನುಭವಿಸಿವೆ. 2011 ರಿಂದ 2021ರ ಒಳಗೆ ಈ 10 ದಶಕಗಳಲ್ಲಿ ಬಾಲಿವುಡ್‌ನಲ್ಲಿ ಕೆಲ ಸಿನಿಮಾಗಳು ಕೋಟಿ ಕೋಟಿ ಕಳೆದುಕೊಂಡು ಹೆಸರು ಮಾಡಿವೆ. ಇಂತಹ ಸಿನಿಮಾಗಳ ಪಟ್ಟಿಗೆ '83' ಸೇರಿಕೊಂಡಿದೆ. ಹಾಗಿದ್ದರೆ, '83' ಕಳೆದುಕೊಂಡ ಹಣವೆಷ್ಟು? ಈ 10 ವರ್ಷದಲ್ಲಿ ಅತೀ ಹೆಚ್ಚು ನಷ್ಟ ಅನುಭವಿಸಿದ ಸಿನಿಮಾಗಳು ಯಾವುವು? ಎಂದು ತಿಳಿದುಕೊಳ್ಳಲು ಮುಂದೆ ಓದಿ.

    70 ಕೋಟಿ ಕಳೆದುಕೊಂಡ ಬಾಲಿವುಡ್ ಸಿನಿಮಾ '83'

    70 ಕೋಟಿ ಕಳೆದುಕೊಂಡ ಬಾಲಿವುಡ್ ಸಿನಿಮಾ '83'

    '83' ಈ ಸಿನಿಮಾ ಬಗ್ಗೆ ನಿರೀಕ್ಷೆ ಮೂಡುವುದಕ್ಕೆ ನೂರೆಂಟು ಕಾರಣವಿದೆ. ರಣ್‌ವೀರ್ ಸಿಂಗ್ ಕ್ರಿಕೆಟರ್ ಕಪಿಲ್ ದೇವ್ ಅವತಾರವೆತ್ತಿದ್ದು, ಕ್ರಿಕೆಟ್ ದಿಗ್ಗಜರೇ ಪ್ರಚಾರಕ್ಕೆ ಇಳಿದಿದ್ದು, ಕಬೀರ್ ಸಿಂಗ್ ನಿರ್ದೇಶನ, ಹೀಗೆ ನಿರೀಕ್ಷೆ ದುಪ್ಪಟ್ಟು ಆಗಿದ್ದಕ್ಕೆ ಹಲವು ಕಾರಣಗಳಿವೆ. ಆದರೆ, ನಿರೀಕ್ಷೆ ಹುಟ್ಟಿಸಿದಷ್ಟು ಬಾಕ್ಸಾಫೀಸ್‌ನಲ್ಲಿ ಗಳಿಸಲಿಲ್ಲ. ಬಿಡುಗಡೆಯಾದ ದಿನದಿಂದಲೇ ಜನರು ಸಿನಿಮಾ ನೋಡುವುದಕ್ಕೆ ಬರಲೇ ಇಲ್ಲ. 100 ಕೋಟಿ ಗಳಿಸುವುದಕ್ಕೆ ಪರದಾಡಿತ್ತು. ಬಾಲಿವುಡ್ ಮೂಲಗಳ ಪ್ರಕಾರ ಈ ಸಿನಿಮಾ ಬರೋಬ್ಬರಿ 70 ಕೋಟಿಯಷ್ಟು ನಷ್ಟ ಅನುಭವಿಸಿದೆ. ಕಳೆದ 10 ವರ್ಷಗಳಲ್ಲಿ ಅತೀ ಹೆಚ್ಚು ನಷ್ಟ ಅನುಭವಿಸಿದ ಸಿನಿಮಾಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಹೀಗಾಗಿ '83' ದಶಕ ಕಂಡ ಮಹಾ ಸೋಲು.

    'ಬಾಂಬೆ ವೆಲ್ವೆಟ್'ಗೆ 75 ಕೋಟಿ ನಷ್ಟ

    'ಬಾಂಬೆ ವೆಲ್ವೆಟ್'ಗೆ 75 ಕೋಟಿ ನಷ್ಟ

    2015ರಲ್ಲಿ ತೆರೆಕಂಡಿದ್ದ 'ಬಾಂಬೆ ವೆಲ್ವೆಟ್' ಮಲ್ಟಿಸ್ಟಾರರ್ ಸಿನಿಮಾ. ರಣ್‌ಬೀರ್ ಕಪೂರ್, ಅಭಯ್ ಡೆಯೋಲ್, ಅನುಷ್ಕಾ ಶರ್ಮಾ, ಕರಣ್ ಜೋಹರ್ ಸೇರಿದಂತೆ ಬಾಲಿವುಡ್ ದಿಗ್ಗಜರ ದಂಡೇ ಇತ್ತು. ಪ್ರಯೋಗಾತ್ಮಕ ಸಿನಿಮಾಗಳ ಸರದಾರ ಅನುರಾಗ್ ಕಶ್ಯಪ್ ನಿರ್ದೇಶನ ಮಾಡಿದ್ದರು. ಬರೋಬ್ಬರಿ 120 ಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣಗೊಂಡಿತ್ತು. ಮೊದಲ ದಿನವೇ ಚಿತ್ರ ನೆಗೆಟಿವ್ ರಿಪೋರ್ಟ್ ಸಿಕ್ಕಿತ್ತು. 120 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಸಿನಿಮಾ ಗಳಿಸಿದ್ದು ಬರೀ 45 ಕೋಟಿ. ಹೀಗಾಗಿ ಈ ಸಿನಿಮಾ 10 ವರ್ಷಗಳಲ್ಲಿ ಅತೀ ದೊಡ್ಡ ನಷ್ಟ ಅನುಭವಿಸಿದ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

    ಸೈಫ್, ಶಾಹಿದ್ 'ರಂಗೂನ್'ಗೆ 70 ಕೋಟಿ

    ಸೈಫ್, ಶಾಹಿದ್ 'ರಂಗೂನ್'ಗೆ 70 ಕೋಟಿ

    'ರಂಗೂನ್' ಎರಡನೇ ವಿಶ್ವ ಯುದ್ಧದ ಹಿನ್ನೆಲೆಯಿಟ್ಟುಕೊಂಡು ಹೆಣೆದ ಸಿನಿಮಾ. ಸೈಫ್ ಅಲಿಖಾನ್, ಶಾಹಿದ್ ಕಪೂರ್, ಕಂಗನಾ ರನೌತ್ ಮೂವರು ದಿಗ್ಗಜರು ನಟಿಸಿದ್ದ ಚಿತ್ರ. ವಿಶಾಲ್ ಭಾರದ್ವಾಜ್ ಈ ಸಿನಿಮಾದ ನಿರ್ದೇಶಕ. ಬಾಲಿವುಡ್‌ನ ದೊಡ್ಡ ದೊಡ್ಡ ಸಂಸ್ಥೆಗಳೇ ಈ ಸಿನಿಮಾಗೆ ಹಣ ಹೂಡಿಕೆ ಮಾಡಿದ್ದರು. ಆದರೆ ಪ್ರೇಕ್ಷಕರಿಗೆ 'ರಂಗೂನ್' ರಂಗಾಗಿ ಕಾಣಿಸಲೇ ಇಲ್ಲ. 2017ರಲ್ಲಿ ತೆರೆಕಂಡ ಸಿನಿಮಾ 70 ಕೋಟಿ ನಷ್ಟ ಅನುಭವಿಸಬೇಕಾಯಿತು.

    'ಮೊಹೆಂಜೊ ದಾರೊ'ಗೆ 60 ಕೋಟಿ ನಷ್ಟ

    'ಮೊಹೆಂಜೊ ದಾರೊ'ಗೆ 60 ಕೋಟಿ ನಷ್ಟ

    ಬಾಲಿವುಡ್‌ನ ಗ್ರೀಕ್ ಗಾಡ್ ಹೃತಿಕ್ ರೋಷನ್, ಟಾಲಿವುಡ್‌ನ ಬುಟ್ಟಬೊಮ್ಮ ಪೂಜಾ ಹೆಗ್ಡೆ ಅಭಿನಯಿಸಿದ್ದ ಸಿನಿಮಾ 'ಮೊಹೆಂಜೊ ದಾರೊ'. ಸಿಂಧೂ ನಾಗರೀಕತೆಯ ಹಿನ್ನೆಲೆಯಲ್ಲಿ ಕಥೆ ಹೆಣೆಯಾಗಿತ್ತು. ಹೃತಿಕ್ ರೋಷನ್ ಇದೇ ಮೊದಲ ಬಾರಿಗೆ ಐತಿಹಾಸಿಕ ಪಾತ್ರದಲ್ಲಿ ನಟಿಸಿದ್ದರು. ಪೂಜಾ ಹೆಗ್ಡೆಗೆ ಇದು ಮೊದಲ ಸಿನಿಮಾ ಆಗಿತ್ತು. ಈ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಸುಮಾರು 60 ಕೋಟಿ ನಷ್ಟ ಅನುಭವಿಸಬೇಕಾಯಿತು.

    'ಜಗ್ಗ ಜಾಸೂಸ್' 50 ಕೋಟಿ ನಷ್ಟ

    'ಜಗ್ಗ ಜಾಸೂಸ್' 50 ಕೋಟಿ ನಷ್ಟ

    ರಣ್‌ಬೀರ್ ಕಪೂರ್ ಹಾಗೂ ಕತ್ರಿನಾ ಕೈಫ್ ನಟಿಸಿದ ಚಿತ್ರ 'ಜಗ್ಗಾ ಜಾಸೂಸ್' ಸಾಕಷ್ಟು ನಿರೀಕ್ಷೆ ಹುಟ್ಟಿಸಿತ್ತು. ಆಗ ಲವ್ ಬರ್ಡ್ಸ್ ಆಗಿದ್ದ ಈ ಜೋಡಿ ತೆರೆಮೇಲೆ ಮೋಡಿ ಮಾಡುತ್ತೆ ಅಂತಲೇ ಅಂದುಕೊಂಡಿದ್ದರು. ಆದರೆ, ಅನುರಾಗ್ ಬಸು ನಿರ್ದೇಶಿಸಿದ 131 ಕೋಟಿಯ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಪಲ್ಟಿ ಹೊಡೆದಿತ್ತು. ಈ ಸಿನಿಮಾ ಆಗಿದ್ದು ಒಂದೆರಡು ಕೋಟಿ ಅಲ್ಲ ಬರೋಬ್ಬರಿ 50 ಕೋಟಿ ನಷ್ಟ. ಈ ಸಿನಿಮಾ ಕಳೆದ 10 ವರ್ಷಗಳಲ್ಲಿ ಅತಿ ಹೆಚ್ಚು ಹಣ ಕಳೆದುಕೊಂಡ ಸಿನಿಮಾಗಳಾಗಿವೆ.

    English summary
    Bollywood Biggest flops in last decade 83, Mohenjo Daro, Bombay Velvet, Jagga Jasoos and Rangoon. Ranveer Sing Starrer 83 loss 70 Crore, Hrithik Mohenjo daro 60 crore, Bombay Velvet 75 crore, Jagga Jasoos 50 crore.
    Sunday, January 16, 2022, 10:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X