ಬಾಲಿವುಡ್‌ಗೆ ಈಗ ದಕ್ಷಿಣ ಭಾರತ ಸಿನಿಮಾಗಳ ಭಯ!

By ರವೀಂದ್ರ ಕೊಟಕಿ

ಭಾರತೀಯ ಸಿನಿಮಾ ರಂಗದ ಬಹುನಿರೀಕ್ಷಿತ ಚಿತ್ರ 'ಆರ್ ಆರ್ ಆರ್' ಚಿತ್ರದ ಅಧಿಕೃತ ಟ್ರೈಲರ್ ಎರಡು ದಿನದ ಹಿಂದೆ ಬಿಡುಗಡೆಯಾಗಿದೆ. ಕನ್ನಡ, ತೆಲುಗು ಸೇರಿದಂತೆ ಐದು ಭಾಷೆಗಳಲ್ಲಿ ಚಿತ್ರದ ಅಧಿಕೃತ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದಾರೆ. ಕೇವಲ ಯೂಟ್ಯೂಬ್ ನಲ್ಲಿ ಮಾತ್ರವಲ್ಲದೆ ದೇಶದಾದ್ಯಂತ 500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಆರ್ ಆರ್ ಆರ್' ಚಿತ್ರದ ಟ್ರೈಲರ್ ಬಿಡುಗಡೆ ನಿನ್ನೆ ಅದ್ದೂರಿಯಾಗಿ ನಡೆದಿದೆ. ಚಿತ್ರದ ಟ್ರೈಲರ್ ನೋಡಿರುವ ಸಿನಿ ಪ್ರೇಮಿಗಳನ್ನು ಕಾತರದಿಂದ ಜನವರಿ 7ರ ದಿನಕ್ಕಾಗಿ ಕಾಯುವಂತೆ ಟ್ರೈಲರ್ ಮಾಡಿದೆ. ಈಗಾಗಲೇ ಚಿತ್ರದ ಟ್ರೈಲರ್ ಭಾರಿ ನಿರೀಕ್ಷೆಗಳನ್ನು ಉಂಟು ಮಾಡಿದ್ದು, ಯೂಟ್ಯೂಬ್‌ನಲ್ಲಿ ಅನೇಕ ಹೊಸ ದಾಖಲೆಗಳನ್ನು ಕೂಡ ಮಾಡುತ್ತಿದೆ. ಭಾರತೀಯ ಸಿನಿಮಾ ರಂಗದಲ್ಲಿ ಅತಿ ಹೆಚ್ಚಿನ ಬಂಡವಾಳ (ಸುಮಾರು 400 ಕೋಟಿ) ಹೂಡಿರುವ ಈ ಚಿತ್ರದ ಬಗ್ಗೆ ಚಿತ್ರಪ್ರೇಮಿಗಳು ಅಪಾರವಾದ ನಿರೀಕ್ಷೆಯನ್ನು ಹೊಂದಿದ್ದಾರೆ. ಜನವರಿ 7ರ ದಿನಕ್ಕಾಗಿ ಕಾಯುತ್ತಿದ್ದಾರೆ.

ಭಾರತೀಯ ಸಿನಿಮಾ ರಂಗದ ಅತಿ ದೊಡ್ಡ ಬಜೆಟ್ ಚಿತ್ರವಾದ 'ಆರ್ ಆರ್ ಆರ್' ಜನವರಿ ಏಳರಂದು ವಿಶ್ವದಾದ್ಯಂತ ಐದು ಭಾಷೆಗಳಲ್ಲಿ ಸುಮಾರು ಹತ್ತು ಸಾವಿರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಇದು ಭಾರತೀಯ ಸಿನಿಮಾರಂಗದಲ್ಲಿ ಅತಿ ದೊಡ್ಡ ಮಟ್ಟದ ಬಿಡುಗಡೆಯಾಗಿದೆ.ಭಾರತದ ಅತಿ ದೊಡ್ಡ ಸಿನಿಮಾ ಮಂದಿರಗಳ ಚೈನ್ ಲಿಂಕ್ PVR Cinema's 'ಆರ್ ಆರ್ ಆರ್' ಚಿತ್ರದ ಜೊತೆ ಕೈ ಜೋಡಿಸಿದ್ದು, ಪಿವಿಆರ್ ಸಿನಿಮಾಸ್ ತನ್ನ ಹೆಸರನ್ನು ಈ ಚಿತ್ರಕ್ಕಾಗಿ 'PVRRR' ಎಂದು ಬದಲಾಯಿಸಿದೆ. 'RRR' ಕರ್ನಾಟಕದಲ್ಲಿ 600ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಆಂಧ್ರ ಮತ್ತು ತೆಲಂಗಾಣದ ಬಹುತೇಕ ಚಿತ್ರಮಂದಿರಗಳು ಇದೊಂದೇ ಚಿತ್ರವನ್ನು ಜನವರಿ 7ರಿಂದ ಮೂರು ದಿನಗಳ ಕಾಲ ಪ್ರದರ್ಶನ ಮಾಡಲಿದೆ.

ಅಮೆರಿಕದಲ್ಲಿ ಮೊದಲಿನಿಂದಲೂ ತೆಲುಗು ಸಿನಿಮಾಗಳಿಗೆ ವಿಶೇಷವಾದ ಕ್ರೇಜ್ ಇದೆ. ಹಾಗೆ ನೋಡಿದರೆ ಹಿಂದಿ ಅಥವಾ ಬಾಲಿವುಡ್ ಚಿತ್ರಗಳಿಗಿಂತ ಅಮೆರಿಕದಲ್ಲಿ ಹೆಚ್ಚು ಪ್ರದರ್ಶನ ಕಾಣುವುದು ತೆಲುಗು ಚಿತ್ರಗಳು. ಇಂದಿಗೂ ಅಮೆರಿಕದಲ್ಲಿ ಅತಿಹೆಚ್ಚು ಹಣ ಗಳಿಕೆ ಮಾಡಿದ ಚಿತ್ರ 'ಬಾಹುಬಲಿ -2'. ಎಸ್. ಎಸ್. ರಾಜಮೌಳಿ ಫ್ರಾಂಚೈಸಿಗೆ ಅಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಹೀಗಾಗಿ ಅಮೆರಿಕದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಸಿನಿಮಾವೊಂದು ಸುಮಾರು ಸಾವಿರ ಥಿಯೇಟರುಗಳಲ್ಲಿ ಬಿಡುಗಡೆಯಾಗುತ್ತಿದೆ. ಬಾಲಿವುಡ್ ಯಾವ ಸೂಪರ್ ಸ್ಟಾರ್‌ನ ಚಿತ್ರ ಕೂಡ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಮೇರಿಕಾದಲ್ಲಿ ತೆರೆ ಕಂಡಿದ್ದಿಲ್ಲ.

ಸೌತ್ ಸಿನಿಮಾಗಳೆಂದರೆ ಬಾಲಿವುಡ್‌ಗೆ ಉದಾಸೀನ

ಸೌತ್ ಸಿನಿಮಾಗಳೆಂದರೆ ಬಾಲಿವುಡ್‌ಗೆ ಉದಾಸೀನ

ಭಾರತೀಯ ಸಿನಿಮಾ ರಂಗ ವೆಂದರೆ ಬಾಲಿವುಡ್ ಅಂತ ಭಾವಿಸಿರುವ ಅನೇಕರಿಗೆ ಇತ್ತೀಚಿನ ಸೌತ್ ಸಿನಿಮಾಗಳು ಆಘಾತವನ್ನು ಉಂಟು ಮಾಡುತ್ತಿದೆ. ಅದೊಂದು ಕಾಲ ಭಾರತೀಯ ಸಿನಿಮಾರಂಗ ವೆಂದರೆ ಅದು ಬಾಲಿವುಡ್ ಅಂತಲೇ ಬಹುತೇಕ ವಿದೇಶಿಯರು ಭಾವಿಸಿದ್ದರು. ಅಷ್ಟೇ ಅಲ್ಲದೆ ದೇಶದಲ್ಲಿ ಕೂಡ ಎಲ್ಲೆಡೆ ಬಾಲಿವುಡ್ ಮಂದಿಗೆ ಅಗ್ರಪೀಠ. ಬಾಲಿವುಡ್ ಸ್ಟಾರ್ ಗಳನ್ನು ಮಾತ್ರ ಭಾರತೀಯ ಸ್ಟಾರ್ ಗಳೆಂದು ಅಂತಲೇ ಪರಿಗಣಿಸುತ್ತಿದ್ದರು. ಅದೇ ಪ್ರಾದೇಶಿಕ ನಟರುಗಳನ್ನು ಪ್ರಾದೇಶಿಕ ನಟನಾಗಿಯೇ ನೋಡುತ್ತಿದ್ದರು.

ಮೊದಲ ಕೋಟಿ ಪಡೆದ ನಟ ಯಾರು?

ಮೊದಲ ಕೋಟಿ ಪಡೆದ ನಟ ಯಾರು?

ಭಾರತೀಯ ಸಿನಿಮಾ ರಂಗದಲ್ಲಿ ಮೊಟ್ಟ ಮೊದಲ ಬಾರಿಗೆ 1 ಕೋಟಿ ಸಂಭಾವನೆ ಪಡೆದದ್ದು ಒಬ್ಬ ಬಾಲಿವುಡ್ ನಟನಲ್ಲ, ಬದಲಾಗಿ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಚಿರಂಜೀವಿ. ಹೌದು ಚಿರಂಜೀವಿ ಅವರು ಭಾರತೀಯ ಸಿನಿಮಾ ರಂಗದಲ್ಲಿ ಮೊದಲ 1 ಕೋಟಿ ಪಡೆದ ನಟ. 'ಆಪದ್ಬಾಂಧವಡು' ಚಿತ್ರಕ್ಕೆ ಚಿರಂಜೀವಿ ಪಡೆದ ಸಂಭಾವನೆ ಅದು ಕೂಡ ತೊಂಬತ್ತರ ದಶಕದ ಆರಂಭದಲ್ಲಿ ಬರೋಬ್ಬರಿ 1 ಕೋಟಿ 25 ಲಕ್ಷ. 90 ದಶಕದಲ್ಲಿ ಭಾರತೀಯ ಸಿನಿಮಾ ರಂಗದಲ್ಲಿ ಹೆಚ್ಚಿನ ಸಂಭಾವನೆ ಪಡೆದ ನಟರು ಅಂದರೆ ಚಿರಂಜೀವಿ ಮತ್ತು ರಜನಿಕಾಂತ್ ಮಾತ್ರವೇ. ಆದರೂ ದುರಂತವೆಂದರೆ ಇವರನ್ನು ಭಾರತೀಯ ಸೂಪರ್ ಸ್ಟಾರ್ ಗಳೆಂದು ಪರಿಗಣಿಸಲೇ ಇಲ್ಲ.

ಬಾಲಿವುಡ್‌ನ ಅಹಂಕಾರಕ್ಕೆ ಪೆಟ್ಟು ಕೊಟ್ಟ ರಜನಿಕಾಂತ್

ಬಾಲಿವುಡ್‌ನ ಅಹಂಕಾರಕ್ಕೆ ಪೆಟ್ಟು ಕೊಟ್ಟ ರಜನಿಕಾಂತ್

ರಜನಿಕಾಂತ್ -ಚಿರಂಜೀವಿ- ಕಮಲಹಾಸನ್ ದಕ್ಷಿಣದಲ್ಲಿ ದೊಡ್ಡ ಸ್ಟಾರ್‌ಗಳು ಎನಿಸಿಕೊಂಡರು ಕೂಡ ಬಾಲಿವುಡ್‌ಗೆ ಹೋಗಿ ಒಂದು ಸಂದರ್ಭದಲ್ಲಿ ಕೈಸುಟ್ಟುಕೊಂಡವರು. ಹೀಗಾಗಿಯೇ ಬಾಲಿವುಡ್ ಮಂದಿಗೆ ದಕ್ಷಿಣ ಸಿನಿಮಾಗಳ ಬಗ್ಗೆ ಒಂದು ತರದ ಉದಾಸೀನತೆ ಕಂಡುಬಂದಿತ್ತು. ಮುಂದೆ ಚಿರಂಜೀವಿ ರಾಜಕೀಯ ಧುಮುಕಿ ಬಹುತೇಕ ಒಂದು ದಶಕದ ಕಾಲ ಸಿನಿಮಾರಂಗದಿಂದಲೇ ಕಣ್ಮರೆಯಾದರು. ಕಮಲ್ ಹಾಸನ್ ಪ್ರಯೋಗಗಳಲ್ಲಿ ಮಗ್ನರಾದರು. ಆದರೆ ಒಬ್ಬ ರಜನಿಕಾಂತ್ ಸಿನಿಮಾದ ಇತಿಹಾಸವನ್ನೇ ಹೊಸದಾಗಿ ಬರೆದರು. 'ಬಾಷಾ', 'ಮುತ್ತು', 'ಪಡಿಯಪ್ಪ', 'ಶಿವಾಜಿ', 'ರೋಬೋ' ಭಾರತದ ಗಡಿಗಳನ್ನು ದಾಟಿ ವಿದೇಶಗಳಲ್ಲಿ ಕೂಡ ಅಬ್ಬರಿಸಿತು. ಜಪಾನ್ ದೇಶದಲ್ಲಂತೂ ರಜನಿಕಾಂತ್ ಆರಾಧ್ಯ ದೈವವಾಗಿ ಬಿಟ್ಟರು. ಇದು ಬಾಲಿವುಡ್ ಮಂದಿಯ ಅಹಂಕಾರಕ್ಕೆ ಬಿದ್ದ ಮೊದಲ ಪೆಟ್ಟು. ಬಾಲಿವುಡ್ ಮಂದಿ ಏನೇ ಕಸರತ್ತು ಮಾಡಿದರೂ ಕೂಡ ರಜನಿಕಾಂತ್ ಅವರ ಜನಪ್ರಿಯತೆಯ ಮುಂದೆ ಮಂಕಾಯಿತು. ರಜನಿಕಾಂತ್ ದೇಶದಲ್ಲೇ ಮೊದಲ ಬಾರಿಗೆ 100 ಕೋಟಿ ಪಡೆದ ನಟ ಕೂಡ ಎನಿಸಿಕೊಂಡವರು.

ಪಾಕಿಸ್ತಾನಿ ಕಲಾವಿದರಿಗೆ ಇದ್ದ ಬೆಲೆ ದಕ್ಷಿಣದವರೆಗೆ ಇರಲಿಲ್ಲ

ಪಾಕಿಸ್ತಾನಿ ಕಲಾವಿದರಿಗೆ ಇದ್ದ ಬೆಲೆ ದಕ್ಷಿಣದವರೆಗೆ ಇರಲಿಲ್ಲ

ನೀವು ಸರಿಯಾಗಿ ಗಮನಿಸಿದರೆ ಬಾಲಿವುಡ್ ಮಂದಿ ದಕ್ಷಿಣ ಭಾರತೀಯರ ಅಡುಗೆ ಉಡುಗೆ-ತೊಡುಗೆಗಳನ್ನು ಹಾಸ್ಯಕ್ಕಾಗಿ ಹೆಚ್ಚು ಬಳಸುತ್ತಿದ್ದರು. ದಕ್ಷಿಣದ ನಟರನ್ನು ಸಿಕ್ಕಾಪಟ್ಟೆ ಕಿಂಡಲ್ ಕೂಡ ಮಾಡುತ್ತಿದ್ದರು. ಫತೇಹ್ ಆಲಿ ಖಾನ್, ಅತಿಫ್ ಅಸ್ಲಾಂ, ರೇಷ್ಮಾ, ನಜಿಯ ಹಸ್ಸನ್, ಅದ್ನಾನ್ ಸ್ವಾಮಿ ಇಂತಹ ಪಾಕಿಸ್ತಾನಿ ಗಾಯಕ ಗಾಯಕಿಯರಿಗೆ ಅಗ್ರತಾಂಬೂಲ ಕೊಟ್ಟು ಕರೆಸಿ ಸನ್ಮಾನ ಮಾಡುತ್ತಿತ್ತು. ಎಸ್ಪಿ ಬಾಲಸುಬ್ರಹ್ಮಣ್ಯಂ ಅನೇಕ ಹಾಡುಗಳನ್ನು ಹಿಂದಿಯಲ್ಲಿ ಹಾಡಿದರು ಕೂಡ ಅವರ ಭಾಷೆಯ ಬಗ್ಗೆ ಕೊಂಕು ತೆಗೆಯುತ್ತಿದ್ದರು. ಬಾಲಿವುಡ್ ಮಂದಿ ಪಾಕಿಸ್ತಾನಿಗಳನ್ನು ತಮ್ಮ ಸೋದರ ಸಂಬಂಧಿಗಳೆಂದು ಭಾವಿಸುತ್ತಿದ್ದರು. ಹೀಗಾಗಿಯೇ ಫಹಾದ್ ಖಾನ್, ಮಹಿರಾ ಖಾನ್, ಅಲಿ ಜಾಫರ್ ,ಇಮ್ರಾನ್ ಅಬ್ಬಾಸ್ ಹೀಗೆ ಅನೇಕ ಪಾಕಿಸ್ತಾನಿ ನಾಯಕ ನಟ-ನಟಿಯರಿಗೆ ಭಾರತಕ್ಕೆ ಕರೆದುತಂದು ಅತಿಥಿ ಸತ್ಕಾರವನ್ನು ಕೂಡ ಅದ್ಭುತವಾಗಿ ಮಾಡುತ್ತಿದ್ದರು.

ಬ್ಯಾನ್‌ಗೆ ವಿರೋಧ ವ್ಯಕ್ತಪಡಿಸಿದ್ದ ಬಾಲಿವುಡ್

ಬ್ಯಾನ್‌ಗೆ ವಿರೋಧ ವ್ಯಕ್ತಪಡಿಸಿದ್ದ ಬಾಲಿವುಡ್

'ನಾಯಿ ಬಾಲ ಡೊಂಕು' ಎಂಬಂತೆ ಬಾಲಿವುಡ್ ಮಂದಿ ಕೂಡ ಸಿನಿಮಾಗಳಲ್ಲಿ ದೇಶಭಕ್ತಿಯ ಬಗ್ಗೆ ದೊಡ್ಡದಾಗಿ ಮಾತನಾಡುತ್ತಾರೆ. ಆದರೆ ದೇಶದ ಸುರಕ್ಷತೆಯ ವಿಷಯ ಬಂದಾಗ ಮಾತ್ರ ಅವರ ಡಬಲ್ ಸ್ಟ್ಯಾಂಡರ್ಡ್ ಹೊರಗೆ ಬರುತ್ತದೆ. ಪುಲ್ವಾಮಾ ದಾಳಿ ಅಥವಾ ಉರಿ ಘಟನೆಯ ನಂತರ ಒಂದೆಡೆ ಭಾರತದ ಸೈನಿಕರು ಹುತಾತ್ಮರಾಗಿರುವಾಗ ಪಾಕಿಸ್ತಾನದ ಕಲಾವಿದರನ್ನು ಕರೆದು ತಂದು ಇಂತಹ ಅತಿಥಿ ಸತ್ಕಾರ ಮಾಡುವುದು ಯಾಕೆ? ಎಷ್ಟು ಸರಿ? ಎಂಬ ಭಾರತೀಯರ ಆಗ್ರಹದ ಪ್ರಶ್ನೆಗೆ 'ಕಲಾವಿದರಿಗೆ ಗಡಿಗಳಿಲ್ಲ...' ಎಂಬ ಹಾಸ್ಯಾಸ್ಪದವಾದ ಮತ್ತು ದುರಹಂಕಾರದ ಸಮರ್ಥನೆಯನ್ನು ಕೂಡ ಈ ಬಾಲಿವುಡ್ ಮಂದಿ ಮಾಡಿಕೊಂಡೆ ಬಂದಿದ್ದರು. ನೆನಪಿಡಿ ಇಲ್ಲಿ ಕೆಲಸ ಮಾಡಲು ಬರುತ್ತಿದ್ದ ಯಾವುದೇ ಪಾಕಿಸ್ತಾನಿ ಕಲಾವಿದರು ಈ ಘಟನೆಗಳನ್ನು ಖಂಡಿಸಲಿಲ್ಲ. ಆದರೂ ನಾಚಿಕೆಗೆಟ್ಟ ಬಾಲಿವುಡ್ ಮಂದಿ ಮಾತ್ರ ಪಾಕಿಸ್ತಾನಿಗಳನ್ನು ಬಿಟ್ಟುಕೊಡಲು ಸಿದ್ದರಿರಲಿಲ್ಲ. ಕೊನೆಗೂ ಭಾರತೀಯರ ಆಕ್ರೋಶಕ್ಕೆ ಮಣಿದ ಬಾಲಿವುಡ್ ಮಂದಿ ಕೂಡ ಕೊನೆಗೆ ಪಾಕಿಸ್ತಾನಿ ಕಲಾವಿದರನ್ನು ಸಿನಿಮಾಗಳಿಂದ ಬ್ಯಾನ್ ಮಾಡಿದರು.

'ಬಾಹುಬಲಿ' ಬರೆಯಿತು ಹೊಸ ಇತಿಹಾಸ

'ಬಾಹುಬಲಿ' ಬರೆಯಿತು ಹೊಸ ಇತಿಹಾಸ

ಬಾಹುಬಲಿ ಬಿಡುಗಡೆಗೆ ಮೊದಲು ಸೌತ್ ಸಿನಿಮಾಗಳ ಬಗ್ಗೆ ಅಸಡ್ಡೆ ಪಾಕಿಸ್ತಾನದ ಬಗ್ಗೆ ವಿಶೇಷ ಒಲವು ಹೊಂದಿದ್ದ ಬಾಲಿವುಡ್‌ಗೆ ಬಾಹುಬಲಿ ಯಶಸ್ಸು ದೊಡ್ಡ ಆಘಾತವನ್ನೇ ಉಂಟುಮಾಡಿತು. ಅದರಲ್ಲೂ 'ಬಾಹುಬಲಿ -2' ಚಿತ್ರ 2000 ಕೋಟಿ ಹಣ ಗಳಿಕೆ ಮಾಡಿ ಹೊಸ ಇತಿಹಾಸ ಸೃಷ್ಟಿ ಮಾಡಿದ ಮೇಲೆ ಬಾಲಿವುಡ್ ಮಂದಿ ಅಕ್ಷರಶಃ ಕುಸಿದು ಹೋಗಿದ್ದಾರೆ. 'ಕೆಜಿಎಫ್' ಚಿತ್ರದ ಮುಂದೆ ಬಾಲಿವುಡ್ ಬಾದಶಾ ಅಂತ ಕರೆಸಿಕೊಳ್ಳುವ ಶಾರುಖ್ ಖಾನ್ ಚಿತ್ರ 'ಜೀರೋ' ಜೀರೋ ಆಗಿತ್ತು. 'ಕೆಜಿಎಫ್ 2' ಚಿತ್ರದ ಮುಂದೆ ಅಮೀರ್ ಖಾನ್ ನ 'ಲಾಲ್ ಸಿಂಗ್ ಚಡ್ಡಾ' ಗತಿ ಏನು ಅಂತ ಈಗ ಇದೇ ಬಾಲಿವುಡ್ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

ಸೌತ್ ಚಿತ್ರಗಳದ್ದೇ ಹವಾ

ಸೌತ್ ಚಿತ್ರಗಳದ್ದೇ ಹವಾ

ಒಂದೆಡೆ ಸೌತ್‌ನ ಭಾರಿ ಬಜೆಟ್ಟಿನ ಸಿನಿಮಾಗಳ ನೇರ ಲಗ್ಗೆ, ಇನ್ನೊಂದೆಡೆ ಸೌತ್‌ನ ಸೂಪರ್ ಹಿಟ್ ಚಿತ್ರಗಳ ರಿಮೇಕ್‌ಗಳು, ಅವುಗಳ ನಿರ್ದೇಶನಕ್ಕೆ ಮೂಲ ಭಾಷೆಯ ಚಿತ್ರ ನಿರ್ದೇಶಕರಿಗೆ ಆಹ್ವಾನ ನೀಡುತ್ತಿದ್ದಾರೆ. ಕಳೆದ ಆರು ವರ್ಷಗಳಿಂದ ಯಾವುದೇ ಒಂದು ದೊಡ್ಡ ಹಿಟ್ ಚಿತ್ರವಿಲ್ಲದ ಶಾರುಖ್ ಖಾನ್ ಈಗ ಕೊನೆಗೆ ಮೊರೆ ಹೋಗಿರುವುದು ತಮಿಳಿನ ಅಟ್ಲಿ ಎಂಬ ನಿರ್ದೇಶಕನಿಗೆ. ಸತತವಾದ ಸೋಲುಗಳಿಂದ ಮನೆ ಸೇರಿದ್ದ ಸಲ್ಮಾನ್ ಖಾನ್ ವಾಪಸ್ ಸ್ಟಾರ್ ನಟನಾಗಿ ವಾಪಸ್ ಬಂದಿದ್ದು ರಿಮೇಕ್ ಗಳ ಮೂಲಕವೇ. ಪ್ರಸ್ತುತ ಬಾಲಿವುಡ್ ನಲ್ಲಿ ಸೌತ್ ಚಿತ್ರಗಳು ಇಲ್ಲ ಸೌತ್ ನಿರ್ದೇಶಕರು ಅಥವಾ ಸೌತ್ ರಿಮೇಕ್ ಗಳದೆ ಹವಾ.

ಪ್ರಭಾಸ್ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್

ಪ್ರಭಾಸ್ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್

ಪ್ರಸ್ತುತ ಭಾರತೀಯ ಸಿನಿಮಾರಂಗದ ಅತಿದೊಡ್ಡ ಸ್ಟಾರ್ ಅಂದರೆ ಅದು ಪ್ರಭಾಸ್. ಭಾರತೀಯ ಸಿನಿಮಾ ರಂಗದ ಮೊಟ್ಟಮೊದಲ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್. ಪ್ರಸ್ತುತ ಸಿನಿಮಾವೊಂದಕ್ಕೆ 150 ಕೋಟಿ ಪಡೆಯುತ್ತಿರುವ ಪ್ರಭಾಸ್ ಭಾರತದಲ್ಲಿ ಅತಿ ಹೆಚ್ಚು ಹಣ ಪಡೆಯುವ ಸ್ಟಾರ್. ಪ್ರಭಾಸ್ ಅಭಿನಯದ 'ಪ್ರಾಜೆಕ್ಟ್- ಕೆ' ಭಾರತೀಯ ಸಿನಿಮಾ ರಂಗದಲ್ಲಿ ಅತಿ ಹೆಚ್ಚು ಹಣ ಹೂಡಿಕೆ ಮಾಡುತ್ತಿರುವ ಚಿತ್ರ. ಇದು ಕೇವಲ ಭಾರತೀಯ ಭಾಷೆಗಳಲ್ಲಿ ಮಾತ್ರವಲ್ಲದೆ ಹಾಲಿವುಡ್ನಲ್ಲಿ ಕೂಡ ನಿರ್ಮಾಣವಾಗುತ್ತಿರುವ ಸೈನ್ಸ್ ಫಿಕ್ಷನ್ ಚಿತ್ರ. ಅಂದಹಾಗೆ ಈ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸುತ್ತಿರುವುದು ತೆಲುಗಿನ ನಾಗ್ ಅಶ್ವಿನ್.

ಯಶ್‌ಗೆ ಸಿಕ್ಕಾಪಟ್ಟೆ ಕ್ರೇಜ್

ಯಶ್‌ಗೆ ಸಿಕ್ಕಾಪಟ್ಟೆ ಕ್ರೇಜ್

ಪ್ರಭಾಸ್ ನಂತರ ಭಾರತೀಯ ಸಿನಿಮಾ ರಂಗದಲ್ಲಿ ಮತ್ತೊಬ್ಬ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಅಂದರೆ ಅದು ಕನ್ನಡದ ಯಶ್. ಬಾಲಿವುಡ್ ಸ್ಟಾರ್ ನಟರಗಳಿಗೂ ಮೀರಿದ ಕ್ರೇಜ್ ಈ ದಿನ ಅವರಿಗೆ ಭಾರತದಲ್ಲಿದೆ. 'ಕೆಜಿಎಫ್ -2' ಚಿತ್ರ ಬಿಡುಗಡೆ ಆದ ಮೇಲೆ ಅದು ದುಪ್ಪಟ್ಟಾಗುತ್ತದೆ. ಇದನ್ನು ಗ್ರಹಿಸಿರುವ ಯಶ್ ರಾಜ್ ಸಿನಿಮಾ ಅಂತಹ ಬಾಲಿವುಡ್ ದೊಡ್ಡ ಸಿನಿಮಾ ಹೌಸ್‌ಗಳು ಯಶ್ ಅವರನ್ನು ಮುಂದಿನ ಸಿನಿಮಾಗಾಗಿ ಸಂಪರ್ಕಿಸಿದ್ದು ಇದೆ. ಆದರೆ ಇದನ್ನು ಚೆನ್ನಾಗಿ ಗ್ರಹಿಸಿರುವ ಯಶ್ ಅವರು ನಯವಾಗಿಯೇ ಅಂತ ಆಫರ್‌ಗಳನ್ನು ತಿರಸ್ಕರಿಸಿದ್ದಾರೆ.

ಬಾಲಿವುಡ್‌ಗೆ ಬೇಕು ಈಗ ಸೌತ್ ನಟ- ನಿರ್ದೇಶಕರು

ಬಾಲಿವುಡ್‌ಗೆ ಬೇಕು ಈಗ ಸೌತ್ ನಟ- ನಿರ್ದೇಶಕರು

ಪ್ರಭಾಸ್, ಯಶ್, ರಾಮ್ ಚರಣ್, ಜೂನಿಯರ್ ಎನ್ಟಿಆರ್, ಅಲ್ಲು ಅರ್ಜುನ್ ಇವರೆಲ್ಲ ಈಗ ಕೇವಲ ಸೌತ್ ಸ್ಟಾರ್ಗಳಾಗಿ ಉಳಿದಿಲ್ಲ. ಇವರ ಚಿತ್ರ ಬಿಡುಗಡೆಯಾದರೆ ಅದು ಇಡೀ ದೇಶದಲ್ಲಿ ಸುದ್ದಿಯಾಗುತ್ತದೆ.ಬಾಲಿವುಡ್ ಚಿತ್ರಗಳು ಇವರ ಚಿತ್ರಗಳನ್ನು ನೋಡಿಕೊಂಡು ತಮ್ಮ ಚಿತ್ರಗಳ ಬಿಡುಗಡೆ ದಿನಾಂಕವನ್ನು ನಿಗದಿ ಮಾಡಿಕೊಳ್ಳುತ್ತವೆ. ಇನ್ನು ಎಸ್.ಎಸ್ .ರಾಜಮೌಳಿ, ಶಂಕರ್, ಪ್ರಶಾಂತ್ ನೀಲ್ ಇಂತಹ ನಿರ್ದೇಶಕರ ಚಿತ್ರಗಳು ಎಂದರೆ ಬಾಲಿವುಡ್ ಮಂದಿ ಕನಸಲ್ಲೂ ಭಯ ಬೀಳುತ್ತಿದ್ದಾರೆ. ಉತ್ತರ ಭಾರತದಲ್ಲಿನ ಪ್ರೇಕ್ಷಕವರ್ಗ ಈಗ ಸಂಪೂರ್ಣವಾಗಿ ಸೌತ್ ಚಿತ್ರಗಳನ್ನು ಇಷ್ಟಪಡುತ್ತಿದೆ. ಸೌತ್ ಚಿತ್ರಗಳ ಮೇಕಿಂಗ್, ಕಥಾವಸ್ತು ಇದೆಲ್ಲವೂ ಕೂಡ ಬಾಲಿವುಡ್‌ಗಿಂತ ಭಿನ್ನವಾಗಿದೆ. ಸೌತ್ ಚಿತ್ರಗಳ ಮುಂದೆ ಈಗ ಬಾಲಿವುಡ್ ಚಿತ್ರಗಳು ಮಂಕು ಅನಿಸಲಿಕ್ಕೆ ಶುರುವಾಗಿದೆ. ಹೀಗಾಗಿಯೇ ಈಗ ಬಾಲಿವುಡ್ ಮಂದಿ ತಮ್ಮ ಮುಂದಿನ ಚಿತ್ರಗಳಿಗಾಗಿ ನಟರನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಪ್ರಭಾಸ್ 'ಆದಿಪುರುಷ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಯಶ್ ಕಾಲ್ ಶೀಟ್ ಗಾಗಿ ಬಾಲಿವುಡ್ ಮಂದಿ ಕ್ಯೂ ಕಟ್ಟಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ತಮ್ಮ ಮುಂದಿನ ಚಿತ್ರಕ್ಕಾಗಿ ಎನ್ ಟಿ ಆರ್ ಕಾಲ್ ಶೀಟ್‌ಗಾಗಿ ಕಾಯುತ್ತಿದ್ದಾರೆ. ಕರಣ್ ಜೋಹರ್, ವಿಜಯ್ ದೇವರಕೊಂಡ ಜೊತೆ ಚಿತ್ರ ಮಾಡುತ್ತಿದ್ದಾರೆ. ಅಲ್ಲು ಅರ್ಜುನ್‌ಗಾಗಿ ಬಾಲಿವುಡ್ ನಿರ್ಮಾಪಕರು ಎದುರು ನೋಡುತ್ತಿದ್ದಾರೆ. ಒಟ್ಟಿನಲ್ಲಿ ಒಂದು ಕಾಲದಲ್ಲಿ ಬಾಲಿವುಡ್ ಯಾವ ದಕ್ಷಿಣ ಭಾರತವನ್ನು ಕಡೆಗಣಿಸಿತ್ತು ಎಂದು ಅದರ ಮುಂದೆಯೇ ಸೋತು ಸುಣ್ಣವಾಗಿ ನಿಂತಿದೆ. ಬಾಲಿವುಡ್‌ನ ಯಾವ ಸ್ಟಾರ್‌ಗಳಿಗೂ ಸರಿಯಾದ ಹಿಟ್ ಚಿತ್ರಗಳಿಲ್ಲ. ಇನ್ನೊಂದೆಡೆ ಸೌತ್ ಸಿನಿಮಾಗಳು ಪ್ಯಾನ್ ಇಂಡಿಯಾ ಹೆಸರಿನಲ್ಲಿ ಇಡೀ ದೇಶವನ್ನೇ ಆವರಿಸಿಕೊಳ್ಳುತ್ತಿದೆ. ಮುಂಬರುವ ದಿನಗಳಲ್ಲಿ ಒಟ್ಟಾರೆ ಬಾಲಿವುಡ್‌ನಲ್ಲಿ ಸಂಪೂರ್ಣವಾಗಿ ಸೌತ್ ಚಿತ್ರಗಳದ್ದೇ ಕಾರುಬಾರು.

More from Filmibeat

English summary
Bollywood facing tough computation from South's pan India movies. South India movies has huge demand across India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X