ಮೊದಲ ಲೇಡಿ ಸೂಪರ್ ಸ್ಟಾರ್ ವೈಜಯಂತಿಮಾಲಾ ಸಿನಿ ಜೀವನದ ರೋಚಕ ಕಥೆ

ವೈಜಯಂತಿ ಮಾಲಾ ಭಾರತೀಯ ಚಿತ್ರರಂಗ ಕಂಡ ಅದ್ಭುತ ನಟಿ. 50-60ರ ದಶಕದಲ್ಲಿ ಚಿತ್ರರಂಗವನ್ನಾಳಿದ ವೈಜಯಂತಿ ಮಾಲಾ ಭಾರತೀಯ ಚಿತ್ರರಂಗದ ಮೊದಲ ಲೇಡಿ ಸೂಪರ್ ಸ್ಟಾರ್ ಅಂತಲೇ ಫೇಮಸ್. ಅಂದಿನ ಕಾಲದ ಬಾಲಿವುಡ್ ನ ಘಟಾನುಘಟಿ ನಟರಾದ ರಾಜ್ ಕಪೂರ್, ದಿಲೀಪ್ ಕುಮಾರ್, ಕಿಶೋರ್ ಕುಮಾರ್ ಜೊತೆ ಅಭಿನಯಿಸಿ ಸೈ ಎನಿಸಿಕೊಂಡ ನಟಿ. ದಕ್ಷಿಣ ಭಾರತದ ಈ ಸುಂದರಿ ಹಿಂದಿ ಚಿತ್ರರಂಗ ಆಳಿದ ಕಥೆಯೇ ರೋಚಕವಾಗಿದೆ.

1940 ರಿಂದ 1970ರ ಕಾಲಘಟ್ಟ ವೈಜಯಂತಿ ಮಾಲಾ ಪಾಲಿಗೆ ಸುವರ್ಣಯುಗ. ದಕ್ಷಿಣದಿಂದ ಬಾಲಿವುಡ್ ಕಡೆ ಪಯಣ ಬೆಳೆಸಿ, ಟಾಪ್ ನಟಿಯಾಗಿ ಮೆರೆದ ಖ್ಯಾತಿ ವೈಜಯಂತಿ ಮಾಲಾ ಅವರದ್ದು. ಘಟಾನುಘಟಿ ನಾಯಕ ನಾಯಕಿಯರ ಮಧ್ಯೆ ದಶಕಗಳ ಕಾಲ ವರ್ಚಸ್ಸು ಬೆಳೆಸಿಕೊಂಡು, ಉಳಿಸಿಕೊಂಡು ದಶಕಗಳ ಚಿತ್ರರಂಗವನ್ನಾಳಿದ ಸಾಧನೆ ಕಮ್ಮಿ ಏನಲ್ಲ. ತಮಿಳು ಚಿತ್ರರಂಗದಲ್ಲಿ ವೈಜಯಂತಿ ಮಾಲಾ ಎರಡೇ ಸಿನಿಮಾ ಮಾಡುತ್ತಿದಂತೆಯೇ ಬಾಲಿವುಡ್ ನ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಪಡೆದುಕೊಳ್ಳುತ್ತಾರೆ.

ತಮಿಳುನಾಡು ಮೂಲಕ ನಟಿ

ತಮಿಳುನಾಡು ಮೂಲಕ ನಟಿ

ವೈಜಯಂತಿ ಮಾಲಾ ಎನ್ನುವ ಈ ಸುರಸುಂದರಿ ಹುಟ್ಟಿದ್ದು ತಮಿಳಿನಾಡಿನ ಟ್ರಿಪ್ಲಿಕೇನ್ ನಲ್ಲಿ. ತಾಯಿ ಖ್ಯಾತ ನಟಿ ವಸುಂಧರ ದೇವಿ. ಹಾಗಾಗಿ ವೈಜಯಂತಿ ಅವರಿಗೆ ಬಣ್ಣದ ಲೋಕದ ನಂಟು ಬಾಲ್ಯದಿಂದಲೇ ಇತ್ತು. ಅಭಿನಯದ ಜೊತೆಗೆ ವೈಜಯಂತಿ ಅದ್ಭುತ ಡ್ಯಾನ್ಸರ್. ಡ್ಯಾನ್ಸ್ ಮೂಲಕವೇ ಇಂಪ್ರೆಸ್ ಮಾಡಿದ್ದ ವೈಜಯಂತಿ 15ನೇ ವಯಸ್ಸಿನಲ್ಲಿಯೆ ಶಾಲೆಗೆ ಹೋಗುತ್ತಿರುವಾಗಲೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಾರೆ. ಕುಟುಂಬದ ಸ್ನೇಹಿತರಾಗಿದ್ದ ಎಂ.ವಿ.ರಾಮನ್ ಸಹಕಾರದ ಮೇರೆಗೆ 1949ರಲ್ಲಿ ಮೊದಲ ತಮಿಳು ಚಿತ್ರದಲ್ಲಿ ಅಭಿನಯಿಸುತ್ತಾರೆ. 'ವಾಳ್ಕೈ' ಚಿತ್ರದ ಮೂಲಕ ಮೊದಲ ಬಾರಿಗೆ ಕ್ಯಾಮರಾ ಫೇಸ್ ಮಾಡುತ್ತಾರೆ. ಮೊದಲ ಚಿತ್ರ ಸೂಪರ್ ಡ್ಯೂಪರ್ ಹಿಟ್ ಆಗುತ್ತೆ. ಚೊಚ್ಚಲ ಚಿತ್ರವೇ ಸಕ್ಸಸ್ ಆಗುತ್ತಿದ್ದಂತೆ ತೆಲುಗು ಚಿತ್ರರಂಗಕ್ಕೆ ಎಂಟ್ರಿಕೊಡುತ್ತಾರೆ. ಜೀವಿತಂ ಸಿನಿಮಾದ ಮೂಲಕ ತೆಲುಗು ಚಿತ್ರರಂಗದಲ್ಲೂ ಖಾತೆ ತೆರೆಯುತ್ತಾರೆ.

ಬಾಲಿವುಡ್ ಎಂಟ್ರಿ

ಬಾಲಿವುಡ್ ಎಂಟ್ರಿ

ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಒಂದೊಂದು ಸಿನಿಮಾ ಮಾಡುತ್ತಿದ್ದಂತೆ ಬಾಲಿವುಡ್ ಚಿತ್ರರಂಗ ಕೈ ಬೀಸಿ ಕರೆಯಿತು. ತಮಿಳಿನಲ್ಲಿ ಸೂಪರ್ ಹಿಟ್ ಆಗಿದ್ದ ಮೊದಲ ಚಿತ್ರ 'ವಾಳ್ಕೈ' ಹಿಂದಿ ರಿಮೇಕ್ ನಲ್ಲಿ ವೈಜಯಂತಿ ಮಾಲಾ ಬಣ್ಣ ಹಚ್ಚುವ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಡುತ್ತಾರೆ. ಹಿಂದಿಯಲ್ಲಿ 'ಬಹಾರ್' ಹೆಸರಿನಲ್ಲಿ ಸಿನಿಮಾ ರಿಲೀಸ್ ಆಗುತ್ತೆ. ತಮಿಳು ಚಿತ್ರದಂತೆ 'ಬಹಾರ್' ಕೂಡ ದೊಡ್ಡ ಮಟ್ಟಕ್ಕೆ ಯಶಸ್ಸು ಕಾಣುತ್ತೆ. ಆ ನಂತರ ವೈಜಯಂತಿ ಬಾಲಿವುಡ್ ನಲ್ಲಿ ಖಾಯಂ ಆಗಿ ನೆಲೆಯೂರುತ್ತಾರೆ. ಅಭಿನಯದ ಜೊತೆಗೆ ಅದ್ಭುತ ಭರತನಾಟ್ಯ ಕಲಾವಿದೆಯಾಗಿದ್ದ ವೈಜಯಂತಿ ಮಾಲಾಗೆ ಅವಕಾಶಗಳು ಹಾಗೆ ಅರಸಿ ಬರುತ್ತಿದ್ದವು. 60-65ರ ದಶಕದಲ್ಲಿ ಬಾಲಿವುಡ್ ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಎನ್ನುವ ಖ್ಯಾತಿಗಳಿಸಿದ್ದರು.

ಅಫೇರ್ಸ್

ಅಫೇರ್ಸ್

ನಟಿಮಣಿಯರ ವೃತ್ತಿ ಬದುಕಿನಲ್ಲಿ ರೂಮರ್ಸ್, ಗಾಸಿಪ್ ಎಲ್ಲಾ ಸಾಮಾನ್ಯ. ಇದರಿಂದ ವೈಜಯಂತಿ ಮಾಲಾ ಏನು ಹೊರತಾಗಿಲ್ಲ. ಬಾಲಿವುಡ್ ನ ಖ್ಯಾತ ನಟ ರಾಜ್ ಕಪೂರ್ ಜೊತೆ ವೈಜಯಂತಿ ಹೆಸರು ಜೋರಾಗಿ ಕೇಳಿ ಬಂದಿತ್ತು. ಎಷ್ಟರ ಮಟ್ಟಿಗೆ ಎಂದರೆ ವೈಜಯಂತಿ, ರಾಜ್ ಕಪೂರ್ ಅವರನ್ನೇ ಮದುವೆಯಾಗುತ್ತಾರೆ ಎಂದು ಹೇಳಲಾಗುತ್ತಿತ್ತು. ಈ ಸುದ್ದಿಯಿಂದ ರಾಜ್ ಕಪೂರ್ ಪತ್ನಿ ಮತ್ತು ಮಕ್ಕಳು ಮನೆ ಬಿಟ್ಟು ಹೋಗಿದ್ರು ಎಂದು ಹೇಳಲಾಗುತ್ತೆ.

ಮದುವೆ

ಮದುವೆ

ವೈಜಯಂತಿ ಮಾಲಾ ಮತ್ತು ರಾಜ್ ಕಪೂರ್ ಹೆಸರು ಜೋರಾಗಿ ಸದ್ದು ಮಾಡುತ್ತಿದ್ದ ಸಮಯದಲ್ಲಿ ವೈಜಯಂತಿ, ರಾಜ್ ಕಪೂರ್ ಕುಟುಂಬದ ವೈದ್ಯ ಚಮನ್ ಲಾಲ್ ಬಾಲಿ ಜೊತೆ ಪ್ರೀತಿಯಲ್ಲಿ ಬೀಳುತ್ತಾರೆ. ಶೂಟಿಂಗ್ ಸಮಯದಲ್ಲಿ ವೈಜಯಂತಿ ಆಕಸ್ಮಿಕವಾಗಿ ಜಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದ ಸಮಯದಲ್ಲಿ ಚಿಕಿತ್ಸೆ ನೀಡಿದ್ದ ವೈದ್ಯ ಚಮನ್ ಲಾಲ್ ಬಾಲಿ ಅವರನ್ನೇ ಪ್ರೀತಿಸಲು ಪ್ರಾರಂಭಿಸುತ್ತಾರೆ. ನಂತರ ಇಬ್ಬರು ಹಸೆಮಣೆ ಏರುತ್ತಾರೆ. ಮದುವೆ ನಂತರ ಇಬ್ಬರು ಚೆನ್ನೈಗೆ ಬಂದು ನೆಲೆಸುತ್ತಾರೆ. ಈ ದಂಪತಿಗೆ ಒಂದು ಮಗು ಕೂಡ ಆಗುತ್ತೆ.

ರಾಜಕೀಯ ಎಂಟ್ರಿ

ರಾಜಕೀಯ ಎಂಟ್ರಿ

ಅಭಿನಯ, ಡ್ಯಾನ್ಸಿಂಗ್ ಜೊತೆಗೆ ವೈಜಯಂತಿ ಮಾಲಾ ರಾಜಕೀಯ ಕ್ಷೇತ್ರದಲ್ಲೂ ಚಾಪು ಮೂಡಿಸಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕಾಲದಲ್ಲಿ ವೈಜಯಂತಿ ಕಾಂಗ್ರೆಸ್ ಪಕ್ಷ ಸೇರಿಕೊಳ್ಳುತ್ತಾರೆ. ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ. ನಂತರ 1999ರಲ್ಲಿ ರಾಜಿನಾಮೆ ನೀಡುತ್ತಾರೆ. ರಾಜಕೀಯ ಜೊತೆಗೆ ವೈಜಯಂತಿ ಉತ್ತಮ ಗಾಲ್ಫ್ ಆಟಗಾರ್ತಿ ಕೂಡ ಹೌದು. ಪತಿ ಬಾಲಿಯಿಂದ ಗಾಲ್ಫ್ ಕೂಡ ಕಲಿತಿದ್ದಾರೆ.

ಫಿಲ್ಮ್ ಫೇರ್ ಪ್ರಶಸ್ತಿ ತಿರಸ್ಕರಿಸಿದ್ದ ನಟಿ

ಫಿಲ್ಮ್ ಫೇರ್ ಪ್ರಶಸ್ತಿ ತಿರಸ್ಕರಿಸಿದ್ದ ನಟಿ

1955ರಲ್ಲಿ 'ದೇವದಾಸ್' ಚಿತ್ರಕ್ಕೆ ವೈಜಯಂತಿ ಮಾಲಾಗೆ ಅತ್ಯುತ್ತಮ ಪೋಷಕ ನಟಿ ಫಿಲ್ಮ್ ಫೇರ್ ಪ್ರಶಸ್ತಿ ಲಭಿಸುತ್ತೆ. ಆದ್ರೆ ಆ ಪ್ರಶಸ್ತಿಯನ್ನು ತಿರಸ್ಕರಿಸುತ್ತಾರೆ. "ಈ ಚಿತ್ರದಲ್ಲಿ ನಾಯಕಿ ಪಾತ್ರಕ್ಕಿಂತ ನನ್ನ ಪಾತ್ರಕ್ಕೆ ಮಹತ್ವ ಜಾಸ್ತಿಯಿದೆ, ಪೋಷಕ ನಟಿ ಅಲ್ಲ" ಎಂದು ಹೇಳಿ ಪ್ರಶಸ್ತಿ ನಿರಾಕರಿಸಿದ್ದರು. ವೈಜಯಂತಿ ಮಾಲಾ ಬಾಲಿವುಡ್ ಪಯಣ ದಕ್ಷಿಣ ಭಾರತದ ಅನೇಕ ನಟಿಯರಿಗೆ ಸ್ಫೂರ್ತಿಯಾಗಿದ್ದಾರೆ. ವೈಜಯಂತಿ ಹಾದಿಯಲ್ಲಿಯೆ ನಟಿ ಹೇಮಾ ಮಾಲಿನಿ, ರೇಖಾ, ಶ್ರೀದೇವಿ ಸೇರಿದಂತೆ ಅನೇಕ ನಟಿಯರು ಬಾಲಿವುಡ್ ಕಡೆ ಪಯಣ ಬೆಳೆಸುತ್ತಾರೆ.

ಪ್ರಸಿದ್ಧ ಸಿನಿಮಾಗಳು

ಪ್ರಸಿದ್ಧ ಸಿನಿಮಾಗಳು

ವೈಜಯಂತಿ ಮಾಲಾ 1949ರಿಂದ 1989ವರೆಗೂ ಬಣ್ಣದ ಲೋಕದಲ್ಲಿ ಮಿಂಚಿದ್ದಾರೆ. ಸುಮಾರು ಮೂರು ದಶಕಕ್ಕೂ ಹೆಚ್ಚು ಕಾಲ ನಿರಂತರ ಕಲಾಸೇವೆ ಮಾಡಿಕೊಂಡು ಬಂದಿರುವ ವೈಜಯಂತಿ ಮಾಲಾ 62ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಕೋಟ್ಯಂತರ ಅಭಿಮಾನಿಗಳನ್ನು ರಂಜಿಸಿದ್ದಾರೆ. ದೇವದಾಸ್, ಸಾದ್ನಾ, ಗಂಗಾ ಜಮುನಾ, ಸಂಗಂ ಚಿತ್ರಗಳು ವೈಜಯಂತಿ ಮಾಲಾ ಚಿತ್ರ ಬದುಕಿನ ಅತ್ಯುನ್ನತ ಚಿತ್ರಗಳು.

ಈಗ ಎಲ್ಲಿದ್ದಾರೆ ಈಗ ವೈಜಯಂತಿ ಮಾಲಾ

ಈಗ ಎಲ್ಲಿದ್ದಾರೆ ಈಗ ವೈಜಯಂತಿ ಮಾಲಾ

1970ರಲ್ಲಿ ವೈಜಯಂತಿಮಾಲಾ ಕೊನೆಯದಾಗಿ ನಾಯಕ ನಟಿಯಾಗಿ ಬಣ್ಣಹಚ್ಚುತ್ತಾರೆ. ಗನ್ವಾರ್ ಸಿನಿಮಾದ ನಂತರ ವೈಜಯಂತಿಮಾಲಾ ಪೋಷಕನಟಿಯಾಗಿ ಅನೇಕ ಸಿನಿಮಾದಲ್ಲಿ ಮಿಂಚಿದ್ದಾರೆ. ಸಿನಿಮಾ ನಿರ್ಮಾಣ ಕೂಡ ಮಾಡಿದ್ದಾರೆ. ಪತಿ ಬಾಲಿಯನ್ನು ಕಳೆದುಕೊಂಡಿರುವ ವೈಜಯಂತಿ, ಮಕ್ಕಳು ಮತ್ತು ಮೊಮ್ಮಕ್ಕಳ ಜೊತೆ ಆರಾಮಾಗಿದ್ದಾರೆ. ಸದ್ಯ ವೈಜಯಂತಿ ಚೆನ್ನೈನಲ್ಲಿ ನೆಲೆಸಿದ್ದಾರೆ. ಆಗಾಗ ಮುಂಬೈಗೆ ಬಂದು ಹೋಗುತ್ತಿರುತ್ತಾರೆ. ಎಷ್ಟೊ ಜನರಿಗೆ ವೈಜಯಂತಿ ಮಾಲಾ ಬದುಕಿದ್ದಾರೆ ಎನ್ನುವ ಮಾಹಿತಿಯೆ ಇಲ್ಲ. ಯಾಕಂದ್ರೆ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ.

More from Filmibeat

English summary
Bollywood famous senior Actress Actress Vyjayanthimala film journey.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X