ಅಂದು ಮಹೇಶ್ ಬಾಬು, ನಾಗ ಚೈತನ್ಯ ಸಿನಿಮಾಗಳಲ್ಲಿ ಬಾಲನಟಿ: ಇಂದು ಹಾಲಿವುಡ್‌ನಲ್ಲಿ ಬೇಡಿಕೆಯ ನಟಿ!

ಇತ್ತೀಚೆಗೆ ಹಾಲಿವುಡ್‌ನ 'ಮೀನ್ ಗರ್ಲ್ಸ್' ಬಿಡುಗಡೆಯಾಗಿದ್ದು, ಇದರಲ್ಲಿ ಭಾರತೀಯರ ಗಮನ ಸೆಳೆದಿದ್ದಾರೆ ಒಬ್ಬ ನಟಿ. ಸೋಶಿಯಲ್ ಮಿಡಿಯಾದಲ್ಲಿ ಆಕೆಯ ಫೋಟೋ ಮತ್ತು ಹೆಸರು ಸಕತ್ ವೈರಲ್ ಕೂಡ ಆಗುತ್ತಿದೆ. ನಟಿಯ ಬಾಲ್ಯದ ಫೋಟೋಗಳಲ್ಲಿ ಟಾಲಿವುಡ್‌ನ ದೊಡ್ಡ ದೊಡ್ಡ ಸ್ಟಾರ್ ನಟರಿರುವುದು ನೆಟ್ಟಿಗರಿಗೆ ಸಕತ್ ಆಶ್ಚರ್ಯ ಉಂಟುಮಾಡಿದೆ. ಎಸ್... ಆಕೆಯೇ ಅವಂತಿಕಾ ವಂದನಾಪು.. ಒಂದು ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಬಾಲನಟಿಯಾಗಿದ್ದ ಈಕೆ ಈಗ ಹಾಲಿವುಡ್ ನಟಿ!.

ತೆಲುಗು ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿರುವ ಅವಂತಿಕಾ ವಂದನಾಪು, ದೂರದರ್ಶನದಲ್ಲಿ ಕೆಲವು ಜಾಹೀರಾತುಗಳ ಮೂಲಕ ಸಕತ್ ಫೇಮ್ ಗಳಿಸಿದ್ದರು. ಆ ನಂತರ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಬ್ರಹ್ಮೋತ್ಸವಂ ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದ್ದರು. ನಂತರ ತೆಲುಗು ಚಿತ್ರರಂಗದಲ್ಲಿ ಪ್ರೇಮಂ, ರಾರಂಡೋಯ್ ವೆಕೆರ ಛಮ್ಡಾ, ಅಜ್ಞಾತವಾಸಿ ಸೇರಿದಂತೆ ಹೆಚ್ಚಿನ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಹಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

 Brahmotsavam to Mean Girls: See Hollywood Actress Avantika Vandanapu’s transformation

ಹಾಲಿವುಡ್‌ನಲ್ಲಿ ಸಕತ್ ಬ್ಯುಸಿ ಈ ಟಾಲಿವುಡ್ ಬಾಲನಟಿ!

ನಟಿ ಅವಂತಿಕಾ ವಂದನಾಪು ಇತ್ತೀಚೆಗೆ 'ಮೀನ್ ಗರ್ಲ್ಸ್‌'ನಲ್ಲಿ ಅಮಂಡಾ ಸೆಫ್ರಿಡ್‌ನ ಕರೆನ್ ಸ್ಮಿತ್‌ನ 2.0 ವರ್ಶನ್ ಆದ ಕರೆನ್ ಶೆಟ್ಟಿ ಪಾತ್ರವನ್ನು ನಿರ್ವಹಿಸಿದ್ದಾರೆ. ಆಕೆಯ ಫೋಟೋ ಮತ್ತು ಪೋಸ್ಟರ್‌ಗಳು ಭಾರತದಲ್ಲೂ ಸಕತ್ ವೈರಲ್ ಆಗುತ್ತಿವೆ. ಈ ಹಿಂದೆ ಮಹೇಶ್ ಬಾಬು ಅವರ ಬ್ರಹ್ಮೋತ್ಸವಂ, ನಾಗ ಚೈತನ್ಯ ಅವರ ಪ್ರೇಮಂ ಮತ್ತು ಪವನ್ ಕಲ್ಯಾಣ್ ಅವರ ಅಜ್ಞಾತವಾಸಿ ಚಿತ್ರಗಳಲ್ಲಿ ನಟಿಸಿದ್ದ ಅವರ ಫೋಟೋಗಳು ವೈರಲ್ ಆಗುತ್ತಿವೆ.

ಅವಂತಿಕಾ ವಂದನಾಪು ಈಗ ಹಾಲಿವುಡ್ ಇಂಡಸ್ಟ್ರಿಯಲ್ಲಿ ಸಕತ್ ಬ್ಯುಸಿ ಇರುವ ನಟಿಯರಲ್ಲಿ ಒಬ್ಬರು. ಮೀನ್ ಗರ್ಲ್ಸ್ ಚಿತ್ರದಲ್ಲಿ ಕರೆನ್ ಶೆಟ್ಟಿ ಪಾತ್ರ ಸಕತ್ ಚರ್ಚೆಯಾಗುತ್ತಿದ್ದು. ಅವರ ಅಭಿನಯವನ್ನು ಎಲ್ಲರು ಮೆಚ್ಚಿಕೊಂಡಿದ್ದಾರೆ. ಹಾಲಿವುಡ್‌ನಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ. ಈ ಸಿನಿಮಾದ ವಿಶೇಷ ಆಕರ್ಷಣೆ ಆವಂತಿಕಾ ಆಗಿದ್ದು, ಅವರ ಹೆಸರು ಈಗ ಫೇಮಸ್ ಆಗಿದೆ.

ಅವಂತಿಕಾ ವಂದನಪು ಬಾಲ್ಯ ಮತ್ತು ವೃತ್ತಿ ಜೀವನ

ತೆಲುಗು ಕುಟುಂಬಕ್ಕೆ ಸೇರಿದ ಆವಂತಿಕಾ ವಂದನಾಪು 2005ರಲ್ಲಿ ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಜನಿಸಿದರು. ಅಲ್ಲಿಯೇ ತಮ್ಮ ವಿದ್ಯಾಭ್ಯಾಸ ಮಾಡುತ್ತಾ ನಟನೆ ತರಬೇತಿಯನ್ನೂ ತೆಗೆದುಕೊಂಡರು. ಆ ನಂತರ 2016 ರಲ್ಲಿ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಬ್ರಹ್ಮೋತ್ಸವಂ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪರಿಚಯವಾದರು. ಐಶ್ವರ್ಯಾ ರಾಜೇಶ್ ಅವರ 2021 ರ ಭೂಮಿಕಾ ಚಿತ್ರದೊಂದಿಗೆ ತಮಿಳಿಗೂ ಪಾದಾರ್ಪಣೆ ಮಾಡಿದರು.

ಈಗ ಹಾಲಿವುಡ್ ಇಂಡಸ್ಟ್ರಿಯಲ್ಲಿ ಡೈರಿ ಆಫ್ ಫ್ಯೂಚರ್ ಪ್ರೆಸಿಡೆಂಟ್, ಸ್ಪಿನ್ ಮತ್ತು ಸೀನಿಯರ್ ಇಯರ್ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಮೀನ್ ಗರ್ಲ್ಸ್ ಚಿತ್ರಕ್ಕೆ ಹೆಚ್ಚು ಮನ್ನಣೆ ಸಿಕ್ಕಿದೆ. ಎ ಕ್ರೌನ್ ಆಫ್ ವಿಶಸ್ ಜೊತೆಗೆ ಹಲವು ಸಿನಿಮಾ ಆಫರ್‌ಗಳು ಅವರ ಕೈಯಲ್ಲಿವೆ.

 Brahmotsavam to Mean Girls: See Hollywood Actress Avantika Vandanapu’s transformation

ಅವಂತಿಕಾ ಬದಲಾವಣೆ ನೋಡಿ ನೆಟ್ಟಿಗರು ಆಶ್ಚರ್ಯ!

ಇನ್ನು, ಬಾಲ ನಟಿಯ ಬದಲಾವಣೆ ನೋಡಿ ನೆಟಿಗರು ಸಕತ್ ಆಶ್ಚರ್ಯಚಕಿತರಾಗಿದ್ದಾರೆ. ಮಹೇಶ್ ಬಾಬು ನಟನೆಯ ಸಿನಿಮಾದಲ್ಲಿ ನಟಿಸಿದ್ದ ಹುಡುಗಿಯೇ ಈಕೆ..? ಎಂದು ಹಲವರು ಪ್ರಶ್ನೆ ಮಾಡುತ್ತಿದ್ದಾರೆ. "ಇವರು ಪ್ರೇಮಂ ಮತ್ತು ಬ್ರಹ್ಮೋತ್ಸವಂನ ಅದೇ ಹುಡುಗಿ ಎಂಬ ಸತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ" ಎಂದೂ ಅನೇಕರು ಬರೆದುಕೊಂಡಿದ್ದಾರೆ.

ಮತ್ತೊಬ್ಬರು, ಹಾಲಿವುಡ್‌ನಲ್ಲಿ ದೊಡ್ಡ ಹಿಟ್ ಸಿಕ್ಕಿರುವ ಅವರು, ಕನಿಷ್ಠ ಒಂದು ತೆಲುಗು ಚಲನಚಿತ್ರವನ್ನಾದರೂ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ" ಎನ್ನುವ ಮೂಲಕ ತೆಲುಗು ಇಂಡಸ್ಟ್ರಿಯಲ್ಲಿ ಆಕೆಯನ್ನು ನಾಯಕಿಯಾಗಿ ನೋಡುವ ಆಸೆ ವ್ಯಕ್ತಪಡಿಸಿದ್ದಾರೆ.

More from Filmibeat

English summary
Actress Avantika Vandanapu’s transformation from Brahmotsavam to Mean Girls.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X