twitter
    For Quick Alerts
    ALLOW NOTIFICATIONS  
    For Daily Alerts

    ಬಾಡಿಬಿಲ್ಡ್ ಮಾಡಲು 'ಎದೆಹಾಲು' ಬಳಕೆ: ಇದೆಂಥಹಾ ಪ್ರಯೋಗ?

    |

    'ದೇಹದಾರ್ಡ್ಯ', 'ಅಂಗಸೌಷ್ಟವ' ಕೇವಲ ಆರೋಗ್ಯವಾಗಿ ಉಳಿದಿಲ್ಲ. ಅದೀಗ ಕೋಟ್ಯಂತರ ಮೌಲ್ಯದ ಬಹುದೊಡ್ಡ ಉದ್ಯಮ.

    ದೇಹದಾರ್ಡ್ಯ ಅಥವಾ ಬಾಡಿಬಿಲ್ಡಿಂಗ್‌ ಯುವಕರಿಗೆ ಗೀಳಾಗಿ ಪರಿಣಮಿಸಿದೆ. ಬಾಡಿಬಿಲ್ಡಿಂಗ್ ಎಂಬುದು ಆರೋಗ್ಯದ ಹಂತ ದಾಟಿ ಬೇರೆ ಇನ್ನೂ ಏನೇನೋ ಕಾರಣಗಳನ್ನು ತನ್ನ ಸುತ್ತಾ ರೂಪಿಸಿಕೊಂಡಿದೆ.

    ಬಾಡಿಬಿಲ್ಡಿಂಗ್‌ ಎಂಬುದು ಭಾರಿ ಶ್ರಮ, ನೋವು ನುಂಗುವ ಮನೋಶಕ್ತಿ, ಧೃಢತೆ, ಸಮಯಪಾಲನೆ, ಏಕಾಗ್ರತೆ, ಮನೋನಿಗ್ರಹ, ನಿಶ್ಚಯಗಳಂಥಹಾ ಉನ್ನತ ಆದರ್ಶಗಳನ್ನು ಬೇಡುವ ಕಲೆ. ಆದರೆ ಹೊಸ ತಲೆಮಾರಿನ '5ಜಿ' ಯುವಕರು 'ಬಾಡಿ ಬಿಲ್ಡಿಂಗ್' ಅನ್ನು ಅಡ್ಡದಾರಿಯಲ್ಲಿ ಸಾಧಿಸಲು ಯತ್ನಿಸುತ್ತಿರುವುದು ಬಹುತೇಕ ಗೊತ್ತಿರುವ ಸಂಗತಿ.

    ಹಲವು ಸಪ್ಲಿಮೆಂಟ್‌ಗಳನ್ನು ಬಳಸಲಾಗುತ್ತಿದೆ

    ಹಲವು ಸಪ್ಲಿಮೆಂಟ್‌ಗಳನ್ನು ಬಳಸಲಾಗುತ್ತಿದೆ

    ವಿವಿಧ ಮಾದರಿಯ ಡ್ರಗ್ಸ್‌ಗಳು, ನಿಷೇಧಿತ ಪೌಡರ್‌ಗಳ ಬಳಕೆ, ಇಂಜೆಕ್ಷನ್‌ಗಳು ಹೀಗೆ ಅನೈಸರ್ಗಿಕ ವಸ್ತುಗಳನ್ನು ಸೇವಿಸಿ ದೇಹಸೌಷ್ಟವ ಹೆಚ್ಚು ಮಾಡಿಕೊಳ್ಳುತ್ತಿದ್ದಾರೆ ಅನೇಕರು. ಇದರ ಜೊತೆಗೆ ಇತ್ತೀಚೆಗೆ ಬಾಡಿಬಿಲ್ಡಿಂಗ್ ಫೀಲ್ಡ್‌ನಲ್ಲಿ ನಿಧಾನಕ್ಕೆ ಪ್ರಚಲಿತಕ್ಕೆ ಬರುತ್ತಿರುವುದು 'ಎದೆಹಾಲು' ಬಳಕೆ.

    ಬಾಡಿಬಿಲ್ಡಿಂಗ್‌ ಗೆ ಎದೆಹಾಲು ಸೇವನೆ?

    ಬಾಡಿಬಿಲ್ಡಿಂಗ್‌ ಗೆ ಎದೆಹಾಲು ಸೇವನೆ?

    ಹೌದು, ಬಾಡಿಬಿಲ್ಡರ್‌ಗಳು 'ಪರಿಪೂರ್ಣ ಪೋಷಕಾಂಶ' ಎನಿಸಿಕೊಳ್ಳುವ ಎದೆ ಹಾಲನ್ನು ಸೇವಿಸುತ್ತಿದ್ದಾರೆ. ಎದೆ ಹಾಲು ಸೇವಿಸುವುದು ಯಾವುದೇ ನ್ಯೂಟ್ರೀಷನ್ ಪೌಡರ್‌ಗಳು, ಡ್ರಗ್ಸ್‌ಗಳನ್ನು ತೆಗೆದುಕೊಳ್ಳುವುದಕ್ಕಿಂತಲೂ ಎಷ್ಟೋ ಪಾಲು ಉತ್ತಮ ಎಂಬುದು ನಂಬಿಕೆ.

    'ಅನ್‌ವೆಲ್' ಎಂಬ ಡಾಕ್ಯುಮೆಂಟರಿಯಲ್ಲಿ ಉಲ್ಲೇಖ

    'ಅನ್‌ವೆಲ್' ಎಂಬ ಡಾಕ್ಯುಮೆಂಟರಿಯಲ್ಲಿ ಉಲ್ಲೇಖ

    ನೆಟ್‌ಫ್ಲಿಕ್ಸ್‌ನ 'ಅನ್‌ವೆಲ್' ಎಂಬ ಡಾಕ್ಯುಮೆಂಟರಿಯಲ್ಲಿ ಈ ವಿಷಯದ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗಿದೆ. ವಿದೇಶಗಳಲ್ಲಿ ಎದೆಹಾಲು ಮಾರಾಟ ಹೇಗೆ ದೊಡ್ಡ ಉದ್ಯಮವಾಗಿದೆ. ಬಾಡಿಬಿಲ್ಡರ್‌ಗಳು ಹೇಗೆ ಅದನ್ನು ಬಳಸುತ್ತಾರೆ. ಅದರ ಫಲಿತಾಂಶಗಳೇನು? ಅಡ್ಡಪರಿಣಾಮಗಳೇನು ಎಂಬುದರ ಬಗ್ಗೆ ವಿಸ್ತೃತವಾಗಿ ದಾಖಲಿಸಲಾಗಿದೆ.

    ಎದೆಹಾಲು ವ್ಯಾಪಾರ ಕ್ರೌರ್ಯವೆಂದು ಪರಿಗಣಿಸಲಾಗುತ್ತದೆ

    ಎದೆಹಾಲು ವ್ಯಾಪಾರ ಕ್ರೌರ್ಯವೆಂದು ಪರಿಗಣಿಸಲಾಗುತ್ತದೆ

    ತಾಯಿಯ ಎದೆಹಾಲಿನ ಮೇಲೆ ಮಗುವಿಗಷ್ಟೇ ಹಕ್ಕು ಎಂಬುದು ಭಾರತದಲ್ಲಿ ಒಪ್ಪಿತ ಸಾಮಾಜಿಕ ಅಲಿಖಿತ ನಿಯಮ. ಎದೆಹಾಲು ಎಂಬುದು ಪರಮ ಪವಿತ್ರವೆಂಬ ಭಾವನೆ ಭಾರತೀಯರದ್ದು. ಎದೆಹಾಲನ್ನು ಹಣಕ್ಕೆ ಅಳೆಯುವುದು ಕ್ರೌರ್ಯವೆಂದೇ ಪರಿಗಣಿತವಾಗುತ್ತದೆ. ಹೀಗಿದ್ದಾಗ ಬಾಡಿಬಿಲ್ಡಿಂಗ್‌ಗಾಗಿ ಎದೆಹಾಲು ಬಳಸುವುದು ಅನೇಕ ನೈತಿಕ ಪ್ರಶ್ನೆಗಳನ್ನು ಎತ್ತುತ್ತಿದೆ.

    Recommended Video

    Rakesh Adiga spiritual Rap , ಕನ್ನಡಧ Rapperಗಳಿಗೆ ಕಿವಿಮಾತು | Filmibeat Kannada
    'ಈ ರೀತಿಯ ಪ್ರಯೋಗಗಳನ್ನು ಒಪ್ಪಲು ಸಾಧ್ಯವೇ ಇಲ್ಲ'

    'ಈ ರೀತಿಯ ಪ್ರಯೋಗಗಳನ್ನು ಒಪ್ಪಲು ಸಾಧ್ಯವೇ ಇಲ್ಲ'

    ಫಿಲ್ಮೀಬೀಟ್ ಜೊತೆಗೆ ಮಾತನಾಡಿದ ಸೆಲೆಬ್ರಿಟಿ ಜಿಮ್ ಟ್ರೈನರ್ ಶ್ರೀನಿವಾಸ್ ಗೌಡ, 'ಬಾಡಿಬಿಲ್ಡಿಂಗ್‌ ಗೆ ಎದೆಹಾಲು ಬಳಸುತ್ತಾರೆ' ಎಂಬ ಮಾತನ್ನು ಅರಗಿಸಿಕೊಳ್ಳಲೇ ಆಗುವುದಿಲ್ಲ. ಈ ರೀತಿಯ ಪ್ರಯೋಗಗಳನ್ನು ಒಪ್ಪಲು ಸರ್ವತಾ ಸಾಧ್ಯವಿಲ್ಲ ಎಂದರು.

    Read more about: gym ಜಿಮ್
    English summary
    Bodybuilders using breast milk to develop muscles in some countries. In India people may think its a bizarre thing to do.
    Friday, September 11, 2020, 14:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X