ನಾನು ನಂದಿನಿ ಎಂದಿದ್ದ ವಿಕ್ಕಿಪೀಡಿಯಾ ವಿಕಾಸ್ ಗೆ ಪೊಲೀಸರು ಕರೆದಿದ್ದೇಕೆ..?

ಸೋಶಿಯಲ್ ಮೀಡಿಯಾ ಮನುಷ್ಯನನ್ನು ಹೆಚ್ಚು ಕಂಟ್ರೋಲ್ ಮಾಡುತ್ತಿರುವ ಮಾಧ್ಯಮ. ಇದು ಎಷ್ಟರಮಟ್ಟಿಗೆ ಮನುಷ್ಯನಿಗೆ ದಾರಿ ತೋರಿಸುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ದಾರಿಯನ್ನೂ ತಪ್ಪಿಸುತ್ತದೆ. ಇನ್ನು ಈ ವೇದಿಕೆಯ ಮೂಲಕವೇ ಕೇವಲ ಸೆಲೆಬ್ರಿಟಿಗಳಷ್ಟೇ ಅಲ್ಲ ಡಿಜಿಟಲ್ ಇಂಡಿಯಾದ ಅನೇಕರು ಸಮಾಜದ ಅಂಕುಡೊಂಕುಗಳನ್ನು ತಿದ್ದಿ ತೀಡುವ ಕೆಲಸವನ್ನೂ ಮಾಡುತ್ತಿದ್ಧಾರೆ. ಹೀಗೆ ಮಾಡಬೇಡಿ.. ಹಾಗೇ ಮಾಡಬೇಡಿ ಎಂದು ಲೆಕ್ಚರ್ ಮಾಡುತ್ತಾರೆ. ಆದರೆ, ಒಮ್ಮೊಮ್ಮೆ.. ತಾವು ಮಾಡುವ ಪಾಠವನ್ನೂ ಮರೆತು ಸೋಶಿಯಲ್ ಮೀಡಿಯಾದಲ್ಲಿ ನಗೆಪಾಟಲಿಗೀಡಾಗುತ್ತಾರೆ. ಇದಕ್ಕೆ ವಿಕ್ಕಿಪೀಡಿಯಾ ಅಲಿಯಾಸ್ ವಿಕಾಸ್ ಸದ್ಯಕ್ಕೆ ಅತ್ಯುತ್ತಮ ಉದಾಹರಣೆ.

ಹೌದು, ಕಳೆದ 03-04 ವರ್ಷಗಳಿಂದ ಯೂ ಟ್ಯೂಬ್‌ ಮೀಡಿಯಾ ಅಬ್ಬರಿಸುತ್ತಿದೆ. ಉತ್ತಮ ಕಂಟೆಂಟ್‌ ಕೊಡುತ್ತಿರುವವರು ನಿಜಕ್ಕೂ ಗೆಲುವು ಸಾಧಿಸಿದ್ದಾರೆ. ಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ ಅನ್ನೋದನ್ನು ಹಲವು ಯೂಟ್ಯೂಬರುಗಳು ತೋರಿಸಿದ್ದಾರೆ. ಆ ಪೈಕಿ ವಿಕಾಸ್ ಕೂಡ ಒಬ್ಬರು. ತಮ್ಮ ಭಿನ್ನ-ವಿಭಿನ್ನವಾದ ಐಡಿಯಾ ಮೂಲಕವೇ ಜನ ಮನ ಗೆದ್ದು, ಯಶಸ್ವೀ ಕಂಟೆಂಟ್ ಕ್ರಿಯೇಟರ್ ಆಗಿ ಹೊರ ಹೊಮ್ಮಿರುವ ವಿಕಾಸ್ ಮಾಡಿದ್ದ ನಾನು ನಂದಿನಿ ಹಾಡು ಮರೆಯಲು ಆಗುತ್ತಾ..?

Byappanahalli police warned VickyPedia Vikas prompting the deletion of drug-related reels

ಇಂಥಾ ವಿಕಾಸ್ ಇದೀಗ ಜನರನ್ನು ನಗಿಸಲು ಹೋಗಿ ತಾವೇ ಪೊಲೀಸ್‌ ಠಾಣೆ ಮೆಟ್ಟಿಲೇರುವಂತೆ ಆಗಿದೆ. ಇಂತಹದ್ದೊಂದು ಸುದ್ದಿ ಸದ್ಯಕ್ಕೆ ದಶದಿಕ್ಕುಗಳಿಂದ ಕೇಳಿ ಬರುತ್ತಿದೆ. ಹೌದು, ಅಸಲಿಗೆ ವಿಕಾಸ್ ಇತ್ತೀಚೆಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ದಾರಿ ತಪ್ಪುತ್ತಿರುವ ಹದಿಹರೆಯದ ಯುವಕ ಯುವತಿಯರ ಬದುಕಿಗೆ ಕೈಗನ್ನಡಿ ಹಿಡಿಯುವ ಪ್ರಯತ್ನ ಮಾಡಿದ್ದರು. ಇಂದಿನ ಯುವಕರು ಎಂಜಾಯ್‌ಮೆಂಟ್‌ಗೆ ಅಂತ ಮದ್ಯಪಾನ ಮಾಡೋದು, ಸಿಗರೇಟ್‌ ಸೇದೋದು, ಹುಡುಗೀರ್‌ ಹಿಂದೆ ಹೋಗ್ತಾರೆ. ಆದರೆ, ನಾನು ಎಂಜಾಯ್‌ಮೆಂಟ್‌ ಮಾಡಲು ಡ್ರಗ್ಸ್‌ ತಗೋತೀನಿ ಎಂದು ಹೇಳಿದ್ದರು. ಈ ವಿಡಿಯೋ ನೋಡ..ನೋಡುತ್ತಾ.. ವೈರಲ್ ಆಗಿತ್ತು ಕೂಡ.

ಹೀಗಾಗಿಯೇ ಸಮಾಜವನ್ನು ವಿಕಾಸ್ ದಾರಿ ತಪ್ಪಿಸುತ್ತಿದ್ದಾರೆ ಎನ್ನುವ ಕಾರಣಕ್ಕೆ, ಬೈಯಪ್ಪನಹಳ್ಳಿ ಪೊಲೀಸರು ಅವರನ್ನು ಠಾಣೆಗೆ ಕರೆಸಿ ಕೆಲವೊಂದು ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ ಅನ್ನುವ ಸುದ್ದಿ ಸದ್ಯ ಕಾಡ್ಗಿಚ್ಚಿನಂತೆ ಹಬ್ಬಿದೆ. ವಿಡಿಯೋ ಮಾಡುವಾಗ ಅನುಸರಿಸಬೇಕಾದ ಕೆಲವೊಂದು ನಿಯಮದ ಬಗ್ಗೆ ಪೊಲೀಸರು ಪಾಠ ಮಾಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಇನ್ನೂ ವಿಡಿಯೋದಲ್ಲಿ ವಿಕಾಸ್ ಜೊತೆ ಇದ್ದ ಅಮಿತ್ ಅವರನ್ನೂ ಕರೆಸಿ, ಇಬ್ಬರಿಂದ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಇದಕ್ಕೆ ಪೂರಕವಾಗಿ ವಿಕಾಸ್ ಮಾಡಿದ್ದ ಈ ವಿಡಿಯೋ ಅವರ ಖಾತೆಯಿಂದ ಕಣ್ಮರೆಯಾಗಿದೆ.

byappanahalli-police-warned-vickypedia-vikas-prompting-the-deletion-of-drug-related-reels

ಅಂತೆ-ಕಂತೆಯ ಸಂತೆಯಲ್ಲಿ ಕೇಳಿ ಬರುತ್ತಿರುವ ಈ ಸುದ್ದಿ ನಿಜಾನಾ ಗೊತ್ತಿಲ್ಲ. ಆದರೆ.. ವಿಕಾಸ್ ಅಥವಾ ಅಮಿತ್ ಇಬ್ಬರಲ್ಲಿ ಯಾರು ಕೂಡ ಈ ವಿಚಾರದಲ್ಲಿ ಸ್ಪಷ್ಟೀಕರಣವನ್ನೂ ಕೊಡುವ ಪ್ರಯತ್ನವನ್ನು ಇನ್ನೂ ಮಾಡಿಲ್ಲ. ಹೀಗಾಗಿಯೇ ಅನೇಕರು ಈ ಸುದ್ದಿ ನಿಜವೆಂದು ಅಂದುಕೊಂಡಿದ್ದಾರೆ. ಸ್ವಲ್ಪ ಯಾಮಾರಿದ್ದರೂ ವಿಕಾಸ್ ಕಂಬಿ ಹಿಂದೆ ಹೋಗಬೇಕಿತ್ತು ಎನ್ನುವ ಮಾತುಗಳನ್ನಾಡುತ್ತಿದ್ದಾರೆ. ಸತ್ಯಾಂಶ ಏನು.. ? ಉತ್ತರ ವಿಕಾಸ್ ಅವರೇ ಕೊಡಬೇಕು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X