ಮಹಾಕುಂಭ ಮೇಳದಲ್ಲಿ ಕಣ್ಣಿಗೆ ಬಿದ್ದಳು ಅಪ್ಸರೆ, ಜಾಡು ಹಿಡಿದು ಹುಡುಕುತ್ತಾ ಹೋದರೆ ಹೊರ ಬಿತ್ತು ಅಚ್ಚರಿಯ ವಿಷ್ಯ..!
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ .. ಬದುಕಿನ ಅಂತರಾಳ ತೆರೆದಿಡುವ ಪ್ರಸಿದ್ಧ ಕವಿತೆಯ ಈ ಸಾಲುಗಳಿಗೆ ಹರ್ಷ ರಿಚಾರಿಯಾ ಸದ್ಯದ ತಾಜಾ ಉದಾಹರಣೆ.
ಹೌದು, ಹರ್ಷ ರಿಚಾರಿಯಾ, ಸೋಶಿಯಲ್ ಮೀಡಿಯಾ ಇನ್‌ಪ್ಲುಯೆನ್ಸರ್. ಕೇವಲ 30ರ ಹರೆಯದ ಈ ಚೆಲುವೆ ಯಾವ ಬಾಲಿವುಡ್ ನಾಯಕಿಗಿಂತ ಕಡಿಮೆ ಇಲ್ಲ. ಸೌಂದರ್ಯದ ಗಣಿಯಂತೆ ಇರುವ ಹರ್ಷ ನಿರೂಪಕಿ ಕೂಡ ಹೌದು. ಮೂಲತಃ ಉತ್ತರಾಖಂಡದವರಾದ ಇವರನ್ನು ಫೇಸ್‌ಬುಕ್‌ನಲ್ಲಿ 5.3 ಲಕ್ಷ ಜನ ಹಿಂಬಾಲಿಸುತ್ತಿದ್ದಾರೆ. ಇನ್ನು ಇನ್ಸ್ಟಾಗ್ರಾಮ್‌ದಲ್ಲಿ ಈ ಸಂಖ್ಯೆ 681K ಇದೆ.

ಇಂಥಾ ಹರ್ಷ ರಿಚಾರಿಯಾ ಕಳೆದ ಎರಡು ವರ್ಷದ ಹಿಂದೆ ಸನ್ಯಾಸತ್ವವನ್ನು ಸ್ವೀಕರಿಸಿದ್ದಾರೆ ಎಂದರೆ ನೀವು ನಂಬ್ತೀರಾ ? ಖುದ್ದು ಹರ್ಷ ರಿಚಾರಿಯಾ ಈ ಮಾತನ್ನು ಹೇಳಿದ್ದಾರೆ. ವಿಶ್ವ ಪ್ರಸಿದ್ದ ಮಹಾಕುಂಭ ಮೇಳದಲ್ಲಿ ಸಾಧ್ವಿಯ ಅವತಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಹರ್ಷ ರಿಚಾರಿಯಾ ಅವರ ಈ ವೇಷ ಈಗ ಅನೇಕರ ಹುಬ್ಬೇರಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಹರ್ಷ ರಿಚಾರಿಯಾ ಅವರ ಹಿನ್ನೆಲೆಯ ಕುರಿತು ಚರ್ಚೆಯಾಗುತ್ತಿದೆ.
ಸದ್ಯ ವೈರಲ್ ಆದ ವಿಡಿಯೋದಲ್ಲಿ ಖುದ್ದು ಹರ್ಷ ರಿಚಾರಿಯಾ ಬದುಕಿನಲ್ಲಿ ಎಲ್ಲ ಸುಖವನ್ನು ಅನುಭವಿಸಿದ್ದಾರೆ. ದೇಶ ವಿದೇಶಗಳನ್ನೆಲ್ಲ ಸುತ್ತಿದ್ದಾರೆ. ಆದರೆ ಇವರಿಗೆ ಹೆಸರು ಮತ್ತು ಖ್ಯಾತಿ ಸಿಕ್ಕಿತೇ ಹೊರತು ಮನಃಶಾಂತಿ ಸಿಗಲಿಲ್ಲ. ಹೀಗಾಗಿಯೇ ಆಧ್ಯಾತ್ಮದತ್ತ ಹೊರಳಿದ ಇವರು ಆಚಾರ್ಯ ಮಹಾಮಂಡಲೇಶ್ವರರ ಸ್ವಾಮಿ ಅವರ ಬಳಿ ದೀಕ್ಷೆಯನ್ನು ಪಡೆದಿರುವುದಾಗಿ ಹೇಳಿದ್ದಾರೆ. ಆಧ್ಯಾತ್ಮದಿಂದ ನನಗೆ ಬದುಕಿನಲ್ಲಿ ನೆಮ್ಮದಿ ಮತ್ತು ಮನಸಿಗೆ ಶಾಂತಿ ಸಿಕ್ಕಿದೆ ಎಂದು ಹೇಳಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಕೂಡ ಆಚಾರ್ಯ ಮಹಾಮಂಡಲೇಶ್ವರರ ಸ್ವಾಮಿ ಅವರ ಶಿಷ್ಯೆ ಎಂದು ಬರೆದುಕೊಂಡಿದ್ದಾರೆ. ನಿರೂಪಕಿಯಾಗಿ ಕೆಲಸ ಮಾಡುತ್ತಿರುವುದಾಗಿ ಕೂಡ ಉಲ್ಲೇಖಿಸಿದ್ಧಾರೆ.
ಹರ್ಷ ರಿಚಾರಿಯಾ ಅವರ ಈ ಮಾತು ಇವರ ವೇಷಭೂಷಣ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಕೆಲವರು ಸಾಧ್ವಿಯಾದರೆ ಲೌಕಕಿ ಬಂಧನವನ್ನು ತ್ಯಜಿಸಿ ಆಧ್ಯಾತ್ಮಿಕ ಬದುಕಿನ ಮೇಲೆ ತಮ್ಮನ್ನು ತಾವು ಕೇಂದ್ರಿಕರಿಸಿಕೊಳ್ಳಬೇಕು ದೇವರ ಆರಾಧನೆ, ಯೋಗ, ಆಧ್ಯಾತ್ಮಿಕತೆ ಮತ್ತು ಆಧ್ಯಾತ್ಮಕ್ಕೆ ಸಂಬಂಧಿಸಿದಂತೆ ಇತರೆ ಅಭ್ಯಾಸಗಳಿಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳಬೇಕು ಆದರೆ ಇವರು ನೋಡಿದರೆ ಕೆಲವೇ ದಿನಗಳ ಹಿಂದೆ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ್ದಾರೆ. ಕಳೆದ ವರ್ಷವಷ್ಟೇ ಕುದರು ಸವಾರಿಯನ್ನು ಮಾಡಿದ್ದಾರೆ. ಕಡಲ ಕಿನಾರೆಯಲ್ಲಿ ಹೊರಳಾಡಿದ್ದಾರೆ. 2023ರಲ್ಲಿ ದುಬೈ ಪ್ರವಾಸ ಮಾಡಿದ್ದಾರೆ. ಬ್ಯಾಂಕಾಕ್‌ನಲ್ಲಿ ಕಾರ್ಯಕ್ರಮವೊಂದರ ನಿರೂಪಣೆ ಮಾಡಿದ್ದಾರೆ.
ಹೀಗಿರುವಾಗ ಎರಡು ವರ್ಷದ ಹಿಂದೆ ದೀಕ್ಷೆಯನ್ನು ಪಡೆಯಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಅನೇಕರು ಮಾಡುತ್ತಿದ್ದಾರೆ. ದೀಕ್ಷೆ ಪಡೆದ ಮೇಲೆ ಕೂಡ ಮನುಷ್ಯ ಸಹಜ ಸುಖವನ್ನು ಇವರು ಅನುಭವಿಸಬಹುದಾ ಎಂದು ಕೇಳಿದ್ದಾರೆ.
ಇನ್ನು ಹರ್ಷ ಮುಖದಲ್ಲಿ ಕುಂಭಮೇಳದಲ್ಲಿ ಭಾಗಿಯಾದ ಹರ್ಷಕ್ಕಿಂತ ಮೇಕಪ್ ಹೆಚ್ಚು ಕಾಣುತ್ತಿದೆ. ಈ ಕುರಿತು ಕೂಡ ಕೆಲವರು ಚಕಾರ ಎತ್ತಿದ್ದಾರೆ. ಸಾಧ್ವಿ ಮೇಕಪ್ ಎಲ್ಲ ಮಾಡಿಕೊಳ್ಳಬಹುದಾ, ಮುಖಕ್ಕೆ ಪೌಡರ್ ಹಚ್ಚಿಕೊಂಡಿದ್ದಾರೆ ಎಂದು ಅಂದುಕೊಳ್ಳೋಣ ಐಬ್ರೋ ಎಲ್ಲ ಮಾಡಿಸಿಕೊಂಡಿದ್ದು ಸಾಧ್ವಿ ಜೀವನಕ್ಕೆ ವಿರುದ್ದವಲ್ಲವಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಸಾಧ್ವಿಯಾದವರು ಈ ರೀತಿ ಮೇಕಪ್ ಮಾಡಿಕೊಳ್ಳುವುದಿಲ್ಲ ಇವರು ಸಾಧ್ವಿಯಲ್ಲ ಸಾಧ್ವಿಯಂತೆ ನಟಿಸುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ. ಮಹಾಕುಂಭ ಮೇಳದಲ್ಲಿ ಭಾಗಿಯಾಗಲು ಸಾಧ್ವಿಯ ವೇಷ ಹಾಕಿಕೊಂಡು ತೆರಳಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಸದ್ಯಕ್ಕೆ ಈ ಮಹಾಕುಂಭ ಮೇಳದಲ್ಲಿ ಹರ್ಷ ಮಾತನಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೇವಲ ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರೀಟಿಗಳು ಕೂಡ ಈ ವಿಡಿಯೋ ಕುರಿತು ಚರ್ಚೆ ಮಾಡುತ್ತಿದ್ದಾರೆ.


Click it and Unblock the Notifications