twitter
    For Quick Alerts
    ALLOW NOTIFICATIONS  
    For Daily Alerts

    KGF 2 Vs RRR: ಕೆಜಿಎಫ್ 2 ಚಿತ್ರದ ಮೊದಲ ದಿನದ ಗಳಿಕೆ RRR ಚಿತ್ರದ 223 ಕೋಟಿ ದಾಟಲು ಸಾಧ್ಯವೇ?

    |

    ಬಹು ನಿರೀಕ್ಷಿತ 'ಕೆಜಿಎಫ್ 2' ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಹವಾ ಎಬ್ಬಿಸಿದೆ. ದೇಶದಾದ್ಯಂತ ಜನ ಬಹುನಿರೀಕ್ಷಿತವಾಗಿಯೇ ಎದುರು ನೋಡುತ್ತಿರುವ ಚಿತ್ರಗಳ ಪೈಕಿ 'ಕೆಜಿಎಫ್-2' ಚಿತ್ರಕ್ಕೆ ಮೊದಲನೇ ಸ್ಥಾನ ಸಿಕ್ಕಿದೆ. ಅದರ ನಂತರದ ಸ್ಥಾನದಲ್ಲಿ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರ ಪಡೆದುಕೊಂಡಿತ್ತು. ಈಗ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರ ಬಿಡುಗಡೆಯಾಗಿ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

    ಹೀಗಾಗಿಯೇ ಎಲ್ಲರ ದೃಷ್ಟಿ ಕೂಡ ಈಗ 'ಕೆಜಿಎಫ್-2' ಚಿತ್ರದ ಬಿಡುಗಡೆ ಮತ್ತು ಅದು ಮಾಡುವ ಕಲೆಕ್ಷನ್ ಬಗ್ಗೆ ಆಗಿದೆ. ಟೋಟಲ್ ಕಲೆಕ್ಷನ್‌ನಲ್ಲಿ RRR ಚಿತ್ರ ಎಷ್ಟು ಹಣ ಗಳಿಕೆ ಮಾಡಬಹುದು ಮತ್ತು 'ಕೆಜಿಎಫ್ 2' ಚಿತ್ರ ಎಷ್ಟು ಹಣ ಗಳಿಕೆ ಮಾಡಬಹುದು? ಇವೆರಡು ಸದ್ಯ ಎಲ್ಲರ ಕುತೂಹಲದ ಕೇಂದ್ರಬಿಂದು. ಇದೆಲ್ಲದಕ್ಕಿಂತ ಹೆಚ್ಚಾಗಿ ಈ ಎರಡು ಚಿತ್ರಗಳಲ್ಲಿ ಯಾವುದಾದರೂ ಒಂದು ಚಿತ್ರ 'ಬಾಹುಬಲಿ 2' ಚಿತ್ರದ ದಾಖಲೆ ಮುರಿಯಬಹುದೇ? ಎಂಬ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ. ಈಗ ಅದಕ್ಕಿಂತ ದೊಡ್ಡ ಕುತೂಹಲ 'ಕೆಜಿಎಫ್ -2' ಚಿತ್ರದ ಮೊದಲ ದಿನದ ಗಳಿಕೆ RRR ಚಿತ್ರದ ಗಳಿಕೆಯನ್ನು ಮೀರಿದ ಗಳಿಕೆ ಮಾಡಬಹುದೇ?

    'ಕೆಜಿಎಫ್-2' ಟ್ರೈಲರ್ ಹೇಗಿದೆ?

    'ಕೆಜಿಎಫ್-2' ಟ್ರೈಲರ್ ಹೇಗಿದೆ?

    'ಬಾಹುಬಲಿಯನ್ನು ಕಟ್ಟಪ್ಪ ಯಾಕೆ ಕೊಂದ?' ಎಂಬ ಪ್ರಶ್ನೆಗೆ ದೇಶದ ಜನತೆ ಎದುರು ನೋಡಿದಂತೆ 'ಕೆಜಿಎಫ್ -2' ಚಿತ್ರದ ಟ್ರೈಲರ್‌ಗಾಗಿ ಜನ ಎದುರು ನೋಡಿದರು. ಇದಕ್ಕೆ ಬಹುಮುಖ್ಯ ಕಾರಣ 'ಕೆಜಿಎಫ್ -1' ಚಿತ್ರದ ಭಾರೀ ಯಶಸ್ಸು ಮತ್ತು ಚಿತ್ರದ ಟೀಸರ್ ಎಬ್ಬಿಸಿದ ಹವಾ. 'ಕೆಜಿಎಫ್-2' ಟೀಸರ್ ಅಂತೂ ವಿಶ್ವ ದಾಖಲೆಯನ್ನೇ ನಿರ್ಮಿಸಿತ್ತು. 'ಕೆಜಿಎಫ್- 2' ಚಿತ್ರದ ಟ್ರೈಲರ್‌ಗಾಗಿ ಜಗತ್ತು ಎದುರು ನೋಡುತ್ತಿತ್ತು. ನಿರೀಕ್ಷೆಯಂತೆ ಭಾನುವಾರದ ಸಂಜೆ ಹೇಳಿದ ಸಮಯಕ್ಕೆ ತಕ್ಕಂತೆ ಹೊಂಬಾಳೆ ಪ್ರೊಡಕ್ಷನ್ಸ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದರು. ಟ್ರೈಲರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಮಿಲಿಯನ್ ಗಟ್ಟಲೆ ವೀವ್ಸ್ ದಾಖಲಿಸಿಕೊಂಡಿತು. ಎಲ್ಲಾ ಭಾಷೆಗಳಲ್ಲಿ ಸೇರಿ 24 ಗಂಟೆಯಲ್ಲಿ 109 ಮಿಲಿಯನ್ ಪಡೆಯುವ ಮೂಲಕ ವಿಶ್ವ ದಾಖಲೆ ಮಾಡಿದೆ. ಆದರೂ ಟೀಸರ್ ಎದುರಿಗೆ ಟ್ರೈಲರ್ ಬಗ್ಗೆ ಒಂದಷ್ಟು ಭಿನ್ನಾಭಿಪ್ರಾಯಗಳು ಕೂಡ ವ್ಯಕ್ತವಾಗಿದೆ. ಬಹುತೇಕರು ಟ್ರೈಲರ್ ಅನ್ನು ಮೆಚ್ಚಿಕೊಂಡರು ಕೂಡ ಒಂದಷ್ಟು ಮಂದಿ ಕಿಕ್ ಮಿಸ್ಸಾಗಿದೆ ಎಂಬ ಅಭಿಪ್ರಾಯ ಕೂಡ ಬಂದಿದೆ.

    ತಮಿಳಿನಲ್ಲಿ ನಿರೀಕ್ಷೆಗೂ ಮೀರಿದ ವೀವ್ಸ್

    ತಮಿಳಿನಲ್ಲಿ ನಿರೀಕ್ಷೆಗೂ ಮೀರಿದ ವೀವ್ಸ್

    'ಕೆಜಿಎಫ್-2' ಚಿತ್ರಕ್ಕೆ ಜಗತ್ತಿನಲ್ಲಿ ಅತಿ ಹೆಚ್ಚು ನಿರೀಕ್ಷೆ ಇರುವುದು ಕನ್ನಡದ ಜೊತೆ ಜೊತೆಗೆ ತೆಲುಗು ಚಿತ್ರರಂಗದಲ್ಲಿ. ತೆಲುಗು ಭಾಷಿಕರು ಅಪಾರವಾದ ನಿರೀಕ್ಷೆಯಿಂದ 'ಕೆಜಿಎಫ್ -2' ಚಿತ್ರಕ್ಕಾಗಿ ಎದುರು ನೋಡುತ್ತಿದ್ದಾರೆ. ತಮಿಳು ಸಿನಿಮಾ ಪ್ರೇಕ್ಷಕರು ತಮಿಳು ಸಿನಿಮಾಗಳನ್ನು ಹೊರತಾಗಿ ಇತರ ಭಾಷಾ ಚಿತ್ರಗಳನ್ನು ಅತಿಯಾಗಿ ಪ್ರೀತಿಸುವುದಿಲ್ಲ. ಆದರೂ ಅಲ್ಲಿ ಕೂಡ ಕೆಜಿಎಫ್ ಬಗ್ಗೆ ಒಂದು ವಿಶೇಷವಾದ ಒಲವಿದೆ. ತಮಿಳಿನಲ್ಲಿ ಕೂಡ ಟ್ರೈಲರ್ ಸಿಕ್ಕಾಪಟ್ಟೆ ಹಿಟ್ ಆಗಿದೆ.

    RRR VS KGF ದಾಖಲೆ

    RRR VS KGF ದಾಖಲೆ

    KGF- 2 ಚಿತ್ರದ ಟ್ರೈಲರ್ 24ಗಂಟೆಯಲ್ಲಿ ಎಲ್ಲಾ ಭಾಷೆಗಳಲ್ಲಿ ಸೇರಿ ಒಟ್ಟು 109 ಮಿಲಿಯನ್ ವೀವ್ಸ್ ಪಡೆದುಕೊಂಡು ಭಾರತೀಯ ಸಿನಿಮಾ ರಂಗದಲ್ಲಿ ದಾಖಲೆ ಮಾಡಿದೆ. ಕೆಜಿಎಫ್ ಪ್ರತಿಸ್ಪರ್ಧಿ ಅಂತಲೇ ಪರಿಗಣಿಸಲಾಗುವ ನಟ ರಾಮ್​ ಚರಣ್ ಮತ್ತು ಜ್ಯೂ. ಎನ್​ಟಿಆರ್​​ ಮುಖ್ಯಭೂಮಿಕೆಯ RRR ಸಿನಿಮಾ ಟ್ರೈಲರ್​ ರಿಲೀಸ್​​ ಆಗಿ ಒಂದು ಮಿಲಿಯನ್​ ವೀವ್ಸ್​ ಪಡೆದುಕೊಳ್ಳಲು ಬರೋಬ್ಬರಿ 45 ನಿಮಿಷ ತೆಗೆದುಕೊಂಡಿತ್ತು. RRR 13 ನಿಮಿಷದಲ್ಲಿ 5.55 ಲಕ್ಷ, 20 ನಿಮಿಷದಲ್ಲಿ 6.83 ಲಕ್ಷ, 25 ನಿಮಿಷ 7.50 ಲಕ್ಷ, 30 ನಿಮಿಷ 8.21 ಲಕ್ಷ, 40 ನಿಮಿಷ 9.30 ಲಕ್ಷ, 45 ನಿಮಿಷ 1 ಮಿಲಿಯನ್ ವೀಕ್ಷಣೆ ಪಡೆದುಕೊಂಡಿತ್ತು. ಈಗ ಆ ದಾಖಲೆಯನ್ನು ಕೆಜಿಎಫ್​ 2 ಉಡೀಸ್​ ಮಾಡಿದೆ.

    RRR ಮೊದಲ ದಿನದ ಗಳಿಕೆ 223 ಕೋಟಿ

    RRR ಮೊದಲ ದಿನದ ಗಳಿಕೆ 223 ಕೋಟಿ

    ಮಾರ್ಚ್ 25ರಂದು ಬಿಡುಗಡೆ ಆದ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರ ಮೊದಲ ದಿನದ ಗಳಿಕೆ ಬರೋಬ್ಬರಿ 223 ಕೋಟಿ! ಇದು ಭಾರತೀಯ ಸಿನಿಮಾ ರಂಗದಲ್ಲಿ ಬಿಡುಗಡೆಯಾದ ಮೊದಲ ದಿನದ ಅತಿದೊಡ್ಡ ಗಳಿಕೆಯಾಗಿದ್ದು, ಇದರ ಹಿಂದಿನ ದಾಖಲೆ 'ಬಾಹುಬಲಿ-2' ಚಿತ್ರ ಹೊಂದಿತ್ತು. ಅದು ಮೊದಲ ದಿನದಲ್ಲಿ 164 ಕೋಟಿ ಗಳಿಕೆ ಕಂಡಿತ್ತು. RRR ಚಿತ್ರ ಮೊದಲ ಮೂರು ದಿನದಲ್ಲಿ 500 ಕೋಟೆಯನ್ನು ಗಳಿಸುವ ಮೂಲಕ 'ಬಾಹುಬಲಿ- 2' ಚಿತ್ರದ ನಂತರ 500 ಕೋಟಿಯನ್ನು 3 ದಿನದಲ್ಲಿ ಗಳಿಸಿತ್ತು. ಆದರೆ ಈಗ ನಮ್ಮ ಮುಂದಿರುವ ಪ್ರಶ್ನೆ 'ಕೆಜಿಎಫ್ -2' ಚಿತ್ರ ಮೊದಲ ದಿನದ ಗಳಿಕೆ RRR ಚಿತ್ರದ ಗಳಿಕೆಯನ್ನು ಮೀರಬಹುದೇ?

    KGF-2, RRR ಬೀಟ್ ಮಾಡಲು ಸಾಧ್ಯವೇ?

    KGF-2, RRR ಬೀಟ್ ಮಾಡಲು ಸಾಧ್ಯವೇ?

    ಸೋಶಿಯಲ್ ಮೀಡಿಯಾಗಳಲ್ಲಿ ಯುಟ್ಯೂಬ್‌ನಲ್ಲಿ 'ಕೆಜಿಎಫ್ 2' ಚಿತ್ರ ತನ್ನ ಪ್ರತಿಸ್ಪರ್ಧಿ RRR ಚಿತ್ರದ ವಿರುದ್ಧ ಭರ್ಜರಿ ಜಯ ದಾಖಲಿಸಿಕೊಂಡಿತು. ಆದರೆ ನಿಜವಾದ ಸವಾಲು ಎದುರಾಗುವುದು ಚಿತ್ರದ ಕಲೆಕ್ಷನ್ ವಿಷಯದಲ್ಲಿ. ಹೀಗಾಗಿ ಎಲ್ಲರಿಗೂ ಕುತೂಹಲ ಇರುವುದು 'ಕೆಜಿಎಫ್ 2' ಚಿತ್ರದ ಮೊದಲ ದಿನದ ಗಳಿಕೆ ಎಷ್ಟು? ಅದು RRR ಚಿತ್ರದ ಮೊದಲ ದಿನದ ಗಳಿಕೆಯನ್ನು ಮೀರಿಸಲು ಸಾಧ್ಯವೇ? ಕೆಜಿಎಫ್ ಚಿತ್ರಕ್ಕೆ ಸಿಕ್ಕಿರುವ ಕ್ರೇಜ್ ಹಿನ್ನೆಲೆಯಲ್ಲಿ ಇದನ್ನು ಒಂದೇ ಮಾತಿನಲ್ಲಿ ಸಾಧ್ಯ ಅಂತ ಹೇಳಿಬಿಡಬಹುದು. ಆದರೆ ವಾಸ್ತವಕ್ಕೆ 223 ಗಡಿ ದಾಟುವುದು ಅಷ್ಟು ಸುಲಭವೂ ಅಲ್ಲ. RRR ಸಿನಿಮಾಗೆ ಮೊದಲ ದಿನ ಅತಿದೊಡ್ಡ ಗಳಿಕೆ ಬಂದಿರುವುದು ಆಂಧ್ರ ಮತ್ತು ತೆಲಂಗಾಣದಲ್ಲಿ. ಮೊದಲ ದಿನ ಈ ಎರಡು ರಾಜ್ಯಗಳಲ್ಲಿ RRR 120 ಕೋಟಿ ಬಾಚಿಕೊಂಡಿದೆ. ಎರಡು ರಾಜ್ಯಗಳ ಬಹುತೇಕ ಚಿತ್ರಮಂದಿರಗಳಲ್ಲಿ ಇದೊಂದೇ ಚಿತ್ರ ಪ್ರದರ್ಶನ ಕಂಡಿದ್ದು ಅಲ್ಲದೆ ಚಿತ್ರದ ಟಿಕೆಟ್ ದರವನ್ನು ಕೂಡ ಸಿಕ್ಕಾಪಟ್ಟೆ ಏರಿಕೆ ಮಾಡಲಾಗಿದೆ. ಇದರಿಂದ ಅದು 120 ಕೋಟಿ ಗಳಿಕೆ ಮಾಡಲು ಸಾಧ್ಯವಾಗಿದೆ.

    ಕೆಜಿಎಫ್ 2 ಕರ್ನಾಟಕದಲ್ಲಿ ಹೆಚ್ಚು ಗಳಿಸಬೇಕು

    ಕೆಜಿಎಫ್ 2 ಕರ್ನಾಟಕದಲ್ಲಿ ಹೆಚ್ಚು ಗಳಿಸಬೇಕು

    ಯಾವುದೇ ಒಂದು ಚಿತ್ರ ಮೂಲ ಆವೃತ್ತಿಯಲ್ಲಿ ಅದು ಹೆಚ್ಚಿನ ಹಣವನ್ನು ಮಾಡಬೇಕಾಗುತ್ತದೆ. ಅದರಲ್ಲೂ ಆ ರಾಜ್ಯದಲ್ಲಿ ಹಣ ಗಳಿಕೆ ಮಾಡುವುದು ಅತ್ಯಂತ ಪ್ರಮುಖವಾಗುತ್ತದೆ. ಹೀಗಾಗಿ ಕೆಜಿಎಫ್ ಚಿತ್ರ ಕೂಡ ಅತಿದೊಡ್ಡ ಗಳಿಕೆಯನ್ನು ಕರ್ನಾಟಕದಲ್ಲಿ ಆರಂಭದ ಮೂರು ದಿನದಲ್ಲಿ ಮಾಡಬೇಕಾಗುತ್ತದೆ. ಆದರೆ ಪ್ರಶ್ನೆ ಇರುವುದು RRR ಚಿತ್ರಕ್ಕೆಆಂಧ್ರ ಮತ್ತು ತೆಲಂಗಾಣದಲ್ಲಿ ಟಿಕೆಟ್ ಏರಿಕೆ ಮಾಡಿದಂತೆ, ಇಲ್ಲಿ ಕೂಡ ದುಬಾರಿಯಾಗಿ 500, 1000 ರೂಪಾಯಿಗಳ ದರವನ್ನು ನಿಗದಿ ಮಾಡಲು ಸಾಧ್ಯವೇ? ಅಂತಹ ಅವಕಾಶಗಳು ಇಲ್ಲಿ ಸಾಧ್ಯವಾಗುತ್ತದೆಯೇ ಎಂಬುದು ಒಂದು ಪ್ರಶ್ನೆ. ಎರಡನೆಯದಾಗಿ ಕರ್ನಾಟಕದ ಎಷ್ಟು ಚಿತ್ರಮಂದಿರಗಳಲ್ಲಿ 'ಕೆಜಿಎಫ್ 2' ಚಿತ್ರ ಪ್ರದರ್ಶನವಾಗುತ್ತದೆ ಎಂಬುದು ಕೂಡ ನೋಡಬೇಕಾಗುತ್ತದೆ. ಕರ್ನಾಟಕದಲ್ಲಿ ಆರು ಶೋಗಳ ಪ್ರದರ್ಶನವನ್ನು ಕಂಡರೂ ಕೂಡ extra-ordinary ಕಲೆಕ್ಷನ್ ಕಂಡರೂ ಕೂಡ ಚಿತ್ರದ ಒಟ್ಟು ಗಳಿಕೆ 30ರಿಂದ 35 ಕೋಟಿ ಮಾತ್ರ ಒಂದು ದಿನಕ್ಕೆ ಕಾಣಲು ಸಾಧ್ಯ! ಏಕೆಂದರೆ ಕರ್ನಾಟಕದಲ್ಲಿ ಇರುವುದೇ ಒಟ್ಟು 600 ಚಿತ್ರಮಂದಿರಗಳು ಮಾತ್ರ!

    ಆಂಧ್ರದಲ್ಲಿ ಟಿಕೆಟ್ ದರ ಕಡಿಮೆ!

    ಆಂಧ್ರದಲ್ಲಿ ಟಿಕೆಟ್ ದರ ಕಡಿಮೆ!

    ಕೆಜಿಎಫ್ ಚಿತ್ರಕ್ಕೆ ಕನ್ನಡದಷ್ಟೇ ಕ್ರೇಜ್ ಇರುವುದು ಆಂಧ್ರ ಮತ್ತು ತೆಲಂಗಾಣದಲ್ಲಿ. ಆದರೆ ಇಲ್ಲಿರುವ ದೊಡ್ಡ ಸಮಸ್ಯೆ ಆಂಧ್ರದಲ್ಲಿ ಟಿಕೆಟ್ ದರ ತೀರಾ ಕಡಿಮೆ. ಬಾಲ್ಕನಿ ದರ ಕೂಡ 150ಕ್ಕೆ ಮೀರುವಂತಿಲ್ಲ. ಕೇವಲ ತೆಲುಗಿನ ಭಾರಿ ಚಿತ್ರಗಳಿಗೆ ಅಷ್ಟೇ ಹತ್ತು ದಿನಗಳವರೆಗೆ ರಿಯಾಯಿತಿಯನ್ನು ಅಲ್ಲಿ ನೀಡುತ್ತಾರೆ. ಆರ್ ಆರ್ ಆರ್ ಚಿತ್ರಕ್ಕೆ ಸ್ಪೆಷಲ್ ಶೋಗಳ ಜೊತೆಗೆ ಹತ್ತು ದಿನ ಟಿಕೆಟ್ ದರವನ್ನು ಹೆಚ್ಚಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಆದರೆ 'ಕೆಜಿಎಫ್-2' ಗೆ ಸಂಬಂಧಿಸಿದಂತೆ ಸ್ಪೆಷಲ್ ಶೋಗಳು ಅಥವಾ ದುಪ್ಪಟ್ಟು ದರದಲ್ಲಿ ಟಿಕೆಟ್ ಮಾರಾಟ ಮಾಡಲು ಅವಕಾಶಗಳು ಸಿಗುವುದಿಲ್ಲ. ಹೀಗಾಗಿ ದೊಡ್ಡಮಟ್ಟದ ಮೊದಲ ದಿನದ ಗಳಿಕೆ ಮಾಡಲು 'ಕೆಜಿಎಫ್ 2' ಗೆ ಕಷ್ಟಕರವಾಗಿದೆ.

    'ಕೆಜಿಎಫ್ 2' ವಿಜಯ್ 'ಬೀಸ್ಟ್' ಜೊತೆ ಮುಖಾಮುಖಿ

    'ಕೆಜಿಎಫ್ 2' ವಿಜಯ್ 'ಬೀಸ್ಟ್' ಜೊತೆ ಮುಖಾಮುಖಿ

    ಇದೇ ಸಮಯದಲ್ಲಿ ವೇಳೆ ವಿಜಯ್ ಅಭಿನಯದ 'ಬೀಸ್ಟ್' ಚಿತ್ರ ಕೂಡ ತಮಿಳುನಾಡಿನಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುವುದರಿಂದ ದೊಡ್ಡ ಮಟ್ಟದಲ್ಲಿ 'ಬೀಸ್ಟ್' ಚಿತ್ರಮಂದಿರಗಳನ್ನು ಲಾಕ್ ಮಾಡುತ್ತದೆ. ಜೊತೆಗೆ ಕೇರಳದಲ್ಲೂ ಕೂಡ ಇದೇ ಪರಿಸ್ಥಿತಿ ಕಾಣುತ್ತದೆ. RRR ಚಿತ್ರಕ್ಕೆ ಪ್ರಸ್ತುತ ತಮಿಳಿನ ಯಾವುದೇ ದೊಡ್ಡ ಚಿತ್ರ ಪೈಪೋಟಿ ಇಲ್ಲದೆ ಇರುವುದರಿಂದ
    ಚಿತ್ರಮಂದಿರಗಳು ದೊಡ್ಡಮಟ್ಟದಲ್ಲಿ ಸಿಕ್ಕಿದೆ. ಆದರೆ ಕೆಜಿಎಫ್ 2 ಚಿತ್ರಕ್ಕೆ ಎಷ್ಟು ಚಿತ್ರಮಂದಿರಗಳಲ್ಲಿ ಸಿಗುತ್ತದೆ? ಎಂಬ ಪ್ರಶ್ನೆ ಕೂಡ ನಾವು ಯೋಚಿಸಿ ನೋಡಲೇ ಬೇಕಾಗುತ್ತೆ.

    ಬಾಲಿವುಡ್‌ನಲ್ಲಿ ಎಷ್ಟು ಗಳಿಕೆ ಮಾಡಬಹುದು?

    ಬಾಲಿವುಡ್‌ನಲ್ಲಿ ಎಷ್ಟು ಗಳಿಕೆ ಮಾಡಬಹುದು?

    ನಾರ್ತ್ ಇಂಡಿಯನ್ ಮಾಸ್ ನಲ್ಲಿ ಕೆಜಿಎಫ್-2 ಭಾರಿ ಕ್ರೇಜ್ ಇರುವ ಚಿತ್ರ. ಮಾಸ್ ಚಿತ್ರಗಳಿಗೆ ದೊಡ್ಡ ಮಾರ್ಕೆಟ್ ಎಂದರೆ ಮುಂಬೈ ಸರ್ಕ್ಯೂಟ್ ಜೊತೆಗೆ ಯುಪಿ ಮತ್ತು ಬಿಹಾರ್. ಆದರೆ ಯುಪಿ ಮತ್ತು ಬಿಹಾರದಲ್ಲಿ ಇತರ ಪ್ರದೇಶಗಳಿಗೆ ಹೋಲಿಸಿದರೆ ಟಿಕೆಟ್ ದರ ಕಡಿಮೆ. ಇನ್ನೊಂದೆಡೆ ಕ್ಲಾಸ್ ಸಿನಿಮಾಗಳ ಸರ್ಕ್ಯೂಟ್ ಅಂತಲೇ ಪ್ರಸಿದ್ಧವಾಗಿರುವ ಅಹಮದಾಬಾದ್ ರಾಜಸ್ಥಾನ್ ದೆಹಲಿ-ಪಂಜಾಬ್ ಇಲ್ಲಿ ಶಾಹಿದ್ ಕಪೂರ್ ಅಭಿನಯದ ಜೆರ್ಸಿ ಚಿತ್ರ ಪೈಪೋಟಿ ನೀಡಲು ಸಿದ್ಧವಾಗಿದೆ.

    ವಿದೇಶದ ರಿಲೀಸ್ ಬಗ್ಗೆ ಹೆಚ್ಚಿದ ಕುತೂಹಲ

    ವಿದೇಶದ ರಿಲೀಸ್ ಬಗ್ಗೆ ಹೆಚ್ಚಿದ ಕುತೂಹಲ

    ಇನ್ನು ವಿದೇಶಗಳಿಗೆ ಸಂಬಂಧಿಸಿದಂತೆ RRR ಚಿತ್ರ ದೊಡ್ಡ ಯಶಸ್ಸು ಕಾಣಲು ಅಮೆರಿಕಾ, ಕೆನಡಾ ತೆಲುಗು ಭಾಷಿಕರ ದೊಡ್ಡ ಸಂಖ್ಯೆಯಲ್ಲಿ ಇರುವುದು ಜೊತೆಗೆ ಚಿತ್ರವನ್ನು ಅಮೆರಿಕದ ಮಾರ್ಕೆಟ್ ನಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿದ್ದು. ವಿದೇಶಗಳಲ್ಲೂ ಸಿಕ್ಕಾಪಟ್ಟೆ ರೇಟ್ ನಿಗದಿ ಮಾಡಲಾಗಿತ್ತು. ಹೀಗಾಗಿ ವಿದೇಶಗಳಲ್ಲಿ ಮೊದಲ ದಿನವೇ ಅದು 75 ಕೋಟಿ ಬಾಚಿಕೊಂಡಿದೆ. ಈ ಎಲ್ಲಾ ಲೆಕ್ಕಾಚಾರಗಳನ್ನು ಒಟ್ಟುಸೇರಿಸಿ ನೋಡಿದಾಗ ಕೆಜಿಎಫ್ ದೊಡ್ಡಮಟ್ಟದಲ್ಲಿ ಕ್ರೇಜ್ ಇದ್ದು, ದೊಡ್ಡ ಮಟ್ಟದ ಗಳಿಕೆ ಮಾಡಿದರೂ ಕೂಡ ಮೊದಲ ದಿನದ ಗಳಿಕೆ ವಿಚಾರದಲ್ಲಿ RRR ಚಿತ್ರದ ಗಳಿಕೆಯನ್ನು ದಾಟುವುದು ಅಷ್ಟು ಸುಲಭದ ಮಾತಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ.

    English summary
    Can the first day earnings of the KGF 2 film cross the Rs 223 croe of RRR movie?Even though the KGF-2 film can make a big profit, it's hard to make RRR kind of day one earnings!
    Wednesday, March 30, 2022, 9:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X