ಈ ಫೋಟೊದಲ್ಲಿ ಇರುವ ಕನ್ನಡದ ಖ್ಯಾತ ನಟ ಯಾರು ಗೆಸ್ ಮಾಡಿ

ಪರಿಶ್ರಮದ ಜೊತೆಗೆ ಅದೃಷ್ಟ ಇದ್ದರೆ ಮಾತ್ರ ಚಿತ್ರರಂಗದಲ್ಲಿ ಗೆಲುವು ಸಾಧ್ಯ. ಏನೇ ಸಿನಿಮಾ ಹಿನ್ನೆಲೆಯಿಂದ ಬಂದರೂ ಪ್ರತಿಭೆ, ಪರಿಶ್ರಮ ಇಲ್ಲದಿದ್ದರೆ ಗೆಲ್ಲುವುದು ಬಹಳ ಕಷ್ಟ. ಒಂದೊಮ್ಮೆ ಬ್ಯಾಕ್‌ಗ್ರೌಂಡ್‌ ನೋಡಿ ಒಂದೆರಡು ಸಿನಿಮಾಗಳನ್ನು ಪ್ರೇಕ್ಷಕರ ನೋಡಬಹುದು. ಬಳಿಕ ತೆರೆಮೇಲೆ ತಾಖತ್ತು ತೋರಿಸಲೇ ಬೇಕು.

ಕನ್ನಡ ಚಿತ್ರರಂಗದಲ್ಲಿ ಕೂಡ ಸಾಕಷ್ಟು ನಟ, ನಟಿಯರು ಬಂದು ಹೋಗಿದ್ದಾರೆ. ಆದರೆ ಕೆಲವರು ಮಾತ್ರ ಇವತ್ತಿಗೂ ಸಿನಿರಸಿಕರ ಮನಸ್ಸಿನಲ್ಲಿ ಜಾಗ ಮಾಡಿಕೊಂಡಿದ್ದಾರೆ. ಅವರ ಅಗಲಿಕೆ ಬಳಿಕವೂ ಅವರ ಸಿನಿಮಾಗಳ ಮೂಲಕ ನೆನಪಿನಲ್ಲಿ ಉಳಿದುಬಿಟ್ಟಿದ್ದಾರೆ. ಇತ್ತೀಚಿನ ವರ್ಷಗಳ ಬಣ್ಣದ ಲೋಕದಲ್ಲಿ ಅದೃಷ್ಟಪರೀಕ್ಷೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಆದರೆ ಗೆದ್ದು ಚಿತ್ರರಂಗದಲ್ಲಿ ಉಳಿಯುವವರ ಸಂಖ್ಯೆ ಕಮ್ಮಿಯಿದೆ.

Can you guess this Kannada Actor photo goes viral on internet

ಅಣ್ಣಾವ್ರ ಮಕ್ಕಳು ಮೊಮ್ಮಕ್ಕಳು ಚಿತ್ರರಂಗದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಆದರೆ ತಮ್ಮದೇ ಪರಿಶ್ರಮದಿಂದ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. 80ರ ದಶಕದಲ್ಲೇ ಶಿವರಾಜ್‌ಕುಮಾರ್ ಚಿತ್ರರಂಗ ಪ್ರವೇಶಿಸಿದರು. ಅದಕ್ಕೂ ಮುನ್ನ ಪುನೀತ್ ರಾಜ್‌ಕುಮಾರ್ ಬಾಲನಟನಾಗಿ ಬಂದು ಸ್ಟಾರ್ ಪಟ್ಟಕ್ಕೇರಿಬಿಟ್ಟಿದ್ದರು.

ಬಳಿಕ ರಾಘವೇಂದ್ರ ರಾಜ್‌ಕುಮಾರ್ ಸಹ ಸಿನಿಮಾಗಳಲ್ಲಿ ನಟಿಸಿ ಗೆದ್ದರು. ಇತ್ತೀಚಿನ ವರ್ಷಗಳಲ್ಲಿ ವಿನಯ್, ಧೀರೇನ್, ಧನ್ಯಾ, ಯುವ ಚಿತ್ರರಂಗ ಪ್ರವೇಶಿಸಿದ್ದಾರೆ. ಎಲ್ಲರೂ ಒಳ್ಳೆ ತರಬೇತಿ ಪಡೆದು ಬಂದವರೇ. ಪುನೀತ್ ಚಿಕ್ಕಂದಿನಲ್ಲೇ ಕ್ಯಾಮರಾ ಎದುರಿಸಲು ಆರಂಭಿಸಿದರು. ಆದರೆ ಹೀರೊ ಆಗಬೇಕು ಎಂದಾಗ ಡ್ಯಾನ್ಸ್, ಫೈಟ್ಸ್ ಎಲ್ಲಾ ಕಲಿತು ಮರು ಎಂಟ್ರಿ ಕೊಟ್ಟಿದ್ದರು.

ಶಿವರಾಜ್‌ಕುಮಾರ್ ಚೆನ್ನೈ ಫಿಲ್ಮ್ ಇನ್ಸಿಟ್ಯೂಟ್‌ನಲ್ಲಿ ನಟನೆಯ ಪಟ್ಟುಗಳನ್ನು ಕಲಿತಿದ್ದರು. ಶಿವಣ್ಣ ಹುಟ್ಟಿದ್ದು ಓದಿ ಬೆಳೆದಿದ್ದು ಚೆನ್ನೈನಲ್ಲಿ. ಇವತ್ತಿಗೂ ನನಗೆ ಚೆನ್ನೈ ಅಂದರೆ ಬಹಳ ಇಷ್ಟ ಎನ್ನುತ್ತಾರೆ. ಅಲ್ಲೇ ಶಾಲೆ, ಕಾಲೇಜು ವಿದ್ಯಾಭ್ಯಾಸ ಮುಗಿಸಿದ್ದರು. ಅಲ್ಲಿ ಸಾಕಷ್ಟು ಸ್ನೇಹಿತರು ಇದ್ದಾರೆ. ಹೀಗೆ ಬಹಳ ಹಿಂದೆ ಶಿವಣ್ಣ ಸ್ನೇಹಿತರ ಜೊತೆ ಕಾಣಿಸಿಕೊಂಡಿರುವ ಫೋಟೊ ಇದು.

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೊ ವೈರಲ್ ಆಗುತ್ತಿದೆ. ಈಗಾಗಲೇ 100ಕ್ಕೂ ಅಧಿಕ ಸಿನಿಮಾಗಳಲ್ಲಿ ಶಿವಣ್ಣ ನಟಿಸಿದ್ದಾರೆ. ಡಾ. ರಾಜ್, ವಿಷ್ಣು, ಅಂಬರೀಶ್ ಬಳಿಕ ಇಷ್ಟು ಸಿನಿಮಾಗಳಲ್ಲಿ ಹೀರೊ ಆಗಿ ನಟಿಸಿದ್ದು ಜೊತೆಗೆ ಇವತ್ತಿಗೂ ಹೀರೊ ಆಗಿಯೇ ಬೇಡಿಕೆ ಉಳಿಸಿಕೊಂಡ ನಟ ಅಂದರೆ ಅದು ಶಿವಣ್ಣ ಮಾತ್ರ. ಅನಾರೋಗ್ಯದಿಂದ ಬಳಲುತ್ತಿರುವ ಸೆಂಚುರಿ ಸ್ಟಾರ್ ಸದ್ಯ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇತ್ತೀಚೆಗೆ ಅಮೆರಿಕಾದ ಪ್ರತಿಷ್ಟಿತ ಆಸ್ಪತ್ರೆಯಲ್ಲಿ ಶಿವಣ್ಣಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆದಿದೆ. ಈ ಬಗ್ಗೆ ಸ್ವತಃ ಶಿವಣ್ಣ ವೀಡಿಯೋ ಮಾಡಿ ಮಾತನಾಡಿದ್ದಾರೆ. ಜನವರಿ 26ಕ್ಕೆ ಮತ್ತೆ ತಾಯ್ನಾಡಿಗೆ ಸೆಂಚುರಿ ಸ್ಟಾರ್ ವಾಪಸ್ ಬರಲಿದ್ದಾರೆ. ಅರ್ಜುನ್ ಜನ್ಯಾ ನಿರ್ದೇಶನದ '45' ಚಿತ್ರದಲ್ಲಿ ಶಿವಣ್ಣ ಮಿಂಚಿದ್ದಾರೆ. ಆ ಚಿತ್ರದ ಡಬ್ಬಿಂಗ್ ಸಹ ಮುಗಿಸಿ ವಿದೇಶಕ್ಕೆ ತೆರಳಿದ್ದಾರೆ.

ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ಶಿವರಾಜ್‌ಕುಮಾರ್ ನಟಿಸುತ್ತಿದ್ದಾರೆ. 'A ಫಾರ್ ಆನಂದ್' ಎಂಬ ಚಿತ್ರವನ್ನು ತಮ್ಮದೇ ಬ್ಯಾನರ್ ಅಡಿಯಲ್ಲಿ ಘೋಷಿಸಿದ್ದಾರೆ. ಹೇಮಂತ್ ಕುಮಾರ್ ನಿರ್ದೇಶನದ 'ಭೈರವನ ಕೊನೆಪಾಠ' ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಶಿವಣ್ಣನ ಜೊತೆ ಸಿನಿಮಾ ಮಾಡಲು ಸಾಕಷ್ಟು ಜನ ಕಾಯುತ್ತಿದ್ದಾರೆ. ತೆಲುಗಿನಲ್ಲಿ ರಾಮ್‌ಚರಣ್ ಜೊತೆ ಹೊಸ ಚಿತ್ರದಲ್ಲಿ ನಟಿಸೋಕೆ ಒಪ್ಪಿದ್ದಾರೆ. ತಮಿಳು ಕತೆಗಳನ್ನು ಕೇಳುತ್ತಿದ್ದಾರೆ. ಶೀಘ್ರದಲ್ಲೇ ಹೀರೊ ಆಗಿ ಕಾಲಿವುಡ್ ಅಂಗಳಕ್ಕೆ ಜಿಗಿಯುವ ಸಾಧ್ಯತೆಯಿದೆ. 'ಜೈಲರ್' ಪ್ರೀಕ್ವೆಲ್‌ನಲ್ಲಿ ಕೂಡ ಸೆಂಚುರಿ ಸ್ಟಾರ್ ಮಿಂಚುವ ಬಗ್ಗೆ ಚರ್ಚೆ ನಡೀತಿದೆ.

More from Filmibeat

English summary
A photo of a popular Kannada actor has gone viral on the internet, sparking curiosity among fans;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X