For Quick Alerts
  ALLOW NOTIFICATIONS  
  For Daily Alerts

  ಮಾಂಸಾಹಾರ ತ್ಯಜಿಸಿ ವೇಗನ್ ಆದ ಸಿನಿಮಾ ತಾರೆಯರಿವರು!

  |

  ಸಿನಿಮಾ ತಾರೆಯರು ಅಂದಾಕ್ಷಣ, ಅವರಿಗೆ ತಮ್ಮದೇ ಆದ ಒಂದು ಡಯೆಟ್ ಪ್ಲ್ಯಾನ್ ಇರುತ್ತದೆ. ಅವರು ತಮ್ಮ, ಗ್ಲಾಮರ್, ಫಿಟ್ನೆಸ್ ಕಾಪಾಡಿಕೊಳ್ಳಲು ನಾನಾ ರೀತಿಯ ಆಹಾರ ಕ್ರಮಗಳನ್ನು ಬೆಳೆಸಿಕೊಂಡಿರುತ್ತಾರೆ. ಹಾಗಾಗಿ ಅವರ ಆಹಾರ ಕ್ರಮದ ಬಗ್ಗೆ ಸಾಮಾನ್ಯವಾಗಿ ಹೆಚ್ಚು ಕುತೂಹಲ ಇರುತ್ತದೆ. ಇದೇ ವಿಚಾರಕ್ಕೆ ಈಗ ಸುದ್ದಿ ಆಗುತ್ತಿದ್ದಾರೆ. ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ.

  ಆದರೆ ಇಲ್ಲಿ ತನಕ ಅನೇಕ ಸಿನಿಮಾ ತಾರೆಯರು ಮಾಂಸಾಹಾರವನ್ನು ತ್ಯಜಿಸಿದ್ದಾರೆ. ಆದರೆ ಅದಕ್ಕೆ ಅವರು ತಮ್ಮದೇ ಆದ ಕಾರಣಗಳನ್ನು ಕೂಡ ಬಹಿರಂಗ ಪಡಿಸಿದ್ದಾರೆ. ಅದರಲ್ಲೂ ಬಾಲಿವುಡ್ ಮತ್ತು ಸೌತ್‌ ಚಿತ್ರ ರಂಗದಲ್ಲಿ ಹಲವು ತಾರೆಯರು ನಾನ್ ವೆಜ್ ಬಿಟ್ಟಿದ್ದಾರೆ. ಇನ್ನು ಕೆಲವರು ಸಂಪೂರ್ಣ ವೀಗನ್ ಆಗಿದ್ದಾರೆ.

  ಹೀಗೆ ಮಾಂಸಾಹಾರ ತ್ಯಜಿಸಿದ ತಾರೆಯರು ಏನ್‌ ಹೇಳುತ್ತಾರೆ. ಅವರು ನೀಡುವ ಕಾರಣಗಳೇನು. ಸಂಪೂರ್ಣ ವೇಗನ್ ಆಗಿರುವವರು ಯಾರು ಮತ್ತು ಯಾಕೆ ಎನ್ನುವುದನ್ನು ಮುಂದೆ ಓದಿ...

  ಮಾಂಸಾಹಾರ ತ್ಯಜಿಸಿದ ಅನುಷ್ಕಾ, ವಿರಾಟ್: ಹೊಸ ವ್ಯಾಪಾರ ಆರಂಭ!

  ಮಾಂಸಾಹಾರ ತ್ಯಜಿಸಿದ ಅನುಷ್ಕಾ, ವಿರಾಟ್: ಹೊಸ ವ್ಯಾಪಾರ ಆರಂಭ!

  ಸದ್ಯ ತಮ್ಮ ಆಹಾರ ಕ್ರಮ ಬದಲಿಸಿರುವುದಾಗಿ ಹೇಳಿಕೊಂಡು ಸುದ್ದಿ ಆಗುತ್ತಿದ್ದಾರೆ ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ. ಈ ದಂಪತಿ ಇತ್ತೀಚೆಗೆ ಒಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ "ನಾವು ಹಲವು ದಿನಗಳಿಂದ ಸಸ್ಯಹಾರಿಗಳಾಗಿದ್ದೇವೆ. ನಾವು ಪ್ರಾಣಿ ಪ್ರಿಯರು ಎನ್ನುವುದು ಮಾತ್ರ ಇದಕ್ಕೆ ಕಾರಣ ಅಲ್ಲ. ಇದರಿಂದ ಪರಿಸರದ ಮೇಲೆ ಆಗುವ ಪರಿಣಾಮಗಳನ್ನು ತಡೆಯಲು ಈ ನಿರ್ಧಾರ ಎಂದಿದ್ದಾರೆ. ಜೊತೆಗೆ (ಪ್ಲಾಂಟ್ ಬೇಸ್ಡ್ ಮೀಟ್) ಅಂದರೆ ಸಸ್ಯದಲ್ಲಿಯೇ ಮಾಂಸಾಹಾರದ ರುಚಿಯನ್ನು ಪಡೆಯಿಸಿ ಎಂದಿದ್ದಾರೆ." ಪ್ಲಾಂಟ್ ಬೇಸ್ಡ್ ಮೀಟ್ ಆಹಾರದ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಈ ಮೂಲಕ ಹೊಸ ಬ್ಯುಸಿನೆಸ್ ಆರಂಭ ಮಾಡುತ್ತಿದ್ದಾರೆ.

  ಅಮೆಜಾನ್, ನೆಟ್‌ಫ್ಲಿಕ್ಸ್ ಜೊತೆಗೆ ಅನುಷ್ಕಾ ಶರ್ಮಾ 400 ಕೋಟಿ ರೂ. ಒಪ್ಪಂದ!ಅಮೆಜಾನ್, ನೆಟ್‌ಫ್ಲಿಕ್ಸ್ ಜೊತೆಗೆ ಅನುಷ್ಕಾ ಶರ್ಮಾ 400 ಕೋಟಿ ರೂ. ಒಪ್ಪಂದ!

  ನಟಿ ರಮ್ಯಾ ಈಗ ವೇಗನ್!

  ನಟಿ ರಮ್ಯಾ ಈಗ ವೇಗನ್!

  ಕನ್ನಡದ ನಟಿ ರಮ್ಯಾ ಅವರು ಇತ್ತೀಚೆಗೆ ಮಾಂಸಾಹಾರವನ್ನು ಸಂಪೂರ್ಣವಾಗಿ ತ್ಯಸಿಜಿದ್ದಾರೆ. ಹಾಗಂತ ಅವರು ಕೇವಲ ಮಾಂಸಾಹಾರ ಬಿಟ್ಟಿಲ್ಲ. ಸಂಪೂರ್ಣ ವೀಗನ್ ಆಗಿದ್ದಾರೆ. ಅಂದರೆ ಎಲ್ಲಾ ಡೈರಿ ಉತ್ಪನ್ನ, ಸ್ವೀಟ್‌ಗಳನ್ನು ಕೂಡ ಅವರು ತ್ಯಜಿಸಿದ್ದಾರೆ. ಈ ವಿಚಾರವನ್ನು ರಮ್ಯಾ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ತಮಗೆ ತುಂಬಾ ಇಷ್ಟವಾದ ಐಸ್‌ಕ್ರೀಮ್ ಕೂಡ ತ್ಯಾಗ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು.

  ಹಿಜಾಬ್ ವಿವಾದ: ರಮ್ಯಾ, ಸಂಜನಾ ಗಲ್ರಾನಿ ಏನಂದ್ರು?ಹಿಜಾಬ್ ವಿವಾದ: ರಮ್ಯಾ, ಸಂಜನಾ ಗಲ್ರಾನಿ ಏನಂದ್ರು?

  ಕೋಳಿ ತಿನ್ನುವುದನ್ನು ಬಿಟ್ಟ ಶೃತಿ ಹಾಸನ್, ಇದೇ ಸಾಲಿನಲ್ಲಿ ಆಲಿಯಾ ಭಟ್!

  ಕೋಳಿ ತಿನ್ನುವುದನ್ನು ಬಿಟ್ಟ ಶೃತಿ ಹಾಸನ್, ಇದೇ ಸಾಲಿನಲ್ಲಿ ಆಲಿಯಾ ಭಟ್!

  ಕಮಲ್ ಹಾಸನ್ ಪುತ್ರಿ ಶೃತಿ ಹಾಸನ್ ಹಲವು ವರ್ಷಗಳಿಂದ ಎಲ್ಲಾ ಬಗೆಯ ನಾನ್‌ವೆಜ್ ತಿನ್ನುವುದನ್ನು ತ್ಯಜಿಸಿದ್ದರಂತೆ. ಆದರೆ ಆಕೆಗೆ ಚಿಕನ್ ಎಂದರೆ ಬಲು ಇಷ್ಟವಂತೆ. ಹಾಗಾಗಿ ಚಿಕನ್ ಮಾತ್ರವೇ ತಿನ್ನುತ್ತಾ ಇದ್ದರಂತೆ. ಅದರೆ ಕೋಳಿಗಳನ್ನು ನೈಸರ್ಗಿಕ ಕ್ರಮದಲ್ಲಿ ಬೆಳಸದೇ ಇರುವುದರಿಂದ, ಚಿಕನ್ ತಿನ್ನುವುದನ್ನೂ ಕೂಡ ಸೃತಿ ಹಾಸನ್ ನಿಲ್ಲಿಸಿದ್ದಾರಂತೆ. ಇನ್ನು ಬಾಲಿವುಡ್‌ನಟಿ ಆಲಿಯಾ ಭಟ್ ಕೂಡ ನಾನ್‌ವೆಜ್ ಪ್ರಿಯೆ ಆಗಿದ್ದರು. ಆದರೆ ಅವರು ನಾನ್‌ ಬಿಟ್ಟು ಕೊಟ್ಟ ಕಾರಣ "ಇದು ಒಂದು ಆರೋಗ್ಯಕರ ಡಯೆಟ್ ವಿಧಾನ, ಇದು ಜೀವನ ಪೂರ್ತಿ ಅನುಸರಿಸ ಬಹುದಾದ ಉತ್ತಮ ಡಯೆಟ್ ಪ್ಲ್ಯಾನ್" ಎಂದಿದ್ದಾರೆ.

  ಅಮಿತಾಬ್ ಬಚ್ಚಬ್, ಆಮಿರ್ ಖಾನ್ ವೀಗನ್!

  ಅಮಿತಾಬ್ ಬಚ್ಚಬ್, ಆಮಿರ್ ಖಾನ್ ವೀಗನ್!

  ಬಾಲಿವುಡ್‌ ನಟ ಅಮಿತಾಬ್ ಬಚ್ಚನ್ ಮತ್ತು ಆಮಿರ್ ಖಾನ್ ಕೂಡ ಮಾಂಸಾಹಾರ ವ್ಯಜಿಸಿದ್ದಾರೆ. ಅಮಿತಾಬ್ ಬಚ್ಚನ್ ಮಾಂಸಹಾರ ತ್ಯಜಿಸಿದ್ದು ಯಾಕೆ ಎನ್ನುವ ಪ್ರಶ್ನೆಗೆ ಅಮಿತಾಬ್ ಉತ್ತರಿಸಿದ್ದಾರೆ "ನಾನು ಈ ವಯಸ್ಸಿನಲ್ಲಿಯೂ ಇಷ್ಟೋಂದು ಎನರ್ಜಿಯಿಂದ ಇರುವುದಕ್ಕೆ ಮತ್ತು ಆರೋಗ್ಯವಾಗಿರಲು ಕಾರಣ ಸಸ್ಯಹಾರ ಸೇವನೆ" ಎಂದು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಇನ್ನು ನಟ ಆಮಿರ್ ಖಾನ್ ತಮ್ಮ 50ನೇ ವರ್ಷದ ಹಟ್ಟು ಹಬ್ಬದ ಪ್ರಯುಕ್ತ ತಾವು ವೇಗನ್ ಅಗುತ್ತಿರುವುದಾಗಿ ತಿಳಿಸಿದ್ದರು. ಅವರು ಕೇಲವ ಮಾಂಸಾಹಾರವಲ್ಲ, ಹಾಲು, ಮೊಟ್ಟೆ, ಪನ್ನೀರ್, ಮತ್ತು ಹಾಲಿನ ಪದಾರ್ಥಗಳನ್ನು ತ್ಯಜಿಸಿದ್ದಾರೆ. ಹಾಲಿನ ಬದಲಿಗೆ ಸೋಯಾ ಮಿಲ್ಕ್ ಮೊರೆ ಹೋಗಿದ್ದಾರಂತೆ.

  English summary
  Celebrities Who Stopped Eating Meat And Why They Went Vegan, Know More About It,
  Friday, February 11, 2022, 16:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X