"ಅಂಡರ್ ಆರ್ಮ್ಸ್ ಫೋಟೊ ಕಳ್ಸಿ ಅಂತ ಕೇಳ್ತಾರೆ, ಥೂ"; ಚೈತ್ರಾ ಆಚಾರ್

ಸೋಶಿಯಲ್ ಮೀಡಿಯಾದಿಂದ ಸೆಲೆಬ್ರೆಟಿಗಳಿಗೆ ಫ್ಯಾನ್ಸ್ ಜೊತೆ ನಿರಂತರವಾಗಿ ಟಚ್‌ನಲ್ಲಿ ಇರಲು ಸಹಾಯಕವಾಗಿದೆ. ನೆಚ್ಚಿನ ನಟ- ನಟಿಯರ ಪೋಸ್ಟ್‌ಗಳಿಗೆ ಅಭಿಮಾನಿಗಳು ಲೈಕ್ಸ್, ಕಾಮೆಂಟ್ಸ್ ಮಾಡಿ ಮೆಚ್ಚುಗೆ ಸೂಚಿಸುತ್ತಾರೆ. ಕೆಲವೊಮ್ಮೆ ಕೆಟ್ಟ ಕೆಟ್ಟ ಕಾಮೆಂಟ್ಸ್ ಸಹ ಬರುತ್ತವೆ.

ತಾರೆಯರು ಕೂಡ ಫ್ಯಾನ್ಸ್ ಜೊತೆ ಚಾಟ್ ನಡೆಸುವ ಅವಕಾಶ ಸಿಗುತ್ತಿದೆ. ನೆಚ್ಚಿನ ನಟ-ನಟಿಯರ ಬಗ್ಗೆ ಫ್ಯಾನ್ಸ್ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯಬಹುದು. ಆಸ್ಕ್ ಎನಿಥಿಂಗ್ ಎಂದು ತಾರೆಯರು ಆಗಾಗ್ಗೆ ಟ್ವಿಟ್ಟರ್, ಇನ್‌ಸ್ಟಾಗ್ರಾಮ್‌ನಲ್ಲಿ ಸೆಷನ್ ನಡೆಸುತ್ತಾರೆ. ಇಂತಹ ಸಮಯದಲ್ಲಿ ಚಿತ್ರ ವಿಚಿತ್ರ ಪ್ರಶ್ನೆಗಳು ಎದುರಾಗುತ್ತದೆ. ಅದನ್ನೆಲ್ಲಾ ನೋಡಿ ನಾವು ಇಷ್ಟಪಡುವ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ ಎಂದು ನಟಿಯರು ಹೇಳುತ್ತಾರೆ.

Chaitra achar Shanvi Srivastava on bad comments in Instagram

ಸದ್ಯ ನಟಿಯರಾದ ರುಕ್ಮಿಣಿ ವಸಂತ್, ಸಪ್ತಮಿ ಗೌಡ, ಚೈತ್ರಾ ಆಚಾರ್ ಹಾಗೂ ಶಾನ್ವಿ ಶ್ರೀವಾಸ್ತವ್ 'ಗೋಲ್ಡ್ ಕ್ಲಾಸ್ ವಿಥ್ ಮಯೂರ' ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಭಾಗಿ ಆಗಿದ್ದರು. ಈ ವೇಳೆ 4 ಜನ ತಮಗೆ ಈ ರೀತಿ ಸೋಶಿಯಲ್ ಮೀಡಿಯಾದಲ್ಲಿ ಎದುರಾಗುವ ಅಸಭ್ಯ ಪ್ರಶ್ನೆಗಳ ಬಗ್ಗೆ ಮಾತನಾಡಿದ್ದಾರೆ. ಅಭಿಮಾನಿಗಳ ಜೊತೆ ಟಚ್‌ನಲ್ಲಿ ಇರಬೇಕು ಎನ್ನುವ ಕಾರಣಕ್ಕೆ ಆಸ್ಕ್ ಎನಿಥಿಂಗ್ ಸೆಷನ್ ನಡೆಸುವುದಾಗಿ ನಾಲ್ಕು ಜನ ಹೇಳಿದ್ದಾರೆ.

ಶಾನ್ವಿ ಶ್ರೀವಾಸ್ತವ್ ಮಾತನಾಡಿ "ನಾನು ಫನ್ನಿ ಪ್ರಶ್ನೆಗಳನ್ನು ಹುಡುಕುತ್ತಿರುತ್ತೇನೆ. ಇಂಟ್ರೆಸ್ಟಿಂಗ್ ಪ್ರಶ್ನೆ ಸಿಕ್ಕರೆ ಉತ್ತರಿಸುತ್ತೇನೆ. ನಮ್ಮ ಬಗ್ಗೆ ಏನಾದರೂ ಕೇಳಿದರೆ ಹೇಳ್ತೀನಿ. ಬೇರೆಯವರ ಬಗ್ಗೆ ಅಭಿಪ್ರಾಯ ಹೇಳಿ ಎಂದು ಕೇಳಬೇಡಿ" ಎಂದಿದ್ದಾರೆ. ಇನ್ನು ತಮ್ಮ ಪೋಸ್ಟ್‌ಗಳಿಗೆ ಬರುವ ಕಾಮೆಂಟ್ಸ್ ಬಗ್ಗೆ ಮಾತನಾಡಿ ನಾನು ಯಾವುದೇ ಫೋಟೊ ಹಾಕಿದ್ರು, ಬಿಕಿನಿ ಪಿಕ್ಚರ್ ಯಾವಾಗ ಹಾಕುತ್ತೀರಾ ಎಂದು ಒಂದು ಕಾಮೆಂಟ್ ಬಂದೇ ಬರುತ್ತದೆ" ಎಂದಿದ್ದಾರೆ.

"ನನಗೆ ಆಸ್ಕ್ ಎನಿಥಿಂಗ್ ಸೆಷನ್ ನಡೆಸಲು ಭಯವಾಗುತ್ತಿತ್ತು. ನಾನು ಇತ್ತೀಚೆಗಷ್ಟೆ ಮೊದಲ ಬಾರಿ ಆ ರೀತಿ ಫ್ಯಾನ್ಸ್ ಜೊತೆ ಚರ್ಚೆ ನಡೆಸಿದ್ದೆ. ಬಹಳ ಒತ್ತಡ ಎನಿಸುತ್ತಿತ್ತು. ಕೆಲವೊಮ್ಮೆ ಪ್ರಶ್ನೆಗೆ ಉತ್ತರಿಸದಿದ್ದರೂ ಯಾಕೆ ಉತ್ತರಿಸಲಿಲ್ಲ ಎಂದು ಕೇಳುತ್ತಾರೆ. ಸುಮ್ಮನೆ ರಾದ್ಧಾಂತ ಬೇಡಬೇ ಬೇಡ ಅಂತ ನಾನು ಆ ರೀತಿ ಸೆಷನ್ ನಡೆಸೋದು ಬೇಡ ಎಂದುಕೊಂಡೆ. ಸುಮ್ನೆ ಫೋಟೊ ಪೋಸ್ಟ್ ಮಾಡಿ ಸುಮ್ಮನಾಗ್ತೀನಿ" ಎಂದು ರುಕ್ಮಿಣಿ ವಸಂತ್ ಹೇಳಿದ್ದಾರೆ.

Chaitra achar Shanvi Srivastava on bad comments in Instagram

ಚೈತ್ರಾ ಆಚಾರ್ ಪ್ರತಿಕ್ರಿಯಿಸಿ "ಸೋಜುಗಾದ ಸೂಜಿ ಮಲ್ಲಿಗೆ ಹಾಡಿಗೆ ನನಗೆ ಸೈಮಾ ಪ್ರಶಸ್ತಿ ಬಂದಿತ್ತು. ಕಾರ್ಯಕ್ರಮಕ್ಕೆ ನಾನು ಡೀಪ್ ನೆಕ್ ಗೌನ್ ಹಾಕಿಕೊಂಡಿದ್ದೆ. ಅದಕ್ಕೆ ಕೆಲವರು ಗರಂ ಆಗಿದ್ದರು. ದೇವರ ಹಾಡಿ ಹಾಡು ಇಂತಹ ಬಟ್ಟೆ ಹಾಕ್ತೀರಾ ಅಂತ ಕಾಮೆಂಟ್ ಮಾಡಿದ್ದರು. ಇನ್ನು ನಾನು ಮಾಡುವ ಪೋಸ್ಟ್ ಕೆಳಗೆ ಅಂಡರ್ ಆರ್ಮ್ಸ್ ಪಿಕ್ಚರ್ ಹಾಕಿ ಎಂದು ಕಾಮೆಂಟ್ ಮಾಡ್ತಾರೆ. ಅವರ ಉದ್ದೇಶ ಏನು ಎನ್ನುವುದು ಗೊತ್ತಿಲ್ಲ. ಥೂ ಏನ್ರೋ ನೀವು. ಒಮ್ಮೆ ಅ ಕಾಮೆಂಟ್ಸ್ ಓದಿದ್ರೆ, ನೀವು 4 ಸಲ ಸ್ನಾನ ಮಾಡ್ತೀರಾ ಅಂತ ಕಾಮೆಂಟ್ಸ್" ಎಂದಿದ್ದಾರೆ.

ನಾಲ್ವರು ನಟಿಯರು ತಮ್ಮ ಸಿನಿಮಾ ಹಾಗೂ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಸಂಗತಿಗಳನ್ನು ಬಚ್ಚಿಟ್ಟಿದ್ದಾರೆ. ಸಹ ನಟರ ಜೊತೆ ನಟಿಯರ ಹೆಸರು ಥಳಕು ಹಾಕಿ ಸುದ್ದಿ ಹಬ್ಬಿಸುವುದು ಸರಿಯಲ್ಲ. ಇದನ್ನು ನಾವು ಸಹಿಸಿಕೊಂಡರು ನಮ್ಮ ಕುಟುಂಬಸ್ಥರು ಸಹಿಸಿಕೊಳ್ಳುವುದು ಕಷ್ಟ ಎಂದು ಸಪ್ತಮಿ ಗೌಡ ಹೇಳಿದ್ದಾರೆ.

More from Filmibeat

English summary
Chaitra achar, Shanvi Srivastava, rukmini vasanth and sapthami gowda round tabel interview;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X