For Quick Alerts
  ALLOW NOTIFICATIONS  
  For Daily Alerts

  ಆರತಿ ಅಗರ್ವಾಲ್ ಆ ದುಸ್ಥಿತಿಗೆ ಆತನ ತಂದೆ ಕಾರಣ ಎಂದ ಸ್ಟಾರ್ ನಿರ್ಮಾಪಕ

  |

  ತೆಲುಗು ಸಿನಿ ಪ್ರೇಕ್ಷಕರಿಗೆ ಆರತಿ ಅಗರ್‌ವಾಲ್ ಬಹಳ ಪರಿಚಿತ ನಟಿ. 'ನುವ್ವು ನಾಕು ನಚ್ಚಾವು' ಚಿತ್ರದ ಮೂಲಕ ಟಾಲಿವುಡ್ ಪ್ರವೇಶಿಸಿದ ಆರತಿ ಬಹಳ ಚಿಕ್ಕ ಅವಧಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಬೆಳೆದು ನಿಂತರು. ಮೆಗಾಸ್ಟಾರ್ ಚಿರಂಜೀವಿ, ವೆಂಕಟೇಶ್, ನಾಗಾರ್ಜುನ, ಜೂ ಎನ್‌ಟಿಆರ್, ಪ್ರಭಾಸ್, ತರುಣ್ ಹೀಗೆ ಅಂದಿನ ಸ್ಟಾರ್ ಹೀರೋಗಳ ಚಿತ್ರದಲ್ಲಿ ನಟಿಸಿ ಸಕ್ಸಸ್ ಕಂಡರು.

  ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದ ಆರತಿ ಬದುಕು ಇದ್ದಕ್ಕಿದ್ದಂತೆ ದುರಂತವಾಗಿ ಅಂತ್ಯ ಕಂಡಿದ್ದು ಯಾರೂ ಮರೆಯಲು ಸಾಧ್ಯವಿಲ್ಲ. ಆತ್ಮಹತ್ಯೆ ಯತ್ನ, ವಿವಾದಗಳು, ಮದುವೆ, ಸರ್ಜರಿ ಹೀಗೆ ಹಲವು ವಿಚಾರಗಳು ಆಕೆಯ ಬದುಕನ್ನು ಅನಿರೀಕ್ಷಿತವಾಗಿ ಕೊನೆಗೊಳಿಸಿತು. 31ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಬೇಕಾಯಿತು. ಇದೀಗ, ನಿರ್ಮಾಪಕ ಚಂಟಿ ಅಡ್ಡಾಲಾ ಆರತಿ ಖಾಸಗಿ ಬದುಕಿನ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ...

  ತೆಲುಗು ನಟಿ ಆರತಿ ಅಗರ್‌ವಾಲ್ ಇನ್ನಿಲ್ಲ

  ಆತನ ತಂದೆ ತುಂಬಾ ನಿಯಂತ್ರಿಸುತ್ತಿದ್ದರು

  ಆತನ ತಂದೆ ತುಂಬಾ ನಿಯಂತ್ರಿಸುತ್ತಿದ್ದರು

  ಆರತಿ ಅಗರ್‌ವಾಲ್ ನಟಿಸಿದ್ದ 'ಅಡವಿ ರಾಮುಡು' ಹಾಗೂ 'ಅಲ್ಲರಿ ರಾಮುಡು' ಎಂಬ ಎರಡು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿದ್ದ ನಿರ್ಮಾಪಕ ಚಂಟಿ ಅಡ್ಡಾಲಾ ಆಕೆಯ ವೈಯಕ್ತಿಕ ಜೀವನದ ಬಗ್ಗೆ ಇತ್ತೀಚಿಗಷ್ಟೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ''ಆರತಿ ಅವರನ್ನು ಅವರ ತಂದೆ ಬಹಳ ನಿಯಂತ್ರಿಸುತ್ತಿದ್ದರು. ಅವರ ಪೋಷಕರು ಇಲ್ಲವಾದ ಸಮಯದಲ್ಲಿ ಬಹಳ ಲವಲವಿಕೆಯಿಂದ ಕಾಣಿಸುತ್ತಿದ್ದ ಆರತಿ ಪೋಷಕರು ಇದ್ದರೆ ಬಹಳ ಇಕ್ಕಟ್ಟಿನಲ್ಲಿರುವಂತೆ ಕಾಣುತ್ತಿದ್ದರು'' ಎಂದು ಹೇಳಿದ್ದಾರೆ.

  ಕೆಲಸದ ವಿಚಾರದಲ್ಲಿ ಬಹಳ ಡೆಡಿಕೇಶನ್ ಇತ್ತು

  ಕೆಲಸದ ವಿಚಾರದಲ್ಲಿ ಬಹಳ ಡೆಡಿಕೇಶನ್ ಇತ್ತು

  ''ಶೂಟಿಂಗ್ ವಿಚಾರದಲ್ಲಿ ಬಹಳ ಪಾಸಿಟಿವ್ ಆಗಿದ್ದರು. ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಕಷ್ಟವಾಗಬಾರದು ಅಂತ ಲೇಟ್ ಆದರೂ ಚಿತ್ರೀಕರಣ ಮುಗಿಸಿ ಹೋಗುತ್ತಿದ್ದರು. ಅದೇ ಅವರ ತಂದೆ ಇದ್ದರೆ ಆಕೆ ಖುಷಿಯಾಗಿರುತ್ತಿರಲಿಲ್ಲ. ಬಹುಶಃ ಆರತಿ ಅವರ ಆ ದುರಂತ ಬದುಕಿಗೆ ಅವರಪ್ಪನೇ ಕಾರಣ ಇರಬಹುದು. ಅವರ ಸ್ವಭಾವದಿಂದಲೇ ಆಕೆ ಅಂತಹ ಸ್ಥಿತಿ ತಲುಪಿರಬಹುದು'' ಎಂದು ಚಂಟಿ ಅಡ್ಡಾಲಾ ಹೇಳಿಕೊಂಡಿದ್ದಾರೆ.

  ಪ್ರೇಮ ವೈಫಲ್ಯ, ಆತ್ಮಹತ್ಯೆಗೆ ಯತ್ನ

  ಪ್ರೇಮ ವೈಫಲ್ಯ, ಆತ್ಮಹತ್ಯೆಗೆ ಯತ್ನ

  ಒಳ್ಳೊಳ್ಳೆ ಸಿನಿಮಾಗಳ ಮೂಲಕ ಹೆಚ್ಚು ಖ್ಯಾತಿ ಗಳಿಸಿದ್ದ ಆರತಿ ಅಗರ್‌ವಾಲ್ ಇದ್ದಕ್ಕಿದ್ದಂತೆ ಆತ್ಮಹತ್ಯೆಗೆ ಯತ್ನಿಸಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದ ಪರಿಣಾಮ ಉಳಿದುಕೊಂಡರು. ಈ ನಡುವೆ ತೆಲುಗಿನ ಖ್ಯಾತ ನಟ ತರುಣ್ ಜೊತೆ ಪ್ರೀತಿಯಲ್ಲಿದ್ದರು, ಬಳಿಕ ಆ ಪ್ರೀತಿ ಮುರಿದು ಬಿತ್ತು. ಅದಕ್ಕಾಗಿ ಆ ಸುಸೈಡ್ ಎಂಬ ಮಾತುಗಳು ಚರ್ಚೆಗೆ ಬಂದವು.

  ಮದುವೆ ಆದರೂ ಮುಂದುವರಿಯಲಿಲ್ಲ

  ಮದುವೆ ಆದರೂ ಮುಂದುವರಿಯಲಿಲ್ಲ

  ಆತ್ಮಹತ್ಯೆ, ವೈಯಕ್ತಿಕವಾಗಿ ಬೇಸರ ಇದರ ಜೊತೆಗೆ ಅವಕಾಶಗಳ ಕೊರತೆ ಎಲ್ಲವೂ ಆರತಿ ಅವರನ್ನು ಕಾಡಿತ್ತು. 2005ರಲ್ಲಿ ಉದ್ಯಮಿ ಉಜ್ವಲ್ ಕುಮಾರ್ ಎನ್ನುವವರ ಜೊತೆ ವಿವಾಹವಾದರು. ಆದರೆ, ಆ ಮದುವೆ ಬರಿ 2 ವರ್ಷಕ್ಕೆ ಅಂತ್ಯವಾಯಿತು. ವಿಚ್ಛೇದನ ಪಡೆದುಕೊಂಡು ಮತ್ತೆ ಸಿನಿಮಾಗಳಲ್ಲಿ ಮುಂದುವರಿದರು. ಆದರೆ, ಮೊದಲಿನಂತೆ ಸಕ್ಸಸ್ ಸಿಗಲಿಲ್ಲ.

  ಸಾವಿನ ಬಗ್ಗೆ ಸ್ಪಷ್ಟತೆ ಇಲ್ಲ

  ಸಾವಿನ ಬಗ್ಗೆ ಸ್ಪಷ್ಟತೆ ಇಲ್ಲ

  2015, ಜೂನ್ 6 ರಂದು ನಟಿ ಅಗರ್‌ವಾಲ್ ನಿಧನರಾದರು. ಬಹಳ ಚಿಕ್ಕವಯಸ್ಸಿನಲ್ಲಿ ಓರ್ವ ಯಶಸ್ವಿ ನಟಿ ಮೃತಪಟ್ಟರು ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆರತಿ ಸಾವಿಗೆ ನಿಖರ ಕಾರಣ ಏನು ಎನ್ನುವುದು ಬಹಳ ಗೊಂದಲ ಮೂಡಿಸಿತು. ದೇಹದ ತೂಕ ಇಳಿಸಿಕೊಳ್ಳುವ ಕಾರಣದಿಂದ ಲಿಪೋಸಕ್ಷನ್‌ ಶಸ್ತ್ರ ಚಿಕಿತ್ಸೆ ಮಾಡಿಸಿದ್ದರು. ಅದರ ಅಡ್ಡ ಪರಿಣಾಮ ಸಾವು ಸಂಭವಿಸಿತು ಎಂಬ ಮಾತುಗಳು ಬಂದವು. ಆಕೆಗೆ ಅಸ್ತಮಾ ಇದ್ದ ಪರಿಣಾಮ ಉಸಿರಾಟ ತೊಂದರೆ ಉಂಟಾಗಿ ಹೃದಯಾಘಾತ ಸಂಭವಿಸಿ ನಿಧನರಾದರು ಎಂದು ಹೇಳಲಾಯಿತು.

  English summary
  Allari Ramudu and Adavi Ramudu Producer Chanti addala Comment on Arti agarvwal Death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X