"ವೇಶ್ಯೆ ಪಾತ್ರದಲ್ಲಿ ಗ್ರಾಹಕನನ್ನು ಸೆಳೀಬೇಕು ಅಂದ್ರು": ಸುರಭಿ ಪಾತ್ರದ ಆಡಿಷನ್ ಬಗ್ಗೆ ಚೈತ್ರಾ ಮಾತು

ಬಿಂದಾಸ್ ಬೆಡಗಿ ಚೈತ್ರಾ ಆಚಾರ್ ಬೋಲ್ಡ್ ಫೋಟೊಶೂಟ್‌ಗಳಲ್ಲಿ ಕಾಣಿಸಿಕೊಳ್ಳುವುದು ಮಾತ್ರವಲ್ಲ ಸಖತ್ ಬೋಲ್ಡ್ ಆಗಿ ಮಾತನಾಡ್ತಾರೆ. ಇನ್ನು ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವವರಲ್ಲ. ತಮ್ಮದೇ ಸ್ಟೈಲ್‌ನಲ್ಲಿ ಎಲ್ಲದ್ದಕ್ಕೂ ತಿರುಗೇಟು ನೀಡುತ್ತಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಟ್ರೋಲ್ಸ್ ಬಗ್ಗೆ ಚೈತ್ರಾ ಮಾತುಗಳು ವೈರಲ್ ಆಗಿತ್ತು.

2019ರಲ್ಲಿ 'ಮಹಿರಾ' ಸಿನಿಮಾ ಮೂಲಕ ಚೈತ್ರಾ ಆಚಾರ್ ಚಿತ್ರರಂಗಕ್ಕೆ ಬಂದರು. ಬಳಿಕ 'ಆ ದೃಶ್ಯ' ಹಾಗೂ 'ಗಿಲ್ಕಿ' ಸಿನಿಮಾಗಳಲ್ಲಿ ನಟಿಸಿ ಗೆದ್ದರು. 'ತಲೆದಂಡ' ಹಾಗೂ 'ಟೋಬಿ' ಸಿನಿಮಾಗಳಲ್ಲಿ ಕೂಡ ಆಕೆಯ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಇನ್ನು 'ಸಪ್ತಸಾಗರದಾಚೆ ಎಲ್ಲೋ- ಸೈಡ್‌-ಬಿ' ಚಿತ್ರದಲ್ಲಿ ಸುರಭಿ ಎನ್ನುವ ವೇಶ್ಯೆಯ ಪಾತ್ರದಲ್ಲಿ ನಟಿಸಿ ಮೋಡಿ ಮಾಡಿದ್ದರು.

Chitra achar recalls auditioning for Sapta Saagaradaache Ello Side B and kissing scenes

ವೇಶ್ಯೆ ಪಾತ್ರ ಎನ್ನುವುದು ನಿಜಕ್ಕೂ ಸಖತ್ ಚಾಲೆಂಜಿಂಗ್. ಆದರೂ ಸಾಕಷ್ಟು ನಟಿಯರು ಆ ಪಾತ್ರ ಮಾಡಲು ಉತ್ಸುಕರಾಗಿರುತ್ತಾರೆ. 'ಸಪ್ತಸಾಗರದಾಚೆ ಎಲ್ಲೋ- ಸೈಡ್‌-ಬಿ' ಚಿತ್ರದಲ್ಲಿ ಸುರಭಿ ಪಾತ್ರಕ್ಕೆ ಆಡಿಷನ್ ಕೊಟ್ಟಿದ್ದು ಹಾಗೂ ಚಿತ್ರದಲ್ಲಿರುವ ಬೋಲ್ಡ್ ಸೀನ್ಸ್ ಬಗ್ಗೆ ಮನೆಯವರು ಏನಂದ್ರು? ಕೊನೆಗೆ ಒಪ್ಪಿದ್ದು ಹೇಗೆ ಎನ್ನುವುದನ್ನು ರ್ಯಾಪಿಡ್ ರಶ್ಮಿ ಸಂದರ್ಶನದಲ್ಲಿ ಚೈತ್ರಾ ಆಚಾರ್ ವಿವರಿಸಿದ್ದಾರೆ.

"ಗಿಲ್ಕಿ ಚಿತ್ರದಲ್ಲಿ ನನ್ನ ಅಭಿನಯದ ಬಗ್ಗೆ ಕೇಳಿ ನಿರ್ದೇಶಕ ಹೇಮಂತ್ 'ಸಪ್ತಸಾಗರದಾಚೆ ಎಲ್ಲೋ- ಸೈಡ್‌-ಬಿ' ಚಿತ್ರದ ಸುರಭಿ ಪಾತ್ರದ ಆಡಿಷನ್‌ಗೆ ಕರೆದರು. ಹಲವರನ್ನು ಆಡಿಯನ್ಸ್‌ಗೆ ಬಂದಿದ್ದರು. ಮೊದಲು ನಾನು ಟೀ-ಶರ್ಟ್, ಜೀನ್ಸ್ ಪ್ಯಾಂಟ್ ಅಲ್ಲಿ ಹೋಗಿದ್ದೆ. ನನ್ನ ನೋಡಿ ಸೀರೆ ಉಟ್ಟು ಬರೋಕೆ ಹೇಳಿದರು. 2 ದಿನಗಳ ಬಳಿಕ ಸೀರೆಯಲ್ಲಿ ಹೋಗಿದ್ದೆ" ಎಂದು ಚೈತ್ರಾ ಆ ದಿನವನ್ನು ನೆನಪಿಸಿಕೊಂಡಿದ್ದಾರೆ.

"ಕ್ಯಾಮರಾ ನೋಡಿ ಮನು ಇದ್ದಾನೆ ಅಂದುಕೊಳ್ಳಿ. ವೇಶ್ಯೆಯರ ರೀತಿ ತುಟಿಗೆ ಬಣ್ಣ ಇಲ್ಲ. ಎದೆ ಸೀಳು ತೋರಿಸುವಂತಿಲ್ಲ. ಏನು ಇಲ್ಲದೇ ಗ್ರಾಹಕನನ್ನು ನಿನ್ನತ್ತ ಸೆಳೆಯಬೇಕು ಎನ್ನುವ ಟಾಸ್ಕ್ ಕೊಟ್ಟರು. ಅದನ್ನು ಚಾಲೆಂಜ್ ಆಗಿ ತೆಗೆದುಕೊಂಡು ನಾನು ನಟಿಸಿ ತೋರಿಸಿದೆ. ಅದನ್ನು ನೋಡಿ ನಿರ್ದೇಶಕ ಹೇಮಂತ್ ಮುಗುಳ್ನಕ್ಕರು"

Chitra achar recalls auditioning for Sapta Saagaradaache Ello Side B and kissing scenes

"ನಿರ್ದೇಶಕರು ಹೇಳಿದ್ದನೆಲ್ಲಾ ಊಹಿಸಿಕೊಂಡು ನಾನು ಮಾಡಿ ತೋರಿಸಿದೆ. ನಿರ್ದೇಶಕರು ಇಷ್ಟಪಟ್ಟರು. ಆದರೆ ಮತ್ತಷ್ಟು ಜನರನ್ನು ಆಡಿಷನ್ ಮಾಡಬೇಕು ಎಂದರು. ಮೂರ್ನಾಲ್ಕು ಬಳಿಕ ನನಗೆ ಹೇಮಮತ್ ಕರೆ ಮಾಡಿ ನೀವು ಆಯ್ಕೆ ಆಗಿದ್ದೀರಾ ಅಂದ್ರು. ಅಲ್ಲಿಯವರೆಗೂ ನನಗೆ ಬಹಳ ಗೊಂದಲ, ಆತಂಕ ಇತ್ತು. ರಕ್ಷಿತ್ ಶೆಟ್ಟಿ 'ಸ್ಟ್ರಾಬೆರಿ' ಚಿತ್ರದಲ್ಲಿ ನನ್ನ ನಟನೆ ನೋಡಿದ್ದರು. ಹಾಗಾಗಿ ಅವ್ರು ಒಪ್ಪಿದರು" ಎಂದು ಚಿತ್ರಕ್ಕೆ ಆಯ್ಕೆ ಆದ ಬಗ್ಗೆ ವಿವರಿಸಿದ್ದಾರೆ.

'ಸಪ್ತಸಾಗರದಾಚೆ ಎಲ್ಲೋ- ಸೈಡ್‌-ಬಿ' ಚಿತ್ರದಲ್ಲಿ ಚೈತ್ರಾ ಕೊಂಚ ಬೋಲ್ಡ್ ಆಗಿ ನಟಿಸಿದ್ದಾರೆ. ರಕ್ಷಿತ್‌ ಶೆಟ್ಟಿ ಜೊತೆ ಕಿಸ್ಸಿಂಗ್ ಸೀನ್‌ನಲ್ಲಿ ಕೂಡ ನಟಿಸಿದ್ದಾರೆ. ಅದಕ್ಕೆ ಹೇಗೆ ಒಪ್ಪಿಕೊಂಡರು ಎನ್ನುವುದನ್ನು ತಿಳಿಸಿದ್ದಾರೆ. ಸುರಭಿ ಪಾತ್ರ ಒಪ್ಪಿಕೊಳ್ಳುವಾಗ ಕೂಡ ಆತಂಕ ಇತ್ತು. ಚಿತ್ರದಲ್ಲಿ ವೇಶ್ಯೆ ಪಾತ್ರ, ಸ್ಕಿನ್‌ ಶೋ ಇದೆ. ಕಿಸ್ಸಿಂಗ್ ಸೀನ್ ಇದೆ ಹೇಗೆ ಅಂದುಕೊಂಡೆ. ಹೇಮಂತ್ ಕೂಡ ನೀವೇ ನಿರ್ಧರಿಸಿ, ಆಮೇಲೆ ಸಹಿ ಮಾಡಿ ಎಂದಿದ್ದರು.

"ಕಿಸ್ಸಿಂಗ್ ಸೀನ್ ಮಾಡೋದಾ? ಬೇಡ್ವಾ? ಎನ್ನುವ ಗೊಂದಲದಲ್ಲಿದ್ದೆ. ಮಾಡಿದರೆ ಚೆನ್ನಾಗಿ ಮಾಡಬೇಕು. ಇಲ್ಲದಿದ್ದರೆ ಬೇಡ ಎನ್ನುವುದು ನನ್ನ ಲೆಕ್ಕಾಚಾರ ಆಗಿತ್ತು. ನನ್ನ ಆಪ್ತರು ಬೆಂಬಲವಾಗಿ ನಿಂತರು. ನನ್ನ ಸಹೋದರ ಮನೋಹರ್ ಹಾಗೂ ಸಂಗೀತ ನಿರ್ದೇಶಕ ಮಿಥುನ್ ಮುಕುಂದನ್ ನನಗೆ ಆಪ್ತರು. ಅವರಿಬ್ಬರು ಮಾಡು ಎಂದರು. ರಾಜ್‌ ಬಿ. ಶೆಟ್ಟಿ ಕೂಡ ಯೋಚಿಸಿ ಮಾಡು ಎಂದರು.

"ನನ್ನ ಸಹೋದರನಿಗೆ ಈ ರೀತಿ ಇದೆ ಏನು ಮಾಡುವುದು ಎಂದು ಹೇಳಿದೆ. ರಕ್ಷಿತ್ ಶೆಟ್ಟಿ ಜೊತೆ ಕಿಸ್ ಮಾಡೋದಾ? ಅಯ್ಯೋ ನಿನಗೆ ಬುದ್ಧಿಯಿಲ್ವಾ? ಇಷ್ಟು ಯೋಚಿಸುತ್ತೀಯಾ? ಒಪ್ಕೋ ಎಂದ. ನೀನು ಒಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿದ್ದೀಯಾ. ಹಾಗಾಗಿ ತಪ್ಪಿಲ್ಲ ಮಾಡು ಎಂದ. ನಾವು ಮಾತನಾಡುವಾಗ ನಮ್ಮ ಅಮ್ಮ ಬಂದರು. ಅವರೊಟ್ಟಿಗೆ ಚರ್ಚೆ ಮುಂದುವರೆಯಿತು"

"ನಮ್ಮಣ್ಣ ನಮ್ಮ ಅಮ್ಮನ ಬಳಿ ಒಂದು ವೇಳೆ ಈಕೆಗೆ ಕಿಸ್ಸಿಂಗ್ ಸೀನ್ ಮಾಡುವ ಅವಕಾಶ ಬಂದರೆ ಏನು ಹೇಳುವುದು, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಯಾರೊಟ್ಟಿದಾದರೂ ಕಿಸ್ ಮಾಡಬೇಕು ಅಂದರೆ ಏನು ಹೇಳ್ತೀಯಾ? ಅಂದಾಗ, ಕೊಂಚ ಯೋಚಿಸಿ, ಅರೇ ಹಂಗಿದ್ರೆ ಮಾಡೇ, ಯಾರಾದರೂ ಏನಾದರೂ ಹೇಳಿದರೆ ನಾನು ನೋಡ್ಕೊತ್ತೀನಿ. ನಿನ್ನ ಕರಿಯರ್, ನಿನ್ನ ಚಾಯ್ಸ್ ಅಂದ್ರು. ನಮ್ಮ ಅಮ್ಮ ಆ ರೀತಿ ಹೇಳ್ತಾರೆ ಎಂದುಕೊಂಡಿರಲಿಲ್ಲ. ಕೊನೆಗೆ ನಾನು ಹೆಚ್ಚು ಯೋಚಿಸದೇ ಒಪ್ಪಿಕೊಂಡೆ" ಎಂದು ಚೈತ್ರಾ ವಿವರಿಸಿದ್ದಾರೆ.

More from Filmibeat

English summary
What did Chaitra Achar's mother say when she asked to act in kissing scenes?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X