twitter
    For Quick Alerts
    ALLOW NOTIFICATIONS  
    For Daily Alerts

    ಜಗತ್ತಿನ ಅತ್ಯಂತ ಸಮೃದ್ಧ ಚಿತ್ರೋದ್ಯಮ ಖ್ಯಾತಿಯ ಬಾಲಿವುಡ್‌ಗೆ ನೆಲಕಚ್ಚುವ ಭೀತಿ

    |

    ಎಲ್ಲವೂ ಸರಿಯಾಗಿದ್ದರೆ ಈ ವೇಳೆ ಬಾಲಿವುಡ್ ಮತ್ತು ಭಾರತದ ಇತರೆ ಭಾಷೆಗಳ ಚಿತ್ರರಂಗದಿಂದ ಪೈಪೋಟಿಯ ಸಿನಿಮಾಗಳು ಬಿಡುಗಡೆಯಾಗುತ್ತಿದ್ದವು. ಏಕೆಂದರೆ ಇದು ಬಹುತೇಕ ಪರೀಕ್ಷೆಗಳು ಮುಗಿದು ಬೇಸಿಗೆ ರಜೆಯ ಸಮಯ. ಈ ವೇಳೆ ಸಿನಿಮಾ ಬಿಡುಗಡೆಗೆ ಭರ್ಜರಿ ಸ್ಪರ್ಧೆ ಇರುತ್ತದೆ. ಈ ಕಾರಣದಿಂದ ಬಹುತೇಕ ನಟರ ಸಿನಿಮಾಗಳ ಬಿಡುಗಡೆಗೆ ಈ ಕಾಲಾವಧಿಯನ್ನು ಆಯ್ದುಕೊಳ್ಳುತ್ತಾರೆ.

    Recommended Video

    ಟು-ಇನ್-ಒನ್ ಮಾಸ್ಕ್ ಮನೆಯಲ್ಲೇ ತಯಾರಿಸೋದು ತುಂಬಾ ಈಸಿ | Sonu Sood | Filmibeat Kannada

    ಆದರೆ ಕೊರೊನಾ ವೈರಸ್ ಎಂಬ ಪಿಡುಗು ಜಗತ್ತಿನ ಅತ್ಯಂತ ಸಮೃದ್ಧ ಸಿನಿಮಾ ಉದ್ಯಮ ಎಂಬ ಹೆಗ್ಗಳಿಕೆ ಹೊಂದಿರುವ ಬಾಲಿವುಡ್‌ಅನ್ನು ಅಕ್ಷರಶಃ ನೆಲಕಚ್ಚುವಂತೆ ಮಾಡಿದೆ. ಚಿತ್ರಮಂದಿರಗಳು ತಮ್ಮ ಬಾಗಿಲು ಮುಚ್ಚಿಕೊಂಡಿವೆ. ನಿರ್ಮಾಣ ಸಂಸ್ಥೆಗಳು ಪ್ಯಾಕಪ್ ಮಾಡಿ ತಿಂಗಳುಗಳು ಉರುಳಿವೆ. ಸಿನಿಮಾ ಸ್ಟುಡಿಯೋಗಳಲ್ಲಿ ಕೆಲಸವಿಲ್ಲ. ಹೊಸಬರ, ಹಳಬರ ಸಿನಿಮಾಗಳೆಂದು ಕಡೇ ಪಕ್ಷ ಈ ತಿಂಗಳಲ್ಲಿ ಎರಡು ಪ್ರಮುಖ ಸಿನಿಮಾಗಳು ಬಿಡುಗಡೆಯಾಗುವ ನಿರೀಕ್ಷೆಯಿತ್ತು.

    'ಸೂರ್ಯವಂಶಿ' ಮತ್ತು 1983ರ ವಿಶ್ವಕಪ್ ಕ್ರಿಕೆಟ್‌ನ ಯಶಸ್ಸನ್ನು ನೆನಪಿಸುವ '83' ಸಿನಿಮಾಗಳು ತೆರೆ ಕಾಣಬೇಕಿತ್ತು. ಆದರೆ ಅವುಗಳ ಬಿಡುಗಡೆಗೆ ಅವಕಾಶವಿಲ್ಲ. ಮುಂದಿನ ದಿನಾಂಕ ನಿಗದಿಪಡಿಸಲೂ ಸಾಧ್ಯವಾಗುತ್ತಿಲ್ಲ.

    330 ಮಿಲಿಯನ್ ಡಾಲರ್ ಆದಾಯ ನಷ್ಟ

    330 ಮಿಲಿಯನ್ ಡಾಲರ್ ಆದಾಯ ನಷ್ಟ

    ಈ ಕೆಟ್ಟ ಪರಿಸ್ಥಿತಿಯಿಂದ ಭಾರತದಲ್ಲಿ ಹಿಂದಿ ಚಿತ್ರೋದ್ಯಮವೊಂದೇ 330 ಮಿಲಿಯನ್ ಡಾಲರ್‌ಗೂ ಅಧಿಕ ಬಾಕ್ಸ್ ಆಫೀಸ್ ಆದಾಯ ಮತ್ತು ರದ್ದುಗೊಂಡ ಸಿನಿಮಾ ಚಿತ್ರಿಕರಣಗಳಿಂದ ಕಳೆದುಕೊಂಡಿದೆ. 2018ರಲ್ಲಿ ಭಾರತದಲ್ಲಿ 1,800ಕ್ಕೂ ಅಧಿಕ ಸಿನಿಮಾಗಳು ನಿರ್ಮಾಣಗೊಂಡಿದ್ದವು. ಇದು ಜಗತ್ತಿನ ಯಾವುದೇ ಚಿತ್ರರಂಗಕ್ಕಿಂತಲೂ ಅತಿ ಹೆಚ್ಚು.

    ಚಿತ್ರರಂಗದ ಆದಾಯದ ಮೂಲಕ

    ಚಿತ್ರರಂಗದ ಆದಾಯದ ಮೂಲಕ

    ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದ ಸಿನಿಮಾ ಉದ್ಯಮದ ಆದಾಯವು ಈ ವರ್ಷ ಶೇ 12ರಷ್ಟು ಹೆಚ್ಚಾಗಬೇಕಿತ್ತು. ಇದರಲ್ಲಿ ಶೇ 15ರಷ್ಟು ಪಾಲು ಮಾತ್ರ ಹಾಲಿವುಡ್‌ನದ್ದು. ಉಳಿದ ಶೇ 85ರಷ್ಟು ಆದಾಯ ಭಾರತದ ವಿವಿಧ ಭಾಷೆಗಳ ಚಿತ್ರರಂಗದಿಂದಲೇ ಬರುತ್ತಿತ್ತು.

    ವಾರ್ ಸಿನಿಮಾ

    ವಾರ್ ಸಿನಿಮಾ

    ಹಿಂದಿ ಚಿತ್ರರಂಗದ ಅನೇಕ ನಟ ನಟಿಯರು ಭಾರತದಲ್ಲಷ್ಟೇ ಅಲ್ಲದೆ, ವಿದೇಶದಿಂದಲೇ ವೀಕ್ಷಕರನ್ನು ಸೆಳೆಯುವ ಸಾಮರ್ಥ್ಯ ಹೊಂದಿದ್ದಾರೆ. ಕಳೆದ ವರ್ಷ ಬಿಡುಗಡೆಯಾಗಿದ್ದ 'ವಾರ್' ಚಿತ್ರ 13.7 ಮಿಲಿಯನ್ ಡಾಲರ್ ಅಂತಾರಾಷ್ಟ್ರೀಯ ಗಳಿಕೆ ಕಂಡಿತ್ತು. ಇದು ಅದರ ಒಟ್ಟಾರೆ ಬಾಕ್ಸ್ ಆಫೀಸ್ ಗಳಿಕೆಯ ಕಾಲು ಭಾಗದಷ್ಟಿತ್ತು.

    ವಿದೇಶಿ ಗಳಿಕೆಯೂ ಮುಖ್ಯ

    ವಿದೇಶಿ ಗಳಿಕೆಯೂ ಮುಖ್ಯ

    ಭಾರತದ ಚಿತ್ರರಂಗದ ಪಾಲಿನ ಸಮಸ್ಯೆಗಳು ಜಗತ್ತಿನಾದ್ಯಂತ ಇದೆ. ಏಕೆಂದರೆ ಬಾಲಿವುಡ್‌ ಹಾಗೂ ಇತರೆ ಭಾಷೆಗಳ ಒಟ್ಟಾರೆ ಆದಾಯದಲ್ಲಿ ವಿದೇಶಗಳಲ್ಲಿನ ಪ್ರದರ್ಶನದಿಂದ ಬರುವ ಆದಾಯವು ಬಹಳ ಮಹತ್ವದ್ದು. ಆದರೆ ಕೊರೊನಾ ವೈರಸ್ ಕಾರಣದಿಂದ ಭಾರತೀಯ ಸಿನಿಮಾಗಳ ಭವಿಷ್ಯ ಅತಂತ್ರದಲ್ಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಚಿತ್ರರಂಗ ಉಸಿರಾಡುವುದು ಕಷ್ಟ.

    ಸಿನಿಮಾ ಸಂಖ್ಯೆ ಕುಸಿತ

    ಸಿನಿಮಾ ಸಂಖ್ಯೆ ಕುಸಿತ

    ಬಾಲಿವುಡ್ ಹಾಗೂ ಇತರೆ ಅನೇಕ ಸಿನಿಮಾಗಳು ಚಿತ್ರೀಕರಣ ಆರಂಭದಿಂದಲೇ ಬಿಡುಗಡೆಯ ಸಮಯದ ಲೆಕ್ಕಾಚಾರ ಹಾಕಿರುತ್ತವೆ. ಹಬ್ಬ, ರಜಾದಿನಗಳನ್ನು ಹಾಗೂ ಎದುರಾಳಿ ಯಾವ ಸಿನಿಮಾ ಬರಬಹುದು ಎನ್ನುವ ಯೋಚನೆಯೂ ಇದರಲ್ಲಿ ಪರಿಗಣಿಸಲಾಗಿರುತ್ತದೆ. ಆದರೆ ಈಗ ಎಲ್ಲ ಲೆಕ್ಕಾಚಾರಗಳೂ ತಲೆಕೆಳಗಾಗಿವೆ. ಈ ವರ್ಷ ಬಿಡುಗಡೆಯಾಗಲಿರುವ ಸಿನಿಮಾಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿಯಲಿವೆ. ಹಾಗೆಯೇ ಆದಾಯ ಕೂಡ.

    ಪ್ರೇಕ್ಷಕರ ಕೊರತೆಯ ಅಪಾಯ

    ಪ್ರೇಕ್ಷಕರ ಕೊರತೆಯ ಅಪಾಯ

    ಚಿತ್ರಮಂದಿರಗಳು ತೆರೆಯುವುದು ಆರಂಭವಾದರೂ ಅವುಗಳ ಮುಂದೆ 'ಚಿತ್ರಮಂದಿರ ಭರ್ತಿಯಾಗಿದೆ' ಎಂಬ ಫಲಕ ಕಾಣಿಸುವ ಸಾಧ್ಯತೆ ತೀರಾ ಕಡಿಮೆ. ಚೀನಾದಲ್ಲಿ ಸಿನಿಮಾಗಳು ಸಾಮಾಜಿಕ ಅಂತರದ ನಿಯಮದೊಂದಿಗೇ ಟಿಕೆಟ್ ಮಾರಾಟ ಆರಂಭಿಸಿವೆ. ಇದು ಭಾರತದಲ್ಲಿಯೂ ಜಾರಿಯಾದರೆ ನಷ್ಟವೇ ಹೆಚ್ಚು. ಚಿತ್ರಮಂದಿರದಲ್ಲಿ ಶೇ 50ರಷ್ಟು ಮಾತ್ರ ಪ್ರೇಕ್ಷಕರಿಗೆ ಪ್ರವೇಶ ಎಂದಾದರೆ ಅದ್ಧೂರಿ ಬಜೆಟ್ ಸಿನಿಮಾಗಳ ವೆಚ್ಚವನ್ನು ಸರಿದೂಗಿಸುವುದು ಅಸಾಧ್ಯ. ಆರ್ಥಿಕ ಮತ್ತು ಮಾನಸಿಕ ಸಂಕಷ್ಟದಲ್ಲಿರುವ ಪ್ರೇಕ್ಷಕರೂ ಮನರಂಜನೆ ಪಡೆಯುವ ಉತ್ಸಾಹದಲ್ಲಿರುವುದಿಲ್ಲ. ಇದರಿಂದ ಚಿತ್ರರಂಗದ ಭವಿಷ್ಯ ಮತ್ತಷ್ಟು ಕರಾಳವಾಗಿರಲಿದೆ ಎಂಬ ಭೀತಿ ಎದುರಾಗಿದೆ.

    English summary
    Indian film industry is in trouble due to coronavirus pandemic, it may face huge loss if the situation continues like this.
    Sunday, May 10, 2020, 15:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X