Daniel Balaji Death:45-50 ವಯಸ್ಸಿನ ಒಳಗಿನ ತಾರೆಯರ ಹೃದಯಾಘಾತಕ್ಕೆ ಕಾರಣ ಒತ್ತಡ ಅಥವಾ ಫಿಟ್ನೆಸ್?

By ಫಿಲ್ಮಿಬೀಟ್ ಡೆಸ್ಕ್

ಭಾರತದಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ವಯಸ್ಸು 45 ರಿಂದ 50ರ ವಯಸ್ಸಿನವರಿಗೆ ಹೃದಯಾಘಾತ ಸಂಭವಿಸುತ್ತಿದೆ. ಫಿಟ್‌ ಆಗಿರುವ ತಾರೆಯರಿಗೆ ಹೃದಯಾಘಾತ ಅನ್ನುವ ಸುದ್ದಿಯನ್ನು ಕೇಳಿ ಯುವ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಸದಾ ಫಿಟ್‌ನೆಸ್, ಡಯೆಟ್ ಅಂತಿರುವ ನಟ-ನಟಿಯರು ಹೃದಯಾಘಾತಕ್ಕೆ ಒಳಗಾಗುತ್ತಿರುವ ನಿಜಕ್ಕೂ ಆತಂಕ. ಅದರಲ್ಲೂ ಸಿನಿಮಾ ತಾರೆಯರಿಗೆ ಹಾರ್ಟ್ ಆಟ್ಯಾಕ್ ಆದಾಗ ಸಿನಿಪ್ರಿಯರಲ್ಲೂ ಭಯ ಹುಟ್ಟಿಕೊಳ್ಳುತ್ತೆ. ಹಾಗಂತ ಕೇವಲ ಸಿನಿಮಾ ತಾರೆಯರಿಗಷ್ಟೇ ಅಲ್ಲ. 45 ರಿಂದ 50ರ ವಯಸ್ಸಿನ ಅಂತರದಲ್ಲಿರುವವರಿಗೆ ಹೆಚ್ಚಾಗಿ ಹೃದಯಾಘಾತ ಸಂಭವಿಸುತ್ತಿದೆ.

ನಿನ್ನೆಯಷ್ಟೇ (ಮಾರ್ಚ್ 29) ಕಿರಾತಕ ಸಿನಿಮಾದ ನಟ ಡ್ಯಾನಿಯಲ್ ಬಾಲಾಜಿ ಹೃದಯಾಘಾತದಿಂದ ಮೃತ ಪಟ್ಟಿದ್ದಾರೆ. ಅವರಿಗೂ 48 ವರ್ಷ ವಯಸ್ಸಾಗಿತ್ತು. ಹೀಗೆ ಇವರ ಆಸುಪಾಸಿನ ವಯಸ್ಸಿನ ಕೆಲ ನಟ-ನಟಿಯರಿಗೂ ಹೃದಯಾಘಾತವಾಗಿತ್ತು. ಅವರಲ್ಲಿ ಅದೃಷ್ಟವಶಾತ್ ಕೆಲವರ ಜೀವ ಉಳೀತು. ಮತ್ತೆ ಕೆಲವರು ಪ್ರಾಣ ಕಳೆದುಕೊಂಡಿದ್ದರು. ಇಂತಹ ತಾರೆಯರ ಪಟ್ಟಿ ಇಲ್ಲಿದೆ.

Daniel Balaji Death Indian stars who suffered heart attacks at the age of 45 to 50

ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆ

ನಟ ಶ್ರೇಯಸ್ ತಲ್ಪಾಡೆ ಬಾಲಿವುಡ್‌ನ ಫಿಟ್ ಆಗಿದ್ದ ನಟರಲ್ಲಿ ಒಬ್ಬರು. ಚಿತ್ರರಂಗದಲ್ಲಿರುವ ಶಿಸ್ತಿನ ಹೀರೊಗಳಲ್ಲಿ ಇವರು ಕೂಡ ಒಬ್ಬರು. ಕಳೆದ ವರ್ಷ ಡಿಸೆಂಬರ್ 14ರಂದು ಶೂಟಿಂಗ್ ಮುಗಿಸಿದ ಮನೆಗೆ ತೆರಳಿದ್ದ ಶ್ರೇಯಸ್ ತಲ್ಪಾಡೆಗೆ ಹೃದಯಾಘಾತವಾಗಿತ್ತು. ಅದೃಷ್ಟವಶಾತ್ ಶ್ರೇಯಸ್ ತಲ್ಪಾಡೆ ಪ್ರಾಣಾಪಾಯದಿಂದ ಪಾರಾಗಿದ್ದರು. ಇವರಿಗೂ 48 ವರ್ಷ ವಯಸ್ಸು.

Daniel Balaji Death Indian stars who suffered heart attacks at the age of 45 to 50

ನಟಿ ಸುಶ್ಮಿತಾ ಸೇನ್

ಮಾಜಿ ಭುವನ ಸುಂದರಿ ಹಾಗೂ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಕೂಡ ಫಿಟ್ನೆಸ್‌ಗೆ ಹೆಚ್ಚು ಗಮನ ಕೊಡುವ ನಟಿ. ವಯಸ್ಸು 48 ಆಗಿದ್ದರೂ, ಸುಶ್ಮಿತಾ ಸೇನ್ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದರು. ಆದರೆ, 2023, ಮಾರ್ಚ್ ತಿಂಗಳಲ್ಲಿ ಅವರಿಗೆ ಹೃದಯಾಘಾತವಾಗಿತ್ತು. ಈ ವಿಷಯವನ್ನು ಖುದ್ದಾಗಿ ಸುಶ್ಮಿತಾ ಸೇನ್ ಅವರೇ ಹೇಳಿಕೊಂಡಿದ್ದರು.

Daniel Balaji Death Indian stars who suffered heart attacks at the age of 45 to 50

ಕಾಮಿಡಿಯನ್ ಸುನಿಲ್ ಗ್ರೋವರ್

ದಿ ಕಪಿಲ್ ಶರ್ಮಾ ಶೋ ಸೇರಿದಂತೆ ಹಲವು ಕಾಮಿಡಿ ರಿಯಾಲಿಟಿ ಶೋಗಳಲ್ಲಿ ಸುನಿಲ್ ಗ್ರೋವರ್ ಜನರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಿದ್ದರು. ಸದಾ ನಗಿಸುವ ನಟ ಎರಡು ವರ್ಷಗಳ ಹಿಂದಷ್ಟೇ ಹೃದಯಾಘಾತವಾಗಿತ್ತು. 2022ರ ಆರಂಭದಲ್ಲಿ ಹೃದಯಾಘಾತವಾಗಿತ್ತು. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಗಿತ್ತು. ಇವರಿಗೂ 45 ವರ್ಷ ವಯಸ್ಸಿನಲ್ಲಿ ಹೃದಯಾಘಾತವಾಗಿತ್ತು.

Daniel Balaji Death Indian stars who suffered heart attacks at the age of 45 to 50

ನಿರ್ದೇಶಕ ರೆಮೋ ಡಿಸೋಜಾ

ಬಾಲಿವುಡ್‌ನ ಜನಪ್ರಿಯ ನೃತ್ಯ ನಿರ್ದೇಶಕ ಹಾಗೂ ಡೈರೆಕ್ಟರ್ ರೆಮೋ ಡಿಸೋಜಾಗೂ 2020ನಲ್ಲಿ ಹೃದಯಾಘಾತವಾಗಿತ್ತು. ತನ್ನ 45ನೇ ವಯಸ್ಸಿನಲ್ಲಿ ಹೃದಯಾಘಾತವಾಗಿದ್ದು, ಕೋಕಿಲಾಬೇನ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಆಂಜಿಯೋಪ್ಲಾಸ್ಟಿ ಮಾಡಿ ಗುಣಮುಖರನ್ನಾಗಿ ಮಾಡಲಾಗಿತ್ತು. ಸರ್ಜರಿಯ ಬಳಿಕ ತಮ್ಮ ಅಭಿಮಾನಿಗಳಿಗೆ ಆಸ್ಪತ್ರೆ ರೂಮಿನಿಂದಲೇ ಡ್ಯಾನ್ಸ್ ಮಾಡಿ ವಿಡಿಯೋ ಬಿಡುಗಡೆ ಮಾಡಿದ್ದರು.

Daniel Balaji Death Indian stars who suffered heart attacks at the age of 45 to 50

ಅಭಿಮಾನಿಗಳನ್ನು ಅಗಲಿದವರು

ಕೆಲವು ತಾರೆಯರಿಗೆ ತೀವ್ರ ಹೃದಯಾಘಾತವಾಗಿತ್ತು. ಹಿಂದಿ ಕಿರುತೆರೆ ಲೋಕದ ನಟ ಸಿದ್ಧಾರ್ಥ್ ವೀರ್ ಸೂರ್ಯವಂಶಿ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುವಾಗ ಹೃದಯಾಘಾತವಾಗಿತ್ತು. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅವರಿಗೂ 46 ವರ್ಷ ವಯಸ್ಸಾಗಿತ್ತು. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಕೂಡ 46ನೇ ವಯಸ್ಸಿಗೆ ಹೃದಯಾಘಾತವಾಗಿತ್ತು.

More from Filmibeat

English summary
Daniel Balaji Death: why film stars who suffered heart attack at the age of 45 to 50:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X