Nisha Noor: ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಲ್ಪಟ್ಟು ಕೊನೆಗೆ ಏಡ್ಸ್‌ನಿಂದ ಕೊನೆಯುಸಿರೆಳೆದ ನಟಿ

ಚಿತ್ರರಂಗ ಅನ್ನೋದು ರಂಗೀನ್ ಪ್ರಪಂಚ. ಸಿನಿಮಾ ಅನ್ನೋದು ಮೇಲೆ ತಳುಕು ಒಳಗೆ ಹುಳುಕು ಎಂದು ಕೆಲವರು ಇವತ್ತಿಗೂ ತಮ್ಮ ಮಕ್ಕಳನ್ನು ಈ ಕ್ಷೇತ್ರಕ್ಕೆ ಕಳುಹಿಸಲು ಹಿಂದು ಮುಂದು ನೋಡ್ತಾರೆ. ಬಣ್ಣದ ಲೋಕದಲ್ಲಿ ಮಿಂಚಿದ ಕೆಲವರು ಬಹಳ ಹೀನಾಯ ಸ್ಥಿತಿ ತಲುಪಿದ ಉದಾಹರಣೆಗಳಿವೆ. ತಮಿಳು ನಟಿ ನಿಶಾ ನೂರ್ ಕೊನೆಯ ದಿನಗಳು ಬಹಳ ಕೆಟ್ಟದಾಗಿತ್ತು.

ಹೆಸರು, ಖ್ಯಾತಿ ಇದ್ದಾಗ ಎಲ್ಲರೂ ಜೈಕಾರ ಹಾಕುತ್ತಾರೆ. ಆದರೆ ಒಮ್ಮೆ ಅವಕಾಶಗಳು ಸಿಗದಿದ್ದರೆ ಕಥೆ ಮುಗೀತು. ಆಗ ಸಹಾಯಕ್ಕೆ ಯಾರು ಬರಲ್ಲ. ಇಂತ ಕೆಟ್ಟ ಪರಿಸ್ಥಿತಿಯಲ್ಲೇ ನಟಿ ನಿಶಾ ತಪ್ಪು ದಾರಿ ಹಿಡಿದರು ಎನ್ನಲಾಗುತ್ತದೆ. ಚಿತ್ರರಂಗದಲ್ಲಿ ಸದಾ ಓಡುತ್ತಿರಬೇಕು. ನಿಂತರೆ ಆಗುವುದಿಲ್ಲ. ಇದೇ ಕಾರಣಕ್ಕೆ ಕೆಲವರು ಮಾತ್ರ ಚಿತ್ರರಂಗದಲ್ಲಿ ಗೆಲ್ಲೋಕೆ ಸಾಧ್ಯ. ಸಾಕಷ್ಟು ಜನ ಒಂದೆರಡು ಚಿತ್ರಗಳಿಗೆ ಬಣ್ಣದಲೋಕದ ಸಹವಾಸ ಸಾಕು ಎಂದು ಹೊರಟುಬಿಡುತ್ತಾರೆ. ನಟಿಯರಂತೂ ಅವಕಾಶಗಳು ಸಿಗದಿದ್ದರೆ ಮದುವೆ, ಫ್ಯಾಮಿಲಿ ಎಂದು ಸೈಲೆಂಟ್ ಆಗಿಬಿಡುತ್ತಾರೆ.

Nisha-Noor- Died- due- to -AIDS

80, 90ರ ದಶಕದಲ್ಲಿ ತಮಿಳು, ಕನ್ನಡ ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ ನಟಿ ನಿಶಾ ನೂರ್ ಏಡ್ಸ್‌ ಸಂಬಂಧಿತ ಸಮಸ್ಯೆಯಿಂದ ಕೊನೆಯುಸಿರೆಳೆದರು. ರಜನಿಕಾಂತ್, ಕಮಲ್‌ ಹಾಸನ್‌ರಂತಹ ದಿಗ್ಗಜ ನಟರ ಜೊತೆ ಮಿಂಚಿದ ನಟಿ ಕೊನೆಗೆ ಅವಕಾಶಗಳಿಲ್ಲದೇ ವೇಶ್ಯಾವಾಟಿಕೆ ಕೂಪಕ್ಕೆ ತಳ್ಳಲ್ಪಟ್ಟಿದ್ದರು ಎನ್ನಲಾಗುತ್ತದೆ. ಚಿತ್ರರಂಗದಲ್ಲಿ ಅವಕಾಶಗಳು ಸಿಗದಿದ್ದಾಗ ಬೇರೆ ಕ್ಷೇತ್ರದತ್ತ ಆಕೆ ಮುಖ ಮಾಡಿದ್ದರೆ ಚೆನ್ನಾಗಿತ್ತು. ಆದರೆ ಜೀವನಕ್ಕಾಗಿ ನಿರ್ಮಾಪಕನೊಬ್ಬನ ಬಲವಂತದಿಂದ ಆಕೆ ಕೆಟ್ಟ ಮಾರ್ಗ ಹಿಡಿದರು ಎಂದು ಕೆಲವರು ಹೇಳುತ್ತಾರೆ.

ಗ್ಲಾಮರ್ ಡಾಲ್ ಆಘಗಿ ಮಿಂಚು

80ರ ದಶಕದಲ್ಲಿ ನಿಶಾ ನೂರ್ ಬಿಂದಾಸ್ ಪಾತ್ರಗಳಲ್ಲಿ ನಟಿಸಿ ಸಿನಿರಸಿಕರ ಮನಗೆದ್ದಿದ್ದರು. ಅವತ್ತಿನ ಕಾಲಕ್ಕೆ ಸ್ವಿಮ್ ಸೂಟ್ ಧರಿಸಿ ನಟಿಸೋಕು ಸಿದ್ಧರಿದ್ದರು. ಬಾಲಚಂದ್ರನ್, ವಿಸು ಚಂದ್ರಶೇಖರ್, ಭಾರತಿ ರಾಜಾರಂತಹ ನಿರ್ದೇಶಕ ಸಿನಿಮಾಗಳಲ್ಲಿ ನಟಿಸಿದರು. ಕಮಲ್ ಹಾಸನ್ ಜೊತೆ 'ಟಿಕ್ ಟಿಕ್ ಟಿಕ್' ಚಿತ್ರದ ಮೂವರು ನಟಿಯರಲ್ಲಿ ಒಬ್ಬರಾಗಿದ್ದರು. ಸನ್ನಿವೇಶವೊಂದರಲ್ಲಿ ಕಮಲ್ ಸುತ್ತ ಮಾಧವಿ, ರಾಧ ಹಾಗೂ ನಿಶಾ ಸ್ವಿಮ್‌ ಸೂಟ್‌ನಲ್ಲಿ ನಿಂತಿರುವ ಫೋಟೊವೊಂದು ಸೋಶಿಯಲ್ ಮೀಡಿಯಾದಲ್ಲಿ ಪದೇ ಪದೇ ವೈರಲ್ ಆಗುತ್ತಿರುತ್ತದೆ.

Nisha-Noor- Died- due- to -AIDS

ತಪ್ಪು ದಾರಿ ಹಿಡಿದಿದ್ದೇಕೆ ನಿಶಾ?

ನಿಶಾ 90ರ ದಶಕದ ಮಧ್ಯ ಭಾಗದಲ್ಲಿ ಅವಕಾಶಗಳಿಲ್ಲದೇ ಸಂಕಷ್ಟ ಎದುರಿಸುವಂತಾಯಿತು. ದುಡಿದದ್ದು ಖಾಲಿ ಆದ ಮೇಲೆ ಹೊಟ್ಟೆಪಾಡಿಗಾಗಿ ಏನಾದರೂ ಕೆಲಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತಂತೆ. ಇಂತಹ ಸಮಯದಲ್ಲಿ ಆಕೆ ಒಂದು ಕೆಟ್ಟ ನಿರ್ಧಾರ ಕೈಗೊಂಡಿದ್ದರಂತೆ. ವೇಶ್ಯಾವಾಟಿಕೆ ಧಂದೆಗೆ ಇಳಿದರಂತೆ. ಅಲ್ಲಿಂದ ಮುಂದೆ ಆಕೆಯ ಜೀವನ ಮತ್ತಷ್ಟು ಹೀನಾಯ ಸ್ಥಿತಿಗೆ ತಲುಪಿತ್ತು.

ನಿಶಾ ನೂರ್‌ಗೆ ಹೆಚ್‌ಐವಿ ಸೋಂಕು?

ಕೊನೆಯ ದಿನಗಳಲ್ಲಿ ನಿಶಾ ಸರಿಯಾದ ಸೂರು ಇಲ್ಲದೇ ಒಂದು ದರ್ಗಾ ಬಳಿ ಮಲಗಿದ್ದರಂತೆ. ಆಕೆಯ ದೇಹ ಬಡಕಲಾಗಿ, ಕಳಾಹೀನವಾಗಿ ಗುರುತು ಸಿಗದ ಸ್ಥಿತಿ ತಲುಪಿದ್ದರು. ನಿಶಾ ದಯನೀಯ ಸ್ಥಿತಿ ನೋಡಿ ಎನ್‌ಜಿಓವೊಂದು ಆಕೆಯ ಸಹಾಯಕ್ಕೆ ಮುಂದಾಗಿತ್ತು. ಆಕೆಯ ಆರೋಗ್ಯ ಪರೀಕ್ಷೆ ಮಾಡಿಸಿದ ಬಳಿಕ ಆಕೆ ಮಾರಣಾಂತಿಕ ಏಡ್ಸ್ ಕಾಯಿಲೆಯಿಂದ ಬಳಲುತ್ತಿರುವುದು ಗೊತ್ತಾಗಿತ್ತಂತೆ. 2007ರಲ್ಲಿ ಆಕೆ ಹೆಚ್‌ಐವಿ ವಿರುದ್ಧ ಹೋರಾಡುತ್ತಲೇ ಕೊನೆಯುಸಿರೆಳೆದರು.

ನಿಶಾ ನೂರ್ ನಟಿಸಿದ ಚಿತ್ರಗಳು

ತಮಿಳಿನ 'ಮಂಗಲ ನಾಯಕಿ' ಸಿನಿಮಾ ಮೂಲಕ ನಿಶಾ ಚಿತ್ರರಂಗ ಪ್ರವೇಶಿಸಿದರು. ಮುಂದೆ 'ಇಲ್ಲಮೈ ಕೋಲಂ', 'ಎನಕ್ಕಾಗ ಕಾತಿರು', 'ಅವಳ್ ಸುಮಂಗಲಿತಾನ್', 'ಶ್ರೀ ರಾಘವೇಂದ್ರ' ಸೇರಿದಂತೆ ಹಲವು ತಮಿಳು ಸಿನಿಮಾಗಳಲ್ಲಿ ಮಿಂಚಿದರು. ಮಮ್ಮುಟಿ ಜೊತೆ 'ಅಯ್ಯರ್ ದ ಗ್ರೇಟ್' ಹಾಗೂ ಮೋಹನ್ ಲಾಲ್ ಜೊತೆ 'ದೇವಸುರಮ್' ಸೇರಿದಂತೆ ಕೆಲ ಮಲಯಾಳಂ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.

More from Filmibeat

English summary
Dark Life secrets of actress Nisha noor Who Died due to AIDS. She died in the year 2007 in the hospital. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X