ಅಂದು ಸಂದೇಶ್ ನಾಗರಾಜ್, ಎಸ್ ನಾರಾಯಣ್‌ಗೆ ಕಾಲ್‌ಶೀಟ್ ಕೊಡಲ್ಲ ಎಂದಿದ್ದೇಕೆ ದರ್ಶನ್? ಏನದು ಘಟನೆ?
ತೂಗುದೀಪ ಶ್ರೀನಿವಾಸ್ ಅಂತಹ ಮೇರು ನಟನ ಪುತ್ರ ಆಗಿದ್ದರೂ ದರ್ಶನ್‌ಗೆ ಸಿನಿಮಾಗಳಲ್ಲಿ ಅವಕಾಶ ಸಿಕ್ಕಿರಲಿಲ್ಲ. ತಂದೆ ನಿಧನದ ಬಳಿಕ ಚಿತ್ರರಂಗದಲ್ಲಿ ಒಂದೇ ಒಂದು ಅವಕಾಶವನ್ನು ಗಿಟ್ಟಿಸಿಕೊಳ್ಳುವುದಕ್ಕೆ ಪಡಬಾರದ ಕಷ್ಟ ಪಟ್ಟಿದ್ದಾರೆ. ಇದೇ ಚಿತ್ರರಂಗದಿಂದ ಅವಮಾನಗಳನ್ನು ಎದುರಿಸಿದ್ದಾರೆ. ಚಿತ್ರರಂಗದಲ್ಲಿ ನಿರ್ಮಾಪಕರ ಮನೆಗಳನ್ನು ಅಲೆದಿದ್ದಾರೆ ದರ್ಶನ್.
ಚಿತ್ರರಂಗಕ್ಕೂ ಬರುವುದಕ್ಕೂ ಮುನ್ನ ದರ್ಶನ್ ಅವರ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಸರಿಯಿರಲಿಲ್ಲ. ಆ ವೇಳೆ ದರ್ಶನ್ ಮುಗ್ಧರಾಗಿದ್ದರು. ಕಷ್ಟ ಪಟ್ಟು ದುಡಿಯಬೇಕು ಅನ್ನೋ ಮನೋಭಾವವಿತ್ತು. ಮೊದಲ ಸಿನಿಮಾ 'ಮೆಜೆಸ್ಟಿಕ್' ಸಿಗವುದಕ್ಕೂ ಮುನ್ನ ಅವಕಾಶಗಳನ್ನು ಕೇಳಿಕೊಂಡು ಅದೆಷ್ಟು ಮಂದಿ ಬಳಿಗೆ ಹೋದರೋ ಅವರಿಗೆ ಗೊತ್ತಿರಲಿಕ್ಕಿಲ್ಲ. ಹೀಗೆ ಕಷ್ಟಪಟ್ಟು ಕಟ್ಟಿಕೊಂಡಿದ್ದ ಸ್ವಂತ ಬ್ರ್ಯಾಂಡ್ ಇದು.

ಇಂದು ಆ ಬ್ರ್ಯಾಂಡ್ ಅನ್ನು ಅವರೇ ಹಾಳು ಮಾಡಿಕೊಂಡಿದ್ದಾರೆ. ಮೊದಲಿನಿಂದಲೂ ದರ್ಶನ್ ಕೋಪ ಜಾಸ್ತಿ ಅನ್ನೋದಕ್ಕೆ ಹಿರಿಯರು ಪತ್ರಕರ್ತರು ಹಲವು ಉದಾಹರಣೆಗಳನ್ನು ಕೊಡುತ್ತಾರೆ. 'ಮೆಜೆಸ್ಟಿಕ್' ಸಿನಿಮಾಗೂ ಮುನ್ನ ದರ್ಶನ್ ಅವಕಾಶ ಕೇಳಿಕೊಂಡು ನಿರ್ಮಾಪಕ ಸಂದೇಶ್ ನಾಗರಾಜ್ ಹಾಗೂ ನಿರ್ದೇಶಕ ಎಸ್.ನಾರಾಯಣ್ ಬಳಿ ಹೋಗಿದ್ದರಂತೆ. ಅಲ್ಲಿ ಅವರಿಗೆ ಆದ ಅವಮಾನದಿಂದ ಮುಂದೆ ಕಾಲ್‌ಶೀಟ್ ಕೊಡುವುದಿಲ್ಲ ಅಂತ ತೀರ್ಮಾಣ ಮಾಡಿದ್ದರಂತೆ.
ಮೈಸೂರಿನವರೇ ಆಗಿದ್ದ ನಿರ್ದೇಶಕ ಸಂದೇಶ್ ನಾಗರಾಜ್ ಸಿನಿಮಾ ನಿರ್ಮಾಣ ಮಾಡುತ್ತಿದ್ದರು. ಆ ವೇಳೆ ದರ್ಶನ್ ಅವರ ಬಳಿ ಅವಕಾಶ ಕೇಳಿಕೊಂಡು ಹೋಗಿದ್ದರಂತೆ. ಆಗ ಸಂದೇಶ್ ನಾಗರಾಜ್ ಮೈಸೂರಿನಲ್ಲಿರುವ ಮನೆ ಮಾರಿ ಸಿನಿಮಾ ಮಾಡು ಎಂದು ಹೇಳಿದ್ದರಂತೆ. ಇದರಿಂದ ದರ್ಶನ್‌ಗೆ ತುಂಬಾನೇ ಬೇಸರ ಆಗಿತ್ತು. ಅಲ್ಲಿಂದ ನೊಂದುಕೊಂಡು ವಾಪಾಸ್ ಬಂದಿದ್ದರು ಎಂದು ಅವರನ್ನು ಹತ್ತಿರದಿಂದ ಬಲ್ಲವರು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
ಹಾಗೇ ಇದೇ ರೀತಿ ಎಸ್.ನಾರಾಯಣ್ ಬಳಿ ಹೋದಾಗಲೂ ದರ್ಶನ್‌ಗೆ ಅದೇ ಅನುಭವ ಆಗಿದೆ. ಆಗ ಎಸ್.ನಾರಾಯಣ್ ಯಶಸ್ಸಿನ ತುತ್ತತುದಿಯಲ್ಲಿ ಇದ್ದರು. ಹೀಗಾಗಿ ಅವರ ಬಳಿ ಹೋದಾಗಲೂ ದರ್ಶನ್‌ಗೆ ಅವಮಾನ ಆಗಿತ್ತು ಅನ್ನೋ ಅಂತ ಆಪ್ತರು ಹೇಳಿಕೊಂಡಿದ್ದಾರೆ. ಹೀಗಾಗಿ 'ಮೆಜೆಸ್ಟಿಕ್' ಸಿನಿಮಾ ಮುಹೂರ್ತ ಆಗುತ್ತಿದ್ದಂತೆ ದರ್ಶನ್ ನನ್ನ ಲೈಫ್‌ನಲ್ಲಿ ಸಂದೇಶ್ ನಾಗರಾಜ್ ಹಾಗೂ ಎಸ್ ನಾರಾಯಣ್‌ಗೆ ಕಾಲ್‌ಶೀಟ್ ಕೊಡುವುದಿಲ್ಲ ಎಂದು ಆಪ್ತರ ಬಳಿಕ ಹೇಳಿಕೊಂಡಿದ್ದರಂತೆ. ಬಳಿಕ ಆಗಿದ್ದು ಬೇರೆ.

'ಮೆಜೆಸ್ಟಿಕ್' ಹಿಟ್ ಆದ ಬಳಿಕ ದರ್ಶನ್ ಹೆಸರು ಚಿತ್ರರಂಗದಲ್ಲಿ ಓಡಾಡುವುದಕ್ಕೆ ಶುರು ಮಾಡಿತ್ತು. ಅವಕಾಶ ಇವರನ್ನೇ ಹುಡುಕಿಕೊಂಡು ಬರಲಾರಂಭಿಸಿದವು. ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ ಬಳಿಕ ದರ್ಶನ್ ಸ್ಟಾರ್ ಪಟ್ಟಕ್ಕೆ ಏರಿದ್ದನ್ನು ವಿಶೇಷವಾಗಿ ಹೇಳಬೇಕಿಲ್ಲ. ದರ್ಶನ್ ಸೂಪರ್‌ಸ್ಟಾರ್ ಆದ್ಮೇಲೆ ಯಾರಿಗೆ ಕಾಲ್‌ಶೀಟ್ ಕೊಡುವುದಿಲ್ಲ ಎಂದು ಹೇಳಿಕೊಂಡಿದ್ದರೋ ಅದೇ ನಿರ್ಮಾಪಕನಿಗೆ ಆಪ್ತರಾಗಿದರು. ನಿರ್ಮಾಪಕ ಸಂದೇಶ್ ನಾಗರಾಜ್ ಜೊತೆ ದರ್ಶನ್ ಆತ್ಮೀಯತೆ ಹೆಚ್ಚಾಯ್ತು.
ಸಂದೇಶ್ ನಾಗರಾಜ್ ನಿರ್ಮಿಸಿದ್ದ 'ಪ್ರಿನ್ಸ್', 'ಮಿಸ್ಟರ್ ಐರಾವತ','ಅಂಬರೀಷ', 'ಒಡೆಯ' ಅಂತಹ ಸಿನಿಮಾಗಳಲ್ಲಿ ದರ್ಶನ್ ನಾಯಕನಾಗಿ ನಟಿಸಿದ್ದಾರೆ. ಅಷ್ಟೇ ಯಾಕೆ ಮೈಸೂರಿನಲ್ಲಿ ಸಂದೇಶ್ ನಾಗರಾಜ್ ಅವರ ಐಶಾರಾಮಿ ಹೋಟೆಲ್‌ನಲ್ಲಿ ದರ್ಶನ್ ಪರ್ಮನೆಂಟ್ ರೂಂ ಮೀಸಲಿರುತ್ತಿತ್ತು. ಆ ಮಟ್ಟಿಗೆ ಇಬ್ಬರು ಅನ್ನೋನ್ಯರಾಗಿದ್ದರು. ಆದರೆ, ಈ ಸಂಬಂಧವನ್ನೂ ದರ್ಶನ್ ಉಳಿಸಿಕೊಳ್ಳಲಿಲ್ಲ.
ಅವರ ಹೋಟೆಲ್‌ನಲ್ಲೇ ದರ್ಶನ್ ಗಲಾಟೆ ಮಾಡಿದ್ದರು. ಇದೇ ನಿರ್ಮಾಪಕ ಸಂದೇಶ್ ನಾಗರಾಜ್ ಅವರಿಗೆ ಬಾಯಿ ಬಂದಂತೆ ಬೈದಿದ್ದರು. ಈ ಕಾರಣಕ್ಕೆ ದರ್ಶನ್‌ರನ್ನು ನಿರ್ಮಾಪಕ ಸಂದೇಶ್ ನಾಗರಾಜ್ ದೂರ ಮಾಡಿದ್ದರು. ಇನ್ಮುಂದೆ ದರ್ಶನ್ ಜೊತೆ ಸಿನಿಮಾ ಮಾಡದೇ ಇರುವುದಕ್ಕೆ ನಿರ್ಧರಿಸಿದ್ದರು. ಇಲ್ಲೂ ತನ್ನ ಬಾಡ್ ಬಿಹೇವಿಯರ್‌ನಿಂದ ಸಂದೇಶ್ ನಾಗರಾಜ್ ಸ್ನೇಹವನ್ನೂ ದರ್ಶನ್ ಕಳೆದುಕೊಂಡಿದ್ದರು. ಆಗಲೂ ದರ್ಶನ್ ಸುತ್ತಮುತ್ತ ಇರುವವರಿಂದಲೇ ಇವರಿಬ್ಬರ ಸ್ನೇಹ ಮುರಿದು ಬಿತ್ತು ಎಂಬ ಆರೋಪ ಕೇಳಿ ಬಂದಿತ್ತು.


Click it and Unblock the Notifications











