15 ವರ್ಷಗಳಲ್ಲಿ ಕನ್ನಡ ಚಿತ್ರರಂಗದ ನಂಬರ್ ವನ್ ಹೀರೊ ಡಿಬಾಸ್ ದರ್ಶನ್; ಸಾಕ್ಷಿ ಬೇಕಾ?
ಚಾಲೆಂಜಿಂಗ್ ಸ್ಟಾರ್ ದರ್ಶನ್. ಕನ್ನಡ ಚಿತ್ರರಂಗದಲ್ಲಿ ದೊಡ್ಡ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿರುವ ನಟ. ಮಾಸ್ ಸಿನಿಮಾಗಳ ಮೂಲಕ ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಹಾಕಿದ ಸಾರಥಿ. 25 ವರ್ಷಗಳಲ್ಲಿ 55ಕ್ಕೂ ಅಧಿಕ ಸಿನಿಮಾಗಳಲ್ಲಿ ಹೀರೊ ಆಗಿ ಅಬ್ಬರಿಸಿದ್ದಾರೆ ದರ್ಶನ್. ಹಾದಿಯಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದಾರೆ.
ಸೋತಾಗಲೆಲ್ಲಾ ಮತ್ತೆ ಫೀನಿಕ್ಸ್ ರೀತಿ ಡಿಬಾಸ್ ಎದ್ದು ಬಂದಿದ್ದಾರೆ. ಬರೀ ಸಿನಿಮಾ ಅಲ್ಲ, ತಮ್ಮ ಪ್ರಾಣಿ-ಪಕ್ಷಿ ಕಾಳಜಿ ಹಾಗೂ ಸಹಾಯ ಗುಣಗಳಿಂದಲೂ ದಾಸ ಅಭಿಮಾನಿಗಳಿಗೆ ಬಹಳ ಹತ್ತಿರವಾಗಿದ್ದಾರೆ. ದಶಕಗಳ ಹಿಂದೆಯೇ ಬಾಕ್ಸಾಫೀಸ್ ಸುಲ್ತಾನ್ ಎನ್ನುವ ಪಟ್ಟ ದರ್ಶನ್‌ಗೆ ಸಿಕ್ಕಿತ್ತು. ಅದಕ್ಕೆ ತಕ್ಕಂತೆ ಇಂದಿಗೂ ತಮ್ಮ ಸಿನಿಮಾಗಳ ಮೂಲಕ ಬಾಕ್ಸಾಫೀಸ್ ಶೇಕ್ ಮಾಡುತ್ತಾ ಬರ್ತಿದ್ದಾರೆ.

ಕಮರ್ಷಿಯಲ್ ಸಿನಿಮಾಗಳ ಜೊತೆಗೆ ಆಗಾಗ್ಗೆ ಪ್ರಯೋಗಾತ್ಮಕ ಸಿನಿಮಾಗಳಲ್ಲಿ ನಟಿಸುತ್ತಿರುತ್ತಾರೆ. ಐತಿಹಾಸಿಕ, ಪೌರಾಣಿಕ ಸಿನಿಮಾಗಳಲ್ಲಿ ಕೂಡ ನಟಿಸಿ ಗೆದ್ದಿದ್ದಾರೆ. 15 ವರ್ಷಗಳ ಹಿಂದೆ ದರ್ಶನ್ ಸೋಲಿನ ಸುಳಿಗೆ ಸಿಲುಕಿದ್ದರು. ವೈಯಕ್ತಿಕವಾಗಿಯೂ ವೃತ್ತಿಪರವಾಗಿಯೂ ಸಂಕಷ್ಟದಲ್ಲಿದ್ದ ಸಮಯ ಅದು. ಅದೇ ಸಮಯದಲ್ಲಿ ಬಂದಿದ್ದ 'ಸಾರಥಿ' ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು.
'ಸಾರಥಿ' ಬಿಡುಗಡೆಯಾಗಿ ಗೆದ್ದ ಮರು ವರ್ಷವೇ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಆಗಿ ಮತ್ತೊಮ್ಮೆ ಅಬ್ಬರಿಸಿದರು. ಮಗದೊಂದು ವರ್ಷ 'ಬುಲ್‌ಬುಲ್' ಸಿನಿಮಾ ಮಾಡಿ ಗೆದ್ದರು. 2011, 2012, 2013 ಹೀಗೆ ಮೂರು ವರ್ಷ ಅತಿಹೆಚ್ಚು ಗಳಿಕೆ ಕಂಡ ಕನ್ನಡ ಸಿನಿಮಾಗಳಲ್ಲಿ ಮೊದಲ ಸ್ಥಾನದಲ್ಲಿ ದರ್ಶನ್ ಸಿನಿಮಾಗಳಿತ್ತು.
ದರ್ಶನ್ ಸೂಪರ್ ಹಿಟ್ ಸಿನಿಮಾಗಳ ಲಿಸ್ಟ್ ಇಲ್ಲಿಗೆ ಮುಗಿಯುವುದಿಲ್ಲ. 'ಕಾಟೇರ' ಮೂಲಕ ಮತ್ತೊಮ್ಮೆ ದರ್ಶನ್ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಕಳೆದ 15 ವರ್ಷಗಳಲ್ಲಿ ಬಾಕ್ಸಾಫೀಸ್ ಲೆಕ್ಕ ನೋಡಿದರೆ ಒಂದೊಂದು ವರ್ಷ ಒಬ್ಬೊಬ್ಬರ ಸಿನಿಮಾ ನಂಬರ್ ವನ್ ಸ್ಥಾನದಲ್ಲಿದೆ. ಈ ಲಿಸ್ಟ್‌ನಲ್ಲಿ ದರ್ಶನ್ ನಟಿಸಿರುವ ಸಿನಿಮಾಗಳ ಸಂಖ್ಯೆ ಅರ್ಧ ಡಜನ್ ಇದೆ.

ಈ ಲಿಸ್ಟ್‌ನಲ್ಲಿ 3 ಸಿನಿಮಾಗಳೊಂದಿಗೆ ಯಶ್ 2ನೇ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ಪುನೀತ್ ರಾಜ್‌ಕುಮಾರ್, ಉಪೇಂದ್ರ, ರಕ್ಷಿತ್ ಶೆಟ್ಟಿ, ಧನಂಜಯ್ ಅವರದ್ದು ತಲಾ ಒಂದೊಂದು ಸಿನಿಮಾ ಇದೆ. ವಿಕಿಪಿಡಿಯ ಆಯಾ ವರ್ಷ ಅತಿ ಹೆಚ್ಚು ಗಳಿಕೆ ಕಂಡಿರುವ ಕನ್ನಡ ಸಿನಿಮಾಗಳ ಲಿಸ್ಟ್ ಮಾಡಿದೆ. ಅದರಲ್ಲಿ ಕಳೆದ 15 ವರ್ಷಗಳಲ್ಲಿ ದರ್ಶನ್ ನಂಬರ್ ವನ್ ಎನಿಸಿಕೊಂಡಿರುವುದು ಸ್ಪಷ್ಟವಾಗಿದೆ.
ಕಳೆದ 15 ವರ್ಷಗಳಲ್ಲಿ ಆಯಾ ವರ್ಷ ಅತಿ ಹೆಚ್ಚು ಗಳಿಕೆ ಕಂಡ ಚಿತ್ರಗಳು
2011 - ಸಾರಥಿ
2012 - ಸಂಗೊಳ್ಳಿ ರಾಯಣ್ಣ
2013 - ಬುಲ್ ಬುಲ್
2014 - ಮಿ. & ಮಿ ರಾಮಾಚಾರಿ
2015 - ಉಪ್ಪಿ- 2
2016 - ಕಿರಿಕ್ ಪಾರ್ಟಿ
2017 - ರಾಜಕುಮಾರ
2018 - ಕೆಜಿಎಫ್-1
2019 - ಕುರುಕ್ಷೇತ್ರ
2020 - ಪಾಪ್‌ಕಾರ್ನ್ ಮಂಕಿ ಟೈಗರ್
2021 - ರಾಬರ್ಟ್
2022 - ಕೆಜಿಎಫ್-2
2023 - ಕಾಟೇರಾ
ಸದ್ಯ 'ಡೆವಿಲ್' ಚಿತ್ರವನ್ನು ದರ್ಶನ್ ಒಪ್ಪಿಕೊಂಡಿದ್ದಾರೆ. ಮಿಲನಾ ಪ್ರಕಾಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಫೆಬ್ರವರಿ 16ಕ್ಕೆ ದರ್ಶನ್ ಹುಟ್ಟುಹಬ್ಬ. ಇದೇ ಸಂಭ್ರಮದಲ್ಲಿ ಚಿತ್ರದ ಸಣ್ಣ ಟೀಸರ್ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಇನ್ನು ದರ್ಶನ್ ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ್ದಾರೆ. 'ಬೆಳ್ಳಿ ಪರ್ವ' ಹೆಸರಿನಲ್ಲಿ ಅಭಿಮಾನಿಗಳು ಈ ಸಂಭ್ರಮವನ್ನು ಆಚರಿಸುತ್ತಿದ್ದಾರೆ.


Click it and Unblock the Notifications











