For Quick Alerts
  ALLOW NOTIFICATIONS  
  For Daily Alerts

  ದರ್ಶನ್‌ಗೆ ಮರು ಜೀವಕೊಟ್ಟ 'ಸಾರಥಿ'ಗೆ 11 ವರ್ಷ: ಇಲ್ಲಿದೆ ಇಂಟ್ರೆಸ್ಟಿಂಗ್ ವಿಷಯ!

  |

  ಅಭಿಮಾನಿಗಳ ಪಾಲಿಗೆ ಚಾಲೆಂಜಿಂಗ್ ದರ್ಶನ್ ಡಿ ಬಾಸ್. ಪ್ರತಿಯಿಂದ ದಾಸನ ಅಭಿಮಾನಿಗಳು ಡಿ ಬಾಸ್ ಅಂತಲೇ ಕರೆಯೋದು. ಇಂದು (ಸೆಪ್ಟೆಂಬರ್ 30) ಚಾಲೆಂಜಿಂಗ್ ಸ್ಟಾರ್‌ಗೆ ಹಾಗೂ ಅವರ ಫ್ಯಾನ್ಸ್‌ಗೆ ಸಂಭ್ರಮದ ದಿನ. ಈ ದಿನವನ್ನು ಅವರು ಎಂದಿಗೂ ಮರೆಯೋದೇ ಇಲ್ಲ.

  ಇದೇ 11 ವರ್ಷಗಳ ಹಿಂದೆ ದರ್ಶನ್ ವೃತ್ತಿ ಬದುಕಿಗೆ ದೊಡ್ಡ ತಿರುವು ಸಿಕ್ಕಿತ್ತು. ಸಂಕಷ್ಟಕ್ಕೆ ಸಿಲುಕಿದ್ದ ದರ್ಶನ್ ವೃತ್ತಿ ಬದುಕು ಇನ್ನೇನು ಮುಗಿದೇ ಬಿಡ್ತು ಅನ್ನುವಾಗಲೇ ಗ್ರೇಟ್ ಟರ್ನ್ ಸಿಕ್ಕಿತ್ತು. ಆ ಸಿನಿಮಾನೇ 'ಸಾರಥಿ'.

  ದರ್ಶನ್ ಹೀರೊ ಆಗಿದ್ದರೆ, ದಿನಕರ್ ತೂಗುದೀಪ ನಿರ್ದೇಶಕ. ಅಣ್ಣ-ತಮ್ಮಂದಿರ ಈ ಕಾಂಬಿನೇಷನ್ ತೆರೆಮೇಲೆ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು. ಕನ್ನಡ ಚಿತ್ರರಂಗದ ಆಲ್‌ಟೈಮ್ ಬ್ಲಾಕ್‌ಬಸ್ಟರ್ ಹಿಟ್ ಲಿಸ್ಟ್‌ಗೆ ಸೇರಿತ್ತು. ದರ್ಶನ್‌ಗೆ ಮರುಜೀವ ಕೊಟ್ಟ ಈ 'ಸಾರಥಿ' ಸಿನಿಮಾ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿದೆ.

  11 ವರ್ಷಗಳ ಹಿಂದೆ 'ಸಾರಥಿ' ರಿಲೀಸ್

  11 ವರ್ಷಗಳ ಹಿಂದೆ 'ಸಾರಥಿ' ರಿಲೀಸ್

  ಸೆಪ್ಟೆಂಬರ್ 30, 2011. ಈ ದಿನವನ್ನು ದರ್ಶನ್ ಎಂದಿಗೂ ಮರೆಯೋಕೆ ಸಾಧ್ಯನೇ ಇಲ್ಲ. ಕೌಟುಂಬಿಕ ಕಲದಿಂದ ಕಂಗಾಲಾಗಿದ್ದ ಚಾಲೆಂಜಿಂಗ್ ಸ್ಟಾರ್ ಕರಿಯರ್ ಇಲ್ಲಿಗೆ ಮುಗೀತು ಅಂತನೇ ಮಾತಾಡಿಕೊಂಡಿದ್ದರು. ಆದರೆ, ಸಿನಿಮಾ ಮಂದಿಯ ಲೆಕ್ಕಾಚಾರ ತಲೆಕೆಳಗಾಗಿತ್ತು. 11 ವರ್ಷಗಳ ಹಿಂದೆ 'ಸಾರಥಿ' ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ಸಿನಿಮಾ ಸೋಲುತ್ತೆ ಅಂತ ಅಂದ್ಕೊಂಡಿದ್ದವರಿಗೆ ದೊಡ್ಡ ಶಾಕ್ ಕೊಟ್ಟಿತ್ತು. ಎಲ್ಲರ ಬಾಯಲ್ಲೂ 'ಸಾರಥಿ' ಬಗ್ಗೆನೇ ಹೊಗಳಿಕೆ ಕೇಳಿಬಂದಿತ್ತು.

  'ಸಾರಥಿ' ಆಲ್‌ಟೈಮ್‌ ಸೂಪರ್‌ ಹಿಟ್

  'ಸಾರಥಿ' ಆಲ್‌ಟೈಮ್‌ ಸೂಪರ್‌ ಹಿಟ್

  ಸ್ಯಾಂಡಲ್‌ವುಡ್‌ನ ಆಲ್‌ಟೈಮ್ ಫೇವರಿಟ್ ಸಿನಿಮಾ 'ಸಾರಥಿ'. ಹಲವು ದಿನಗಳಿಂದ ಸ್ಯಾಂಡಲ್‌ವುಡ್ ಆಲ್‌ ಟೈಮ್ ಹಿಟ್ ಸಿನಿಮಾವೊಂದು ಸಿಕ್ಕಿರಲಿಲ್ಲ. ಅದಕ್ಕೆ ಸರಿಯಾಗಿ ದರ್ಶನ್ 'ಸಾರಥಿ' ರಿಲೀಸ್ ಆಗಿತ್ತು. ಯಾವುದೇ ನಿರೀಕ್ಷೆಯೇ ಇಲ್ಲದೇ ಬಿಡುಗಡೆಯಾಗಿದ್ದ ಸಿನಿಮಾ ಬ್ಲಾಕ್‌ಬಸ್ಟರ್ ಲಿಸ್ಟ್ ಸೇರಿತ್ತು. ಮೂಲಗಳ ಪ್ರಕಾರ, ಸಿನಿಮಾ ಸುಮಾರು 12 ರಿಂದ 13 ಕೋಟಿ ರೂಪಾಯಿ ಕಲೆ ಹಾಕಿತ್ತು ಎಂದು ವರದಿಯಾಗಿತ್ತು. 11 ವರ್ಷಗಳ ಹಿಂದೆ ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಬಿಗ್ ಸಿನಿಮಾ ಎನಿಸಿಕೊಂಡಿತ್ತು.

  ದೀಪಾ ಸನ್ನಿಧಿ ಮೊದಲ ಸಿನಿಮಾ

  ದೀಪಾ ಸನ್ನಿಧಿ ಮೊದಲ ಸಿನಿಮಾ

  'ಸಾರಥಿ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಯೊಂದು ಪರಿಚಯಿಸಲಾಗಿತ್ತು. ಅವರೇ ದೀಪಾ ಸನ್ನಿಧಿ. ಇದು ಕನ್ನಡ ನಟಿಯ ಮೊದಲ ಸಿನಿಮಾ. ಈ ಸಿನಿಮಾ ಹಿಟ್ ಆಗುತ್ತಿದ್ದಂತೆ ದೀಪಾ ಸನ್ನಿಧಿ ಕೂಡ ಸ್ಟಾರ್ ಆಗಿ ಮೆರೆದಿದ್ದರು. 'ಸಾರಥಿ' ಬಳಿಕ ಕನ್ನಡದ ಸೂಪರ್‌ಸ್ಟಾರ್‌ಗಳಿಗೆ ಹೀರೊಯಿನ್ ಆಗಿ ಕಾಣಿಸಿಕೊಂಡಿದ್ದರು. ಪುನೀತ್ ರಾಜ್‌ಕುಮಾರ್, ಯಶ್, ಗಣೇಶ್‌ಗೆ ಹೀರೊಯಿನ್ ಆಗಿದ್ದರು. ಅಲ್ಲದೆ ತಮಿಳು ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿದ್ದರು.

  'ಸಾರಥಿ' ಭರ್ಜರಿ ಸಕ್ಸಸ್

  'ಸಾರಥಿ' ಭರ್ಜರಿ ಸಕ್ಸಸ್

  'ಸಾರಥಿ' ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವುದಕ್ಕೆ ಶುರು ಮಾಡಿತ್ತು. ಈ ಸಿನಿಮಾ ಕರ್ನಾಟಕದಲ್ಲಿ ಸುಮಾರು 150ಕ್ಕೂ ಅಧಿಕ ಚಿತ್ರಮಂದಿರದಲ್ಲಿ ರಿಲೀಸ್ ಆಗಿತ್ತು. ಬೆಂಗಳೂರಿನಲ್ಲಿಯೇ ಸುಮಾರು 30 ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಬಳಿಕ ಚಿತ್ರಮಂದಿರಗಳ ಸಂಖ್ಯೆಯನ್ನು ಹೆಚ್ಚು ಮಾಡಲಾಯ್ತು. ಸುಮಾರು 17 ಚಿತ್ರಮಂದಿರಗಳಲ್ಲಿ ಈ ಸಿನಿಮಾ 100 ದಿನಗಳನ್ನು ಪೂರೈಸಿತ್ತು. ಕೆಲವು ಥಿಯೇಟರ್‌ಗಳಲ್ಲಿ 150 ದಿನ ಕೂಡ ಈ ಸಿನಿಮಾ ರನ್ ಆಗಿತ್ತು.

  English summary
  Darshan's Saarathi movie completes 11 years; know interesting facts about the movie.
  Friday, September 30, 2022, 14:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X