Sandalwood Celebrities: ದೂರದೂರಿಗೆ ಚಂದನವನದ ತಾರೆಯರ ಪ್ರವಾಸ: ಯಾರು ಎಲ್ಲಿಗೆ ಹೋಗಿದ್ದಾರೆ?

ಸಿನಿಮಾ ತಾರೆಯರು ಕೆಲಸದ ಜಂಜಾಟ ಪಕ್ಕಕ್ಕಿಟ್ಟು ಆಗಿಂದಾಗ್ಗೆ ಪ್ರವಾಸ ಕೈಗೊಳ್ಳುತ್ತಾ ಇರುತ್ತಾರೆ. ವರ್ಷವಿಡೀ ಕೆಲಸ ಇದ್ದಿದ್ದೇ. ದೇಶ ಸುತ್ತು ಕೋಶ ಓದು ಎನ್ನುವ ಮಾತಿನಂತೆ ಬಿಡುವು ಸಿಕ್ಕಾಗ ಪ್ರವಾಸಿ ತಾಣಗಳಿಗೆ ಭೇಟಿ ಕೊಡುತ್ತಿರುತ್ತಾರೆ. ಇದಕ್ಕೆ ಕಿರುತೆರೆ ನಟಿಯರು ಹೊರತಲ್ಲ. ಇತ್ತೀಚೆಗೆ ನಮ್ರತಾ ಗೌಡ, ಐಶ್ವರ್ಯ ಸಿಂಧೋಗಿ ಬಾಲಿ ಪ್ರವಾಸದ ಫೋಟೊಗಳು ಸದ್ದು ಮಾಡಿತ್ತು.

ಬಾಲಿವುಡ್ ತಾರೆಯರು ಸಾಮಾನ್ಯವಾಗಿ ಮಾಲ್ಡೀವ್ಸ್‌ಗೆ ಪ್ರವಾಸಕ್ಕೆ ಹೋಗುತ್ತಾರೆ. ಆದರೆ ಇತ್ತೀಚೆಗೆ ಬೇರೆ ಬೇರೆ ದೇಶಗಳಿಗೆ ನಟ-ನಟಿಯರು ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಪ್ರವಾಸದ ಅಪ್‌ಡೇಟ್‌ ಕೊಡುತ್ತಿರುತ್ತಾರೆ. ಅಲ್ಲಿಂದಲೇ ಫೋಟೊ, ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಪ್ರವಾಸದ ವೇಳೆ ಆ ದೇಶದ ಪ್ರಮುಖವಾದ ಸ್ಥಳಗಳಿಗೆ ಭೇಟಿ ಕೊಡುತ್ತಾರೆ. ಸಾಹಸಮಯ ಕ್ರೀಡೆಗಳಲ್ಲಿ ಭಾಗಿ ಆಗುತ್ತಾರೆ. ಕೆಲವೊಮ್ಮೆ ದಟ್ಟಾರಣ್ಯದಲ್ಲಿ ಸಫಾರಿ ಹೋಗಿ ಬರುತ್ತಾರೆ. ಫೋಟೊಗ್ರಫಿ ಗೀಳು ಇದ್ದವರು ಕ್ಯಾಮರಾ ಹಿಡಿದು ಅಡ್ಡಾಡುತ್ತಾರೆ.

Sandalwood-stars-trip

ನಟರಿಗಿಂತ ಹೆಚ್ಚು ನಟಿಯರು ಸುಂದರ ತಾಣಗಳಿಗೆ ಹೋಗುವ ಪ್ರಯತ್ನದಲ್ಲಿರುತ್ತಾರೆ. ಫ್ಯಾಮಿಲಿ ಅಥವಾ ಸ್ನೇಹಿತರ ಜೊತೆ ಊರೂರು ಸುತ್ತಾಡುತ್ತಾರೆ. ಸೋಲೊ ಟ್ರಿಪ್ ಹೀಗುವವರ ಸಂಖ್ಯೆ ಕೂಡ ಇತ್ತೀಚೆಗೆ ಹೆಚ್ಚಾಗುತ್ತಿದೆ. ಮೊನ್ನೆ ಮೊನ್ನೆ ಬಿಗ್‌ಬಾಸ್ ಖ್ಯಾತಿಯ ದೀಪಿಕಾ ದಾಸ್ ದುಬೈಗೆ ಒಬ್ಬೊಂಟಿಯಾಗಿ ಹೋಗಿ ಬಂದಿದ್ದರು.

ಬ್ರಿಟನ್‌ಗೆ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಳೆದು ಐದಾರು ದಿನಗಳಿಂದ ಬ್ರಿಟನ್‌ನಲ್ಲಿ ಸ್ನೇಹಿತರ ಜೊತೆ ಬೀಡು ಬಿಟ್ಟಿದ್ದಾರೆ. ಕಳೆದ ವಾರ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದ ದರ್ಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಬಳಿಕ ಎರಡು ದಿನ 'ಕಾಟೇರ' ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ನಂತರ ಸ್ನೇಹಿತರ ಜೊತೆ ಯುಕೆ ಫ್ಲೈಟ್ ಏರಿದ್ದರು. ದರ್ಶನ್ ಬ್ರಿಟನ್ ಪ್ರವಾಸದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿವೆ.

Sandalwood-stars-trip

ಆಫ್ರಿಕಾಗೆ ನೇಹಾ - ಸೋನು

ಕಳೆದೊಂದು ವಾರದಿಂದ ನಟಿ ಸೋನು ಗೌಡ ಹಾಗೂ ಆಕೆಯ ಸಹೋದರಿ ಕಿರುತೆರೆ ನಟಿ ನೇಹಾ ಗೌಡ ಆಫ್ರಿಕಾ ಪ್ರವಾಸದಲ್ಲಿದ್ದಾರೆ. ಕೀನ್ಯಾದ ಕಾಡುಗಳಲ್ಲಿ ಸಫಾರಿ ಹೋಗಿ ಬಂದಿದ್ದಾರೆ. ಫೋಟೊಗ್ರಫಿ ಗೀಳು ಇರುವ ಸಹೋದರಿಯರು ಕ್ಯಾಮರಾ ಹಿಡಿದು ಕಾಣಿಸಿಕೊಂಡಿದ್ದಾರೆ. ಮಸೈ ಮರಾ ಅಭಯಾರಣ್ಯದಲ್ಲಿ ಸುತ್ತಾಡಿದ್ದಾರೆ. ಈ ಹಿಂದೆ ನಟ ದರ್ಶನ್ ಕೂಡ ವೈಲ್ಡ್‌ ಲೈಫ್‌ ಫೋಟೊಗ್ರಫಿಗಾಗಿ ಅಲ್ಲಿಗೆ ಹೋಗಿದ್ದರು.

ಚಿಕ್ಕಮಗಳೂರಿನಲ್ಲಿ ಅಮೂಲ್ಯ

ಮದುವೆ ನಂತರ ನಟಿ ಅಮೂಲ್ಯ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಕಳೆದ ವರ್ಷವಷ್ಟೆ ಅವಳಿ ಮಕ್ಕಳಿಗೆ ಜನ್ಮ ನೀಡಿದ ಐಸು ಈಗ ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಅಮೂಲ್ಯ ಸದ್ಯ ಪತಿ ಜಗದೀಶ್ ಹಾಗೂ ಮಕ್ಕಳ ಜೊತೆ ಸದ್ಯ ಚಿಕ್ಕಮಗಳೂರು ಪ್ರವಾಸದಲ್ಲಿದ್ದಾರೆ. ಪ್ರವಾಸದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕಾಶಿಯಲ್ಲಿ ನವರಸ ನಾಯಕ

ನಟ ಜಗ್ಗೇಶ್ ಕಾಶಿಯಾತ್ರೆ ಕೈಗೊಂಡಿದ್ದಾರೆ. ವಿಮಾನದಲ್ಲಿ ಕಾಶಿಗೆ ಹೋಗಿ ಇಳಿಯುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. 'ಸತ್ಯ' ಕಿರುತೆರೆ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರ ಮಾಡುತ್ತಿರುವ ನಟಿ ಅನು ಜನಾರ್ಧನ್ ಸದ್ಯ ಜೈಪುರ ಪ್ರವಾಸದಲ್ಲಿದ್ದಾರೆ. ಇನ್ನು ತೆಲುಗು ನಟಿ ಸಮಂತಾ ಬಾಲಿಯಲ್ಲಿ ಕಾಲ ಕಳೆಯುತ್ತಿದ್ದಾರೆ. ಹೃತಿಕ್ ರೋಷನ್ ರೂಮರ್ಡ್ ಗರ್ಲ್‌ಫ್ರೆಂಡ್ ಜೊತೆ

More from Filmibeat

English summary
Sandalwood celebrities Darshan, jaggesh, Sonu Gowda, Amulya in holiday mood. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X