'ಓಂ' ಚಿತ್ರದಿಂದ ಪ್ರೇರಣೆಗೊಂಡಿದ್ದ 'ಶಾಸ್ತ್ರಿ'ಗೆ 18 ವರ್ಷ: ಈ ಚಿತ್ರಕ್ಕೂ ದರ್ಶನ್‌ ಫಾರ್ಮ್‌ಹೌಸ್‌ಗೂ ಲಿಂಕ್ ಏನು?

ಶಿವಣ್ಣ ನಂತ್ರ ಸ್ಯಾಂಡಲ್‌ವುಡ್‌ನಲ್ಲಿ ಲಾಂಗ್ ಹಿಡಿದು ರೌಡಿಸಂ ಸಿನಿಮಾಗಳಲ್ಲಿ ಅಬ್ಬರಿಸಿ ಗೆದ್ದ ಮತ್ತೊಬ್ಬ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್. 'ಮೆಜೆಸ್ಟಿಕ್' ಸಿನಿಮಾದಲ್ಲಿ ರೌಡಿ ದಾಸನಾಗಿ ಆರ್ಭಟಿಸಿದ ಮೇಲೆ ದಾಸ ಅನ್ನೋ ಹೆಸರು ದರ್ಶನ್ ಹೆಸರಿನ ಜೊತೆಗೆ ಸೇರಿಕೊಂಡುಬಿಟ್ಟಿತ್ತು. ಮುಂದಿನ 'ಕರಿಯ', 'ದಾಸ', 'ಕಲಾಸಿಪಾಳ್ಯ', 'ಶಾಸ್ತ್ರಿ' ಸೇರಿದಂತೆ ಹಲವು ಚಿತ್ರಗಳಲ್ಲಿ ದರ್ಶನ್ 'ಲಾಂಗ್' ಜರ್ನಿ ಮುಂದುವರೆಯಿತು.

ಚಾಲೆಂಜಿಂಗ್ ಸ್ಟಾರ್ ರೌಡಿಯಾಗಿ ನಟಿಸಿದ ದರ್ಶನ್ 'ಶಾಸ್ತ್ರಿ' ಸಿನಿಮಾ 18 ವರ್ಷ ಪೂರೈಸಿದೆ. ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಇದನ್ನು ನೆನಪಿಸಿಕೊಂಡು ಸಂಭ್ರಮಿಸುತ್ತಿದ್ದಾರೆ. ದರ್ಶನ್ ಸಿನಿಕರಿಯರ್‌ನಲ್ಲಿ 'ಶಾಸ್ತ್ರಿ' ಕೂಡ ಹಿಟ್ ಲಿಸ್ಟ್ ಸೇರಿತ್ತು. ಪಿ. ಎನ್ ಸತ್ಯ ಕಥೆ ಚಿತ್ರಕಥೆ ಬರೆದು ಈ ಸಿನಿಮಾ ನಿರ್ದೇಶನ ಮಾಡಿದ್ದರು. ತೆಲುಗು ನಟಿ ಮಾನ್ಯ ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ಮಿಂಚಿದರು. ಸಾಧು ಕೋಕಿಲ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿತ್ತು.

Darshan Starrer Shastri Completes 18 Years; Know Facts about the Movie

ಜೂನ್ 10, 2005ನಲ್ಲಿ 'ಶಾಸ್ತ್ರಿ' ಸಿನಿಮಾ ರಿಲೀಸ್ ಆಗಿತ್ತು. ಚಿತ್ರಾ ಶೆಣೈ, ಬುಲೆಟ್ ಪ್ರಕಾಶ್, ಜಿ.ಕೆ ಗೋವಿಂದ ರಾವ್, ಸತ್ಯಜಿತ್ ಚಿತ್ರದ ತಾರಾಗಣದಲ್ಲಿದ್ದರು. ದರ್ಶನ ಆಪ್ತ ಛಾಯಾಗ್ರಾಹಕ ಅಣಜಿ ನಾಗರಾಜ್ ಈ ಸಿನಿಮಾ ಮೂಲಕ ನಿರ್ಮಾಪಕರರಾಗಿದ್ದರು. 5 ವರ್ಷಗಳ ಹಿಂದೆ 'ಶಾಸ್ತ್ರಿ' ಸಿನಿಮಾ ಡಿಜಿಟಲ್ ವರ್ಷನ್‌ನಲ್ಲಿ ರೀ ರಿಲೀಸ್ ಆಗಿತ್ತು.

'ಓಂ' ಸಿನಿಮಾದಿಂದ ಪ್ರೇರಣೆ

ಮೊದಲಿಗೆ ಈ ಚಿತ್ರಕ್ಕೆ ಶಾಸ್ತ್ರಿ ಎನ್ನುವ ಟೈಟಲ್ ಫಿಕ್ಸ್ ಆಗಿತ್ತು. ನಂತರ 'ದರ್ಶನ್ ಶಾಸ್ತ್ರಿ' ಎಂದು ಬದಲಿಸಲಾಗಿತ್ತು. ಈ ಸಿನಿಮಾ ಕಥೆ ಉಪೇಂದ್ರ ಹಾಗೂ ಶಿವಣ್ಣ ಕಾಂಬಿನೇಷನ್‌ನ ಸೂಪರ್ ಹಿಟ್ 'ಓಂ' ಸಿನಿಮಾ ಕಥೆಯಿಂದ ಪ್ರೇರಣೆಗೊಂಡಿರೋದು ಗೊತ್ತಾಗುತ್ತಿತ್ತು. ಚಿತ್ರದ ಮೂಲ ಕಥೆ ಸತ್ಯನ ಕಥೆಗೆ ಹತ್ತಿರವಾಗಿತ್ತು. ಪ್ರೀತಿಲಿ ಮೋಸ ಹೋಗುವ ಮೆಡಿಕಲ್ ಕಾಲೇಜು ಸ್ಟೂಡೆಂಟ್ ರಾಮಾ ಶಾಸ್ತ್ರಿ ಭೂಗತಲೋಕ ಪ್ರವೇಶಿಸುವ ಕಥೆ ಚಿತ್ರದಲ್ಲಿತ್ತು.

Darshan Starrer Shastri Completes 18 Years; Know Facts about the Movie

ಭರ್ಜರಿ ಸಕ್ಸಸ್ ಕಂಡಿದ್ದ 'ಶಾಸ್ತ್ರಿ'

ಆಗ ಕನ್ನಡ ಚಿತ್ರರಂಗದಲ್ಲಿ ರೌಡಿಸಂ ಸಿನಿಮಾಗಳ ಟ್ರೆಂಡ್ ನಡೀತಿದ್ದ ಕಾಲ. ನಟ ದರ್ಶನ್ ಆಗ ತಾನೇ 'ಕಲಾಸಿಪಾಳ್ಯ', 'ಅಯ್ಯ' ಸಿನಿಮಾಗಳ ಮೂಲಕ ಕಂಬ್ಯಾಕ್ ಮಾಡಿದ್ದರು. 'ಶಾಸ್ತ್ರಿ' ಚಿತ್ರದಲ್ಲಿ ಮತ್ತೊಮ್ಮೆ ಲಾಂಗ್ ಹಿಡಿದು ಅಬ್ಬರಿಸಿ ಗೆದ್ದಿದ್ದರು. ಅಣಜಿ ನಾಗರಾಜ್ ನಿರ್ಮಾಪಕರಾಗಿ ಗೆದ್ದರು.

ಫಾರ್ಮ್‌ ಹೌಸ್ ಖರೀದಿಸಿದ್ದ ದರ್ಶನ್

ಚಿಕ್ಕವರಾಗಿದ್ದಾಗ ದರ್ಶನ್ ಸ್ನೇಹಿತನೊಬ್ಬ ಪ್ರತಿವಾರ ಪೋಷಕರ ಜೊತೆ ಫಾರ್ಮ್‌ ಹೌಸ್‌ಗೆ ಹೋಗಿ ಬರುತ್ತಿದ್ದನಂತೆ. ಅದನ್ನು ನೋಡಿ ಚಿಕ್ಕಂದಿನಿಂದಲೂ ದರ್ಶನ್‌ಗೆ ಫಾರ್ಮ್‌ ಹೌಸ್ ಮಾಡುವ ಆಸೆ ಇತ್ತು. 'ಶಾಸ್ತ್ರಿ' ಚಿತ್ರದಿಂದ ಬಂದ ಹಣವನ್ನು ಸ್ನೇಹಿತ ಅಣಜಿ ನಾಗರಾಜ್‌, ದರ್ಶನ್‌ಗೆ ಕೊಟ್ಟಿದ್ದರು. ಅದೇ ಹಣದಿಂದ ಟೀ. ನರಸೀಪುರದ ಕೆಂಪಯ್ಯನಹುಂಡಿ ಬಳಿ ದರ್ಶನ್ ಜಾಗ ಖರೀದಿಸಿದ್ದರು. ಮುಂದೆ ಆ ಜಾಗದಲ್ಲಿ ಸಾಕಷ್ಟು ಪ್ರಾಣಿ, ಪಕ್ಷಿಗಳನ್ನು ಸಾಕಿ ಫಾರ್ಮ್‌ಹೌಸ್ ಮಾಡಿಕೊಂಡರು. ದರ್ಶನ್ ತಮ್ಮ ಬಿಡುವಿನ ಬಹುತೇಕ ಸಮಯವನ್ನು ಅಲ್ಲೇ ಕಳೆಯುತ್ತಾರೆ.

'ಕಾಟೇರ'ನಾಗಿ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸೂಪರ್ ಸ್ಟಾರ್ ಆಗಿ ಮೆರೆಯುತ್ತಿದ್ದಾರೆ. ಇದೇ ವರ್ಷ 'ಕ್ರಾಂತಿ' ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಸದ್ಯ 'ಕಾಟೇರ' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ.

More from Filmibeat

English summary
Darshan Starrer Shastri Completes 18 Years; Know Facts about the Movie. The film was dubbed in Hindi as Main Hoon Yoddha. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X