2022: ಹೊಸ ವರ್ಷಕ್ಕೆ ಶುಭಕೋರಿದ, ದರ್ಶನ್, ಸುದೀಪ್, ಸಮಂತಾ!
ಹೊಸ ವರ್ಷ 2022ನ್ನು ಎಲ್ಲರೂ ಸಂತಸದಿಂದ ಬರ ಮಾಡಿ ಕೊಂಡಿದ್ದಾರೆ. ಹೊಸ ವರ್ಷ ಎಲ್ಲರಿಗೂ ಸಂತಸ ನೀಡಲಿ. ಎಲ್ಲರಿಗೂ ಶುಭವಾಗಲಿ ಎಂದು ಪ್ರತಿಯೊಬ್ಬರು ಆಶಿಸುತ್ತಾರೆ. ಹೊಸ ವರ್ಷವನ್ನು ಸಿನಿಮಾ ತಾರೆಯರು ತಮ್ಮದೇ ಶೈಲಿಯಲ್ಲಿ ವಿಶೇಷವಾಗಿ ಬರ ಮಾಡಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಂದೇಶವನ್ನು ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. ಬಾಲಿವುಡ್, ಕನ್ನಡ ಸೇರಿದಂತೆ ಬಹುತೇಕ ಸಿನಿಮಾ ತಾರೆಯರು ತಾವು ಹೊಸ ವರ್ಷವನ್ನು ಬರ ಮಾಡಿಕೊಂಡಿದ್ದು ಹೇಗೆ ಎನ್ನುವುದನ್ನು ಹಂಚಿಕೊಂಡಿದ್ದಾರೆ.
ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್, ನಟ ದರ್ಶನ್, ಪ್ರಿಯಾಂಕಾ ಚೋಪ್ರ ದಂಪತಿ, ಕರೀನಾ ಕಪೂರ್, ಮಹೇಶ್ ಬಾಬು ಸೇರಿದಂತೆ ಹಲವು ತಾರೆಯರು ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ.
ಹೊಸ ವರ್ಷದ ಪ್ರತೀ ಕ್ಷಣವೂ ಸಂತದಿಂದ ಇರಲಿ: ನಟ ದರ್ಶನ್!
ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಟ್ವೀಟ್ ಮಾಡುವ ಮೂಲಕ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. "ಹೊಸ ವರ್ಷದ ಪ್ರತಿಕ್ಷಣವೂ ಸಂತಸದಿಂದ ಕೂಡಿರಲಿ. ನಿಮ್ಮ ಇಷ್ಟಾರ್ಥಗಳೆಲ್ಲವೂ ಈಡೇರಲಿ. ನಿಮ್ಮ ಭವಿಷ್ಯ ಮತ್ತಷ್ಟು ಉಜ್ವಲಿಸಲಿ ಎಂದು ಆಶಿಸುತ್ತಾ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು". ಎಂದು ಬರೆದು ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದಾರೆ ನಟ ದರ್ಶನ್. ಜೊತೆಗೆ ತಮ್ಮ ಹೊಸ ಫೋಟೊ ಒಂದನ್ನು ಹಂಚಿಕೊಂಡಿದ್ದಾರೆ.
ಕೆಟ್ಟದನ್ನು ಬಿಟ್ಟು ಒಳ್ಳೆಯದನ್ನು ತೆಗೆದುಕೊಂಡು ಮುಂದುವರೆಯಬೇಕು: ನಟ ಸುದೀಪ್!
ನಟ ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಚಿತ್ರದ ಪೋಸ್ಟರ್ ಹಂಚಿಕೊಂಡು ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. "ಉತ್ತಮ ಮತ್ತು ಉತ್ತಮವಲ್ಲದ ಘಟನೆಗಳು, ಸಂದರ್ಭಗಳು ಪ್ರತಿ ವರ್ಷ ಬರುತ್ತವೆ. ನಾವೆಲ್ಲರೂ ಉತ್ತಮ ಅಲ್ಲದನ್ನು ಹಿಂದೆ ಬಿಟ್ಟು, ಉತ್ತಮ ಆಗಿರುವುದನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕು. ಸುಂದರವಾದ ಸೂರ್ಯೋದಯದೊಂದಿಗೆ ನಾವು 2022ಕ್ಕೆ ಕಾಲಿಟ್ಟದ್ದೇವೆ. ಮತ್ತು ಈ ವರ್ಷ ಉತ್ತಮವಾದದನ್ನು ಮಾಡೋಣ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು " ಎಂದು ಬರೆದು ಟ್ವೀಟ್ ಮಾಡಿದ್ದಾರೆ ನಟ ಸುದೀಪ್.
ದುಬೈನಲ್ಲಿ ಮಹೇಶ್‌ಬಾಬು ಹೊಸ ವರ್ಷ ಆಚರಣೆ!
ನಟ ಮಹೇಶ್ ಬಾಬು ಮತ್ತು ಕುಟುಂಬ ಹೊಸ ವರ್ಷದ ಆಚರಣೆಗಾಗಿ ದುಬೈಗೆ ಹಾರಿದೆ. ದುಬೈನಲ್ಲಿ ಮಹೇಶ್ ಬಾಬು ಪತ್ನಿ ಮತ್ತು ಮಕ್ಕಳೊಂದಿಗೆ ಸಂಭ್ರಮಿಸುತ್ತಿದ್ದಾರೆ. ಕುಟುಂಬದ ಜೊತೆಗಿನ ಫೋಟೊವನ್ನು ಹಂಚಿಕೊಂಡು "ಹೊಸ ಆರಂಭದ ಜಾದುವನ್ನು ನಂಬಿ, ಸಂತೋಷವಾಗಿರಿ, ಕೃತಜ್ಞರಾಗಿರಿ, ಎಲ್ಲರೂ ಹುಷರಾಗಿ ಇರಿ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು". ಎಂದು ಬರೆದು ಮಹೇಶ್ ಬಾಬು ಟ್ವೀಟ್ ಮಾಡಿದ್ದಾರೆ.
ಕಠಿಣ ಸಮಯದಲ್ಲಿ ಸಮಂತಾ ಜೊತೆಗೆ ಇದ್ದದ್ದು ಮುದ್ದಿನ ಶ್ವಾನ!
ಇನ್ನು ನಟಿ ಸಮಂತಾ ಇನ್‌ಸ್ಟಾಗ್ರಾಮ್ ನಲ್ಲಿ ತನ್ನ ಮುದ್ದಿನ ನಾಯಿ ಮರಿ ಫೋಟೊ ಹಂಚಿಕೊಂಡು, ಹಳೆ ವರ್ಷವನ್ನು ನೆನಪಿಸಿಕೊಂಡು, ಹೊಸ ವರ್ಷದ ಭವಿಷ್ಯದ ಬಗ್ಗೆ ಬರೆದು ಕೊಂಡಿದ್ದಾರೆ. ಸುಮ್ಮನ್ನೆ ಮಲಗುವುದು, ದಿನವನ್ನು ಎದುರಿಸಲು ಆಗದೇ ಇದ್ದಾಗ ಸುಮ್ಮನೇ ಏಳುವುದೇ ಆಗಿತ್ತು. ಈ ಪಯಣದಲ್ಲಿ ನಾವಿಬ್ಬರು ಜೊತೆಗೆ ಇದ್ದೆವು ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕಳೆದ ವರ್ಷ ನೋವಿನಿಂದ ಕೂಡಿತ್ತು ಎನ್ನುವುದನ್ನು ಹಂಚಿಕೊಂಡಿದ್ದಾರೆ.
ದೀಪಿಕಾ, ಪ್ರಿಯಾಂಕ ಡಿಫ್ರೆಂಟ್ ಸಲೆಬ್ರೇಷನ್!
ಇನ್ನು ನಟಿ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕ ಚೋಪ್ರಾ ಕೂಡ ಹೊಸ ವರ್ಷವನ್ನು ವಿಭಿನ್ನವಾಗಿ ಬರ ಮಾಡಿಕೊಂಡಿದ್ದಾರೆ. ತಮ್ಮ ಪತಿಯರೊಂದಿಗೆ ಈ ನಟಿಯರು ಹೊಸ ವರ್ಷ ಸಲೆಬ್ರೇಟ್ ಮಾಡಿದ್ದಾರೆ. ದೀಪಿಕಾ ಪತಿ ರಣ್ವೀರ್ ಸಿಂಗ್ ಜೊತೆಗೆ ಡಿನ್ನೆರ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡರೆ, ಪ್ರಿಯಾಂಕಾ ತನ್ನ ಪತಿ ನಿಕ್ ಜೋನಸ್ ಜೊತೆಗಿನ ರೊಮ್ಯಾಂಟಿಕ್ ಫೋಟೊವೊಂದನ್ನು ಹಂಚಿಕೊಂಡು ಶುಭ ಕೋರಿದ್ದಾರೆ.


Click it and Unblock the Notifications











