Darshan: ಸದ್ದಿಲ್ಲದೇ ಬಾಲಿವುಡ್‌ನಲ್ಲಿ ದಾಖಲೆ ಬರೆದ 'ರಾಬರ್ಟ್': ಇದಪ್ಪಾ ದರ್ಶನ್ ಹವಾ
ಕರ್ನಾಟಕದಲ್ಲಿ ದರ್ಶನ್ ಸಿನಿಮಾಗಳಿಗಿರುವ ಕ್ರೇಜ್ ಎಂಥದ್ದು ಅನ್ನೋದು ಗೊತ್ತೇಯಿದೆ. ಇತ್ತೀಚಿನ ವರ್ಷಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ದಾಸ ನಟಿಸುತ್ತಿದ್ದಾರೆ. ಸದ್ಯ 'ಕಾಟೇರ'ನಾಗಿ ಅಭಿಮಾನಿಗಳನ್ನು ರಂಜಿಸೋಕೆ ಸಿದ್ಧತೆ ನಡೆಸಿದ್ದಾರೆ. ಅದಕ್ಕು ಮುನ್ನ ನವೆಂಬರ್‌ನಲ್ಲಿ 'ಗರಡಿ' ಚಿತ್ರದಲ್ಲಿ ದರ್ಶನ್ ದರ್ಬಾರ್ ನಡೆಯಲಿದೆ. ಉಸ್ತಾದ್ ಆಗಿ ಅತಿಥಿ ಪಾತ್ರದಲ್ಲಿ ಪ್ರೇಕ್ಷಕರಿಗೆ ಕಿಕ್ ಕೊಡೋಕೆ ಬರ್ತಿದ್ದಾರೆ.
ತರುಣ್ ಸುಧೀರ್ ನಿರ್ದೇಶನದಲ್ಲಿ ದರ್ಶನ್ 3ನೇ ಬಾರಿ ನಟಿಸುತ್ತಿದ್ದಾರೆ. ಮೊದಲಿಗೆ 'ಚೌಕ' ಚಿತ್ರದಲ್ಲಿ ದರ್ಶನ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಅದಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಎರಡೂವರೆ ವರ್ಷದ ಹಿಂದೆ 'ರಾಬರ್ಟ್' ಚಿತ್ರದಲ್ಲಿ ಮತ್ತೆ ಈ ಜೋಡಿ ಒಟ್ಟಿಗೆ ಕೆಲಸ ಮಾಡಿತ್ತು. ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣದ 'ರಾಬರ್ಟ್' ಬಾಕ್ಸಾಫೀಸ್ ಶೇಕ್ ಮಾಡಿತ್ತು. ಎರಡು ಶೇಡ್‌ಗಳಿರುವ ಪಾತ್ರದಲ್ಲಿ ದರ್ಶನ್ ಆರ್ಭಟ ನೋಡಿ ಸಿನಿರಸಿಕರು ಫಿದಾ ಆಗಿದ್ದರು. ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿ ಬ್ಲಾಕ್‌ಬಸ್ಟರ್ ಹಿಟ್ ಲಿಸ್ಟ್ ಸೇರಿತ್ತು.

'ರಾಬರ್ಟ್' ಚಿತ್ರದಲ್ಲಿ ಆಶಾ ಭಟ್ ನಾಯಕಿಯಾಗಿ ನಟಿಸಿದ್ದರು. ದರ್ಶನ್ ಸ್ನೇಹಿತನ ಪಾತ್ರದಲ್ಲಿ ವಿನೋದ್ ಪ್ರಭಾಕರ್ ಮಿಂಚಿದ್ದರು. ಜಗಪತಿ ಬಾಬು, ದೇವರಾಜ್, ಆರ್ಮುಗ ರವಿಶಂಕರ್, ರವಿ ಕಿಶನ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿತ್ತು. ಅರ್ಜುನ್ ಜನ್ಯಾ ಮ್ಯೂಸಿಕ್‌ನಲ್ಲಿ ಆಲ್ಬಮ್ ಹಿಟ್ ಆಗಿ ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸಿತ್ತು. ಥಿಯೇಟರ್‌ಗೆ ಬಂದಮೇಲೆ ಸಿನಿಮಾ ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ಯಶಸ್ವಿಯಾಗಿತ್ತು. ಪರಿಣಾಮ ಸಿನಿಮಾ ಸಕ್ಸಸ್ ಕಂಡಿತ್ತು.
ಸದ್ಯ 'ರಾಬರ್ಟ್' ಸಿನಿಮಾ ಹಿಂದಿ ವರ್ಷನ್ ಯೂಟ್ಯೂಬ್‌ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. 'ರಾಬರ್ಟ್' ದರ್ಶನ್ ಅಬ್ಬರ ನೋಡಿ ಹಿಂದಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕನ್ನಡ ಸಿನಿಮಾಗಳು ಹಿಂದಿಗೆ ಡಬ್ ಆಗಿ ಕಿರುತೆರೆ ಹಾಗೂ ಯೂಟ್ಯೂಬ್‌ನಲ್ಲಿ ಸಖತ್ ಸದ್ದು ಮಾಡುತ್ತವೆ. ಅದರಲ್ಲೂ ದರ್ಶನ್, ಯಶ್ ಸಿನಿಮಾಗಳಿಗೆ ಹೆಚ್ಚಿನ ಬೇಡಿಕೆ ಇದೆ. ಕಳೆದ ವರ್ಷ ಯೂಟ್ಯೂಬ್‌ಗೆ 'ರಾಬರ್ಟ್' ಹಿಂದಿ ವರ್ಷನ್ ಅಪ್‌ಲೋಡ್ ಆಗಿತ್ತು. ಸದ್ಯ 12 ಕೋಟಿಗೂ ಹೆಚ್ಚು ವೀವ್ಸ್ ಸಾಧಿಸಿರುವ ಸಿನಿಮಾ 12 ಲಕ್ಷಕ್ಕೂ ಹೆಚ್ಚು ಲೈಕ್ಸ್ ಗಿಟ್ಟಿಸಿಕೊಂಡಿದೆ.

26 ಸಾವಿರಕ್ಕೂ ಅಧಿಕ ಕಾಮೆಂಟ್ಸ್ ಕೂಡ ಸಿಕ್ಕಿದೆ. ಸಿನಿಮಾ ವೀಕ್ಷಿಸಿರುವ ಹಿಂದಿ ಪ್ರೇಕ್ಷಕರು ಮೆಚ್ಚಿ ಕೊಂಡಾಡಿದ್ದಾರೆ. ಸದ್ಯ 'ರಾಬರ್ಟ್' ಹಿಂದಿ ವರ್ಷನ್ ಯುಟ್ಯೂಬ್‌ನಲ್ಲಿ 12 ಕೋಟಿಗೂ ಹೆಚ್ಚು ವೀವ್ಸ್ ಸಾಧಿಸಿರುವುದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ಹಂಚಿಕೊಂಡು ಖುಷಿಪಡುತ್ತಿದ್ದಾರೆ. ಕೊರೋನಾ ಹಾವಳಿ ಬಳಿಕ 2021ರ ಮಾರ್ಚ್ 11ರಂದು 'ರಾಬರ್ಟ್' ಸಿನಿಮಾ ತೆರೆಗಪ್ಪಳಿಸಿತ್ತು. ಕನ್ನಡದಲ್ಲಿ ಮಾತ್ರ ಕೇವಲ 20 ದಿನಗಳಲ್ಲಿ 'ರಾಬರ್ಟ್' ಸಿನಿಮಾ 100 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ವರದಿ ಆಗಿತ್ತು. ಇನ್ನು ಸಿನಿಮಾ ಡಿಜಿಟಲ್ ರೈಟ್ಸ್, ಸ್ಯಾಟಲೈಟ್ ರೈಟ್ಸ್ ಕೂಡ ಭಾರೀ ಬೆಲೆಗೆ ಮಾರಾಟವಾಗಿತ್ತು. ಆ ಮೂಲಕ ಅನಾಯಾಸವಾಗಿ ಸಿನಿಮಾ 100 ಕೋಟಿ ರೂ.ಗೂ ಅಧಿಕ ಬ್ಯುಸಿನೆಸ್ ಮಾಡಿತ್ತು.
'ರಾಬರ್ಟ್' ಕಾಂಬಿನೇಷನ್‌ನಲ್ಲೇ 'ಸಿಂಧೂರ ಲಕ್ಷ್ಮಣ' ಸಿನಿಮಾ ಬರಬೇಕಿತ್ತು. ಪೂಜೆ ಸಲ್ಲಿಸಿ ಸ್ಟ್ರಿಪ್ಟ್ ವರ್ಕ್ ಕೂಡ ಶುರು ಮಾಡಲಾಗಿತ್ತು. ಸಂಗೊಳ್ಳಿ ರಾಯಣ ಬಳಿಕ ದರ್ಶನ್ ಮತ್ತೊಬ್ಬ ಸ್ವಾತಂತ್ರ್ಯ ಹೋರಾಟಗಾರ ಸಿಂಧೂರ ಲಕ್ಷ್ಮಣನ ಪಾತ್ರದಲ್ಲಿ ನಟಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಈ ಸಿನಿಮಾ ನಿಂತು ಹೋಗಿದೆ. ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಈ ಸಿನಿಮಾವನ್ನು ಮಾಡಿಯೇ ತೀರುತ್ತೇನೆ ಎಂದು ಹೇಳಿದ್ದಾರೆ. ಆದರೆ ಯಾರು ಸಿಂಧೂರ ಲಕ್ಷ್ಮಣ ಪಾತ್ರ ಮಾಡ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.


Click it and Unblock the Notifications











