twitter
    For Quick Alerts
    ALLOW NOTIFICATIONS  
    For Daily Alerts

    ಡಿಸೆಂಬರ್ ನಲ್ಲಿ ಬಿಡುಗಡೆಯಾಗಿ ಹಣ ಗಳಿಸಿದ ಸಿನಿಮಾಗಳು ಯಾವುವು?

    |

    ಕೊರೊನಾ ಲಾಕ್‌ಡೌನ್ ನಿಂದ ಬಂದ್ ಆಗಿದ್ದ ಚಿತ್ರಮಂದಿರಗಳು 50% ಪ್ರೇಕ್ಷಕರ ಮಿತಿಯೊಂದಿಗೆ ಇದೀಗ ಮತ್ತೆ ಕಾರ್ಯನಿರ್ವಹಿಸುತ್ತಿವೆ. ಚಿತ್ರಮಂದಿರಗಳು ತೆರೆದಿವೆಯಾದರೂ ಜನರ ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಬರುತ್ತಿಲ್ಲ. ಆದರೆ ಹೊಸ ಸಿನಿಮಾಗಳು ಬಿಡುಗಡೆ ಆಗುವುದು ನಿಂತಿಲ್ಲ.

    ನವೆಂಬರ್ ಆರಂಭದಿಂದಲೂ ಸೀಮಿತ ಪ್ರೇಕ್ಷಕರಿಗೆ ಅವಕಾಶ ನೀಡಿ ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತಿವೆ. ಆರಂಭದಲ್ಲಿ ಹಳೆಯ ಚಿತ್ರಗಳನ್ನು ಮರುಬಿಡುಗಡೆ ಮಾಡಲಾಗಿತ್ತು. ಆದರೆ ನವೆಂಬರ್ ನಂತರ ಪರಿಸ್ಥಿತಿ ತುಸು ಸುಧಾರಿಸಿದಂತಾಗಿ, ಕೆಲವು ಹೊಸ ಸಿನಿಮಾಗಳು ಚಿತ್ರಮಂದಿದಲ್ಲಿ ಬಿಡುಗಡೆ ಆದವು.

    ಡಿಸೆಂಬರ್ ತಿಂಗಳಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ ಆದ ಕೆಲವು ಹೆಸರಾಂತ ಸಿನಿಮಾಗಳ ಪಟ್ಟಿ ಹಾಗೂ ಅವುಗಳ ಕಲೆಕ್ಷನ್‌ಗಳ ಮಾಹಿತಿ ಇಲ್ಲಿದೆ.

    ಟೆನೆಟ್ ಸಿನಿಮಾ ಗಳಿಸಿದ್ದೆಷ್ಟು?

    ಟೆನೆಟ್ ಸಿನಿಮಾ ಗಳಿಸಿದ್ದೆಷ್ಟು?

    ಡಿಸೆಂಬರ್ ಮೊದಲ ವಾರದಲ್ಲಿ ವಿಶ್ವವಿಖ್ಯಾತ ನಿರ್ದೇಶಕ ಕ್ರಿಸ್ಟೊಫರ್ ನೊಲನ್ ನಿರ್ದೇಶನದ 'ಟೆನೆಟ್' ಸಿನಿಮಾ ಬಿಡುಗಡೆ ಆಯಿತು. ಈ ಸಿನಿಮಾದ ಮೇಲೆ ಭಾರಿ ನಿರೀಕ್ಷೆಗಳಿತ್ತು. ವಿದೇಶಗಳಲ್ಲಿ ಭಾರಿ ಮೊತ್ತದ ಕಲೆಕ್ಷನ್ ಅನ್ನು ಸಿನಿಮಾ ಮಾಡಿತ್ತು. ಭಾರತದಲ್ಲಿ ಉತ್ತಮ ಆರಂಭಗಳಿಸಿತಾದರು ಅದನ್ನೇ ಮುಂದುವರೆಸುವಲ್ಲಿ ಸಿನಿಮಾ ವಿಫಲವಾಯಿತು. ಟೆನೆಟ್ ಮೊದಲ ವಾರದಲ್ಲಿ ಗಳಿಸಿದ್ದು ಕೇವಲ 8 ಕೋಟಿ ರೂಪಾಯಿ.

    ಇಂದುವನ್ನು ನೋಡಲು ಬರಲಿಲ್ಲ ಜನ

    ಇಂದುವನ್ನು ನೋಡಲು ಬರಲಿಲ್ಲ ಜನ

    ನಂತರ ಹಿಂದಿಯ 'ಇಂದು ಕಿ ಜವಾನಿ' ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು. ಈ ಸಿನಿಮಾ ಪ್ರೇಕ್ಷಕರನ್ನು ಸೆಳೆಯಬಹುದು ಎನ್ನಲಾಗಿತ್ತು ಆದರೆ ಸಿನಿಮಾ ಧಾರುಣವಾಗಿ ನೆಲಕಚ್ಚಿತು. ಕಿಯಾರಾ ಅಡ್ವಾಣಿ ನಟಿಸಿದ್ದ ಈ ಸಿನಿಮಾ ಸಾಕಷ್ಟು ಗ್ಲಾಮರ್ ಅಂಶವನ್ನು ಒಳಗೊಂಡಿತ್ತಾದರೂ ಇಂದುವನ್ನು ನೋಡಲು ಜನ ಚಿತ್ರಮಂದಿರಕ್ಕೆ ಬರಲಿಲ್ಲ.

    ಗಮನ ಸೆಳೆಯಲು ವಿಫಲವಾದ 'ಶಕೀಲ'

    ಗಮನ ಸೆಳೆಯಲು ವಿಫಲವಾದ 'ಶಕೀಲ'

    ನಂತರ ಹಿಂದಿ ಸೇರಿ ಕೆಲವು ಭಾಷೆಗಳಲ್ಲಿ ಬಿಡುಗಡೆ ಆಗಿದ್ದು ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಶಕೀಲ' ಸಿನಿಮಾ. ಈ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿತ್ತು. ಇದೇ ಸಿನಿಮಾ ಪ್ರೇಕ್ಷಕರನ್ನು ಮತ್ತೆ ಚಿತ್ರಮಂದಿರಕ್ಕೆ ಕರೆತರುತ್ತದೆ ಎಂದು ಚಿತ್ರತಂಡ ಹೇಳಿತ್ತು. ಆದರೆ ಹಾಗೆ ಏನೂ ಆಗಲಿಲ್ಲ. ಸಿನಿಮಾ ಗಮನ ಸೆಳೆಯಲು ವಿಫಲವಾಯಿತು.

    ತೆಲುಗು ಸಿನಿಮಾದ ಗಳಿಕೆ ಎಷ್ಟು?

    ತೆಲುಗು ಸಿನಿಮಾದ ಗಳಿಕೆ ಎಷ್ಟು?

    ವರ್ಷಾಂತ್ಯದಲ್ಲಿ ಬಿಡುಗಡೆ ಆದ ತೆಲುಗು ಸಿನಿಮಾ 'ಸೋಲೊ ಬ್ರದುಕೆ ಸೋ ಬೆಟರ್' ಸಿನಿಮಾ ಒಳ್ಳೆಯ ಗಳಿಕೆ ಮಾಡಿ ಮುನ್ನಡೆಯುತ್ತಿದೆ. ವರುಣ್ ತೇಜ್ ನಟನೆಯ ಈ ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಹೆಚ್ಚು ಗಳಿಸಿದ ಸಿನಿಮಾ ಎಂಬ ಹೆಸರುಪಡೆದುಕೊಂಡಿದೆ. ಡಿಸೆಂಬರ್ ಕಡೆಯ ಸೋಮವಾರದ ವೇಳೆಗೆ ಈ ಸಿನಿಮಾ 10 ಕೋಟಿ ಗಳಿಸಿದೆ.

    ವಂಡರ್ ವುಮನ್ ಗಳಿಸಿದ್ದೆಷ್ಟು?

    ವಂಡರ್ ವುಮನ್ ಗಳಿಸಿದ್ದೆಷ್ಟು?

    ಭಾರತದಲ್ಲಿ ಡಿಸೆಂಬರ್ 25 ರಂದು ಬಿಡುಗಡೆ ಆದ 'ವಂಡರ್ ವುಮನ್ 1984' ಸಿನಿಮಾ ಸಹ ಒಳ್ಳೆಯ ಕಲೆಕ್ಷನ್ ಮಾಡಿದೆ. ಈ ಸಿನಿಮಾ 11 ಕೋಟಿ ಕಲೆಕ್ಷನ್ ಗಳಿಸಿದೆ. ವಂಡರ್ ವುಮನ್ ಸಿನಿಮಾವು ಇನ್ನೂ ಹೆಚ್ಚಿನ ಕಲೆಕ್ಷನ್ ಮಾಡಲಿದೆ ಎನ್ನುವ ಲೆಕ್ಕಾಚಾರ ಇದೆ.

    English summary
    December box office collection report. Some movies collects good amount of money, some movies fail to impress.
    Thursday, December 31, 2020, 13:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X