ರಮ್ಯಾ ಹಾಕಿದ್ದ ಈ ಡ್ರೆಸ್ ಇಷ್ಟ ಆಯ್ತಾ? ಜಸ್ಟ್ ಎಷ್ಟು ಸಾವಿರ ಗೊತ್ತಾ?

By ಎಸ್ ಸುಮಂತ್

ಮೋಹಕ ತಾರೆ ರಮ್ಯಾ ಸದಾ ಕಾಲ ಕಾಡುವ ಬ್ಯೂಟಿಫುಲ್ ನಟಿ. ಈಗಲೂ ಪಬ್ಲಿಕ್ ಪ್ಲೇಸ್‌ನಲ್ಲಿ ರಮ್ಯಾ ಕಾಣಿಸ್ತಾರೆ ಅಂದ್ರೆ ಅವರನ್ನ ನೋಡೋದಕ್ಕೆ ಅಭಿಮಾನಿಗಳು ಮುತ್ತಿಗೆ ಹಾಕುತ್ತಾರೆ. ಅಷ್ಟು ಕ್ರೇಜ್ ಇದೆ ಈ ನಟಿಗೆ.

15 ವರ್ಷಗಳ ಹಿಂದೆ ರಮ್ಯಾ ಕ್ರೇಜ್ ಜೋರಾಗಿತ್ತು. ರಾಜಕೀಯಕ್ಕೆ ಎಂಟ್ರಿ ಆದ್ಮೇಲೆ ಸಿನಿಮಾ ಕಡೆಗೆ ಬರೋದು ಕಡಿಮೆ ಆಗಿತ್ತು. ಕಳೆದ ಎರಡು ವರ್ಷಗಳಿಂದ ರಮ್ಯಾ ಕಮ್ ಬ್ಯಾಕ್ ಆಗ್ತಾರೆ ಅಂತಾನೇ ಮಿಲಿಯನ್ ಮನಸ್ಸುಗಳು ಕಾಯ್ತಾ ಇದ್ದರು. ಆದರೆ ಅದು ಕನಸಾಗಿಯೇ ಉಳಿದು ಬಿಟ್ಟಿದೆ.

Decoding cost of kannada actress Ramya s outfit at recent event

ತೆರೆಮೇಲೆ ನಟನೆ ಮಾಡದೆ ಹೋದರೂ ಸಿನಿಮಾ ಇಂಡಸ್ಟ್ರಿ ಮೂಲಕವೇ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗಿಯಾಗ್ತಾರೆ, ಹೊಸಬರಿಗೆ ಪ್ರೋತ್ಸಾಹ ನೀಡುತ್ತಾರೆ, ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುತ್ತಾರೆ. ಹೀಗೆ ಒಂದಲ್ಲ ಒಂದು ರೀತಿಯಾಗಿ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಇನ್ನು ರಮ್ಯಾ ಅವರ ಬ್ಯೂಟಿ ಬಗ್ಗೆ ಮಾತಾಡೋ ಹಾಗೆ ಇಲ್ವೆ ಇಲ್ಲ. ಯಾಕಂದ್ರೆ ಈಗಂತು ಇನ್ನಷ್ಟು ಹುಚ್ಚು ಹೆಚ್ಚಿಸುತ್ತಿದೆ ಅವರ ಬ್ಯೂಟಿ.

'ಆಕಾಶ್', 'ಅಭಿ' ಸಿನಿಮಾದಲ್ಲಿ ಏನು ರಮ್ಯಾ ಅವರನ್ನ ನೋಡಿದ್ವಿ ಇಂದಿಗೂ ಅದೇ ರೀತಿಯಾಗಿ ಕಾಣಿಸುತ್ತಾರೆ. ರಮ್ಯಾ ಅವರು ತಮ್ಮ ವಿದೇಶದಲ್ಲಿ ಆಯುರ್ವೇದಿಕ್ ಟ್ರೀಟ್ಮೆಂಟ್ ಕೂಡ ಪಡೆದಿದ್ದರು. ಇತ್ತೀಚೆಗಂತು ಫಿಟ್ನೆಸ್ ಹಾಗೂ ಬ್ಯೂಟಿ ಎರಡನ್ನು ಸೂಪರ್ ಆಗಿ ಮೆಂಟೈನ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಅಷ್ಟೇ ರಮ್ಯಾ ಅವರ ಅಭಿಮಾನಿಗಳು ಕಡಿಮೆ ಏನು ಇಲ್ಲ. ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಅದರ ಫೋಟೋ, ವಿಡಿಯೋ ಸಿಕ್ಕಾಪಟ್ಟೆ ಟ್ರೆಂಡ್ ಕ್ರಿಯೇಟ್ ಮಾಡುತ್ತವೆ. ಅವರ ಫ್ಯಾನ್ ಪೇಜ್‌ನಲ್ಲಿ ರಾತಾಜಿಸುತ್ತವೆ.

ರಮ್ಯಾ ಬರೀ ಬ್ಯೂಟಿಗಷ್ಟೇ ಸ್ಫೂರ್ತಿ ಅಲ್ಲ, ಅವರ ಡ್ರೆಸ್ಸಿಂಗ್ ವಿಚಾರದಲ್ಲೂ ಸ್ಫೂತಿಯಾಗಿ ನಿಲ್ಲುತ್ತಾರೆ. ಎಲ್ಲಾದರೂ ಹೊರಗಡೆ ಬಂದಾಗ ಅವರು ಹೈಲೇಟ್ ಆಗುವುದರ ಜೊತೆಗೆ ಅವರ ಡ್ರೆಸ್ ಕೂಡ ಹೈಲೇಟ್ ಆಗುತ್ತದೆ. ಸಾಕಷ್ಟು ಬಾರಿ ಕಾರ್ಯಕ್ರಮಕ್ಕೆ ಹೋದಾಗಲೂ ಅವರು ತೊಟ್ಟ ಕಾಸ್ಟ್ಯೂಮ್ ಹೈಲೇಟ್ ಆಗಿದೆ. ಇದೀಗ ಕುರ್ತಾ ಸೆಟ್ ಬಾರಿ ಸದ್ದು‌ ಮಾಡುತ್ತಿದೆ. ರಮ್ಯಾ ಹಾಕಿದ್ದ ಚೂಡಿ, ಅದರ ಡಿಸೈನ್, ಅದರ‌ಬೆಲೆ ಎಲ್ಲವೂ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಾ ಇದೆ.

ಇತ್ತೀಚೆಗಷ್ಟೇ ರಮ್ಯಾ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರ ಶಾಲೆಗೆ ಗೆಸ್ಟ್ ಆಗಿ ಹೋಗಿದ್ದನ್ನ ನೀವೂ ನೋಡಿರ್ತೀರಿ. ರಮ್ಯಾ ಹಾಗೂ ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಡಿಕೆಶಿ ಅವರ ಜೊತೆಗೂ ಒಂದಷ್ಟೂ ಫೋಟೋಗಳನ್ನ ಹಾಕಿದ್ದರು. ಆ ಫೋಟೋದಲ್ಲಿ ಆರೇಂಜ್ ಕಲರ್ ಡ್ರೆಸ್ ಅನ್ನು ರಮ್ಯಾ ಅವರು ಹಾಕಿದ್ದರು. ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಕ್ರಿಯೇಟ್ ಮಾಡಿರುವುದು ಅದೇ ಡ್ರೆಸ್. ಹೌದು, ಈ ಡ್ರೆಸ್ ಪ್ಯಾಟ್ರನ್ ಎಲ್ಲರನ್ನು ಸೆಳೆಯುತ್ತಿದೆ. ಆಫ್ ಸ್ಲೀವ್ ಕುರ್ತಾ ಟಾಪ್‌ಗೆ ಫಲಾಜೋ ಪ್ಯಾಂಟ್ ಬಂದಿದೆ. ಜೊತೆಗೆ ಕಣ್ಮನ ಸೆಳೆಯುವಂತ ದುಪ್ಪಟ್ಟ. ಈ ದುಪ್ಪಟ್ಟಾದ ಸೈಡ್‌ನಲ್ಲೆಲ್ಲಾ ವರ್ಕ್ ಗೋಲ್ಡನ್ ಕಲರ್‌ನಲ್ಲಿ ವರ್ಕ್ ಮಾಡಲಾಗಿದೆ.

ಇನ್ನು ಪ್ಯಾಂಟ್‌ನ ಕೆಳಭಾಗದಲ್ಲೂ ಈ ವರ್ಕ್ ಕಾಣಬಹುದಾಗಿದೆ. ಈ ಡ್ರೆಸ್ ಒಳ್ಳೆ ಲುಕ್ ಕೊಡುತ್ತಾ ಇದ್ದು, ಪಾರ್ಟಿ, ಫಂಕ್ಷನ್ ಸಮಯದಲ್ಲಿ ವೇರ್ ಮಾಡಿದರೆ ಗ್ರ್ಯಾಂಡ್ ಲುಕ್ ನೀಡುತ್ತಿದೆ. ನೀವೂ ಕೂಡ ಈ ಕುರ್ತಾ ಸೆಟ್ ಅನ್ನ ಖರೀದಿಸಬಹುದು. ಅದರ ಬೆಲೆ 18,900 ರೂಪಾಯಿ ಇದೆ. ಈ ಡ್ರೆಸ್‌ನಲ್ಲಿ ರಮ್ಯಾ ಅಂತು ಸಖತ್ ಕ್ಯೂಟ್ ಆಗಿ ಕಾಣಿಸ್ತಾ ಇದ್ದಾರೆ.

More from Filmibeat

English summary
Here is the details about How much did the dress Ramya wore to the DKSH school event cost?
Read more about: ramya sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X