twitter
    For Quick Alerts
    ALLOW NOTIFICATIONS  
    For Daily Alerts

    ರಾಜ್‌ಕುಮಾರ್ ಅನ್ನು ರಾಜಕೀಯಕ್ಕೆ ತರಲು ದೇವೇಗೌಡರು ಮಾಡಿದ್ದ ಪ್ರಯತ್ನ ಸಾಮಾನ್ಯದ್ದಲ್ಲ

    |

    ಡಾ.ರಾಜ್‌ಕುಮಾರ್ ಅವರನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನಗಳನ್ನು ಹಲವು ಪ್ರಮುಖರು ಕೆಲವು ದಶಕಗಳ ಕಾಲ ಮಾಡಿದರೂ ಸಹ ಯಾರೂ ಯಶಸ್ವಿಯಾಗಲಿಲ್ಲ.

    ಪಕ್ಕದ ರಾಜ್ಯಗಳಲ್ಲಿ ತಮ್ಮ ಸಮಕಾಲೀನರಾದ ಎನ್‌ಟಿಆರ್, ಎಎನ್‌ಆರ್, ಎಂಜಿಆರ್‌ ಅವರುಗಳು ತಾವು ನಟನೆಯಿಂದ ಪಡೆದ ಖ್ಯಾತಿಯನ್ನೇ ಬಳಸಿ ರಾಜಕೀಯದಲ್ಲಿ ದೊಡ್ಡ ಯಶಸ್ಸು ಸಾಧಿಸಿದ್ದನ್ನು ನೋಡಿಯೂ ಸಹ ರಾಜ್‌ಕುಮಾರ್ ರಾಜಕೀಯ ಅಧಿಕಾರದ ಪ್ರಲೋಭನೆಗೆ ಒಳಗಾಗಲಿಲ್ಲ.

    ದೇಶ ಕಂಡ ಮುತ್ಸದಿ ನಾಯಕರಲ್ಲಿ ಒಬ್ಬರಾದ ದೇವೇಗೌಡ ಅವರು ಸಹ ರಾಜ್‌ಕುಮಾರ್ ಅವರನ್ನು ರಾಜಕೀಯಕ್ಕೆ ಕರೆತರುವ ವಿಫಲ ಯತ್ನ ಮಾಡಿದವರೇ. ಈ ಬಗ್ಗೆ ಹಳೆಯ ಟಿವಿ ಸಂದರ್ಶನವೊಂದರಲ್ಲಿ ದೇವೇಗೌಡ ಮಾತನಾಡಿದ್ದರು.

    ತುರ್ತುಪರಿಸ್ಥಿತಿ ಹಾಗೂ ಇತರೆ ರಾಜಕೀಯ ಕಾರಣಗಳಿಂದ ಇಂದಿರಾಗಾಂಧಿ ಅವರ ಮೇಲೆ ಸಿಟ್ಟಾಗಿದ್ದ ದೇವೇಗೌಡ ಅವರು 1977 ರ ಚುನಾವಣೆಯಲ್ಲಿ ಇಂದಿರಾ ಗಾಂಧಿ ಸೋತು, ಮತ್ತೆ ಚಿಕ್ಕಮಂಗಳೂರಿನಿಂದ ಚುನಾವಣೆಗೆ ಸ್ಪರ್ಧಿಸಲು ಮುಂದಾದಾಗ ಇಂದಿರಾ ಅವರನ್ನು ಹೇಗಾದರೂ ಮಾಡಿ ಸೋಲಿಸಲೇ ಬೇಕು ಎಂದು ಪಣತೊಟ್ಟಿದ್ದರು ದೇವೇಗೌಡ.

    ಗಂಟೆಗಟ್ಟಲೆ ಒಪ್ಪಿಸಲು ಯತ್ನಿಸಿದೆ: ದೇವೇಗೌಡ

    ಗಂಟೆಗಟ್ಟಲೆ ಒಪ್ಪಿಸಲು ಯತ್ನಿಸಿದೆ: ದೇವೇಗೌಡ

    ''ಇಂದಿರಾ ಗಾಂಧಿ ಅವರ ಎದುರು ಗೆಲ್ಲಬಹುದಾದ ಏಕೈಕ ವ್ಯಕ್ತಿಯೆಂದರೆ ಡಾ.ರಾಜ್‌ಕುಮಾರ್ ಎಂಬುದನ್ನು ಅರಿತು ಅವರನ್ನು ಹೇಗಾದರೂ ಮಾಡಿ ಚುನಾವಣೆಗೆ ನಿಲ್ಲಿಸಬೇಕೆಂದು ನಾನು ರಾಜ್‌ಕುಮಾರ್ ಅವರನ್ನು ಭೇಟಿಯಾದೆ. ಗಂಟೆಗಟ್ಟಲೆ ಕನ್ವಿನ್ಸ್ ಮಾಡೋಕೆ ಪ್ರಯತ್ನಿಸಿದೆ. ಅವರು ಬಿಲ್ ಕುಲ್ ಒಪ್ಪಲಿಲ್ಲ. ನಾನೂ ಸಹಾ ಜಗ್ಗಲಿಲ್ಲ'' ಎಂದಿದ್ದರು ದೇವೇಗೌಡ.

    ಎಂಜಿಆರ್‌ ಬಳಿಗೂ ಹೋಗಿದ್ದೆ: ದೇವೇಗೌಡ

    ಎಂಜಿಆರ್‌ ಬಳಿಗೂ ಹೋಗಿದ್ದೆ: ದೇವೇಗೌಡ

    ''ಅವರನ್ನ ಒಪ್ಪಿಸಲೇ ಬೇಕೆಂಬ ಹಠದಿಂದ ಎಂಜಿಆರ್ ಬಳಿ ಹೋದೆ. ಅವರು ಹೇಳಿದರೆ ರಾಜಕುಮಾರ್ ಒಪ್ತಾರೆ ಅಂತ. ಆದರೆ ಎಂಜಿಆರ್ ಅವರು 'ರಾಜ್ ಕುಮಾರ್ ಬಹಳ ಎತ್ತರಕ್ಕೆ ಬೆಳೆದಿರುವ ಕಲಾವಿದ, ಅವರನ್ನು ಒತ್ತಾಯ ಮಾಡಬೇಡಿ' ಎಂದರು. ನಾನು ಅಲ್ಲಿಗೆ ನನ್ನ ಪ್ರಯತ್ನ ಕೈಬಿಟ್ಟೆ' ಎಂದರು ದೇವೇಗೌಡ.

    ರಾಜ್‌ಕುಮಾರ್ ಒಬ್ಬ ಕ್ಲಾಸಿಕ್ ಆಕ್ಟರ್: ದೇವೇಗೌಡ

    ರಾಜ್‌ಕುಮಾರ್ ಒಬ್ಬ ಕ್ಲಾಸಿಕ್ ಆಕ್ಟರ್: ದೇವೇಗೌಡ

    ರಾಜ್‌ಕುಮಾರ್ ಒಬ್ಬ ಕ್ಲಾಸಿಕ್ ಆಕ್ಟರ್ ಎನ್ನುವ ದೇವೇಗೌಡರು. ರಾಜ್‌ಕುಮಾರ್ ಅವರ ಹಲವಾರು ಸಿನಿಮಾಗಳನ್ನು ನೋಡಿದ್ದರು. ನೀತಿ ಭೋಧನೆ ಇರುವ ಚಿತ್ರಗಳನ್ನು ಇಷ್ಟಪಡುತ್ತಿದ್ದ ದೇವೇಗೌಡ ಅವರು 'ಭೂತಯ್ಯನ ಮಗ ಅಯ್ಯು', ಹಿಂದಿಯ 'ಬೂಟ್ ಪಾಲೀಶ್', 'ಆವಾರ' ಇನ್ನೂ ಕೆಲವು ಸಿನಿಮಾಗಳನ್ನು ನೋಡಿ ಖುಷಿ ಪಟ್ಟಿರುವುದಾಗಿ ಅಂದಿನ ಸಂದರ್ಶನದಲ್ಲಿ ಹೇಳಿದ್ದರು.

    ಯಾವುದಕ್ಕೂ ಬಗ್ಗಲಿಲ್ಲ ರಾಜ್‌ಕುಮಾರ್

    ಯಾವುದಕ್ಕೂ ಬಗ್ಗಲಿಲ್ಲ ರಾಜ್‌ಕುಮಾರ್

    ಕಾಂಗ್ರೆಸ್ ಪಕ್ಷ ಸಹ ರಾಜ್‌ಕುಮಾರ್ ಅವರನ್ನು ರಾಜಕೀಯಕ್ಕೆ ಕರೆತರಲು ಯತ್ನಗಳನ್ನು ಮಾಡಿತು. ಗೋಕಾಕ್ ಚಳವಳಿ ಬಳಿಕ ಅಸ್ಥಿತ್ವದಲ್ಲಿ ಕೆಲವು ಪ್ರಾದೇಶಿಕ ಪಕ್ಷಗಳ ಜೊತೆಗೆ ಹೊಸದಾಗಿ ಪ್ರಾರಂಭವಾಗಲು ಹವಣಿಸುತ್ತಿದ್ದ ಕೆಲವು ಪಕ್ಷಗಳು ಸಹ ರಾಜ್‌ಕುಮಾರ್ ಅವರನ್ನು ರಾಜಕೀಯಕ್ಕೆ ಬರುವಂತೆ ದುಂಬಾಲು ಬಿದ್ದವು. ಏನೇನೋ ಆಮೀಷಗಳನ್ನು ಒಡ್ಡಿದರೂ ಸಹ ರಾಜ್‌ಕುಮಾರ್ ಯಾವುದಕ್ಕೂ ಬಗ್ಗಲಿಲ್ಲ.

    English summary
    Former prime minister Deve Gowda tried hard to bring Dr Rajkumar into politics. He insisted him to contest election against Indira Gandhi.
    Wednesday, May 19, 2021, 17:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X