"ನಟಿಯಾಗಿ ಮೋರಿಲೀ ನುಗ್ಗು ಅಂದ್ರು ನುಗ್ಗಬೇಕು, ಎಷ್ಟೇ ಕಷ್ಟಪಟ್ರು ಒಳ್ಳೆ ಸಂಭಾವನೆ ಸಿಗಲ್ಲ"; ಖುಷಿ
'ದಿಯಾ' ಸಿನಿಮಾ ಮೂಲಕ ಮೋಡಿ ಮಾಡಿದ ಚೆಲುವೆ ಖುಷಿ ರವಿ. 2016ರಲ್ಲಿ 'ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ' ಎನ್ನುವ ಸಿನಿಮಾದಲ್ಲಿ ಆಕೆ ಮೊದಲಿಗೆ ನಟಿಸಿದ್ದರು. ಸೈನ್ಯ ಸೇರುವ ಕನಸು ಕಂಡಿದ್ದ ಸುಷ್ಮಿತಾ ರವಿ ಬಳಿಕ ಖುಷಿ ಆಗಿ ಬಣ್ಣದಲೋಕಕ್ಕೆ ಬಂದರು.
ಅಭಿನಯಕ್ಕೆ ಅವಕಾಶ ಇರುವು ಪಾತ್ರಗಳನ್ನು ಖುಷಿ ರವಿ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಒಂದು ತೆಲುಗು ಚಿತ್ರದಲ್ಲಿ ಸಹ ಆಕೆ ನಟಿಸಿ ಬಂದಿದ್ದಾರೆ. ಮತ್ತೆರಡು ಸಿನಿಮಾಗಳು ಕೈಯಲ್ಲಿವೆ. ರಾಜೇಶ್ ಗೌಡ ಯೂಟ್ಯೂಬ್ ಚಾನಲ್‌ನಲ್ಲಿ ಖುಷಿ ತಮ್ಮ ವೈಯಕ್ತಿಯ ಜೀವನ ಹಾಗೂ ಸಿನಿ ಜೀವನದ ಬಗ್ಗೆ ಮಾತನಾಡಿದ್ದಾರೆ. ಅಷ್ಟು ಬೇಗ ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದು ಯಾಕೆ ಎನ್ನುವುದನ್ನು ಹೇಳಿದ್ದಾರೆ.

ಮದ್ದೂರು ಮೂಲದ 'ಖುಷಿ' ತಮ್ಮದೇ ಊರಿನ ರಾಕೇಶ್ ಕುಮಾರ್ ಎಂಬುವವರನ್ನು 8 ವರ್ಷಗಳ ಹಿಂದೆ ಕೈ ಹಿಡಿದಿದ್ದರು. 'ದಿಯಾ' ಸಿನಿಮಾ ಬಿಡುಗಡೆಗೂ ಮುನ್ನವೇ ಮದುವೆ ನಡೆದಿತ್ತು. ಫ್ಯಾಮಿಲಿಯನ್ನು ನಿಭಾಯಿಸುವುದರ ಜೊತೆಗೆ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅದಕ್ಕೆ ಪತಿ ಹಾಗೂ ಕುಟುಂಬ ಸದಸ್ಯರ ಸಹಕಾರ, ಬೆಂಬಲದ ಬಗ್ಗೆ ಹೇಳಿದ್ದಾರೆ. ಇನ್ನು ನಟಿಯರಿಗೆ ಸಂಭಾವನೆ ಕೊಡಲು ಹಿಂದುಮುಂದು ನೋಡುತ್ತಾರೆ ಎನ್ನುವ ವಾದವನ್ನು ಮತ್ತೆ ಮುಂದಿಟ್ಟಿದ್ದಾರೆ.
"ನನಗೆ ಗೊತ್ತಿರುವಂತೆ ನಟ, ನಟಿಯರಿಗೆ ಕನ್ನಡದಲ್ಲೇ ಒಂದು ರೆಮ್ಯೂನರೇಷನ್ ಇದೆ. ಬೇರೆ ಭಾಷೆಗಳಲ್ಲಿ ಬೇರೆ ರೀತಿ ಇದೆ. ನನ್ನ ಅನುಭವದ ಪ್ರಕಾರ ಚಿಕ್ಕ ಬ್ಯಾನರ್‌ನಲ್ಲಿ ಒಳ್ಳೆ ಸಂಭಾವನೆ ಕೊಟ್ಟಿದ್ದಾರೆ. ಆದರೆ ದೊಡ್ಡ ಬ್ಯಾನರ್‌ನಲ್ಲಿ ನಟಿಸೋಕೆ ನನಗೆ ಇಷ್ಟ. ಆದರೆ ನಾವು ಕೇಳುವ ಸಂಭಾವನೆ ಅಲ್ಲಿ ಸಿಗಲ್ಲ. ಏನ್ ಮೇಡಂ ಇಂತಹ ದೊಡ್ಡ ಸ್ಟಾರ್ ಜೊತೆ ಆಕ್ಟ್ ಮಾಡ್ತಿದ್ದೀರಾ. ನಿಮಗೆ ಒಳ್ಳೆ ವೇದಿಕೆ ಆಗುತ್ತದೆ ಎನ್ನುತ್ತಾರೆ. ಆದರೆ ನನ್ನ ಸಂಭಾವನೆ, ನಾನು ಮಾಡುವ ಕೆಲಸ ಮಾಡಲೇಬೇಕಲ್ಲ" ಎನ್ನುತ್ತೇನೆ"
"ಕೆಲವೊಮ್ಮೆ ಬಹಳ ಬೇಸರವಾಗುತ್ತದೆ. ಹೀರೊಗೆ ಕೊಟ್ಟಿರುವ ಸಂಭಾವನೆಯ 30% ರಷ್ಟು ಸಂಭಾವನೆ ಕೊಡಿ. ನಾನು ಅವರಷ್ಟೆ ಕಷ್ಟಪಡುತ್ತೇವೆ. ಹೀರೊನಾ ನೋಡಿ ಮಾತ್ರವಲ್ಲ ನಮ್ಮನ್ನು ನೋಡಿ ಕೂಡ ಕೆಲ ಪ್ರೇಕ್ಷಕರು ಬರ್ತಾರೆ. ಕೆಲವರು ಮಹಿಳಾ ಪ್ರಧಾನ ಸಿನಿಮಾ ಮಾಡ್ತಾರೆ. ನಾವು ಕಷ್ಟಪಡುತ್ತೀವಿ. ಡ್ಯಾನ್ಸ್ ಮಾಡು ಅಂದ್ರೆ ಮಾಡಬೇಕು, ಕೊಟ್ಟ ಬಟ್ಟ ಹಾಕಬೇಕು, ಮೋರಿಲಿ ನುಗ್ಗಲು ಹೇಳಿದರೆ ನಟಿಯಾಗಿ ಅದನ್ನು ಮಾಡಬೇಕು. ಆದರೆ ಸಂಭಾವನೆ ಮಾತ್ರ ಕಮ್ಮಿ ಅಂತಾರೆ" ಎಂದು ಖುಷಿ ಬೇಸರ ವ್ಯಕ್ತಪಡಿಸಿದ್ದಾರೆ.

ಬಹಳ ಬೇಗ ಮದುವೆ ಆಗಿದ್ದಕ್ಕೆ ಬೇಸರ ಇಲ್ಲ. ಎಲ್ಲಾ ಗೊತ್ತಿದ್ದು ಆಗಿದ್ದು. ಮದುವೆ ಆದ ಬಳಿಕ ಅವಕಾಶ ಸಿಗಲ್ಲ ಎನ್ನುವುದು ಹಿಂದಿನ ಕಾಲದಲ್ಲಿ ಇತ್ತು. ಈಗ ಪರಿಸ್ಥಿತಿ ಕೊಂಚ ಬದಲಾಗಿದೆ ಎಂದು ಖುಷಿ ಹೇಳಿದ್ದಾರೆ. ಸುಂದರವಾಗಿರುವ ಹೆಂಡ್ತಿ ಇದ್ದರೆ ಊರೆಲ್ಲಾ ಶತ್ರುಗಳು ಅಂತ ಮಾತಿದೆ, ಈ ಬಗ್ಗೆ ಏನು ಹೇಳ್ತೀರಾ? ನಿಮ್ಮ ಪತಿಗೆ ಅಂತ ಇನ್‌ಸೆಕ್ಯುರಿಟಿ ಇದ್ಯಾ? ಎನ್ನುವ ಪ್ರಶ್ನೆಯೂ ಎದುರಾಗಿದೆ. ಅದಕ್ಕೆ ನಕ್ಕು ಆಕೆ ಉತ್ತರಿಸಿದ್ದಾರೆ.
"ಸುಂದರವಾಗಿರುವ ಮಡದಿ ಇದ್ದರೆ ಇನ್‌ಸೆಕ್ಯುರಿಟಿ ಎಂದು ಹೇಳುತ್ತಾರೆ. ಆದರೆ ನನಗೆ ಅದಕ್ಕೆ ವಿರುದ್ಧವಾಗಿದೆ ಕಣೇ. ನೀನು ಸುಂದರವಾಗಿ ಇರುವುದರಿಂದ ನಾನು ಫಿಟ್ ಅಂಡ್ ಫೈನ್ ಆಗಿ ಇರಬೇಕು, ನಾನು ಇದು ತಿನ್ನಬೇಕು, ಅದು ಮಾಡಬೇಕು ಅಂತ ಐಯಾಮ್ ಫೀಲಿಂಗ್ ಗುಡ್. beautiful wife Demon ಅನ್ನೋದೆಲ್ಲಾ ಸುಳ್ಳು ಎಂದು ನಮ್ಮ ಯಜಮಾನ್ರು ಹೇಳುತ್ತಿದ್ದರು" ಎಂದು ದಿಯಾ ವಿವರಿಸಿದ್ದಾರೆ.


Click it and Unblock the Notifications











