ಅತ್ಯಾಚಾರದ ದೃಶ್ಯದ ನಂತರ ವಾಂತಿ ಮಾಡಿಕೊಂಡ ಖ್ಯಾತ ನಟಿ, ಕಾರಣವೇನು ?

ಗೆಲುವು-ಸೋಲು-ವ್ಯಾಪಾರ-ವ್ಯವಹಾರ ಏನೇ ಇರಲಿ ಕೆಲ ಚಿತ್ರಗಳು ಮತ್ತು ಪಾತ್ರಗಳು ಕಲಾವಿದರ ಹೃದಯಕ್ಕೆ ಹತ್ತಿರವಾಗಿರುತ್ತಾವೆ. ಮರೆಯಲಾಗದ ಅನುಭವಕ್ಕೆ ಕಾರಣವಾಗಿರುತ್ತಾವೆ. ಇನ್ನು, ಪಾತ್ರಕ್ಕೆ ನ್ಯಾಯ ಸಲ್ಲಿಸಲು ಸಾಮಾನ್ಯವಾಗಿ ಕಲಾವಿದರು ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳುತ್ತಾರೆ. ಪರಕಾಯ ಪ್ರವೇಶವನ್ನು ಮಾಡುತ್ತಾರೆ. ಮುಜುಗರಕ್ಕೀಡಾಗುವ ಸನ್ನಿವೇಶಗಳಿದ್ದರು ಕೂಡ ಪಾತ್ರದ ದೃಷ್ಟಿಯಿಂದ ಅಭಿನಯಿಸುತ್ತಾರೆ. ಅದರಲ್ಲಿಯೂ ನಾಯಕಿಯರು ಕೆಲ ಒಮ್ಮೆ ಅತ್ಯಾಚಾರ ಮತ್ತು ದೌರ್ಜನ್ಯಕ್ಕೊಳಗಾಗುವ ಪಾತ್ರಗಳನ್ನು ನಿರ್ವಹಿಸುತ್ತಾರೆ.

ಹಾಗಂಥ ಇಂತಹ ಸನ್ನಿವೇಶಗಳಲ್ಲಿ ಅಭಿನಯಿಸುವುದು ಅವರ ಪಾಲಿಗೆ ಸುಲಭವಾಗಿರುವುದಿಲ್ಲ. ಕೆಲವರಿಗೆ ಆ ಸನ್ನಿವೇಶಗಳಲ್ಲಿ ಅಭಿನಯಿಸಿದ ನಂತರ ವಿಪರೀತ ಸಂಕಟವಾಗುತ್ತೆ. ನೋವಾಗುತ್ತೆ. ತಾನು ನಿರ್ವಹಿಸಿದ್ದು ಚಿತ್ರದ ಒಂದು ಪಾತ್ರ ಎನ್ನುವುದು ಕೂಡ ಕೆಲವೊಮ್ಮೆ ಮರೆತು ಹೋಗಿ ನರಕಯಾತನೆ ಅನುಭವಿಸುವಂತೆ ಆಗುತ್ತೆ. ಇದಕ್ಕೆ ದಿಯಾ ಮಿರ್ಜಾಗೆ ಆದ ಅನುಭವ ಮತ್ತೊಂದು ಉದಾಹರಣೆ.

dia-mirza-says-kaafir-left-her-physically-shaking-after-filming-a-physical-abuse-scene-i-vomited

ಹೌದು, ರೆಹನಾ ಹೈ ತೇರೆ ದಿಲ್ ಮೇ ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದ್ದ ದಿಯಾ ಮಿರ್ಜಾ 2019ರಲ್ಲಿ ಕಾಫಿರ್ ಎಂಬ ವೆಬ್ ಸರಣಿಯನ್ನು ಮಾಡಿದ್ದರು. ತನಗೆ ಅರಿವಾಗದಂತೆ ಭಾರತಕ್ಕೆ ಬಂದು ಸಿಲುಕುವ ಪಾಕಿಸ್ತಾನದ ಮಹಿಳೆ ಕೈನಾಜ್ ಅಖ್ತರ್ ಪಾತ್ರವನ್ನು ದಿಯಾ ಮಿರ್ಜಾ ನಿರ್ವಹಿಸಿದ್ದರು.

ಈಗ ಆರು ವರ್ಷಗಳ ನಂತರ ಈ ವೆಬ್ ಸರಣಿಯನ್ನು ಚಿತ್ರ ರೂಪದಲ್ಲಿ ತೆರೆಗೆ ತರಲಾಗುತ್ತಿದೆ. ಈ ಹಿನ್ನೆಲೆ ಚಿತ್ರದ ಕುರಿತು ಮಾತನಾಡಿರುವ ದಿಯಾ ಮಿರ್ಜಾ ಚಿತ್ರದ ಅನುಭವ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿನ ಅತ್ಯಾಚಾರದ ಸನ್ನಿವೇಶದಲ್ಲಿ ಅಭಿನಯಿಸಿದ ನಂತರ ನಾನು ಅಕ್ಷರಶಃ ನಡುಗುತ್ತಿದ್ದೆ ಎಂದು ಹೇಳಿದ್ದಾರೆ.

ಈ ಕುರಿತು ನ್ಯೂಸ್ 18ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ದಿಯಾ ಮಿರ್ಜಾ ಕಾಫಿರ್ ಚಿತ್ರದಲ್ಲಿನ ಅತ್ಯಾಚಾರದ ದೃಶ್ಯ ನನ್ನ ಪಾಲಿಗೆ ತುಂಬಾ ಕಠಿಣವಾಗಿತ್ತು ಎಂದು ಹೇಳಿದ್ದಾರೆ. ಅತ್ಯಾಚಾರ ದೃಶ್ಯದ ಚಿತ್ರೀಕರಣದ ನಂತರ ನನ್ನ ದೇಹ ಸಂಪೂರ್ಣ ನಡುಗುತ್ತಿತ್ತು ಎಂದು ಹೇಳಿರುವ ದಿಯಾ ಮಿರ್ಜಾ ಆ ನಂತರ ನನಗೆ ವಾಂತಿ ಕೂಡ ಆಯಿತು ಎಂದು ಹೇಳಿದ್ದಾರೆ.

ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ನಾವು ಪಾತ್ರಗಳನ್ನು ಜೀವಿಸಿದಾಗ ಈ ತರಹದ ಅನುಭವಗಳಾಗುತ್ತವೆ ಎಂದು ಹೇಳಿರುವ ದಿಯಾ ಮಿರ್ಜಾ, ಅದು ಚಿತ್ರವಾದರೂ ಕೂಡ ನನ್ನ ಮೇಲೆಯೇ ಅತ್ಯಾಚಾರವಾಗುತ್ತಿದೆ ಎಂಬ ಭಾವನೆ ನನ್ನನ್ನು ಕಾಡಿತು, ಮನಸ್ಸಿಗೆ ತುಂಬಾ ನೋವಾಯ್ತು ಎಂದು ಹೇಳಿದ್ದಾರೆ. ಕಥೆ ಮತ್ತು ಪಾತ್ರಕ್ಕೆ ಸಂಪೂರ್ಣ ನ್ಯಾಯ ಸಲ್ಲಿಸುವ ಪ್ರಾಮಾಣಿಕ ಪ್ರಯತ್ನವನ್ನು ಕಲಾವಿದರು ಮಾಡಬೇಕು ಅದು ಅವರ ಕರ್ತವ್ಯ ಕೂಡ ಹೌದು ಎಂದು ಹೇಳಿರುವ ದಿಯಾ ಮಿರ್ಜಾ, ನಾನು ನಿಜ ಜೀವನದಲ್ಲಿ ತಾಯಿಯಾಗುವ ಮೊದಲೇ ಕೈನಾಜ್ ಪಾತ್ರ ನನಗೆ ತಾಯ್ತನದ ಅನುಭವ ನೀಡಿತು ಎಂದು ಕೂಡ ದಿಯಾ ಮಿರ್ಜಾ ಹೇಳಿದ್ಧಾರೆ.

ಅಂದ್ಹಾಗೇ ಸೋನಮ್ ನಾಯರ್ ನಿರ್ದೇಶನದ ಕಾಫಿರ್ ವೆಬ್ ಸರಣಿಯಲ್ಲಿ ದಿಯಾ ಮಿರ್ಜಾ ಜೊತೆ ಮೋಹಿತ್ ರೈನಾ , ಉಮರ್ ಶರೀಫ್, ದಾರಾ ಸಂಧು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು. ನಲವತ್ತು ನಿಮಿಷಗಳ ಒಟ್ಟು 08 ಎಪಿಸೋಡ್‌ಗಳನ್ನು ಹೊಂದಿರುವ ಈ ವೆಬ್ ಸರಣಿ 2019ರಲ್ಲಿ ಜೀ 5ನಲ್ಲಿ ಪ್ರಸಾರವಾಗಿತ್ತು. ಚಿತ್ರಪ್ರೇಮಿಗಳ ಗಮನವನ್ನು ಕೂಡ ಸೆಳೆದಿತ್ತು.

ಈ ಹಿನ್ನೆಲೆ ಈಗ ಇದೇ ವೆಬ್ ಸರಣಿಗೆ ಸಾಕಷ್ಟು ಕಡೆ ಕತ್ತರಿ ಪ್ರಯೋಗ ಮಾಡಿ ಅದಕ್ಕೆ ಸಿನಿಮಾದ ರೂಪ ಕೊಡಲಾಗಿದೆ. ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಸೋನಂ ನಾಯರ್ ಮತ್ತು ತಂಡ ಮುಂದಾಗಿದೆ. ಹೀಗಾಗಿಯೇ ತಮ್ಮ ಕಾಫಿರ್ ಚಿತ್ರದ ಪ್ರಚಾರ ಮಾಡುತ್ತಿರುವ ದಿಯಾ ಮಿರ್ಜಾ ಸಂದರ್ಶನದಲ್ಲಿ ತಮ್ಮ ಈ ಅನುಭವ ಹಂಚಿಕೊಂಡಿದ್ಧಾರೆ.

More from Filmibeat

Read more about: dia mirza bollywood actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X