Don't Miss!
- Sports
IND vs NZ 2nd T20: ಕಿವೀಸ್ ವಿರುದ್ಧ ಹೋರಾಡಿ ಗೆದ್ದ ಭಾರತ; ಸರಣಿ ಸಮಬಲ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ತಮಿಳು ಚಿತ್ರ ರಂಗದತ್ತ ಮುಖ ಮಾಡಿದ ಮಂಗಳೂರು ಹುಡುಗ ಪೃಥ್ವಿ ಅಂಬರ್
'ದಿಯಾ' ಸಿನಿಮಾ ಮೂಲಕ ಬೆಳ್ಳಿಪರದೆಯಲ್ಲಿ ಮಿಂಚಿದ್ದ ಪೃಥ್ವಿ ಅಂಬರ್ ಇದೀಗ 'ಬೈರಾಗಿ' ಸಿನಿಮಾದಲ್ಲಿ ನಟಿಸಿದ್ದಾರೆ. ಪೃಥ್ವಿ ಅಂಬಾರ್ ತುಳು ಸಿನಿಮಾದ ಮೂಲಕ ಮಿಂಚಿ ಕನ್ನಡ ಸಿನಿಮಾ, ಬಳಿಕ ಹಿಂದಿ ಸಿನಿಮಾ ಈಗ ತಮಿಳು ಸಿನಿಮಾದತ್ತ ಮುಖ ಮಾಡಿದ್ದಾರೆ. ಮಂಗಳೂರಿನಲ್ಲಿ ರೇಡಿಯೊ ಜಾಕಿಯಾಗಿ ಕೆಲಸ ಮಾಡುತ್ತಿದ್ದ ಇವರು 2014 ರಲ್ಲಿ ಬಿಡುಗಡೆಯಾದ 'ಬರ್ಕೆ' ಎಂಬ ತುಳು ಚಲನಚಿತ್ರದ ಮೂಲಕ ದೊಡ್ಡ ಪರದೆಗೆ ಪ್ರವೇಶ ಮಾಡಿದರು.
ಅವರ ಎರಡನೆಯ ಚಿತ್ರ ಬ್ಲಾಕ್ ಬಸ್ಟರ್ 'ಪಿಲಿಬೈಲ್ ಯಮುನಕ್ಕ' ಇದನ್ನು ಕೆ. ಸೂರಜ್ ಶೆಟ್ಟಿ ನಿರ್ದೇಶಿಸಿದ್ದರು. ಈ ಸಿನಿಮಾ ಕೋಸ್ಟಲ್ ವುಡ್ ನಲ್ಲಿ ಹೊಸ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಸಿನಿಮಾ. ಬಳಿಕ ಕನ್ನಡ ಸಿನಿಮಾ "ದಿಯಾ"ದಲ್ಲಿ ಮುಖ್ಯ ಪಾತ್ರದಲ್ಲಿ ಮಿಂಚಿದರು. ಈ ಸಿನಿಮಾದ ಮೂಲಕ ಪ್ರಖ್ಯಾತಿ ಪಡೆದ ಪೃಥ್ವಿ ಅಂಬರ್ ಬಳಿಕ ಕನ್ನಡ ಧಾರವಾಹಿ "ಜೊತೆ ಜೊತೆಯಲಿ"ಯಲ್ಲಿ 'ನೀಲ್' ಪಾತ್ರದಲ್ಲಿ ಇವರು ನಟಿಸಿದರು.
ಪೃಥ್ವಿ ಅಂಬರ್ 'ಪಿಲಿಬೈಲ್ ಯಮುನಕ್ಕ' , 'ಪಮ್ಮಣ್ಣೆ ದಿ ಗ್ರೇಟ್' , 'ಗೋಲ್ ಮಾಲ್' , '2 ಎಕ್ರೆ' , 'ಇಂಗ್ಲಿಷ್' , 'ಆಟಿಡೊಂಜಿ ದಿನ' , 'ಎನ್ನ' , 'ಕುಡುಕನ ಮದಿಮೆ' ಎಂಬ ತುಳು ಸಿನಿಮಾಗಳಲ್ಲು ಹಾಗೂ 'ರಾಜರು', 'ಡಿ.ಕೆ ಬೋಸ್' , 'ದಿಯಾ' ಎಂಬ ಕನ್ನಡ ಚಲನಚಿತ್ರಗಳಲ್ಲಿ ಮುಖ್ಯ ಪಾತ್ರ ವಹಿಸಿ ನಟಿಸಿದ್ದಾರೆ.
ಪೃಥ್ವಿ ಇವರು 17 ನೇ ಆಗಸ್ಟ್ 1988 ರಂದು ಕರ್ನಾಟಕದ ಉಡುಪಿಯಲ್ಲಿ ಜನಿಸಿದರು. ಇವರು ಉಡುಪಿಯ ಕಾಪುವಿನ ದಂಡತೀರ್ಥ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪಡೆದರು. ನಂತರ ಕಾಪುವಿನ ದಂಡತಿರ್ಥ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪದೆಯುತ್ತಾರೆ. ಉಡುಪಿಯ ಪೂರ್ಣ ಪ್ರಜ್ಞ ಕಾಲೇಜಿನಲ್ಲಿ ಬಿಬಿಎಂ ಪದವಿ ಪಡೆದು, ಮಾಸ್ ಕಮ್ಯುನಿಕೇಷನ್ ನಲ್ಲಿ ಪದವಿ ಪಡೆಯಲು ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜು ಸೇರುತ್ತಾರೆ.

ಮಂಗಳೂರಿನಲ್ಲಿ ಆರ್‌ಜೆ ಆಗಿದ್ದ ಪೃಥ್ವಿ ಅಂಬರ್
ಮೊದಲು ಮಂಗಳೂರಿನಲ್ಲಿ ಆರ್.ಜೆ. ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸುತ್ತಾರೆ. ಇವರ ವೃತ್ತಿಜೀವನದ ಆರಂಭಿಕ ಹಂತದಲ್ಲಿ, ಇವರು ಹಲವಾರು ಕಿರುಚಿತ್ರಗಳನ್ನು ನಿರ್ದೇಶಿಸಿ, ನಟಿಸಿದ್ದಾರೆ. ಇವರು ಉಡುಪಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಅತ್ಯಂತ ಜನಪ್ರಿಯ ಆರ್.ಜೆ. ಇವರು ಆರ್.ಜೆ. ನಾಗರಾಜ್ ಎಂದು ಜನಪ್ರಿಯರಾಗಿದ್ದರು.

2014 ರಲ್ಲಿ ಮೊದಲ ಸಿನಿಮಾದಲ್ಲಿ ನಟನೆ
ಪೃಥ್ವಿ ಅಂಬರ್ 2014 ರಲ್ಲಿ 'ಬರ್ಕೆ' ಎಂಬ ತುಳು ಸಿನಿಮಾದ ಮೂಲಕ ದೊಡ್ಡ ಪರದೆಗೆ ಪಾದಾರ್ಪಣೆ ಮಾಡಿದರು. 2016 ರಲ್ಲಿ ಇವರು ಕೆ.ಸೂರಜ್ ಶೆಟ್ಟಿಯವರ ಎರಡನೇ ತುಳು ಚಿತ್ರ 'ಪಿಲಿಬೈಲ್ ಯಮುನಕ್ಕ' ದಲ್ಲಿ ಸೋನಲ್ ಮೊಂಟೆರೊ ಅವರೊಂದಿಗೆ ನಟಿಸುತ್ತಾರೆ. ಈ ಚಿತ್ರವು ಬ್ಲಾಕ್ ಬಸ್ಟರ್ ಹಿಟ್ ಆಗಿದ್ದು, ತುಳು ಚಿತ್ರರಂಗದಲ್ಲಿ ಹಲವಾರು ದಾಖಲೆಗಳನ್ನು ಮುರಿಯಿತು.

ತುಳು ಮತ್ತು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡರು
ನಂತರ ಇವರು ಹಲವಾರು ತುಳು ಮತ್ತು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡರು. ಪೃಥ್ವಿ ಅಂಬರ್ 2019 ರ ನವೆಂಬರ್ 3 ರಂದು ಮಂಗಳೂರಿನಲ್ಲಿ ವಿವಾಹವಾಗುತ್ತಾರೆ. ರಾಧಾ ಕಲ್ಯಾಣ, 2015ರಲ್ಲಿ ಲವ್ ಲವಿಕೆ, 2014 ಸಾಗರ ಸಂಗಮ, 2020 ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸಿದ್ದಾರೆ. ವಿಜಯ್ ಮಿಲ್ಟನ್ ನಿರ್ದೇಶನದ 'ಮಳೈ ಪಿಡಿಕ್ಕಾದ ಮಣಿದನ್' ಚಿತ್ರದ ಮೂಲಕ ಪೃಥ್ವಿ ಅಂಬರ್ ತಮಿಳು ಇಂಡಸ್ಟ್ರಿಗೆ ಕಾಲಿಡುತ್ತಿದ್ದಾರೆ.

ಈಗ ತಮಿಳು ಸಿನಿಮಾದಲ್ಲಿ ನಟಿಸಲಿದ್ದಾರೆ
ಮಳೈ ಪಿಡಿಕ್ಕಾದ ಮಣಿದನ್' ಚಿತ್ರದಲ್ಲಿ ವಿಜಯ್ ನಾಯಕನಾಗಿದ್ದು, ಪೃಥ್ವಿ ಅಂಬರ್ ಹಾಗೂ ಧನಂಜಯ್ ಮುಖ್ಯಭೂಮಿಕೆಯಲ್ಲಿರಲಿದ್ದಾರೆ. 'ದಿಯಾ' ಚಿತ್ರದ ಹಿಂದಿ ರಿಮೇಕ್ ಮೂಲಕ ಬಾಲಿವುಡ್'ಗೆ ಕಾಲಿಟ್ಟಿರೋ ಪೃಥ್ವಿ ಅಂಬರ್ ಕನ್ನಡದ ಹಲವು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.