ಕನ್ನಡದ ಈ ಖ್ಯಾತ ನಟನಿಗೆ AIDS ಇದ್ದಿದ್ದು ನಿಜನಾ? ಈ ಸುದ್ದಿ ಹಬ್ಬಿಸಿದ್ಯಾರು? ಏನಿದು ಘಟನೆ?
ಅದು 70ರ ದಶಕದ ಕೊನೆ.. ಕನ್ನಡ ಚಿತ್ರರಂಗಕ್ಕೆ ಕಮಲ್ ಹಾಸನ್ ತದ್ರೂಪಿ ಎನ್ನುವಂತಹ ಪ್ರತಿಭೆಯೊಂದು ಪರಿಚಯ ಆಗಿತ್ತು. ಅದು.. 1977 ತಮಿಳಿನ ನಿರ್ದೇಶಕ ಬಾಲಿ ಮಹೇಂದರ್ 'ಕೋಕಿಲಾ' ಅನ್ನುವ ಕನ್ನಡ ಸಿನಿಮಾವನ್ನು ನಿರ್ದೇಶಿಸಿದ್ದರು. ಈ ಸಿನಿಮಾದಲ್ಲಿ ಕಮಲ್ ಹಾಸನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅದೇ ಸಿನಿಮಾದಲ್ಲೇ ನಟ ಮೋಹನ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
ಈ ನಟನ ವೃತ್ತಿ ಬದುಕು ಹೆಚ್ಚು ಕಡಿಮೆ ಒಂದೂವರೆ ದಶಕದೊಳಗೆ ಒಂದೇ ಒಂದು ಗಾಳಿ ಸುದ್ದಿಯಿಂದ ಕಮರಿ ಹೋಯ್ತು. ವಿಪರ್ಯಾಸ ಹೇಗಿದೆ ಅಂದರೆ, ಕೋಕಿಲಾ ಮೋಹನ್ ಕನ್ನಡದಲ್ಲಿ 'ಗಾಳಿ ಮಾತು' ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ದೊರೈ-ಭಗವಾನ್ ಈ ಸಿನಿಮಾವನ್ನು ನಿರ್ದೇಶಿಸಿದ್ದರು. ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಂತೆ 'ಕೋಕಿಲಾ' ಮೋಹನ್ ಯಶಸ್ಸು ಹುಡುಕಿಕೊಂಡು ಬಂದಿತ್ತು.

ಕೋಕಿಲಾ ಮೋಹನ್ ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದಂತೆ ಮೈಕ್ ಮೋಹನ್ ಆಗಿ ಜನಪ್ರಿಯರಾಗಿದ್ದರು. ಆದರೆ, ಇಂದಿಗೂ ಕನ್ನಡಿಗರಿಗೆ ಕೋಕಿಲಾ ಮೋಹನ್ ಅಂತಲೇ ಜನಪ್ರಿಯರಾಗಿದ್ದಾರೆ. 80 ದಶಕದಲ್ಲಿ ತಮಿಳು ಚಿತ್ರರಂಗದಲ್ಲಿ ರಜನಿಕಾಂತ್, ಕಮಲ್ ಹಾಸನ್ ಬಿಟ್ಟಿರೆ ಕೇಳಿಬರುತ್ತಿದ್ದ ಮೂರನೇ ಹೆಸರೇ ಮೈಕ್ ಮೋಹನ್. ಇಂತಹ ಯಶಸ್ವಿ ನಟನ ವೃತ್ತಿ ಬದುಕು ದಿಢೀರನೇ ನಾಶವಾಯ್ತು. ಅಂತಹದ್ದೇನಾಯ್ತು? ಸ್ಟಾರ್ ನಟನ ವೃತ್ತಿ ಬದುಕಿಗೆ ಕೊಳ್ಳಿ ಇಡುವಂತಹ ಕೆಲಸ ಏನಾಗಿತ್ತು? ತಿಳಿಯಲು ಮುಂದೆ ಓದಿ..
ಕೋಕಿಲಾ ಮೋಹನ್ ಅದೆಷ್ಟು ಬ್ಯುಸಿಯಾಗಿದ್ದರು ಅಂದ್ರೆ, 1984ರಲ್ಲಿ ಇವರ ಬರೋಬ್ಬರಿ 20 ಸಿನಿಮಾಗಳು ರಿಲೀಸ್ ಆಗಿದ್ದವು. ಅದರಲ್ಲಿ 'ಹೆಣ್ಣಿನ ಸೇಡು' ಅನ್ನೋ ಕನ್ನಡ ಸಿನಿಮಾ ಕೂಡ ಸೇರಿದೆ. ಒಂದೇ ದಿನ ಈ ನಟ ಮೂರು ಸಿನಿಮಾಗಳು ರಿಲೀಸ್ ಆಗಿದ್ದವು. ಆ ಮೂರು ಸಿನಿಮಾಗಳೂ ಕೂಡ ಬ್ಲಾಕ್ ಬಸ್ಲರ್ ಹಿಟ್ ಆಗಿದ್ದವು ಎಂದು ವರದಿಗಳಾಗಿವೆ.
ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ಕೋಕಿಲಾ ಮೋಹನ್ ಬ್ಯುಸಿಯಾಗಿದ್ದರು. 80 ರಿಂದ 90ರ ದಶಕದವರೆಗೂ ಕೋಕಿಲಾ ಮೋಹನ್ ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಲೇ ಮುಂದೆ ಸಾಗಿದ್ದರು. ಆದರೆ, 90ರ ದಶಕದ ಆರಂಭದಲ್ಲಿ ಕೋಕಿಲಾ ಮೋಹನ್ ಬಗ್ಗೆ ಚಿತ್ರರಂಗದಲ್ಲಿ ಗಾಳಿ ಸುದ್ದಿಯೊಂದನ್ನು ಹಬ್ಬಿಸಲಾಗಿತ್ತು. ಆ ಒಂದು ಸುದ್ದಿ ಒಬ್ಬ ಸಕ್ಸಸ್‌ಫುಲ್ ನಟ ವೃತ್ತಿ ಬದುಕನ್ನೇ ಕಿತ್ತುಕೊಂಡಿತ್ತು.
90ರ ದಶಕದ ಆರಂಭದಲ್ಲಿ ಕೋಕಿಲಾ ಮೋಹನ್‌ಗೆ ಏಡ್ಸ್-ಹೆಚ್‌ಐವಿ ಇದೆ ಅಂತ ಹಬ್ಬಿಸಿದ್ದರು. ಅಂದಿನ ಕಾಲಕ್ಕೆ ಏಡ್ಸ್ ಅಂದರೆ, ಜನರು ಭಯ ಬೀಳುತ್ತಿದ್ದ ಕಾಲವದು. ಹತ್ತಿರ ಹೋಗುವುದಕ್ಕೂ ಹಿಂದೇಟು ಹಾಕುತ್ತಿದ್ದರು. ಇಂತಹ ಕಾಲದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿತ್ತು. ಇಲ್ಲಿಂದ ಕೋಕಿಲಾ ಮೋಹನ್‌ಗೆ ಒಂದೇ ಒಂದು ಸಿನಿಮಾದಲ್ಲಿ ನಟಿಸೋ ಅವಕಾಶ ಸಿಗಲಿಲ್ಲ.

ನಿರ್ಮಾಪಕರು, ನಿರ್ದೇಶಕರು ಕೋಕಿಲಾ ಮೋಹನ್ ಜೊತೆ ಸಿನಿಮಾ ಮಾಡುವುದಕ್ಕೆ ಹಿಂದೇಟು ಹಾಕಿದ್ದರು. ಮೋಹನ್ ಸಿನಿಮಾದ ಹೀರೊ ಅಂದರೆ ಸಾಕು, ನಟಿಯರು ಅದರಿಂದ ದೂರ ಓಡಿ ಹೋಗುತ್ತಿದ್ದರು. 1991 ಕೋಕಿಲಾ ಮೋಹನ್ ನಟಿಸಿದ 99ನೇ ಸಿನಿಮಾ 'ಉರುವಂ' ತೆರೆಕಂಡಿತ್ತು. ಅದೇ ಕೊನೆ. ಸುಮಾರು 8 ವರ್ಷಗಳ ಕಾಲ ಅಂದರೆ, 1999ರವರೆಗೂ ಒಂದೇ ಒಂದು ಸಿನಿಮಾದಲ್ಲೂ ನಟಿಸಲಿಲ್ಲ. ಇನ್ನೊಂದು ಸಿನಿಮಾ ನಟಿಸಿದ್ದರೆ, 100 ಸಿನಿಮಾ ಮಾಡುತ್ತಿದ್ದರು.
ಕೊನೆಗೂ ತನಗೆ ಏಡ್ಸ್ ಇಲ್ಲ ಎಂದು ಪ್ರೋವ್ ಮಾಡಿಕೊಂಡು ಮತ್ತೆ ಚಿತ್ರರಂಗಕ್ಕೆ ಬರುವ ಪ್ರಯತ್ನ ಮಾಡಿದ್ದರು. ಅಷ್ಟರೊಳಗೆ ಮೈಕ್ ಮೋಹನ್ ತನ್ನ ಸ್ಟಾರ್‌ಡಮ್ ಅನ್ನು ಕಳೆದುಕೊಂಡಿದ್ದರು. ಹೀಗಾಗಿ 1999ರಲ್ಲಿ ತನ್ನ 100ನೇ ಸಿನಿಮಾ ತಾನೇ ನಿರ್ದೇಶನ ಮಾಡುವುದಕ್ಕೆ ಮುಂದಾದರು. 'ಅನ್ಬುಲ್ಲ ಕಾದಲಕ್ಕು' ಅನ್ನೋ ಸಿನಿಮಾ 99ರಲ್ಲಿ ರಿಲೀಸ್ ಆಗಿತ್ತು. ಆದರೆ, ಬಾಕ್ಸಾಫೀಸ್‌ನಲ್ಲಿ ಗೆಲ್ಲಿಲ್ಲ. ಇಲ್ಲಿಂದ ಪೋಷಕ ಪಾತ್ರದಲ್ಲಿ ನಟಿಸಲು ಅವಕಾಶ ಬಂದರೂ ನಟಿಸಲಿಲ್ಲ.
ಇಷ್ಟೆಕ್ಕೆಲ್ಲ ಕಾರಣ ಯಾರು? ಅನ್ನೋದು ಅಂದು ಚರ್ಚೆಯಾಗುತ್ತಿ. ಕೋಕಿಲಾ ಮೋಹನ್ ಸಕ್ಸಸ್ ನಟನಾಗಿದ್ದರಿಂದ ತಮಿಳಿನ ನಟಿಯೊಬ್ಬರು ತನ್ನನ್ನು ಮದುವೆ ಆಗುವಂತೆ ಮೋಹನ್ ಗಂಟು ಬಿದ್ದಿದ್ದರು. ಆದರೆ, ಮೋಹನ್ ಆ ನಟಿಯನ್ನು ಮದುವೆ ಆಗಲು ಒಪ್ಪಿರಲಿಲ್ಲ. ಹೀಗಾಗಿ ಆಕೆಯೇ ಚಿತ್ರರಂಗದಲ್ಲಿ ಗಾಳಿ ಸುದ್ದಿ ಹಬ್ಬಿಸಿದ್ದರು ಎಂದು ಸುದ್ದಿಯಾಗಿತ್ತು.
ನಟಿ ಹರಡಿದ ಚಿಕ್ಕದೊಂದು ಗಾಳಿ ಸುದ್ದಿ ರಜನಿಕಾಂತ್ ಅಂತಯೇ ಸೂಪರ್‌ಸ್ಟಾರ್ ಆಗಬೇಕಿದ್ದ ನಟನ ವೃತ್ತಿ ಬದುಕಿಗೆ ಕೊಳ್ಳಿ ಇಟ್ಟಿತ್ತು. ಕೋಕಿಲಾ ಮೋಹನ್ ಈಗ ಮತ್ತೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ದಳಪತಿ ವಿಜಯ್ ನಟನೆಯ 68ನೇ ಸಿನಿಮಾದಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











