ರಜನಿಕಾಂತ್ ಆ ಖ್ಯಾತ ನಟಿಯ ಪ್ರೀತಿಲಿ ಬಿದ್ದಿದ್ರಾ? ಯಾಕೆ ಪ್ರಪೋಸ್ ಮಾಡ್ಲಿಲ್ಲ?

ತಮಿಳು ನಟ ರಜನಿಕಾಂತ್ ಜೀವನ ತೆರೆದ ಪುಸ್ತಕದಂತೆ. ತಮ್ಮ ಜೀವನದ ಸಾಕಷ್ಟು ಸಂಗತಿಗಳನ್ನು ಸ್ವತಃ ತಲೈವಾ ಹೇಳಿಕೊಂಡಿದ್ದಾರೆ. ತಾವು ಅನುಭವಿಸಿದ ನೋವು, ಯಶಸ್ಸು, ವೈಯಕ್ತಿಕ ಜೀವನ ಹೀಗೆ ಎಲ್ಲದರ ಬಗ್ಗೆಯೂ ಸೂಪರ್ ಸ್ಟಾರ್ ಮಾತನಾಡಿದ್ದಾರೆ. ತಮ್ಮ ಲವ್ ಸ್ಟೋರಿ ಬಗ್ಗೆಯೂ ಅವರು ಮಾತನಾಡಿದ್ದಾರೆ.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಶಿವಾಜಿರಾವ್ ಗಾಯಕ್‌ವಾಡ್ ಬಿಟಿಎಸ್ ಬಸ್ ಕಂಡೆಕ್ಟರ್ ಆಗಿದ್ದರು. ಆ ದಿನಗಳಲ್ಲೇ ನಾಟಕಗಳಲ್ಲಿ ನಟಿಸೋಕೆ ಆರಂಭಿಸಿದರು. ಸ್ನೇಹಿತ ರಾಜ್ ಬಹದ್ದೂರ್ ಸಲಹೆಯಂತೆ ಚೆನ್ನೈ ಫಿಲ್ಮ್ ಇನ್ಸಿಟ್ಯೂಟ್‌ನಲ್ಲಿ ಸೇರಿ ತಮ್ಮ ನಟನೆಯನ್ನು ಮತ್ತಷ್ಟು ಪಕ್ವವಾಗಿಸಿಕೊಂಡು ಚಿತ್ರರಂಗಕ್ಕೆ ಬಂದರು.

Did Rajinikanth fall madly in love with this famous actress Why didn t he propose to her

ಬಸ್ ಕಂಡಕ್ಟರ್ ಕೆಲಸ ಬಿಟ್ಟು ಬಣ್ಣದ ಲೋಕದಲ್ಲಿ ಅವಕಾಶಗಳನ್ನು ಅರಸುತ್ತಾ ಹೋದರು. ಕನ್ನಡದಲ್ಲಿ ಅವಕಾಶಗಳು ಅಷ್ಟಾಗಿ ಸಿಗದೇ ಇದ್ದಾಗ ತಮಿಳು ಚಿತ್ರರಂಗದಲ್ಲಿ ಗುರ್ತಿಸಿಕೊಂಡರು. ಸಣ್ಣ ಪುಟ್ಟ ಪಾತ್ರಗಳಿಂದ ಆರಂಭಿಸಿ ಬಳಿಕ ಖಳನಟ ಆ ನಂತರ ಹೀರೊ ಆಗಿ ಗೆದ್ದರು. ಅವಮಾನಿಸಿದವರ ಮುಂದೆ ಆಲದ ಮರದಂತೆ ಬೆಳೆದು ನಿಂತರು. ಸೂಪರ್ ಸ್ಟಾರ್ ಪಟ್ಟ ಅಲಂಕರಿಸಿದ್ದರು.

ತಮ್ಮ ಕಾಲೇಜು ಮ್ಯಾಗಜೀನ್‌ಗಾಗಿ ರಜನಿಕಾಂತ್ ಅವರನ್ನು ಸಂದರ್ಶನ ಮಾಡಲು ಲತಾ ರಂಗಚಾರಿ ಹೋಗಿದ್ದರು. ಮೊದಲ ನೋಟದಲ್ಲೇ ಲತಾ ಅವರನ್ನು ನೋಡಿ ರಜನಿಕಾಂತ್ ಪ್ರೀತಿಲಿ ಬಿದ್ದಿದ್ದರು. ಆ ಸಂದರ್ಶನ ಮುಗಿಸಿ ಹೊರಡುವ ವೇಳೆಗೆ ತಮ್ಮ ಮನಸ್ಸಿನಲ್ಲಿದ್ದ ಆಸೆಯನ್ನು ಹೇಳಿದ್ದರು. ಬಳಿಕ ಲತಾ ಅವರು ಕೂಡ ಒಪ್ಪಿದರು. ಪೋಷಕರ ಒಪ್ಪಿಗೆ ಪಡೆದು ಫೆಬ್ರವರಿ 26, 1981ರಲ್ಲಿ ಹಸೆಮಣೆ ಏರಿದ್ದರು.

ರಜನಿಕಾಂತ್ ಹಾಗೂ ಲತಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರು ಕೂಡ ತಂದೆ ಹಾದಿಯಲ್ಲಿ ಚಿತ್ರರಂಗಕ್ಕೆ ಬಂದರು. ನಿರ್ದೇಶಕಿಯರಾಗಿ ಗುರ್ತಿಸಿಕೊಂಡಿದ್ದಾರೆ. ಇದು ರಜನಿಕಾಂತ್ ಅವರ ಸಕ್ಸಸ್‌ಫುಲ್ ಲವ್‌ ಸ್ಟೋರಿ ಕಥೆಯಾಯಿತು. ಆದರೆ ತಲೈವಾನನ್ನು ಆ ನಟಿ ಬಹಳ ಇಷ್ಟಪಟ್ಟಿದ್ದರು. ತಲೈವಾಗೂ ಆಕೆ ಅಂದರೆ ಇಷ್ಟ ಇತ್ತು. ಆದರೆ ಇದನ್ನು ಕೇಳಿಕೊಳ್ಳು ಆಗಿರಲಿಲ್ಲವಂತೆ. ಅಷ್ಟರಲ್ಲೇ ಆಗಿ ಬಾಲಿವುಡ್ ಪ್ರವೇಶಿಸಿ ಸಕ್ಸಸ್ ಕಂಡರು. ಇತ್ತ ಲತಾ ಅವರೊಟ್ಟಿಗೆ ರಜನಿಕಾಂತ್ ಮದುವೆ ನಡೆಯಿತು.

ಬಾಲಿವುಡ್‌ ಅಂಗಳ ಪ್ರವೇಶಿಸಿದ ಆ ನಟಿ ಬಳಿಕ ದಕ್ಷಿಣದ ಸಿನಿಮಾಗಳಲ್ಲಿ ಅಷ್ಟಾಗಿ ನಟಿಸಲಿಲ್ಲ. ಖ್ಯಾತ ಬಾಲಿವುಡ್ ನಿರ್ಮಾಪಕನನ್ನು ಮದುವೆ ಆಗಿ ಅಲ್ಲೇ ಸೆಟ್ಲ್ ಆಗಿಬಿಟ್ಟರು. ಅಂದಹಾಗೆ ಆ ನಟಿ ಮತ್ಯಾರು ಅಲ್ಲ, ಶ್ರೀದೇವಿ. ದಶಕಗಳ ಹಿಂದೆ ರಜನಿಕಾಂತ್ ಹಾಗೂ ಶ್ರೀದೇವಿ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎಂದು ಚಿತ್ರರಂಗದಲ್ಲಿ ಗುಲ್ಲಾಗಿತ್ತು. ಆದರೆ ಈ ಬಗ್ಗೆ ಇಬ್ಬರೂ ಎಂದಿಗೂ ಮಾತನಾಡಲಿಲ್ಲ.

Did Rajinikanth fall madly in love with this famous actress Why didn t he propose to her

ರಜನಿಕಾಂತ್ ಅವರಿಗೆ ಶ್ರೀದೇವಿ ಅಂದರೆ ಬಹಳ ಇಷ್ಟ ಇತ್ತಂತೆ. ಆಕೆಗೆ ಪ್ರಪೋಸ್ ಮಾಡಬೇಕು ಎಂದುಕೊಂಡಿದ್ದರಂತೆ. ವಯಸ್ಸಿನಲ್ಲಿ ತನಗಿಂತ 13 ವರ್ಷ ಚಿಕ್ಕವರಾದ ಶ್ರೀದೇವಿಯನ್ನು ಮದುವೆ ಮಾಡಿಕೊಳ್ಳಲು ಮನಸ್ಸು ಮಾಡಿದ್ದರಂತೆ. ಶ್ರೀದೇವಿ ಅವರ ತಾಯಿ ಜೊತೆಗೂ ಉತ್ತಮ ಒಡನಾಡ ಬೆಳೆಸಿಕೊಂಡಿದ್ದರು. ಒಮ್ಮೆ ಶ್ರೀದೇವಿ ಮನೆ ಗೃಹಪ್ರವೇಶದ ಸಮಯದಲ್ಲಿ ಪ್ರಪೋಸ್ ಮಾಡಬೇಕು ಎಂದುಕೊಂಡಂತೆ, ಅದೇ ಸಮಯದಲ್ಲಿ ಪವರ್ ಕಟ್ ಆಗಿ ಕತ್ತಲಾಗಿಬಿಟ್ಟಿತ್ತಂತೆ. ಆಧ್ಯಾತ್ಮದಲ್ಲಿ ಬಹಳ ನಂಬಿಕೆ ಉಳ್ಳವರಾದ ತಲೈವಾ ಅದನ್ನು ಅಪಶಕುನ ಎಂದು ಅಂದುಕೊಂಡು ಪ್ರಪೋಸ್ ಮಾಡಲಿಲ್ಲ ಎಂದು ಗುಲ್ಲಾಗಿತ್ತು.

ಕನ್ನಡದ 'ಪ್ರಿಯಾ', ತಮಿಳಿನ 'ಮೂಂಡ್ರು ಮುಡಿಚು' ಹಾಗೂ 'ನಾನ್ ಅಡಿಮೈ ಇಲ್ಲೈ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ರಜನಿಕಾಂತ್ ಹಾಗೂ ನಟಿ ಶ್ರೀದೇವಿ ಒಟ್ಟಿಗೆ ನಟಿಸಿದ್ದರು. ಮೋನಾ ಶೌರಿ ಕಪೂರ್ ಎಂಬುವವರನ್ನು ಬೋನಿ ಕಪೂರ್ ಮದುವೆ ಆಗಿ ವಿಚ್ಚೇದನ ಪಡೆದಿದ್ದರು. ಆ ಬಳಿಕ ಶ್ರೀದೇವಿ ಅವರನ್ನು 2ನೇ ಮದುವೆ ಆಗಿದ್ದರು. ಮದುವೆಗೂ ಮುನ್ನ ಆಕೆ ಗರ್ಭಿಣಿ ಆಗಿದ್ದರು ಎನ್ನುವ ಮಾತುಗಳು ಆಗ ಕೇಳಿಬಂದಿತ್ತು. ಕೆಲ ದಿನಗಳ ಹಿಂದೆ ಇದನ್ನು ನಿರ್ಮಾಪಕ ಬೋನಿ ಕಪೂರ್ ಅಲ್ಲಗಳೆದಿದ್ದರು.

FAQs
ರಜನಿಕಾಂತ್ ಫಸ್ಟ್‌ ಲವ್, ಬೆಂಗಳೂರಿಗೆ ಬಂದರೆ ಈಗಲೂ ಆಕೆಯನ್ನು ಹುಡುಕುತ್ತಾರಂತೆ

ನಟ ರಜನಿಕಾಂತ್ ತಮ್ಮ ಫಸ್ಟ್ ಲವ್ ಬಗ್ಗೆ ಒಮ್ಮೆ ಹೇಳಿಕೊಂಡಿದ್ದರು. ಆಕೆಯ ಹೆಸರು ನಿರ್ಮಲಾ. ಬೆಂಗಳೂರಿನಲ್ಲಿ ಬಸ್ ಕಂಡೆಕ್ಟರ್ ಆಗಿದ್ದ ದಿನಗಳಲ್ಲಿ ಒಬ್ಬ ಎಂಬಿಬಿಎಸ್ ಸ್ಟೂಡೆಂಟ್ ಅನ್ನು ಅವರನ್ನು ಇಷ್ಟಪಟ್ಟಿದ್ದರಂತೆ. ಅದು ಪ್ರೀತಿ ಎನ್ನುವುದು ಆಗ ಗೊತ್ತಾಗಿರಲಿಲ್ಲವಂತೆ. ರಜನಿಕಾಂತ್ ಚೆನ್ನೈ ಫಿಲ್ಮ್ ಇನ್ಸಿಟ್ಯೂಟ್ ಗೆ ಸೇರಲು ಆಕೆಯೇ ಸಲಹೆ ನೀಡಿದ್ದರಂತೆ. ಬಳಿಕ ಸಂಪರ್ಕ ತಪ್ಪಿ ಹೋಗಿತ್ತು. ಈಗಲೂ ಬೆಂಗಳೂರಿಗೆ ಬಂದಾಗಲೆಲ್ಲಾ ಆಕೆಗಾಗಿ ತಲೈವಾ ಕಣ್ಣು ಹುಡುಕುತ್ತದೆ ಅಂತೆ.

Filmibeat Entertainment

More from Filmibeat

Read more about: rajinikanth sridevi kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X