Sridevi: ಪವಿತ್ರ ರಕ್ಷಾಬಂಧ ಮುರಿದಿದ್ರಾ ಶ್ರೀದೇವಿ? ರಾಖಿ ಕಟ್ಟಿ ಕೊನೆಗೆ ಬೋನಿ ಕಪೂರ್ ಜೊತೆನೇ ಮದ್ವೆ ಆಗಿದ್ದೇಕೆ?

ಸಹೋದರ ಸಹೋದರಿಯರ ನಡುವಿನ ಸುಂದರವಾದ ಬಾಂಧವ್ಯವನ್ನು ಸಂಭ್ರಮಿಸುವ ಹಬ್ಬ ರಕ್ಷಾ ಬಂಧನ. ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಈ ಹಬ್ಬವನ್ನು ದೇಶದೆಲ್ಲೆಡೆ ಆಚರಿಸಲಾಗುತ್ತದೆ. ಸಹೋದರ- ಸಹೋದರಿಯರ ನಡುವಿನ ಬಾಂಧ್ಯವವನ್ನು ಗಟ್ಟಿಗೊಳಿಸುವ ಈ ರಾಖಿ ಹಬ್ಬಕ್ಕೆ ಪವಿತ್ರ ಸ್ಥಾನವಿದೆ. ಕೆಲವೊಮ್ಮೆ ಪ್ರೀತಿಸುವಂತೆ ಕಾಡುವ ಹುಡುಗರಿಗೆ ಹುಡುಗಿಯರು ರಾಖಿ ಕಟ್ಟಿ ಅಣ್ಣ ಎಂದುಬಿಡುತ್ತಾರೆ.

ಬಹಳ ಆಪ್ತರಾಗಿರುವ ಹುಡುಗ- ಹುಡುಗಿಯನ್ನು ನೋಡಿ ಅನುಮಾನ ಪಟ್ಟಾಗ ರಾಖಿ ಕಟ್ಟಿ ನಾವಿಬ್ಬರು ಸೋದರ- ಸೋದರಿ ಎಂದು ಸಾಬೀತು ಮಾಡುವ ಉದಾಹರಣೆಗಳು ಸಿಗುತ್ತವೆ. ಬಾಲಿವುಡ್ ನಟಿ ಶ್ರೀದೇವಿ ಕೂಡ ಇದೇ ಕಾರಣಕ್ಕೆ ಬೋನಿ ಕಪೂರ್ ಕೈಗೆ ರಾಖಿ ಕಟ್ಟಿದ್ದರು ಎಂದು ದಶಕಗಳ ಹಿಂದೆ ಗುಲ್ಲಾಗಿತ್ತು. ವಿಪರ್ಯಾಸ ಅಂದರೆ ರಾಖಿ ಕಟ್ಟಿಸಿಕೊಂಡಿದ್ದ ಅದೇ ಕೈಯಲ್ಲಿ ಶ್ರೀದೇವಿ ಕೊರಳಿಗೆ ಬೋನಿ ಕಪೂರ್ ತಾಳಿ ಕಟ್ಟಿದ್ದರು ಎಂದು ಕೆಲವರು ಮಾತನಾಡಿಕೊಂಡಿದ್ದರು. ಅತಿಲೋಕ ಸುಂದರಿ ಶ್ರೀದೇವಿ ತಮ್ಮ ಸೌಂದರ್ಯ ಹಾಗೂ ಅಭಿನಯದಿಂದ ಮಾತ್ರವಲ್ಲ ವಿವಾದಗಳಿಂದ ಸಾಕಷ್ಟು ಸುದ್ದಿಯಾಗಿದ್ದರು.

Did Sridevi tied Boney Kapoor a rakhi to slove Mithun Chakrabortys doubts?

ಶ್ರೀದೇವಿ ಜೀವನದಲ್ಲಿ ಭಾರೀ ಸುದ್ದಿಯಾಗಿದ್ದು ಬೋನಿ ಕಪೂರ್ ಜೊತೆಗಿನ ವಿವಾಹ. ಇವರಿಬ್ಬರು ಮದುವೆ ಆಗಿದ್ದು ಆಗ ಬಾಲಿವುಡ್‌ನಲ್ಲಿ ಭಾರೀ ಸುದ್ದಿ ಆಗಿತ್ತು. ಇವರಿಬ್ಬರ ಮದುವೆ ಬಳಿಕ ಬೋನಿ ಕಪೂರ್ ಮೊದಲ ಪತ್ನಿ ಮೋನಾ ಕಪೂರ್ ಕೆಂಡಾಮಂಡಲವಾಗಿದ್ದರು. ಮಿಥುನ್ ಚಕ್ರವರ್ತಿ ಒಂದ್ಕಾಲದಲ್ಲಿ ಬಾಲಿವುಡ್‌ ಸ್ಟಾರ್‌ ಆಗಿ ಮೆರೆದರು. ಮಿಥುನ್ ಜೊತೆ ಶ್ರೀದೇವಿ ನಟಿಸುವ ವೇಳೆ ಇಬ್ಬರ ನಡುವಿನ ಪರಿಚಯ, ಪ್ರೀತಿಗೆ ತಿರುಗಿತ್ತು. 1985ರಲ್ಲಿ ಇಬ್ಬರು ಮದುವೆ ಆಗಿದ್ದಾಗಿಯೂ ಸುದ್ದಿಯಾಗಿತ್ತು. 3 ವರ್ಷಗಳ ಬಳಿಕ ಇಬ್ಬರೂ ದೂರಾದರೂ ಎನ್ನಲಾಗಿತ್ತು.

ಶ್ರೀದೇವಿಯ ನಡೆ ಮಿಥುನ್ ಚಕ್ರವರ್ತಿ ಹಾಗೂ ಬೋನಿ ಕಪೂರ್ ನಡುವೆ ಕಿಚ್ಚ ಹಚ್ಚಿತ್ತಂತೆ. ಶ್ರೀದೇವಿ ಜೊತೆ ನಿರ್ಮಾಪಕ ಬೋನಿ ಕಪೂರ್ ಕ್ಲೋಸ್ ಆಗಿ ಮೂವ್ ಆಗುವುದನ್ನು ಮಿಥುನ್ ಸಹಿಸಲಿಲ್ಲವಂತೆ. ಆಗ ಮಿಥುನ್‌ನ ನಂಬಿಸಲು ಬೋನಿ ಕಪೂರ್‌ ಕೈಗೆ ಶ್ರೀದೇವಿ ರಾಖಿ ಕಟ್ಟಿ ನಾವಿಬ್ಬರು ಅಣ್ಣ- ತಂಗಿ ಎಂದು ಹೇಳಿದ್ದರಂತೆ. ಆದರೆ ಬೋನಿಗೆ ಶ್ರೀದೇವಿ ಹತ್ತಿರವಾದ ಕಾರಣಕ್ಕೆ ಮಿಥುನ್ ದೂರಾದರು ಎನ್ನಲಾಗುತ್ತದೆ. ಅಂದಹಾಗೆ ಇದಕ್ಕೂ ಮುನ್ನ ಹೆಲೆನಾ ಲುಕೆ ಹಾಗೂ ಯೋಗೀತಾ ಬಾಲಿ ಜೊತೆ ಮಿಥುನ್ ಮದುವೆ ಆಗಿತ್ತು.

Did Sridevi tied Boney Kapoor a rakhi to slove Mithun Chakrabortys doubts?

ಮಿಥುನ್- ಶ್ರೀದೇವಿ ಮದುವೆ ಆಗಿದ್ದಾರೆ ಎನ್ನುವ ಸುದ್ದಿ ಕೇಳುತ್ತಿದ್ದಂತೆ ಯೋಗೀತಾ ಬಾಲಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನುವ ಗುಸು ಗುಸು ಕೇಳಿಬಂದಿತ್ತು. "ಶ್ರೀದೇವಿಯನ್ನು ಮಿಥುನ್ ಮದುವೆಯಾಗಲು ನನ್ನ ಅಭ್ಯಂತರವಿಲ್ಲ. ಆದರೆ ಶ್ರೀದೇವಿ ಮಿಥುನ್‌ಗೆ ಎರಡನೇ ಪತ್ನಿಯಾಗಿರುತ್ತಾಳೆ ಎನ್ನುವ ಷರತ್ತಿನ ಮೇಲೆ ಒಪ್ಪಿಕೊಳ್ಳುತ್ತೇನೆ" ಎಂದು ಯೋಗಿತಾ ಹೇಳಿದ್ದರಂತೆ. ಆದರೆ ಯೋಗಿತಾಗೆ ಮಿಥುನ್ ಡಿವೋರ್ಸ್ ಕೊಡಲಿಲ್ಲ ಎನ್ನುವ ಕಾರಣಕ್ಕೆ ಶ್ರೀದೇವಿ ದೂರಾಗಿದ್ದರಂತೆ. ಅಲ್ಲಿಗೆ ಅವರಿಬ್ಬರ ರಿಲೇಷನ್‌ಶಿಪ್‌ಗೆ ಫುಲ್‌ಸ್ಟಾಪ್ ಬಿದ್ದಿತ್ತು.

ಇನ್ನು ಶ್ರೀದೇವಿ ವಿರುದ್ಧ ಬೋನಿ ಕಪೂರ್ ಮೊದಲ ಪತ್ನಿ ಮೋನಾ ಕಪೂರ್ ಕೂಡ ಕಿಡಿಕಾರಿದ್ದರು. ಮಿಥುನ್‌ನನ್ನು ತುಂಬಾ ಪ್ರೀತಸುತ್ತಿದ್ದೇನೆ ಎಂದು ಸಾಬೀತುಪಡಿಸಲು ಬೋನಿ ಕಪೂರ್ ಕೈಗೆ ಶ್ರೀದೇವಿ ರಾಖಿ ಕಟ್ಟಿದ್ದಳು. ಬೋನಿ ಕಪೂರ್ ಜೊತೆ ತನಗೆ ಬೇರೆ ಯಾವುದೇ ಸಂಬಂಧ ಎಂದು ಆಕೆ ಹೇಳಿದ್ದಾಗಿ ಮೋನಾ ಕಪೂರ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಇನ್ನು ಬೋನಿ ಕಪೂರ್- ಶ್ರೀದೇವಿ ಮದುವೆ ಬಳಿಕ ಮನೆಯಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದವು.

ಬೋನಿ ಕಪೂರ್ ಮೊದಲ ಪತ್ನಿ ಮಗ, ನಟ ಅರ್ಜುನ್ ಕಪೂರ್ ಸಂದರ್ಶನವೊಂದರಲ್ಲಿ ಶ್ರೀದೇವಿ ನನಗೆ ಎಂದೂ ತಾಯಿಯಾಗಲೂ ಸಾಧ್ಯವಿಲ್ಲ ಎಂದಿದ್ದರು. ಶ್ರೀದೇವಿ ಮದುವೆಗೂ ಮೊದ್ಲೆ ಗರ್ಭಿಣಿ ಆಗಿದ್ದರು. ಈ ವಿಚಾರವನ್ನು ಘೋಷಿಸಿದ್ದರು. ಆ ಬಳಿಕ ಇಬ್ಬರು ಮದುವೆ ಆಗಿದ್ದರು.

More from Filmibeat

English summary
Mithun Chakraborty Reason behind Sridevi tied Boney Kapoor a rakhi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X