ಎಂ.ಎಸ್.ಧೋನಿ ಜೊತೆಗಿನ ನನ್ನ ಸಂಬಂಧ, ನನ್ನ ಬದುಕಿನ ಬಹುದೊಡ್ಡ ಕಪ್ಪುಚುಕ್ಕೆ - ಲಕ್ಷ್ಮಿ ರೈ..!
ಪ್ರೀತಿ ಎಂಬ ಪದ ಸುಂದರ ಇರಬಹುದು. ಆದರೆ, ಪ್ರೀತಿಯ ಕೆಲವೊಮ್ಮೆ ಕಾಡುತ್ತೆ. ಪ್ರೀತಿಯಲ್ಲಿ ನೋವು ಸಹಜವಾದರೂ ಅದನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಅದರಿಂದಾಗುವ ನೋವು ಶಾಶ್ವತವಾಗಿಲ್ಲದಿದ್ದರೂ ಆ ಕ್ಷಣಕ್ಕೆ ಮಾತ್ರ ಅದು ನುಂಗಲಾರದ ತುತ್ತು. ಎಲ್ಲಾ ಉತ್ಸಾಹ, ಆಸಕ್ತಿ, ಖುಷಿಯ ಕ್ಷಣಗಳನ್ನು ಕಸಿದುಕೊಳ್ಳೋ ಆ ಬ್ರೇಕ್ ಅಪ್‌ನ ನೋವು ಸಹಿಸಿಕೊಳ್ಳೋದಕ್ಕೆ ಸಾಧ್ಯ ಆಗದೇ ಇರುವುದಕ್ಕೆ ಕಾರಣಗಳೇನು ಎಂಬುದು ಹೃದಯವಂತರ ಪ್ರಶ್ನೆ.
ಇದಕ್ಕೆ ಉತ್ತರ ಹುಡುಕುವುದು ಕಷ್ಟವಾದರು ಅನೇಕರು ತಮ್ಮ ಮನದ ನೋವನ್ನು ಆಗಾಗ ಹಂಚಿಕೊಳ್ಳುತ್ತಾರೆ. ತಮ್ಮ ಪ್ರೇಮವೈಫಲ್ಯದ ಕುರಿತು ಮಾತನಾಡುತ್ತಾರೆ. ಉದಾಹರಣೆಗೆ ರಾಯ್ ಲಕ್ಷ್ಮಿ ಅಲಿಯಾಸ್ ಲಕ್ಷ್ಮಿ ರೈ .

ಹೌದು. ಲಕ್ಷ್ಮೀ ರೈ.. ಬೆಳಗಾವಿಯ ಬಾಲೆ. ಕನ್ನಡವೂ ಸೇರಿ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿಯೂ ಅಭಿನಯಿಸಿರುವ ಈ ಚೆಲುವೆಯ ಹೆಸರು ಹಿಂದೊಮ್ಮೆ ಭಾರತ ಕ್ರಿಕೆಟ್ ತಂಡದ ದಂತ ಕಥೆ ಎಂ.ಎಸ್.ಧೋನಿ ಜೊತೆ ತಳುಕು ಹಾಕಿಕೊಂಡಿತ್ತು.
2008ರಲ್ಲಿ ಇನ್ನೇನು ಐಪಿಎಲ್ ಶುರುವಾಗಬೇಕು. ಆ ಸಮಯದಲ್ಲಿ ಲಕ್ಷ್ಮಿ ರಾಯ್ ಮತ್ತು ಧೋನಿ ಹಲವಡೆ ಜೊತೆಯಲ್ಲಿ ಕಾಣಿಸಿಕೊಂಡರು. ಲಕ್ಷ್ಮಿಯ ಬರ್ತ್‌ಡೇ ಪಾರ್ಟಿಯಲ್ಲಿ ಕೂಡ ಧೋನಿ ಭಾಗವಹಿಸಿದ್ದರು.
ಆದರೆ ಆ ನಂತರ ಅದೇನಾಯ್ತೋ.? ರಾಯ್ ಲಕ್ಷ್ಮಿ ಮತ್ತು ಧೋನಿ ಸಂಬಂಧ ಮುರಿದು ಬಿತ್ತು. ಆ ನಂತರ 2010ರಲ್ಲಿ ಸಾಕ್ಷಿ ಸಿಂಗ್ ಜೊತೆ ಧೋನಿಯ ಹೊಸ ಬದುಕು ಶುರುವಾಯ್ತು. ಹೀಗೆ ಧೋನಿಯಿಂದ ಶಾಶ್ವತವಾಗಿ ಆ ನಂತರ ದೂರವಾದ ರಾಯ್ ಲಕ್ಷ್ಮಿ 2014ರಲ್ಲಿ ತಮ್ಮ ಸಂಬಂಧದ ಕುರಿತು ಮಾತನಾಡಿದ್ದರು. ಕಪ್ಪು ಚುಕ್ಕೆ ಎಂದು ಹೇಳಿದ್ದರು.
ಈ ಕುರಿತು 2014ರಲ್ಲಿ ಜೀ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ರಾಯ್ ಲಕ್ಷ್ಮಿ, ಧೋನಿ ಜೊತೆ ನನ್ನ ಸಂಬಂಧ ನನ್ನ ಬದುಕಿನ ಬಹು ದೊಡ್ಡ ಕಪ್ಪು ಚುಕ್ಕೆ, ಬಹುದೊಡ್ಡ ಗಾಯ ಎಷ್ಟೇ ವರ್ಷವಾದರೂ ಕೂಡ ಅದು ಮಾಯವಾಗುವುದಿಲ್ಲ, ವಾಸಿಯಾಗುವುದಿಲ್ಲ ಎಂದು ಹೇಳಿದ್ದರು.
ಇಷ್ಟೊಂದು ವರ್ಷ ಆದರೂ ಕೂಡ, ಅವರಿಗೆ ಮದುವೆಯಾಗಿದ್ದರೂ ಕೂಡ, ಈಗಲೂ ಜನ ನಮ್ಮ ಸಂಬಂಧದ ಕುರಿತು ಮಾತನಾಡುವುದನ್ನು ನೋಡಿದಾಗ ನನಗೆ ಆಶ್ಚರ್ಯವಾಗುತ್ತೆ ಎಂದಿದ್ದ ರಾಯ್ ಲಕ್ಷ್ಮಿ, ಪ್ರತಿ ಬಾರಿ ಧೋನಿಯ ಕುರಿತು ವಿಚಾರಗಳನ್ನು ಹೇಳುವಾಗ ನಮ್ಮ ಸಂಬಂಧವನ್ನು ಮಾಧ್ಯಮದವರು ಪ್ರಸ್ತಾಪ ಮಾಡುತ್ತಾರೆ ಎಂದು ತಮ್ಮ ಬೇಸರ ಹೊರ ಹಾಕಿದ್ದರು.
ಇದೆಲ್ಲದರಿಂದ ಮುಂದೊಂದು ದಿನ ನಾನು ಮದ್ವೆಯಾದ ನಂತರ ನನ್ನ ಮಕ್ಕಳು ಟಿವಿಯಲ್ಲಿ ಇದೆಲ್ಲವನ್ನು ನೋಡಿ ಕೇಳಿ ನನ್ನ ಮತ್ತು ಧೋನಿಯ ಸಂಬಂಧ ಕುರಿತು ಎಲ್ಲಿ ಪ್ರಶ್ನೆಯನ್ನು ಕೇಳಿ ಬಿಡುತ್ತಾರೆ ಎಂಬ ಭಯ ನನಗೆ ಈಗಲೇ ಶುರುವಾಗಿದೆ ಎಂದು ಕೂಡ ಲಕ್ಷ್ಮಿ ರೈ ಹೇಳಿದ್ದರು.
ನಾವು ಇಬ್ಬರು ಸ್ನೇಹಪೂರ್ವಕವಾಗಿ ಮತ್ತು ಗೌರವದಿಂದ ದೂರವಾಗಿದ್ದೇವು ಎಂದು ಹೇಳಿದ್ದ ರಾಯ್ ಲಕ್ಷ್ಮಿ, ನಮ್ಮದು ಪ್ರೇಮ ಸಂಬಂಧವಾಗಿತ್ತಾ ಎಂದು ಕೇಳಿದರೆ ನನಗೆ ಉತ್ತರ ಗೊತ್ತಿಲ್ಲ ಯಾಕೆಂದರೆ ನಮ್ಮ ನಡುವೆ ಪ್ರೀತಿ ಯಾವತ್ತುಮೊಳೆತು ಹೆಮ್ಮರವಾಗಲಿಲ್ಲ ಎಂದು ಹೇಳಿದ್ದರು.
ಮುಂದುವರೆದು ಇವತ್ತು ಕೂಡ ನನಗೆ ಎಂ.ಎಸ್.ಧೋನಿ ಅವರ ಮೇಲೆ ಗೌರವ ಇದೆ, ಅವರಿಗೆ ನನ್ನ ಮೇಲಿದೆ, ಅವರಿಗೆ ಮದುವೆಯಾಗಿದೆ ಈಗ ಅದು ಮುಗಿದ ಕಥೆ ಎಂದು ಕೂಡ ಲಕ್ಷ್ಮಿ ರೈ ಈ ಸಂದರ್ಶನದಲ್ಲಿ ಹೇಳಿದ್ದರು. 2014ರಲ್ಲಿ ಲಕ್ಷ್ಮಿ ರೈ ನೀಡಿದ್ದ ಈ ಸಂದರ್ಶನದ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಮತ್ತೊಮ್ಮೆ ವೈರಲ್ ಆಗುತ್ತಿವೆ.


Click it and Unblock the Notifications











