For Quick Alerts
  ALLOW NOTIFICATIONS  
  For Daily Alerts

  ಕನಸುಗಳ ಬಗ್ಗೆ ಕುತೂಹಲ ಹುಟ್ಟಿಸುವ 'ಕನಸಿನ ಸಿನಿಮಾ'

  |

  (ವಾರಕ್ಕೊಂದು, ಭಿನ್ನ ಕತೆ, ನಿರೂಪಣೆ ಹೊಂದಿರುವ ವಿವಿಧ ಭಾಷೆಗಳ ಸಿನಿಮಾದ ಬಗ್ಗೆ ಮಾಹಿತಿ ನೀಡುವ ಸರಣಿ ಲೇಖನ 'ಈ ಸಿನಿಮಾ ನೋಡಿದ್ದೀರಾ?')

  2010 ರಲ್ಲಿ ಬಿಡುಗಡೆಯಾದ ಇಂಗ್ಲಿಷ್‌ ಸಿನಿಮಾ 'ಇನ್‌ಸೆಪ್ಷನ್' ಕತೆಯ ದೃಷ್ಟಿಯಿಂದ ಬಹಳವೇ ವಿಭಿನ್ನ. ಈ ಸಿನಿಮಾವನ್ನು ಒಮ್ಮೆ ನೋಡಿ ಅರ್ಥ ಮಾಡಿಕೊಂಡವರು ಬಹಳ ವಿರಳ. ಬಹಳವೇ ಸಂಕೀರ್ಣವಾದ ಕತೆ ಹಾಗೂ ನಿರೂಪಣೆ ಹೊಂದಿರುವ ಸಿನಿಮಾ 'ಇನ್‌ಸೆಪ್ಷನ್'.

  ತಂಡವೊಂದು ಕನಸಿನ ಮೂಲಕ ವ್ಯಕ್ತಿಗಳ ಮನಸ್ಸಿನಲ್ಲಿರುವ ಆಲೋಚನೆಗಳನ್ನು ಕದಿಯುವ ಕಾರ್ಯ ಮಾಡುತ್ತಿರುತ್ತದೆ. ತಂಡದ ನಾಯಕ ಕಾಬ್ (ಲಿಯಾನಾರ್ಡೊ ಡಿ ಕ್ರಾಪ್ರಿಯೊ), ಮಹಾತ್ವಾಂಕಾಕ್ಷಿ ಉದ್ಯಮಿಯೊಬ್ಬ (ಸೈಟೊ), ತನ್ನ ಎದುರಾಳಿ ಉದ್ಯಮಿಯ (ಫಿಚರ್‌) ಮೆದುಳಿನಲ್ಲಿ ಯೋಚನೆಯೊಂದನ್ನು ನೆಡಲು ಕಾಬ್‌ ನ ಸಹಾಯ ಕೇಳುತ್ತಾನೆ. ಇದಕ್ಕೆ ಪ್ರತಿಯಾಗಿ ಕಾಬ್‌ ಮೇಲಿರುವ ಅಪರಾಧ ಆರೋಪವನ್ನು ತೆಗೆಸಿಕೊಡುವ ಭರವಸೆ ನೀಡುತ್ತಾನೆ. ಪ್ರಕರಣದಿಂದಾಗಿ ಮನೆಗೆ ಮರಳಲಾಗದೆ ಬೇರೆ ದೇಶಗಳಲ್ಲಿ ಅಲೆಯುತ್ತಿದ್ದ ಕಾಬ್‌ಗೆ ತನ್ನ ಮಕ್ಕಳನ್ನು ಪುನಃ ಭೇಟಿಯಾಗುವ ಅವಕಾಶ ಸಿಗುತ್ತದೆಂದು ಕೆಲಸಕ್ಕೆ ಒಪ್ಪಿಕೊಂಡು ತನ್ನ ತಂಡವನ್ನು ಒಟ್ಟುಮಾಡುತ್ತಾನೆ.

  ಕಾಬ್ ಮುಂದಾಳತ್ವದ ತಂಡವು ಉಪಾಯದಿಂದ ಉದ್ಯಮಿ ಫಿಚರ್‌ ಅನ್ನು ಕನಸಿನ ಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ಆದರೆ ಆ ಕನಸಿನ ಲೋಕದಲ್ಲಿ ಕಾಬ್ ಮತ್ತು ತಂಡ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಪ್ರಸ್ತುತ ಇರುವ ಕನಸಿನ ಒಳಗೆ ಇನ್ನೊಂದು ಕನಸು ಕಾಣಬೇಕಾಗುತ್ತದೆ, ಹೀಗೆ ಕನಸಿನ ಒಳಗೊಂದು ಕನಸು, ಅದರೊಳಗೊಂದು ಕನಸು, ಅದರೊಳಗೆ ಮತ್ತೊಂದು ಕನಸು ಹೀಗೆ ಹಲವು ಪದರಗಳಲ್ಲಿ ಕತೆ ವಿಸ್ತರಿಸಿಕೊಳ್ಳುತ್ತಾ ಹೋಗುತ್ತದೆ.

  ಕ್ಲಿಷ್ಟವಾದ ಕತೆಯನ್ನು ಇನ್ನಷ್ಟು ಕ್ಲಿಷ್ಟಗೊಳಿಸಿದ್ದಾರೆ ನಿರ್ದೇಶಕ

  ಕ್ಲಿಷ್ಟವಾದ ಕತೆಯನ್ನು ಇನ್ನಷ್ಟು ಕ್ಲಿಷ್ಟಗೊಳಿಸಿದ್ದಾರೆ ನಿರ್ದೇಶಕ

  ಸಿನಿಮಾದ ನಿರ್ದೇಶಕ ಕ್ರಿಸ್ಟೊಫರ್ ನೋಲನ್, ಮೊದಲೇ ಕ್ಲಿಷ್ಟವಾದ ಕತೆಯನ್ನು, ನಿರೂಪಣೆ ಮೂಲಕ ಇನ್ನಷ್ಟು ಕ್ಲಿಷ್ಟಗೊಳಿಸಿದ್ದಾರೆ. ಸಿನಿಮಾ ಮುಗಿವ ವರೆಗೆ ಪರದೆಯಿಂದ ಕಣ್ಣು ಕೀಳುವುದು ಅಸಾಧ್ಯವಾಗಿಬಿಡುತ್ತದೆ. ಕನಸಿನ ಲೋಕ, ಸಾಮಾನ್ಯಕ್ಕಿಂತ ಹೇಗೆ ಭಿನ್ನ ಎಂಬ ಬಗ್ಗೆ ಕ್ರಿಸ್ಟೊಫರ್ ಸಿನಿಮಾದಲ್ಲಿ ಒಟ್ಟಿಗೆ ಮಾಹಿತಿ ನೀಡುವುದಿಲ್ಲ, ಕತೆ ಬೆಳೆದಂತೆ ಕನಸಿನ ಲೋಕದ ಬಗ್ಗೆ ಒಂದೊಂದೇ ಮಾಹಿತಿ ಹೊರಗೆ ಬೀಳುತ್ತಾ ಹೋಗುತ್ತದೆ ಇದು ಸಿನಿಮಾವನ್ನು ಇನ್ನಷ್ಟು-ಮತ್ತಷ್ಟು ಕುತೂಹಲಗೊಳಿಸುತ್ತಾ ಹೋಗುತ್ತದೆ.

  ಪ್ರತಿ ಸಂಭಾಷಣೆ, ಪ್ರತಿ ದೃಶ್ಯವೂ ಮುಖ್ಯ

  ಪ್ರತಿ ಸಂಭಾಷಣೆ, ಪ್ರತಿ ದೃಶ್ಯವೂ ಮುಖ್ಯ

  ಸಿನಿಮಾವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕೆಂದರೆ ಸಿನಿಮಾದ ಪ್ರತಿ ಪಾತ್ರದ ಪ್ರತಿ ಸಂಭಾಷಣೆಯನ್ನು ಗಮನವಿಟ್ಟು ಕೇಳಿಸಿಕೊಳ್ಳಬೇಕು, ಸಿನಿಮಾದ ಪ್ರತಿ ದೃಶ್ಯದ ಬಗ್ಗೆಯೂ ತೀವ್ರ ಗಮನವಹಿಸಬೇಕು. ಸಿನಿಮಾದಲ್ಲಿ ಇದ್ದಕ್ಕಿದ್ದಂತೆ ರಸ್ತೆಯ ಮೇಲೆ ದೊಡ್ಡ ರೈಲು ಬಂದು ಬಿಡುತ್ತವೆ, ಎಲ್ಲಿಂದಲೋ ಬರುವ ಕೆಲವು ಕಾಬ್ ಮತ್ತು ತಂಡದ ಮೇಲೆ ಗುಂಡು ಹಾರಿಸುತ್ತಾರೆ. ಒಂದು ಕನಸಿನಲ್ಲಿ ಗುಂಡೇಟು ತಗುಲಿದ ಉದ್ಯಮಿ ಸೈಟೊ ಕೊನೆಯ ಕನಸಿನಲ್ಲಿ ಹೇಗೆ ಜೀವಂತ ಇರುತ್ತಾನೆ? ಇಂಥಹಾ ನೂರಾರು ಪ್ರಶ್ನೆಗಳು ಸಿನಿಮಾ ನೋಡುವಾಗ ಹುಟ್ಟುತ್ತವೆ ಆದರೆ ಎಲ್ಲದಕ್ಕೂ ಸಿನಿಮಾದಲ್ಲಿಯೇ ಉತ್ತರವಿದೆ. ಯಾವ ಅನುಮಾನವನ್ನೂ ಕ್ರಿಸ್ಟೋಫರ್ ಉಳಿಸುವುದಿಲ್ಲ, ಆದರೆ ಅದನ್ನು ಗಮನಿಸಿ ಅರ್ಥ ಮಾಡಿಕೊಳ್ಳಬೇಕು ಅಷ್ಟೆ.

  ನಿಜ ಯಾವುದು ಕನಸು ಯಾವುದು?

  ನಿಜ ಯಾವುದು ಕನಸು ಯಾವುದು?

  ಸಿನಿಮಾದ ಕ್ಲೈಮ್ಯಾಕ್ಸ್‌ ಅಂತೂ ಈಗಲೂ ಚರ್ಚೆಯ ವಿಷಯ. ಸಿನಿಮಾದಲ್ಲಿ ನಾಯಕ ಕಾಬ್, ತಿರುಗಿಸುವ ಒಂದು ಸಣ್ಣ ಬುಗುರಿ (ಟೋಟೆಮ್) ಇಟ್ಟುಕೊಂಡಿರುತ್ತಾನೆ, ತಾನು ಕನಸಿನಲ್ಲಿದ್ದೀನಾ ಅಥವಾ ನಿಜ ಜೀವನದಲ್ಲಿಯಾ? ಎಂಬುದನ್ನು ತಿಳಿದುಕೊಳ್ಳಲು ಕಾಬ್ ಅದನ್ನು ತಿರುಗಿಸಿ ನೋಡುತ್ತಿರುತ್ತಾನೆ. ಕನಸಿನಲ್ಲಿ ಆ ಬುಗುರಿ ತಿರುಗಿಸಿದರೆ ಅದು ಬೀಳುವುದೇ ಇಲ್ಲ. ನಿಜ ಜೀವನದಲ್ಲಿ ಬೀಳುತ್ತದೆ. ಆದರೆ ಸಿನಿಮಾದ ಕೊನೆಯಲ್ಲಿ ತನ್ನ ಮನೆಗೆ ಬಂದು ಮಕ್ಕಳನ್ನು ನೋಡುವ ಮುನ್ನಾ ಕಾಬ್ ಬುಗುರಿ ತಿರುಗಿಸುತ್ತಾನೆ ಆ ಬುಗುರಿ ತಿರುಗುತ್ತದೆ ಆದರೆ ಬೀಳುವುದಿಲ್ಲ, ತುಸು ಅಲುಗುತ್ತದೆ ಅಷ್ಟರಲ್ಲೇ ಸಿನಿಮಾ ಮುಗಿದು ಬಿಡುತ್ತದೆ. ಹಾಗಾದರೆ ಪ್ರೇಕ್ಷಕ ಇಷ್ಟು ಹೊತ್ತು ನಿಜಜೀವನ ಎಂದುಕೊಂಡು ನೋಡಿದ್ದು ಸಹ ಕನಸೇ? ನಾಯಕ ಕಾಬ್ ಸಹ ಬೇರೆಯವರ ಕನಸಿನಲ್ಲಿ ಅಥವಾ ತನ್ನದೇ ಕನಸಿನಲ್ಲಿದ್ದನೆ? ಎಂಬ ಅನುಮಾನ ಅಲ್ಲಿಂದ ಪ್ರಾರಂಭವಾಗುತ್ತದೆ.

  Recommended Video

  DIRECTOR'S DIARY : ಬೆಳೆಯೋ ಟೈಮ್ ನಲ್ಲಿ ನನ್ನ ವಿರುದ್ಧ ರವಿ ಬೆಳಗೆರೆ ಪತ್ರಿಕೆಯಲ್ಲಿ ಆರ್ಟಿಕಲ್ ಬಂದಿತ್ತು| Part 1
  ಸಿನಿಮಾ ಆಸಕ್ತರು ನೋಡಲೇ ಬೇಕಾದ ಸಿನಿಮಾ

  ಸಿನಿಮಾ ಆಸಕ್ತರು ನೋಡಲೇ ಬೇಕಾದ ಸಿನಿಮಾ

  ಇನ್‌ಸೆಪ್ಷನ್ ಸಿನಿಮಾ ಬಹು ದೊಡ್ಡ ಹಿಟ್ ಆಗಿತ್ತು. ಸಂಕೀರ್ಣ ಕತೆ ಹೊಂದಿದ ಸಿನಿಮಾಗಳ ಚರ್ಚೆಯಲ್ಲಿ ಇನ್‌ಸೆಪ್ಷನ್ ಇರದೇ ಇರಲು ಸಾಧ್ಯವೇ ಇಲ್ಲ. ಸಾವಿರ ಕೋಟಿ ಬಜೆಟ್‌ನ ಈ ಸಿನಿಮಾ ಗಳಿಸಿದ್ದು, ಆರು ಸಾವಿರ ಕೋಟಿಗೂ ಹೆಚ್ಚು. ಇನ್‌ಸೆಪ್ಷನ್ ಸಿನಿಮಾ ನಾಲ್ಕು ವಿಭಾಗಗಳಲ್ಲಿ ಆಸ್ಕರ್ ಗೆದ್ದಿತು. ಕ್ರಿಸ್ಟೋಫರ್ ನೋಲನ್‌ಗೆ ವಿಶ್ವದ ಅದ್ಭುತ ನಿರ್ದೇಶಕರಲ್ಲಿ ಒಬ್ಬರೆಂದ ಸ್ಥಾನವನ್ನೂ ತಂದುಕೊಟ್ಟಿತು. ಸಿನಿಮಾ ಆಸಕ್ತರು ಈ ಸಿನಿಮಾವನ್ನು ಮಿಸ್ ಮಾಡಿಕೊಳ್ಳುವಂತೆಯೇ ಇಲ್ಲ. ಯೂಟ್ಯೂಬ್ ಹಾಗೂ ಅಮೆಜಾನ್ ಪ್ರೈಂ ನಲ್ಲಿ ಈ ಸಿನಿಮಾ ಲಭ್ಯವಿದೆ.

  English summary
  Christopher Nolan directed movie Inception is a must watch movie. movie released in 2010 but still people talk about the movie.
  Monday, November 2, 2020, 18:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X