"ಯಾರು ಅವಂನ್ಗೆ ಅಡ್ಡ ನಿಲ್ಲೋಕೆ ಹೋಗ್ಬೇಡಿ ಸಾರ್": ಚಾಲೆಂಜ್ ಹಾಕಿದವರೆಲ್ಲಾ ಮಣ್ಣು ಮುಕ್ಕಿದ್ಹೇಗೆ?

ಯಶ್ ನಟನೆಯ 'KGF' ಸರಣಿಯ 2ನೇ ಸಿನಿಮಾ ಒಂದು ವರ್ಷ ಪೂರೈಸಿದ ಸಂಭ್ರಮದಲ್ಲಿದೆ. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲಿ 'KGF' ಚಾಪ್ಟರ್- 2 ದೊಡ್ಡಮಟ್ಟದಲ್ಲಿ ಸಂಚಲನ ಸೃಷ್ಟಿಸಿತ್ತು. ಒಮ್ಮೆ ನೆನಪಿಸಿಕೊಂಡರೆ ಚಾಪ್ಟರ್‌- 1 ಎದುರು ಬಂದಿದ್ದ 'ಜೀರೊ', ಚಾಪ್ಟರ್‌- 2ಗೆ ಸವಾಲ್ ಹಾಕಿದ್ದ 'ಬೀಸ್ಟ್' ಹೇಳ ಹೆಸರಿಲ್ಲದಂತೆ ಬಾಕ್ಸಾಫೀಸ್‌ನಲ್ಲಿ ನೆಲ ಕಚ್ಚಿದ್ದವು.

ಪ್ರಶಾಂತ್ ನೀಲ್ ವಿಷನ್- ಟೇಕಿಂಗ್, ರಾಕಿಂಗ್ ಸ್ಟಾರ್ ಡಿಡಿಕೇಷನ್- ಪರ್ಫಾರ್ಮೆನ್ಸ್, ರವಿಬಸ್ರೂರು ಮ್ಯೂಸಿಕ್ ಮಾಡಿದ ಮ್ಯಾಜಿಕ್ ಅಷ್ಟಿಷ್ಟಲ್ಲ. ಮದರ್ ಸೆಂಟಿಮೆಂಟ್ ಜೊತೆಗೆ ಚಿನ್ನದ ಗಣಿಯ ಕಥೆಯನ್ನು, ಮಹತ್ವಾಕಾಂಕ್ಷಿ ರಾಕಿಯ ರೋಚಕ ಜರ್ನಿಯನ್ನು ಕಣ್ಣಿಗೆ ಕಟ್ಟಿದಂತೆ ಹೇಳಿ ಪ್ರಶಾಂತ್ ನೀಲ್ ಗೆದ್ದಿದ್ದರು. ರಾಕಿ ಭಾಯ್ ಆಗಿ ಆಗಿ ಯಶ್ ದರ್ಬಾರ್ ಮಾಡಿದ್ದರು. ಎಲ್ಲಾ ವಿಭಾಗಗಳಲ್ಲೂ ಫಸ್ಟ್ ಕ್ಲಾಸ್ ಎನಿಸಿಕೊಂಡಿ ಸರಣಿಯ 2 ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ್ದವು.

Difference between KGF Chapter 1 vs ZERO and KGF Chapter 2 vs Beast Box Office Collections

'KGF' ಸರಣಿ ಸಿನಿಮಾಗಳು ಮಾಡಿದ ದಾಖಲೆಗಳು ಒಂದೆರಡಲ್ಲ. ಫಸ್ಟ್ ಚಾಪ್ಟರ್ 250 ಕೋಟಿ ರೂ. ಗಳಿಸಿ ಕನ್ನಡ ಇಂಡಸ್ಟ್ರಿ ಹಿಟ್ ಎನಿಸಿಕೊಂಡರೆ ಸೆಕೆಂಡ್ ಚಾಪ್ಟರ್ 1200 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಹುಬ್ಬೇರಿಸಿತ್ತು. ಎರಡ್ಮೂರು ವರ್ಷಗಳ ಕಾಲ 'KGF' ಫಸ್ಟ್ ಪಾರ್ಟ್‌ಗಾಗಿ ಚಿತ್ರತಂಡ ಶ್ರಮಿಸಿತ್ತು. ಆದರೆ ಟ್ರೈಲರ್ ಬರೋವರೆಗೂ ಯಾರಿಗೂ ಸಿನಿಮಾ ಈ ಮಟ್ಟಕ್ಕೆ ಸದ್ದು ಮಾಡುತ್ತದೆ ಎನ್ನುವ ಅಂದಾಜು ಇರಲಿಲ್ಲ. ಟ್ರೈಲರ್ ಸಕ್ಸಸ್ ಆಗುತ್ತಿದ್ದಂತೆ ಯಶ್ ಹಗಲು ರಾತ್ರಿ ದೇಶದ ಮೂಲೆ ಮೂಲೆ ಸುತ್ತಿ ಪ್ರಚಾರ ಮಾಡಿದ್ದರು.

ಕನ್ನಡದ 'KGF' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಆಗುತ್ತೆ ಎಂದಾಗ ಬಾಲಿವುಡ್ ಮಂದಿ ತಲೆ ಕೆಡಿಸಿಕೊಳ್ಳಲಿಲ್ಲ. ಶಾರುಕ್ ಖಾನ್ ಧೈರ್ಯವಾಗಿಯೇ 'ಜೀರೊ' ಸಿನಿಮಾ ರಿಲೀಸ್‌ಗೆ ಮುಂದಾಗಿದ್ದರು. ಚಿತ್ರದಲ್ಲಿ ಸಲ್ಮಾನ್ ಖಾನ್ ಕೂಡ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರಿಂದ ಶಾರುಕ್ ಅತಿಯಾದ ಆತ್ಮವಿಶ್ವಾಸದಲ್ಲಿದ್ದರು. ಸಿನಿಮಾ ಗೆಲ್ಲೋದು ಗ್ಯಾರೆಂಟಿ ಎಂದುಕೊಂಡಿದ್ದರು. ಆದರೆ 'KGF' ಎದುರು ಅದ್ಯಾವ ಮಟ್ಟಿಗೆ ಮುಗ್ಗರಿಸಿದ್ರು ಅಂದ್ರೆ ಕಿಂಗ್‌ಖಾನ್ 3 ವರ್ಷಗಳ ಕಾಲ ಹೊಸ ಸಿನಿಮಾ ಘೋಷಿಸೋಕು ಹೆದರಿಬಿಟ್ಟರು. 80 ಕೋಟಿ ರೂ. ಬಜೆಟ್ಟಿನ ಕನ್ನಡ ಸಿನಿಮಾ 200 ಕೋಟಿ ರೂ. ಬಜೆಟ್ಟಿನ 'ಜೀರೊ' ಎದುರು ಗೆದ್ದಿತ್ತು.

ರಿಲೀಸ್‌ಗೂ ಮುನ್ನ 'KGF' ಚಾಪ್ಟರ್-1 ಈ ಪಾಟಿ ಗೆಲ್ಲುತ್ತೆ ಎನ್ನುವ ಅರಿವು ಬಾಲಿವುಡ್ ಮಂದಿಗೆ ಇರಲಿಲ್ಲ ಎನ್ನಬಹುದು. ಆದರೆ ಚಾಪ್ಟರ್- 2 ಎದುರು ಹೋಗೋದು ತಪ್ಪು ಎನ್ನುವ ಅಂದಾಜು ಕಾಲಿವುಡ್‌ ಮಂದಿಗೆ ಇರಬೇಕಿತ್ತು. ಸರಿಯಾಗಿ ಇವತ್ತಿಗೆ ಒಂದು ವರ್ಷದ ಹಿಂದೆ ತಮಿಳಿನ 'ಬೀಸ್ಟ್' ಸಿನಿಮಾ ರಿಲೀಸ್ ಆಗಿತ್ತು. ಮಾರನೆಯ ದಿನ 'KGF'- 2 ರಿಲೀಸ್ ಆಗ್ತಿದೆ. ಫಸ್ಟ್ ಪಾರ್ಟ್‌ಗೆ ಆ ಪಾಟಿ ರೆಸ್ಪಾನ್ಸ್ ಸಿಕ್ಕಿದೆ. ಕಾಲಿವುಡ್‌ನಲ್ಲೂ 'ಬೀಸ್ಟ್‌'ಗಿಂತ ರಾಕಿ ಭಾಯ್‌ ಬಗ್ಗೆ ಕ್ರೇಜ್ ಇದೆ ಅನ್ನೋದು ಗೊತ್ತಿದ್ರು ತಲೆಯಿಂದ ಬಂಡೆಯನ್ನು ಒಡೆಯುವ ಪ್ರಯತ್ನ ನಡೆದಿತ್ತು.

Difference between KGF Chapter 1 vs ZERO and KGF Chapter 2 vs Beast Box Office Collections

ಕಳೆದ ವರ್ಷ 'KGF' ಚಾಪ್ಟರ್-2ಗೆ ಸವಾಲ್ ಹಾಕಿದ್ದ ಇಳಯ ದಳಪತಿ ನಟನೆಯ 'ಬೀಸ್ಟ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋತಿತ್ತು. ಮೊದಲ ದಿನವೇ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮರುದಿನವೇ ರಿಲೀಸ್ ಆದ 'KGF'- 2 ಆರ್ಭಟಕ್ಕೆ 'ಬೀಸ್ಟ್' ಕಥೆ ಮುಗಿದು ಹೋಗಿತ್ತು. ಏಪ್ರಿಲ್ 14ರಂದು ತಮಿಳರ ಹೊಸ ವರ್ಷ. ಈ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಮಾಡಿದ್ರೆ ಸಕ್ಸಸ್ ಗ್ಯಾರೆಂಟಿ ಎನ್ನುವ ಲೆಕ್ಕಚಾರ ಕಾಲಿವುಡ್‌ನಲ್ಲಿದೆ. ಹಾಗಾಗಿ ರಾಕಿ ಭಾಯ್‌ಗೆ ವೀರ ರಾಘವ ಸವಾಲ್ ಹಾಕಿದ್ದ. ಆದರೆ ಎಲ್ಲರ ಲೆಕ್ಕಾಚಾರ ಉಲ್ಟಾ ಪಲ್ಟಾ ಆಗಿತ್ತು.

More from Filmibeat

English summary
Difference between KGF Chapter 1 vs ZERO and KGF Chapter 2 vs Beast Box Office Collections. KGF Chapter 2 1st Anniversary, Fans remember kgf series Records. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X