twitter
    For Quick Alerts
    ALLOW NOTIFICATIONS  
    For Daily Alerts

    ಒಂದೇ ಒಂದು ಚಿತ್ರದ ಬ್ಲಾಕ್ ಟಿಕೆಟ್ ಮಾರುವ ಮೂಲಕವೇ ಸೈಟ್ ತೆಗೆದುಕೊಂಡವರ ಕಥೆ ಗೊತ್ತೇ?

    |

    'ನಾದಮಯಾ... ಈ ಲೋಕವೆಲ್ಲಾ...'- 'ಜೀವನ ಚೈತ್ರ' ಚಿತ್ರದ ಈ ಹಾಡು ಕೇಳಿದರೆ ಈಗಲೂ ಮೈಜುಂ ಎನಿಸುತ್ತದೆ. ಡಾ. ರಾಜ್ ಕುಮಾರ್ ನುರಿತ ಸಂಗೀತ ವಿದ್ವಾಂಸರಂತೆ ಹಾಡಿದ ಹಾಡು ಅವರಿಗೆ ರಾಷ್ಟ್ರಪ್ರಶಸ್ತಿಯನ್ನು ತಂದುಕೊಟ್ಟಿತ್ತು. 'ಜೀವನ ಚೈತ್ರ' ಸಿನಿಮಾ ಮಾಡಿದ ಸಾಮಾಜಿಕ ಕ್ರಾಂತಿಯೂ ಸಾಮಾನ್ಯದ್ದಲ್ಲ. ಈ ಚಿತ್ರ ನೋಡಿದ ಅನೇಕರು ಮದ್ಯಪಾನ ತ್ಯಜಿಸಿದ್ದು, ಹಳ್ಳಿಯೊಂದರಲ್ಲಿ ಮಹಿಳೆಯರು ಮದ್ಯ ಮಾರಾಟ ಅಂಗಡಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದು, ಹೀಗೆ ಅನೇಕ ಬದಲಾವಣೆಗಳಿಗೆ ಈ ಚಿತ್ರ ಕಾರಣವಾಗಿತ್ತು.

    Recommended Video

    ಬ್ಲಾಕ್ ಟಿಕೆಟ್ ಮಾರಿ ಸೈಟ್ ತಗೊಂಡಿದ್ರು ಅಭಿಮಾನಿಗಳು | Filmibeat Kannada

    ದೊರೆ-ಭಗವಾನ್ ನಿರ್ದೇಶನದ 'ಜೀವನ ಚೈತ್ರ' ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿತ್ತು. ಬಾಕ್ಸಾಫೀಸ್‌ನಲ್ಲಿ ಭರ್ಜರಿ ಗಳಿಕೆ ಕಂಡಿತ್ತು. ಈ ಚಿತ್ರ ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರು ಮಾತ್ರವಲ್ಲ, ಬ್ಲಾಕ್ ಟಿಕೆಟ್ ಮಾರಾಟಗಾರರಿಗೂ ದೊಡ್ಡ ಲಾಭ ತಂದುಕೊಟ್ಟಿತ್ತು. ಇದರ ಸ್ವಾರಸ್ಯಕರ ಸಂಗತಿಯನ್ನು ನಿರ್ದೇಶಕ ಭಗವಾನ್, 'ಕಲಾ ಮಾಧ್ಯಮ' ತಾಣದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ...

    ಕಾಲಿಗೆ ಬಿದ್ದ ಅಪರಿಚಿತರು

    ಕಾಲಿಗೆ ಬಿದ್ದ ಅಪರಿಚಿತರು

    ಜೀವನ ಚೈತ್ರ ಹತ್ತನೇ ವಾರದವರೆಗೂ ಹೌಸ್ ಫುಲ್ ಪ್ರದರ್ಶನ ಕಂಡಿತ್ತು. ಬಳಿಕ ಬೆಳಿಗ್ಗೆ ಮತ್ತು ಮಧ್ಯಾಹ್ನದ ಶೋಗಳು ಸ್ವಲ್ಪ ಡಲ್ ಆಗತೊಡಗಿದವು. ಸಂಜೆ ಮತ್ತು ರಾತ್ರಿ ಪ್ರದರ್ಶನಕ್ಕೆ ಅದ್ಭುತ ಪ್ರತಿಕ್ರಿಯೆ ಮುಂದುವರಿದಿತ್ತು. ಒಮ್ಮೆ ಚಿತ್ರಮಂದಿರಕ್ಕೆ ಹೊರಟಿದ್ದ ಸ್ನೇಹಿತರು ನನ್ನನ್ನೂ ಕರೆದಿದ್ದರು. ಅವರ ಜತೆ ಸಿನಿಮಾ ನೋಡಿ ಬಂದೆ. ಚಿತ್ರಮಂದಿರದಿಂದ ಹೊರ ಬರುತ್ತಿದ್ದಂತೆಯೇ ನಾಲ್ಕೈದು ಮಂದಿ ಬಂದು ಸ್ವಾಮಿ ನಿಮ್ಮನ್ನು ಒಂದು ಮಾತು ಕೇಳಿಕೊಳ್ಳುತ್ತೇವೆ ಎಂದು ಕಾಲಿಗೆ ಬಿದ್ದರು ಎಂಬ ಘಟನೆಯನ್ನು ಭಗವಾನ್ ನೆನಪಿಸಿಕೊಂಡಿದ್ದಾರೆ

    ಸಾಮಾಜಿಕ ಕ್ರಾಂತಿ ಮಾಡಿದ ರಾಜ್ ಕುಮಾರ್ ಚಿತ್ರದ ಹಿಂದಿನ ಕಥೆಸಾಮಾಜಿಕ ಕ್ರಾಂತಿ ಮಾಡಿದ ರಾಜ್ ಕುಮಾರ್ ಚಿತ್ರದ ಹಿಂದಿನ ಕಥೆ

    ಇದೇ ರೀತಿಯ ಮತ್ತೊಂದು ಸಿನಿಮಾ ಮಾಡಿ

    ಇದೇ ರೀತಿಯ ಮತ್ತೊಂದು ಸಿನಿಮಾ ಮಾಡಿ

    ಭಗವಾನ್ ಅಚ್ಚರಿಯಿಂದ, ಏನು ಮಾತು? ಏನು ಮಾಡಬೇಕು ಎಂದು ಕೇಳಿದರಂತೆ. ಏನೂ ಬೇಡ ಸ್ವಾಮಿ, ಇಂತಹದ್ದೊಂದು ಪಿಕ್ಚರ್ ಮತ್ತೊಂದು ತೆಗೆಯಿರಿ ಎಂದು ಆ ವ್ಯಕ್ತಿಗಳು ಹೇಳಿದರು. ಇಂತಹ ಮತ್ತೊಂದು ಸಿನಿಮಾ ತೆಗೆಯಲು ಆಗುತ್ತದೆಯೇ? ಕಥೆ ಸಿಗಬೇಕಲ್ಲ? ಎಂದೆ. ಇಲ್ಲ ಸ್ವಾಮಿ ತೆಗೆಯಲೇ ಬೇಕು. ಇಲ್ಲದಿದ್ದರೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

    ಇನ್ನೊಂದು ಚಿತ್ರ ಮಾಡಿದರೆ ಮನೆ ಕಟ್ಟುತ್ತೇವೆ

    ಇನ್ನೊಂದು ಚಿತ್ರ ಮಾಡಿದರೆ ಮನೆ ಕಟ್ಟುತ್ತೇವೆ

    ಈ ಚಿತ್ರದ ಟಿಕೆಟ್‌ಅನ್ನು ಬ್ಲಾಕ್‌ನಲ್ಲಿ ಮಾರಿ ಮಾರಿಯೇ ಸೈಟ್ ತೆಗೆದುಕೊಂಡಿದ್ದೇವೆ, ಇದೇ ರೀತಿ ಇನ್ನೊಂದು ಪಿಕ್ಚರ್ ಮಾಡಿದರೆ ಅದರ ಟಿಕೆಟ್ ಅನ್ನೂ ಬ್ಲಾಕ್‌ನಲ್ಲಿ ಮಾರಿ ಮಾಡಿ ಮನೆ ಕಟ್ಟಿಸುತ್ತೇವೆ ಎಂದು ಆ ವ್ಯಕ್ತಿಗಳು ಹೇಳಿದ್ದರಂತೆ. 'ಇದು ನಿಜವಾಗಿ ನಡೆದಿದ್ದು. ಒಂದು ಅಕ್ಷರ ಸಹ ಉತ್ಪ್ರೇಕ್ಷೆ ಇಲ್ಲ. ಬ್ಲಾಕ್ ಟಿಕೆಟ್‌ನಲ್ಲಿ ಅಷ್ಟು ದುಡ್ಡು ಮಾಡಿಕೊಂಡರು' ಎಂದು ಭಗವಾನ್ ನೆನಪಿಸಿಕೊಂಡಿದ್ದಾರೆ.

    ಡಾ. ರಾಜ್ ಕುಮಾರ್‌ಗೆ 'ಭಾರತ ರತ್ನ' ನೀಡಿ: ಪ್ರಧಾನಿ ಮೋದಿಗೆ ಸಂಸದರ ಪತ್ರಡಾ. ರಾಜ್ ಕುಮಾರ್‌ಗೆ 'ಭಾರತ ರತ್ನ' ನೀಡಿ: ಪ್ರಧಾನಿ ಮೋದಿಗೆ ಸಂಸದರ ಪತ್ರ

    ನೆಲವೇ ಸಾಕು

    ನೆಲವೇ ಸಾಕು

    ಈ ಚಿತ್ರದ ಹಾಡಿಗೆ ಡಾ. ರಾಜ್ ಕುಮಾರ್ ಅವರ ಗಾಯನಕ್ಕೆ ಸ್ವರ್ಣ ಕಮಲ ಪ್ರಶಸ್ತಿ ಬಂದಿತ್ತು. ರಾಷ್ಟ್ರಪತಿಗಳು ಪ್ರಶಸ್ತಿ ಪ್ರಧಾನ ಮಾಡುವ ಸಮಾರಂಭಕ್ಕೆ ನಾನೂ ಹೋಗಿದ್ದೆ. ಸಿಕ್ಸ್ ಸ್ಟಾರ್ ಹೋಟೆಲ್‌ನಲ್ಲಿ ಜಾಗ ಕೊಟ್ಟಿದ್ದರು. ಆದರೆ ರಾಜ್ ಕುಮಾರ್ ಹಾಸಿಗೆಯಲ್ಲಿದ್ದ ಬೆಡ್‌ಶೀಟ್ ಮತ್ತು ದಿಂಬು ತೆಗೆದುಕೊಂಡು ನೆಲದ ಮೇಲೆ ಮಲಗಿದರು. ರಾಜಸುಪ್ಪತ್ತಿಗೆ ಬಿಟ್ಟು ಏಕೆ ನೆಲದ ಮೇಲೆ ಮಲಗುತ್ತೀರಿ ಎಂದು ಭಗವಾನ್ ಪ್ರಶ್ನಿಸಿದ್ದರಂತೆ. ಅದರ ಮೇಲೆ ಮಲಗಿದರೆ ನಿದ್ರೆ ಬರೊಲ್ಲ ಎಂದು ಡಾ. ರಾಜ್ ಪ್ರತಿಕ್ರಿಯಿಸಿದ್ದರಂತೆ. ವಿದೇಶಕ್ಕೆ ಹೋದಾಗಲೂ, ಯಾವ ಹೋಟೆಲ್ ನೀಡಿದರೂ ಅವರು ಮಲಗುತ್ತಿದ್ದದ್ದು ನೆಲದ ಮೇಲೆಯೇ. ಅಷ್ಟು ಸರಳತೆ ಅವರಲ್ಲಿತ್ತು ಎಂದು ಭಗವಾನ್ ಬಣ್ಣಿಸಿದ್ದಾರೆ.

    ರಾಜ್ ಕುಮಾರ್ ಅಪಹರಣವಾದ ಸಮಯದಲ್ಲಿ ವಿಷ್ಣುದಾದ ಹೇಳಿದ್ದ ಮಾತುಗಳಿವು...ರಾಜ್ ಕುಮಾರ್ ಅಪಹರಣವಾದ ಸಮಯದಲ್ಲಿ ವಿಷ್ಣುದಾದ ಹೇಳಿದ್ದ ಮಾತುಗಳಿವು...

    English summary
    Director Bhagavan remembered an incident of Dr Rajkumar's Jeevana Chaithra film, when he met black ticket sellers.
    Thursday, August 6, 2020, 9:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X