twitter
    For Quick Alerts
    ALLOW NOTIFICATIONS  
    For Daily Alerts

    'ಅಯೋಗ್ಯ' ಮುಹೂರ್ತದ ಹಿಂದಿನ ದಿನ ನಡೆದ ಆ ಘಟನೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ನೊಂದಿದ್ದರಂತೆ!

    |

    'ಅಯೋಗ್ಯ' ಸಿನಿಮಾ ಕಥೆ ಕೇಳಿದ ಸತೀಶ್ ನೀನಾಸಂ 'ಹೇ ಕಥೆ ಚೆನ್ನಾಗಿದೆ, ಮಾಡೋಣ' ಎಂದು ಗ್ರೀನ್ ಸಿಗ್ನಲ್ ಕೊಡ್ತಾರೆ. ಈ ಕಡೆ ಚೊಚ್ಚಲ ಚಿತ್ರದ ಕನಸಿನಲ್ಲಿದ್ದ ಮಹೇಶ್ ಅವರಿಗೂ ತಡೆಯಲಾಗದ ಸಂತೋಷ. ಸ್ನೇಹಿತರ ಪರಿಚಯದಿಂದ ನಿರ್ಮಾಪಕರೊಬ್ಬರು ಸಿನಿಮಾಗೆ ಬಂಡವಾಳ ಹಾಕಲು ಮುಂದೆ ಬರ್ತಾರೆ.

    Recommended Video

    Director's Diary | ಜಂಗ್ಲಿ ಸಿನಿಮಾ ಮಾಡ್ಬೇಕಾದ್ರೆ ನನ್ನ ನಿಯತ್ತು ಸೂರಿ ಸರ್ ಗೆ ಇಷ್ಟ ಆಗಿತ್ತು

    ಪ್ಲಾನ್ ಮಾಡಿದಂತೆ ಅಯೋಗ್ಯ ಚಿತ್ರದ ಫೋಟೋಶೂಟ್ ಆಗುತ್ತೆ. ಭರ್ಜರಿ ರೆಸ್‌ಪಾನ್ಸ್ ಸಿಗುತ್ತೆ. ಮುಹೂರ್ತಕ್ಕೆ ಎಲ್ಲ ತಯಾರಿ ಆಗುತ್ತೆ. ಭಟ್ಟರು, ಸೂರಿ, ಸುದೀಪ್ ಎಲ್ಲರು ಬರುವ ಪ್ಲಾನ್ ಆಗುತ್ತೆ. ಹೀಗೆ ಮೊದಲ ಸಿನಿಮಾವನ್ನು ಗ್ರ್ಯಾಂಡ್ ಆಗಿ ಲಾಂಚ್ ಮಾಡಬೇಕು ಎಂಬ ತಯಾರಿಯಲ್ಲಿದ್ದ ನಿರ್ದೇಶಕ ಮಹೇಶ್‌ಗೆ, ಮುಹೂರ್ತದ ಹಿಂದಿನ ದಿನ ಭಾರಿ ಆಘಾತ ಎದುರಾಗುತ್ತದೆ. ಊಹೆ ಮಾಡದಂತೆ ಸಂಕಷ್ಟ. ಏನು ಮಾಡ್ಬೇಕು ಎಂದು ಗೊತ್ತಾಗದ ಸ್ಥಿತಿಗೆ ತಲುಪಿದ ಮಹೇಶ್, ''ಜೀವನದಲ್ಲಿ ಆ ವ್ಯಕ್ತಿಯನ್ನು ಯಾವತ್ತೂ ಕ್ಷಮಿಸುವುದಿಲ್ಲ'' ಎಂದು ಫಿಲ್ಮಿಬೀಟ್ ಡೈರೆಕ್ಟರ್ ಡೈರಿಯಲ್ಲಿ ಹೇಳಿಕೊಂಡಿದ್ದಾರೆ. ಮುಂದೆ ಓದಿ....

    ಮುಹೂರ್ತದ ಹಿಂದಿನ ದಿನ ನಿರ್ಮಾಪಕ ಕೈ ಕೊಟ್ಟರು

    ಮುಹೂರ್ತದ ಹಿಂದಿನ ದಿನ ನಿರ್ಮಾಪಕ ಕೈ ಕೊಟ್ಟರು

    ''ಮಹೇಶ್ ಕೈಯಲ್ಲಿ ಸಿನಿಮಾ ಮಾಡಿಸ್ತೀರಾ, ಅವನನ್ನು ನಂಬಿ ಎರಡೂವರೆ ಕೋಟಿ ಹಾಕ್ತೀರಾ, ಎಲ್ಲ ಮಾರಿಕೊಂಡು ಹೋಗ್ತೀರಾ ಅಷ್ಟೇ ಎಂದು ನಿರ್ಮಾಪಕರ ಬಳಿ ಕೆಲವರು ನನ್ನ ಬಗ್ಗೆ ಕೆಟ್ಟದಾಗಿ ಬಿಂಬಿಸಿದರು. ಇದರಿಂದ ನಿರ್ಮಾಪಕರು ಈ ಸಿನಿಮಾ ಮಾಡಲ್ಲ ಅಂತ ಹಿಂದೇಟು ಹಾಕಿದರು. ಬೆಳಗ್ಗೆ ಮುಹೂರ್ತಕ್ಕೆ ಸಿದ್ಧತೆ ಆಗಿದ್ದರೂ ಹಿಂದಿನ ದಿನ ಆಗಲ್ಲ ಎಂದು ನಿರ್ಮಾಪಕರು ಹೋಗಿಬಿಟ್ಟರು'' ಎಂದು ಮಹೇಶ್ ಆ ಘಟನೆಯನ್ನು ವಿವರಿಸಿದ್ದಾರೆ.

    2 ವರ್ಷ ಸ್ಟಾರ್ ನಟನ ಮನೆ ಅಲೆದಾಡಿದ ಮಹೇಶ್, ನಟ ಒಪ್ಪಿದ್ರು, ಕುಟುಂಬದವರು ಬೇಡ ಎಂದ್ರು!2 ವರ್ಷ ಸ್ಟಾರ್ ನಟನ ಮನೆ ಅಲೆದಾಡಿದ ಮಹೇಶ್, ನಟ ಒಪ್ಪಿದ್ರು, ಕುಟುಂಬದವರು ಬೇಡ ಎಂದ್ರು!

    ಕೈ-ಕಾಲು ಹಿಡಿದ ಕೇಳಿಕೊಂಡರು

    ಕೈ-ಕಾಲು ಹಿಡಿದ ಕೇಳಿಕೊಂಡರು

    ''ನಿರ್ಮಾಪಕರ ಮನೆಗೆ ಹೋಗಿ ಕೈ-ಕಾಲು ಹಿಡಿದು ಕೇಳಿಕೊಂಡೆ. ಅವರ ಪತ್ನಿ ಸಹ ಸಿನಿಮಾ ಮಾಡಿ ಎಂದು ಹೇಳಿದರು. ಸರಿ, ನಾನು ಮುಹೂರ್ತಕ್ಕೆ ಬರ್ತೀನಿ, ಆದರೆ ವೇದಿಕೆಗೆ ಬರಲ್ಲ, ನನ್ನ ನಿರ್ಮಾಪಕ ಅಂತ ಪರಿಚಯ ಮಾಡಿಕೊಡಬಾರದು ಅಂತಾರೆ. ಈ ವಿಷಯವನ್ನು ನಾನು ಯಾರಿಗೂ ಹೇಳಲ್ಲ, ಸತೀಶ್ ಅವರಿಗೂ ಹೇಳಲ್ಲ. ಒಂದೂವರೆ ಲಕ್ಷ ಖರ್ಚು ಆಗಿದೆ. ಬಾಕಿ ಹಣವನ್ನು ನಾವೇ ಕೊಡ್ತೀವಿ ಅಂತ ಹೇಳಿ ಒಪ್ಪಿಸಿ ಕರೆದುಕೊಂಡು ಬಂದೆ. ಬೆಳಗ್ಗೆ ಬಂದರು, ಕ್ಲಾಪ್ ಆಯಿತು. ದೂರದಲ್ಲಿ ನಿಂತಿದ್ದರು. ಎಲ್ಲ ಮುಗಿತು. ಪ್ರೆಸ್‌ಮೀಟ್ ಇತ್ತು. ನೋಡಿದ್ರೆ ನಿರ್ಮಾಪಕ ಇರಲಿಲ್ಲ'' ಎಂದು ಮಹೇಶ್ ಹೇಳಿಕೊಂಡಿದ್ದಾರೆ.

    ಸತೀಶ್‌ಗೆ ವಿಷಯ ತಿಳಿಯಿತು

    ಸತೀಶ್‌ಗೆ ವಿಷಯ ತಿಳಿಯಿತು

    ''ಸತೀಶ್ ನೀನಾಸಂ ಅವರು ಕೇಳಿದ್ರು, ಏನಾಯ್ತು ಅಂತ. ಹಿಂದಿನ ದಿನ ಹೀಗೆಲ್ಲಾ ಆಯ್ತು, ನಾವು ನಂಬಿದವರೇ ಮೋಸ ಮಾಡಿಬಿಟ್ರು ಅಂತ ಹೇಳಿದೆ. ಅವರು ಬೇಜಾರು ಮಾಡ್ಕೊಂಡ್ರು. ಆಮೇಲೆ ನಿರ್ಮಾಪಕರಿಗೆ ಫೋನ್ ಮಾಡಿದಾಗ, ''ಕಲಾವಿದರಿಗೆ 30 ಲಕ್ಷ ಅಡ್ವಾನ್ಸ್ ಕೊಟ್ಟಿದ್ದೀನಿ, ವಾಪಸ್ ಕೊಡಿ'' ಅಂದ್ರು. ವಾಪಸ್ ಕೊಡಿಸಿ ಎಂದು ಪೀಡಿಸ್ತಾರೆ. ರೌಡಿಗಳನ್ನು ಬಿಟ್ಟು ಹೆದರಿಸ್ತಾರೆ. ಆಫೀಸ್ ಖಾಲಿ ಮಾಡಿದೆ. ಸತೀಶ್ ನೀನಾಸಂ ಅವರ ಆಫೀಸ್‌ಗೆ ಹೋಗಿ ಉಳಿದುಕೊಂಡೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    'ಅಯೋಗ್ಯ' ಕಥೆ ಕೇಳಿ ಒಂದು ವರ್ಷ ಸುತ್ತಾಡಿಸಿ ಬೇಡ ಎಂದಿದ್ದರಂತೆ ಖ್ಯಾತ ಹಾಸ್ಯನಟ!'ಅಯೋಗ್ಯ' ಕಥೆ ಕೇಳಿ ಒಂದು ವರ್ಷ ಸುತ್ತಾಡಿಸಿ ಬೇಡ ಎಂದಿದ್ದರಂತೆ ಖ್ಯಾತ ಹಾಸ್ಯನಟ!

    ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದರು

    ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ದರು

    ''ನಿಂತಿರುವ ಸಿನಿಮಾವನ್ನು ಟೇಕ್ ಆನ್ ಮಾಡಿ ಎಂಬ ಒತ್ತಾಯ. ಯಾರನ್ನು ಕೇಳಿದ್ರೂ ಮುಂದೆ ಬರ್ತಿಲ್ಲ. ಈ ಚಿತ್ರಕ್ಕಾಗಿ ಹದಿನೈದು ವರ್ಷದ ಜೀವನ ಕಳೆದಿದ್ದೇನೆ. ಈ ನೋವು, ವಂಚನೆ, ಮೋಸ ಎಲ್ಲದರಿಂದ ಬೇಸತ್ತ ನಾನು ಆತ್ಮಹತ್ಯೆ ಮಾಡಿಕೊಳ್ಳೋಣ ಎನ್ನುವಷ್ಟು ಚಿಂತಿಸಿದ್ದೇ. ಒಂದು ಪತ್ರ ಬರೆದಿಟ್ಟು ಹೋಗಿಬಿಡ್ತೀನಿ. ಆಮೇಲೆ ಸತೀಶ್ ಅವರು ಕಾಲ್ ಮಾಡಿ, ಬೈಯ್ದು ಕರೆದರು. ಆಮೇಲೆ ವಾಪಸ್ ಬಂದೆ. ಅವರ ಆಫೀಸ್‌ನಲ್ಲಿ ಇದ್ದೆ, ಹುಷಾರಿಲ್ಲ ಇರಲಿಲ್ಲ, ಸತೀಶ್ ಅವರೇ ಹಣ ಕೊಟ್ಟು ಚಿಕಿತ್ಸೆ ತಗೋ ಎಂದರು'' ಎಂದು ನೋವು ಹಂಚಿಕೊಂಡಿದ್ದಾರೆ.

    ಕೈಹಿಡಿದ ಟಿಆರ್ ಚಂದ್ರಶೇಖರ್

    ಕೈಹಿಡಿದ ಟಿಆರ್ ಚಂದ್ರಶೇಖರ್

    ಅಯೋಗ್ಯ ಸಿನಿಮಾದ ಕಥೆ ಕೇಳಿದ ಟಿಆರ್ ಚಂದ್ರಶೇಖರ್ ಅವರು ಸಿನಿಮಾವನ್ನು ಟೇಕ್ ಆನ್ ಮಾಡಲು ನಿರ್ಧರಿಸ್ತಾರೆ. ಹಳೆಯ ನಿರ್ಮಾಪಕ ನೀಡಿದ ಅಡ್ವಾನ್ಸ್ ಹಣವನ್ನು ವಾಪಸ್ ಕೊಡ್ತಾರೆ. ಸಿನಿಮಾ ಶೂಟಿಂಗ್ ಆಗುತ್ತದೆ. ರಿಲೀಸ್ ಗೆ ರೆಡಿಯಾಗುತ್ತದೆ. ಹಾಡುಗಳು ಸೂಪರ್ ಹಿಟ್ ಆಗುತ್ತದೆ. ಮಹೇಶ್ ವೃತ್ತಿ ಜೀವನದಲ್ಲಿ 'ಅಯೋಗ್ಯ' ಮರೆಯಲಾಗದ ಚಿತ್ರವಾಗಿ ಉಳಿದುಕೊಳ್ಳುತ್ತದೆ.

    English summary
    Director Mahesh Kumar revealed the incident that happened on the previous day of ayogya movie muhurtha in Filmibeat kannada director dairy.
    Friday, November 6, 2020, 15:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X