'ಜೋಗಿ' ಸಿನಿಮಾ ಆಗಿದ್ಹೇಗೆ? ಶಿವಣ್ಣ ಹಾಕಿದ್ದ ಕಂಡೀಷನ್ ಏನು?

ಹೊಸ ಹುಡುಗರನ್ನು ಹಾಕಿಕೊಂಡು 'ಎಕ್ಸ್‌ ಕ್ಯೂಸ್ ಮೀ' ಸಿನಿಮಾ ಮಾಡಿದ್ದ ಪ್ರೇಮ್‌ಗೆ ಹಠಾತ್ತನೆ ಶಿವರಾಜ್ ಕುಮಾರ್ ಅಂಥಹಾ ಸ್ಟಾರ್ ನಟರಿಗೆ ಆಕ್ಷನ್-ಕಟ್ ಹೇಳುವ ಅದೃಷ್ಟ ಒಲಿದು ಬಂತು.

'ಕರಿಯ', 'ಎಕ್ಸ್‌ಕ್ಯೂಸ್‌ ಮೀ' ಸಿನಿಮಾ ನಿರ್ದೇಶಿಸಿದ್ದ ಪ್ರೇಮ್‌ರ ಮೂರನೇ ಸಿನಿಮಾ 'ಜೋಗಿ'. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ದೊಡ್ಡ ಹಿಟ್ ಆದ ಸಿನಿಮಾಗಳಲ್ಲಿ ಒಂದು 'ಜೋಗಿ'.

ಈ ಸಿನಿಮಾ ಶುರುವಾದ ಹಿಂದೆ ಕೆಲವು ಆಸಕ್ತಿಕರ ಕತೆಗಳಿವೆ. ಈ ಆಸಕ್ತಿಕರ ಕತೆಗಳನ್ನು ನಿರ್ದೇಶಕ ಪ್ರೇಮ್ ಅವರು 'ಫಿಲ್ಮಿಬೀಟ್ ಕನ್ನಡ' ಜೊತೆಗೆ ಹಂಚಿಕೊಂಡಿದ್ದಾರೆ.

''ಎಕ್ಸ್‌ಕ್ಯೂಸ್‌ ಮೀ' ಸಿನಿಮಾ ಹಿಟ್ ಆದಾಗ ನನ್ನನ್ನು ಅಮ್ಮ (ಪಾರ್ವತಮ್ಮ) ಕರೆದರು. ಅವರು ನನ್ನನ್ನು ಮಂಡ್ಯದ ಗೌಡ ಎನ್ನುತ್ತಿದ್ದರು. ಒಳ್ಳೆ ಸಿನಿಮಾ ಮಾಡಿದ್ದೀಯ ಕಣೊ ಎಂದು ಖುಷಿಪಟ್ಟು ಉಪ್ಪಿಟ್ಟು, ಕೇಸರಿಬಾತು ತಿನ್ನಿಸಿ ಶಿವರಾಜ್ ಕುಮಾರ್‌ಗೆ ಒಂದು ಸಿನಿಮಾ ಮಾಡು ಎಂದರು. ಅಮ್ಮ ನನ್ನ ಬಳಿ ಕತೆ ಇಲ್ಲ. ಕತೆ ಸಿಕ್ಕರೆ ಮಾಡುವೆ'' ಅಂತ ಹೇಳಿದೆ ಸರಿ ಎಂದರು'' ಎಂದು ಹಳೆಯ ಘಟನೆಗಳನ್ನು ನೆನಪು ಮಾಡಿಕೊಂಡಿದ್ದಾರೆ.

ಶಿವಣ್ಣ ಒಂದು ಕಂಡೀಷನ್ ಹಾಕಿದ್ದರು: ಪ್ರೇಮ್

ಶಿವಣ್ಣ ಒಂದು ಕಂಡೀಷನ್ ಹಾಕಿದ್ದರು: ಪ್ರೇಮ್

ಕೆಲ ದಿನದ ಬಳಿಕ ಶಿವರಾಜ್ ಕುಮಾರ್ ಅವರು ಕರೆದರು, ಅವರ ಕಚೇರಿಗೆ ಹೋದೆ. 'ಎಕ್ಸ್‌ಕ್ಯೂಸ್ ಮೀ' ಸಿನಿಮಾವನ್ನು ಹೊಗಳಿದರು. ತಮಗಾಗಿ ಸಿನಿಮಾ ಮಾಡುವಂತೆ ಹೇಳಿದರು. ಆಗಂತೂ ನಾನು ಹೆಚ್ಚು ಯೋಚನೆ ಮಾಡದೆ ಖಂಡಿತ ಮಾಡುವೆ ಎಂದೆ. ಆದರೆ ಅವರು ಒಂದು ಕಂಡೀಷನ್ ಹಾಕಿದರು. ಸಿನಿಮಾವನ್ನು ಆಕಾಶ್ ಆಡಿಯೋದವರಿಗೆ ಮಾಡಿ ಕೊಡು ಎಂದರು. ಆದರೆ ನಾನು ಅದನ್ನು ಒಪ್ಪಲಿಲ್ಲ. ನಾನು ಅಶ್ವಿನಿ ಆಡಿಯೋಕ್ಕೆ ಸಿನಿಮಾ ಮಾಡುತ್ತೇನೆ, ಆದರೆ ಆಕಾಶ್ ಆಡಿಯೋಕ್ಕೆ ಸಿನಿಮಾ ಮಾಡಲ್ಲ ಎಂದೆ'' ಎಂದಿದ್ದಾರೆ ಪ್ರೇಮ್.

''ಅಶ್ವಿನಿ ಆಡಿಯೋದವರು ನನಗೆ ಸಹಾಯ ಮಾಡಿದ್ದರು''

''ಅಶ್ವಿನಿ ಆಡಿಯೋದವರು ನನಗೆ ಸಹಾಯ ಮಾಡಿದ್ದರು''

''ಅಶ್ವಿನಿ ಆಡಿಯೋದವರು ನನಗೆ ಸಾಕಷ್ಟು ಸಹಾಯ ಮಾಡಿದ್ದರು. 'ಕರಿಯ' ಸಿನಿಮಾದ ಆಡಿಯೋ ಹಕ್ಕಿಗೆ ಆಗಿನ ಕಾಲಕ್ಕೆ 8 ಲಕ್ಷ ನೀಡಿದ್ದರು. ಹೊಸಬನಾಗಿದ್ದರೂ 'ಎಕ್ಸ್‌ಕ್ಯೂಸ್ ಮೀ' ಸಿನಿಮಾಕ್ಕೂ ಸಾಕಷ್ಟು ಸಹಾಯ ಮಾಡಿದ್ದರು. ಹಾಗಾಗಿ ನಾನು ಅಶ್ವಿನಿ ಆಡಿಯೋಕ್ಕೆ ಸಿನಿಮಾ ಮಾಡ್ತೀನಿ ಆಕಾಶ್‌ಗೆ ಮಾಡಲ್ಲ ಅಂದೆ. ಶಿವರಾಜ್ ಕುಮಾರ್ ಅವರು ಸರಿ ಎಂದು ಒಪ್ಪಿಕೊಂಡರು. ಒಪ್ಪಿಗೆ ಸೂಚಿಸಿದಾಗ ನನ್ನ ಬಳಿ ಕತೆಯೇ ಇರಲಿಲ್ಲ'' ಎಂದರು ಪ್ರೇಮ್.

'ಜೋಗಿ' ಹೆಸರು ಮೊದಲು ಬರೆದೆ: ಪ್ರೇಮ್

'ಜೋಗಿ' ಹೆಸರು ಮೊದಲು ಬರೆದೆ: ಪ್ರೇಮ್

ಶಿವರಾಜ್ ಕುಮಾರ್ ಅವರಿಗಾಗಿ ಉಪೇಂದ್ರ 'ಓಂ' ಮಾಡಿದ್ದಾರೆ. ನಾನು ಇವರಿಗೆ ಭಿನ್ನವಾಗಿರುವ ಕತೆಯನ್ನೇ ನೀಡಬೇಕು ಎನಿಸಿತು. ಸದಾಶಿವನಗರದ ಶಿವಣ್ಣನ ಕಚೇರಿಯಿಂದ ವಿಜಯನಗರದ ನನ್ನ ಕಚೇರಿಗೆ ಬರುವಷ್ಟರಲ್ಲಿ ಸಿನಿಮಾದ ಒನ್‌ಲೈನರ್ ಯೋಚನೆ ಮಾಡಿದೆ, ನನ್ನ ಕಚೇರಿಗೆ ಬಂದು ಹುಡುಗರಿಗೆ ಒನ್‌ಲೈನರ್ ಹೇಳಿದೆ. ಆ ಸಿನಿಮಾದ ಒನ್‌ಲೈನರ್ ನಿಜವಾಗಿಯೂ ನಡೆದ ಕತೆ. ನಮ್ಮ ಹುಡುಗರಿಗೂ ಅದು ಇಷ್ಟವಾಯಿತು. ನಂತರ ಅಶ್ವಿನಿ ಆಡಿಯೋದ ರಾಮ್‌ಪ್ರಸಾದ್ ಅವರಿಗೆ ಶಿವಣ್ಣನಿಗೆ ಸಿನಿಮಾ ಮಾಡುವುದಾಗಿ ಹೇಳಿದೆ. ಅವರು ನಂಬಲೇ ಇರಲಿಲ್ಲ. ಕೊನೆಗೆ ಅಲ್ಲೇ ಸಿನಿಮಾದ ಹೆಸರು ಬರೆದೆ 'ಜೋಗಿ' ಅಂತ ಅದು ಎಲ್ಲರಿಗೂ ಇಷ್ಟವಾಯಿತು. ಡಾ ರಾಜ್‌ಕುಮಾರ್ ಅವರನ್ನು ಭೇಟಿಯಾಗಿ ಸಿನಿಮಾದ ಹೆಸರು ಹೇಳಿದೆ ಅವರಂತೂ ಬಹಳ ಖುಷಿ ಪಟ್ಟರು'' ಎಂದು ನೆನಪು ಮಾಡಿಕೊಂಡರು ಪ್ರೇಮ್.

ಅಣ್ಣಾವ್ರಿಗೆ ಬರೆದು ತೋರಿಸಿದ್ದ ಪ್ರೇಮ್

ಅಣ್ಣಾವ್ರಿಗೆ ಬರೆದು ತೋರಿಸಿದ್ದ ಪ್ರೇಮ್

''ಅಣ್ಣಾವ್ರು ಬಹಳ ಖುಷಿ ಪಟ್ಟು ಒಳ್ಳೆಯ ಟೈಟಲ್ ಇಟ್ಟಿದ್ದೀಯ ಜೋಗಿ ಟೈಟಲ್ ಇಟ್ಟು ಒಳ್ಳೆಯ ಯೋಗ ಪಡೆದಿದ್ದೀಯ ಎಂದು ಹಾರೈಸಿದರು. ಅಣ್ಣಾವ್ರ ಅದೇ ಸಾಲನ್ನು ಇಟ್ಟುಕೊಂಡು, ''ಮಾನವರ ಜೀವಿತವೆ, ಬೇಡುವುದೆ ಕಾಯಕವೇ, ಕೈತುಂಬ ಇದ್ದೋನೆ ಯೋಗಿ, ಕಡೆತನಕ ಬೇಡೋನೆ ಜೋಗಿ'' ಎಂದು ಬರೆದು ಅಣ್ಣಾವ್ರಿಗೆ ತೋರಿಸಿದೆ. ಅಣ್ಣಾವ್ರು ಬಹಳ ಖುಷಿಯಾಗಿಬಿಟ್ಟರು. 'ಬಡ್ಡಿ ಮಗನೆ ನೀನು ಸಾಮಾನ್ಯದವನಲ್ಲ ಕಣೊ'' ಎಂದು ಖುಷಿಯಿಂದ ಬೆನ್ನುತಟ್ಟಿದರು. ಅಲ್ಲಿಂದ 'ಜೋಗಿ' ಸಿನಿಮಾ ಪ್ರಾರಂಭವಾಯ್ತು'' ಎಂದರು ಪ್ರೇಮ್. 2005ರ ಆಗಸ್ಟ್ 19ರಂದು ಸಿನಿಮಾ ಬಿಡುಗಡೆ ಆಯ್ತು. ಸಿನಿಮಾ ಬಹು ದೊಡ್ಡ ಹಿಟ್ ಆಯ್ತು. ತೆಲುಗು, ತಮಿಳು ಭಾಷೆಗಳಿಗೆ ರೀಮೇಕ್ ಸಹ ಆಯ್ತು.

More from Filmibeat

English summary
Director Prem recalls how Shiva Rajkumar starer Jogi movie was made. Shiva Rajkumar put a condition infront of Prem but Prem did not obey it. still Shiva Rajkumar continues with the movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X